ಆಲಮಟ್ಟಿಗೆ ಪ್ರವಾಸಿಗರ ದಂಡು

ಬಿಸಿಲ ಬೇಗೆಯಲ್ಲೂ ನಿಸರ್ಗದ ಸೊಬಗ ಸವಿದ ಪ್ರವಾಸಿಗರು

Team Udayavani, May 5, 2022, 4:37 PM IST

20

ಆಲಮಟ್ಟಿ: 2019ರಿಂದ ಕೋವಿಡ್‌ ಹಾವಳಿಯಿಂದ ಕಳೆಗುಂದಿದ ರಂಜಾನ್‌ ಹಬ್ಬವನ್ನು ಈ ಬಾರಿ ಸಡಗರ ಸಂಭ್ರಮದಿಂದ ಆಚರಿಸಿದ ಮುಸ್ಲಿಮರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು ಬುಧವಾರ ಆಲಮಟ್ಟಿಯ ವಿವಿಧ ಉದ್ಯಾನಗಳಿಗೆ ಭೇಟಿ ನೀಡಿ ನಿಸರ್ಗದ ಸೊಬಗನ್ನು ಸವಿದರು.

ಮಂಗಳವಾರದಂದು ಜಗಜ್ಯೋತಿ ಬಸವೇಶ್ವರ ಜನ್ಮದಿನ ಹಾಗೂ ರಂಜಾನ್‌ ಹಬ್ಬಗಳು ಒಂದೇ ದಿನ ಬಂದಿದ್ದರಿಂದ ಹಿಂದೂ-ಮುಸ್ಲಿಮರು ಸಹೋದರತೆ ಭಾವದಿಂದ ಆಚರಿಸಿ ಬುಧವಾರ ಪ್ರವಾಸಿ ತಾಣ ಆಲಮಟ್ಟಿಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಪಟ್ಟಣವು ರೈಲು ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳನ್ನು ಹೊಂದಿದ್ದರಿಂದ ದೈನಂದಿನ ಜಂಜಡದಲ್ಲಿ ಬೇಸತ್ತಿದ್ದ ಜನತೆ ಸಂಭ್ರಮದಿಂದ ಹಬ್ಬ ಆಚರಿಸಿ ಹಬ್ಬದ ಮರುದಿನ ಸಂತಸದ ಕ್ಷಣಗಳನ್ನು ಕಳೆಯಲು ತಮ್ಮ ಖಾಸಗಿ ವಾಹನ, ಬಸ್‌, ರೈಲು ಸೇರಿದಂತೆ ವಿವಿಧ ವಾಹನಗಳ ಮೂಲಕ ಬೆಳಗ್ಗೆಯಿಂದ ಸಂಜೆವರೆಗೂ ಆಲಮಟ್ಟಿಗೆ ಬರುವವರ ಸಂಖ್ಯೆ ಏರಿಕೆಯಾಗುತ್ತಲೇ ಇತ್ತು.

ಉದ್ಯಾನಕ್ಕೆ ಭೇಟಿ: ರಾಷ್ಟ್ರೀಯ ಹೆದ್ದಾರಿ ಹಾಗೂ ಶಾಸ್ತ್ರಿ ಜಲಾಶಯದ ಮಧ್ಯ ಭಾಗದಲ್ಲಿರುವ ರಾಕ್‌ ಉದ್ಯಾನದಲ್ಲಿರುವ ನೈಜ ಕಾಡು ಪ್ರಾಣಿ, ಪಕ್ಷಿ, ಕಾಡು ಜನರ ಬದುಕು, ಗ್ರಾಮೀಣ ಜಾತ್ರೆಯ ಸೊಗಡು, ಸೂರ್ಯನ ಕಿರಣಗಳಲ್ಲಿ ಅರಳಿದ ಭಾರತ ನಕ್ಷೆ, ಸರ್ವ ಜನಾಂಗದ ಶಾಂತಿಯ ತೋಟದ ಸಂಕೇತವಾಗಿರುವ ದೇಶದ ಭದ್ರತೆಯ ರಕ್ಷಣೆಗೆ ಪಣ ತೊಟ್ಟಿರುವ ದೇಶಾಭಿಮಾನಿಗಳು, ವಿವಿಧ ಬಗೆಯ ಸಸ್ಯ ಸಂಪತ್ತು, ಜಲಚರಗಳು, ಕೀಟಗಳ ವಂಶಾಭಿವೃದ್ಧಿ, ಸರಿ ಸೃಪಗಳು ಹೀಗೆ ಹಲವಾರು ಬಗೆಯ ನೈಜತೆಯನ್ನು ಹೋಲುವ ಸಿಮೆಂಟ್‌ ಕಾಂಕ್ರೀಟ್‌ ಹಾಗೂ ಸ್ಟೀಲ್‌ ಹೀಗೆ ವಿವಿಧ ವಸ್ತುಗಳಿಂದ ತಯಾರಿಸಿ ಪ್ರತಿಮೆಗಳು ಒಂದಕ್ಕಿಂದ ಒಂದು ಸುಂದರವಾಗಿ ಕಾಣುತ್ತಿರುವುದನ್ನು ಕಣ್ತುಂಬಿಕೊಂಡರು.

