ಬಿಜೆಪಿಗೇ ಗೆಲುವು: ಆದಿತ್ಯನಾಥ್‌

Team Udayavani, May 13, 2018, 6:45 AM IST

ಗೋರಖ್‌ಪುರ: ಕರ್ನಾಟಕದಲ್ಲಿರುವ ಕಾಂಗ್ರೆಸ್‌ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಂಡಿದೆ. ಶನಿವಾರ ಮುಕ್ತಾಯವಾದ ಮತದಾನದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದು ಸರ್ಕಾರ ರಚಿಸಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಸಚಿವರು ಮತದಾರರಿಗೆ ಹಣ ನೀಡಿದ ಅಂಶ ಬಹಿರಂಗವಾಗಿದೆ. ಜತೆಗೆ ಇತರ ಅಡ್ಡದಾರಿಗಳನ್ನೂ ಹಿಡಿದಿದ್ದಾರೆ. ಆದರೂ, ಕರ್ನಾಟಕದ ಜನರು ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ನೀಡಲಿದ್ದಾರೆಂದು ಅವರು ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