ಹದಗೆಟ್ಟ ರಸ್ತೆಯಲ್ಲಿ ಸಂಚಾರವೇ ದುಸ್ತರ

ಕಬ್ಬು ತುಂಬಿದ ಟ್ರ್ಯಾಕ್ಟರ್ ಸಾಗುವುದು ಕಷ್ಟ; ಬ್ರಿಡ್ಜ್ ಕಂ ಬ್ಯಾರೇಜ್‌ ಬಳಿ ರಸ್ತೆ ಡಾಂಬರೀಕರಣ ಮಾಡಿ

Team Udayavani, Nov 29, 2022, 12:09 PM IST

10

ಕಲಾದಗಿ: ಮೂರು ತಾಲೂಕಿನ ಸುಮಾರು ಮೂವತ್ತು ಹಳ್ಳಿಗಳಿಗೆ ಪರಸ್ಪರ ಸನಿಹ ಸಂಪರ್ಕ ಕಲ್ಪಿಸುವ ಕಲಾದಗಿ ಕಾತರಕಿ ಬ್ರಿಡ್ಜ್ ಕಂ ಬ್ಯಾರೇಜ್‌ ಬಳಿ ದಕ್ಷಿಣ ಭಾಗದ ಮಣ್ಣು ಏರು ರಸ್ತೆಯಲ್ಲಿ ಮೊಳಕಾಲುದ್ದ ತಗ್ಗು ಗುಂಡಿಗಳು ಬಿದ್ದಿದ್ದು, ಕಬ್ಬು ತುಂಬಿದ ಟ್ರ್ಯಾಕ್ಟರ್ ವಾಹನ ಚಲಾವಣೆ ಮಾಡಲು ರೈತರು ಹರಸಾಹಸ ಪಡುತ್ತಿರುವ ದೃಶ್ಯಗಳು ದಿನೇ ದಿನೇ ಸಾಮಾನ್ಯವಾಗಿವೆ. ‌