ಮಕ್ಕಳು ಆಟವಾಡಲು ಚಿಲ್ಡ್ರನ್‌ ಪಾರ್ಕ್‌, ಪುಟಾಣಿ ರೈಲು, ಸಿಲ್ವರ್‌ ಲೇಕ್‌, ಜೋಕಾಲಿ, 7ಡಿ ವರ್ಚುವಲ್‌ ಪ್ರದರ್ಶನ ಕಂಡು ಕಣ್ತುಂಬಿಕೊಂಡರು. ಮೊಘಲ್‌ ಉದ್ಯಾನ, ಇಟಾಲಿಯನ್‌ ಉದ್ಯಾನ, ಫ್ರೆಂಚ್‌ ಉದ್ಯಾನ, ಸಂಗೀತ ನೃತ್ಯ ಕಾರಂಜಿ, ಲೇಸರ್‌ ಶೋ, ಗೋಪಾಲಕೃಷ್ಣ ಉದ್ಯಾನ, ಲವಕುಶ ಉದ್ಯಾನ, ಎಂಟ್ರನ್ಸ್‌ ಪ್ಲಾಜಾದ ಹಿಂಬದಿಯಲ್ಲಿರುವ ತ್ರೀಡಿ ಪ್ರದರ್ಶನ, ಬೃಹತ್‌ ಜಲರಾಶಿ ತುಂಬಿರುವ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಹೀಗೆ ಬುಧವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ನೋಡಿದರೂ ಕೂಡ ಇನ್ನೂ ಕೆಲವು ಸ್ಥಳಗಳನ್ನು ನೋಡಲು ಸಮಯ ಸಾಕಾಗಲಿಲ್ಲ ಎನ್ನುವ ಮಾತು ಪ್ರವಾಸಿಗರಿಂದ ಕೇಳಿ ಬಂತು.

ಭೋಜನ ಸವಿ: ಬಿಸಿಲಿನ ಬೇಗೆಯ ಮಧ್ಯದಲ್ಲಿ ಹಸಿರಿನಿಂದ ಕಂಗೊಳಿಸುವ ವಿವಿಧ ಮರಗಳ ನೆರಳಿನಲ್ಲಿ ಸುತ್ತಾಡಿ ಉತ್ಸಾಹದಿಂದ ಉದ್ಯಾನಗಳನ್ನು ವೀಕ್ಷಿಸಿದ ಪ್ರವಾಸಿಗರು ಗಿಡ ಮರಗಳ ನೆರಳಿನಲ್ಲಿ ಕುಳಿತು ತಾವು ತಂದಿದ್ದ ಹಲವು ಬಗೆಯ ಖಾದ್ಯಗಳನ್ನು ಸವಿದರು. ರಂಜಾನ್‌ ಆಚರಿಸಿದ ಮುಸ್ಲಿಮರು ಹಾಗೂ ನಿತ್ಯ ಆಗಮಿಸುವ ವಿವಿಧ ಧರ್ಮಗಳ ಪ್ರವಾಸಿಗರಿಂದ ಆಲಮಟ್ಟಿಯ ರಾಷ್ಟ್ರೀಯ ಹೆದ್ದಾರಿಯಿಂದ ಎಲ್ಲ ಉದ್ಯಾನಗಳ ರಸ್ತೆಗಳು ಸೇರಿದಂತೆ ಎಲ್ಲಿ ನೋಡಿದರೂ ಜನ ಸಮೂಹವೇ ಕಾಣುತ್ತಿತ್ತು.

ಹೆಚ್ಚಿದ ವ್ಯಾಪಾರ: ಬುಧವಾರ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರವಾಸಿಗರು ಬಿಸಿಲಿನ ಬೇಗೆಯನ್ನು ತಾಳದೇ ಕೆಲವರು ಐಸ್‌ಕ್ರೀಂ, ಮಜ್ಜಿಗೆ, ಶರಬತ್ತು ಸೇರಿದಂತೆ ಹಲವಾರು ಬಗೆಯ ತಂಪು ಪಾನೀಯ ಮೊರೆ ಹೋಗಿದ್ದರಿಂದ ವ್ಯಾಪಾರಸ್ಥರು ಖುಷಿಯಿಂದ ವ್ಯವಹಾರ ಮಾಡಿದರು.

ರಾಕ್‌ ಉದ್ಯಾನ, ಗೋಪಾಲ ಕೃಷ್ಣ ಉದ್ಯಾನ ಹಾಗೂ ಲವಕುಶ ಉದ್ಯಾನಗಳಿಗೆ ಭೇಟಿ ನೀಡಿದ ಪ್ರವಾಸಿಗರಿಂದ ಒಟ್ಟು 1,34,880 ರೂ. ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗಕ್ಕೆ ಪ್ರವೇಶ μà ಜಮಾ ಆಗಿದೆ. ನಿಡಗುಂದಿ ಸಿಪಿಐ ಸೋಮಶೇಖರ ಜುಟ್ಟಲ್‌ ನೇತೃತ್ವದಲ್ಲಿ ಇಬ್ಬರು ಪಿಎಸೈ, 35 ಪೊಲೀಸ್‌ ಸಿಬ್ಬಂದಿ, ಒಂದು ಡಿಎಆರ್‌ ತುಕಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ಪೈ, ಎಸಿಎಫ್‌ ಪ್ಯಾಟಿಗೌಡರ, ವಲಯ ಅರಣ್ಯಾ ಧಿಕಾರಿ ಮಹೇಶ ಪಾಟೀಲ ಸೇರಿ 20 ಜನ ಅಧಿಕಾರಿಗಳು 300ಕ್ಕೂ ಅಧಿಕ ದಿನಗೂಲಿ ಕಾರ್ಮಿಕರು, ಕೆಎಸ್‌ಐಎಸ್‌ಎಫನ 10 ಜನ ಅಧಿಕಾರಿಗಳು 50 ಜನ ಪೊಲೀಸ್‌ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.              -ಶಂಕರ ಜಲ್ಲಿ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.