ಬಾಗಲಕೋಟೆ, ಬೀಳಗಿ, ಮುಧೋಳ ತಾಲೂಕಿನ ಹಲವು ಹಳ್ಳಿಗಳಿಗೆ ಸನಿಹ ಸಂಪರ್ಕ ರಸ್ತೆ ಕಲಾದಗಿ ಕಾತರಕಿ ಬ್ರಿಡ್ಜ್ ಕಂ ಬ್ಯಾರೆಜ್‌ ರಸ್ತೆ ರೈತರಿಗೆ ವ್ಯಾರಾಸ್ಥರಿಗೆ ನಿತ್ಯ ಉಪಯೋಗಿ ಸಂಚಾರ ರಸ್ತೆಯಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿವೆ. ಕಳೆದೊಂದು ತಿಂಗಳಿಂದ ಪ್ರಸಕ್ತ ವರ್ಷದ ಕಬ್ಬ ಕಟಾವು ಪ್ರಾರಂಭವಾಗಿದ್ದು, ನಿತ್ಯ ನೂರಾರು ಕಬ್ಬು ತುಂಬಿದ ಟ್ರ್ಯಾಕ್ಟರ್ ಗಳು ಈ ತಗ್ಗು ಗುಂಡಿ ಬಿದ್ದ ರಸ್ತೆಯಲ್ಲಿ ಹರಸಾಹಸ ಪಟ್ಟು ಬ್ಯಾರೇಜ್‌ ಏರು ರಸ್ತೆ ಹತ್ತಿಸಬೇಕಾಗಿದೆ, ಈ ವೇಳೆ ಹಲವು ಸರ್ಕಸ್‌ಗಳು ನಡೆಯುತ್ತಿವೆ, ಸರ್ಕಸ್‌ ವೇಳೆ ಏನಾದರು ಅವಘಡ ಸಂಭವಿಸಿದರೂ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಯಾವುದಾರೂ ದೊಡ್ಡ ಅನಾಹುತ ಸಂಭವಿಸುವ ಮೊದಲು ಬ್ಯಾರೇಜ್‌ ಏರು ರಸ್ತೆಯನ್ನು ಕಡಿ ಕಲ್ಲು, ಮರಂ ಮಣ್ಣು ಸುರಿದು ಗಟ್ಟಿಗೊಳಿಸಿ ಗುಣಮಟ್ಟದ ಡಾಂಬರೀಕರಣ ಕಾಮಗಾರಿ ಮಾಡಿಸಬೇಕೆಂದು ರೈತ ಸಮುದಾಯ ಸೇರಿದಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸವಾರರ ಆಕ್ರೋಶ: 2019 ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ಉಂಟಾದ ನದಿ ಪ್ರವಾಹಕ್ಕೆ ಬ್ಯಾರೇಜ್‌ ಬಳಿಯ 200 ಮೀಟರ್‌ ರಸ್ತೆ ಸಮೇತ ಹಿಂದೆ ಅಳವಡಿಸಿದ್ದ ಕ್ರಾಸ್‌ ಬೇರಿಯರ್‌ ಕಿತ್ತು ಹೋಗಿದ್ದವು. ಪ್ರವಾಹ ಅಬ್ಬರ ಕಡಿಮೆ ಆದ ನಂತರ ತುರ್ತು ಕಾಮಗಾರಿಯಲ್ಲಿ ರಸ್ತೆಯನ್ನು ದುರಸ್ತಿ ಮಾಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಸಂಚಾರ ರಸ್ತೆ ನಿರ್ಮಿಸಿ ಮೂರು ವರ್ಷ ಕಳೆಯುತ್ತ ಬಂದರೂ ಇನ್ನೂ ಏರು ರಸ್ತೆಗೆ ಡಾಂಬರೀಕರಣ ಮಾಡಿಲ್ಲ ಎಂದು ವಾಹನ ಸವಾರರು, ಸಂಚಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ವರ್ಷದ ಕಬ್ಬು ಕಟಾವು ಹಂಗಾಮು ಪ್ರಾರಂಭಗೊಂಡಿದ್ದು ನಿತ್ಯ ನೂರಾರು ಕಬ್ಬುತುಂಬಿದ ಟ್ರ್ಯಾಕ್ಟರ್ ವಾಹನ ಈ ರಸ್ತೆಯಲ್ಲಿ ಸಾಗಿ ಜೆಮ್‌ ಫ್ಯಾಕ್ಟರಿ, ಮುಧೋಳ ಫ್ಯಾಕ್ಟರಿಗೆ ಸಾಗಬೇಕಾಗಿದೆ. ರಸ್ತೆ ಹದಗೆಟ್ಟಿದ್ದರಿಂದ ಟ್ರ್ಯಾಕ್ಟರ್ ವಾಹನ ಸಂಚಾರ ಮಾಡುವುದು ಕಷ್ಟಕರ. ಕೂಡಲೇ ರಸ್ತೆ ಡಾಂಬರೀಕರಣ ಮಾಡಬೇಕು.  -ಹನುಮಂತ ಬಿ. ಮರೆಮ್ಮನವರ, ನಿಂಗಾಪೂರ ಎಸ್‌.ಕೆ. ಗ್ರಾಮದ ರೈತ

ಕಲಾದಗಿ ಕಾತರಕಿ ಬ್ರಿಡ್ಜ್ ಕಂ ಬ್ಯಾರೇಜ್‌ ಬಳಿಯ ರಸ್ತೆ ದುರಸ್ತಿ ಹಾಗೂ ಡಾಂಬರೀಕರಣ ಮಾಡಲು ಗುತ್ತಿಗೆದಾರನಿಗೆ ಸೂಚನೆ ನೀಡಲಾಗಿದೆ. ಶೀಘ್ರ ರಸ್ತೆ ದುರಸ್ತಿ ಕಾರ್ಯ ಪ್ರಾರಂಭವಾಗುವಂತೆ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು.  -ಎಸ್‌.ಎಂ. ದೇಸಾಯಿ, ಎಇಇ, ಸಣ್ಣ ನಿರಾವರಿ ಇಲಾಖೆ ಬಾಗಲಕೋಟೆ

-ಚಂದ್ರಶೇಖರ ಹಡಪದ

ಟಾಪ್ ನ್ಯೂಸ್

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

1-w-wewqe

ವಾಣಿ ಜಯರಾಂ ನಿಗೂಢ ಮೃತ್ಯು; ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸುಪ್ರೀಂ ಕೋರ್ಟ್‌ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು

ಸುಪ್ರೀಂ ಕೋರ್ಟ್‌ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು

1-asdsa-das

ನನ್ನ ಅಥ್ಲೆಟಿಕ್ಸ್ ಅಕಾಡೆಮಿಯಲ್ಲಿ ಅತಿಕ್ರಮಣ: ಪಿ.ಟಿ.ಉಷಾ ಗಂಭೀರ ಆರೋಪ

ಮಠಗಳು ಇಲ್ಲದಿದ್ದರೆ ಶಿಕ್ಷಣ ಒದಗಿಸುವುದು ಅಸಾಧ್ಯವಾಗುತ್ತಿತ್ತು: ಸಿಎಂ ಬೊಮ್ಮಾಯಿ

ಮಠಗಳು ಇಲ್ಲದಿದ್ದರೆ ಶಿಕ್ಷಣ ಒದಗಿಸುವುದು ಅಸಾಧ್ಯವಾಗುತ್ತಿತ್ತು: ಸಿಎಂ ಬೊಮ್ಮಾಯಿ

Perth Scorchers are the BBL champions for the fifth time!

ಐದನೇ ಬಾರಿಗೆ ಬಿಗ್ ಬ್ಯಾಶ್ ಲೀಗ್ ಟ್ರೋಫಿ ಗೆದ್ದ ಪರ್ತ್ ಸ್ಕಾಚರ್ಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸ್ಥಳಾವಕಾಶ ನೀಡಿದರೆ ಜವಳಿ ಪಾರ್ಕ್‌ ನಿರ್ಮಾಣ; ಜವಳಿ ಸಚಿವ ಪಾಟೀಲ

ಸ್ಥಳಾವಕಾಶ ನೀಡಿದರೆ ಜವಳಿ ಪಾರ್ಕ್‌ ನಿರ್ಮಾಣ; ಜವಳಿ ಸಚಿವ ಪಾಟೀಲ

1-asda-ss

ಸೂಕ್ತ ಸ್ಥಳಾವಕಾಶ ನೀಡಿದರೆ ರಬಕವಿ ಬನಹಟ್ಟಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ: ಮುನೇನಕೊಪ್ಪ

tdy-28

ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಳಿಸಿದ ಬಿಜೆಪಿ

1-ssdsd

ದೇವರದಾಸಿಮಯ್ಯ ಹಟಗಾರ ಜಗದ್ಗುರುಗಳ ಸಂಭ್ರಮದ ಪುರಪ್ರವೇಶ

MUST WATCH

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

ಹೊಸ ಸೇರ್ಪಡೆ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

ಕಳೆಗಟ್ಟಿದ ಭರತ ಹುಣ್ಣಿಮೆ ಜಾತ್ರೆ: ಮಧುವನಗಿತ್ತಿಯಂತೆ ಸಿದ್ದಗೊಂಡ ಯಲ್ಲಮ್ಮನಗುಡ್ಡ

1-w-wewqe

ವಾಣಿ ಜಯರಾಂ ನಿಗೂಢ ಮೃತ್ಯು; ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

ಸಾವಯವ ಕೃಷಿ ಮೂಲಕ ಮಿಶ್ರಬೆಳೆಯಿಂದ ಅಧಿಕ ಲಾಭ

Exam

371 (ಜೆ) ಪ್ರಾಧ್ಯಾಪಕ ಹುದ್ದೆ ನೇಮಕಾತಿ ದೋಷ ಸರಿಪಡಿಸುವ ಆದೇಶ ಸ್ವಾಗತಾರ್ಹ

ಸುಪ್ರೀಂ ಕೋರ್ಟ್‌ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು

ಸುಪ್ರೀಂ ಕೋರ್ಟ್‌ಗೆ 5 ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.