ಒಮಿಕ್ರಾನ್‌ಗೆ ಬೌರಿಂಗ್‌ ಆಸ್ಪತ್ರೆ ಮೀಸಲು

Team Udayavani, Dec 3, 2021, 10:33 AM IST

ಒಮಿಕ್ರಾನ್‌ಗೆ ಬೌರಿಂಗ್‌ ಆಸ್ಪತ್ರೆ ಮೀಸಲು

ಬೆಂಗಳೂರು: ನಗರದ ಇಬ್ಬರಲ್ಲಿ ಕೊರೊನಾ ಹೊಸ ತಳಿ ಒಮಿಕ್ರಾನ್‌ ಕಾಣಿಸಿಕೊಂಡ ಬೆನ್ನಲ್ಲೇ ಸೋಂಕಿತರ ಚಿಕಿತ್ಸೆಗಾಗಿ ಬೌರಿಂಗ್‌ ಆಸ್ಪತ್ರೆಯನ್ನು ಮೀಸಲಿಡಲಾಗಿದೆ ಎಂದು ನಗರ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಮಿಕ್ರಾನ್‌ ವೇಗವಾಗಿ ಹರಡಿ ದರೂ ಅದರ ಲಕ್ಷಣಗಳು ಗಂಭೀರವಾಗಿರುವು ದಿಲ್ಲ ಎಂದು ದಕ್ಷಿಣ ಆಫ್ರಿಕಾದ ವೈದ್ಯರ ತಂಡ ಸ್ಪಷ್ಟಪಡಿಸಿದೆ. ಹಾಗಾಗಿ ಹೆಚ್ಚು ಆತಂಕ ಪಡುವ ಆತಂಕವಿಲ್ಲ ಎಂದು ಹೇಳಿದರು.

ಇದನ್ನೂ ಓದಿ:-‘ರಾಜಕೀಯ ರಕ್ಕಸತನʼಕ್ಕೆ ಅವರು ರಾಜಾಧಿರಾಜ: ಸಿದ್ದರಾಮಯ್ಯ ವಿರುದ್ಧ ಎಚ್ ಡಿಕೆ ಕಿಡಿ

ನಗರದಲ್ಲಿ ಇಬ್ಬರಿಗೆ ಹೊಸ ರೂಪಾಂತರಿ ಒಮಿಕ್ರಾನ್‌ ಇರುವುದು ದೃಢಪಟ್ಟಿದೆ. 66 ವರ್ಷದ ವ್ಯಕ್ತಿಗೆ 24 ಪ್ರಾಥಮಿಕ ಮತ್ತು 240 ದ್ವಿತೀಯ ಸಂಪರ್ಕಿತರಿದ್ದು, ಇವರನ್ನು ಪರೀಕ್ಷೆಗೆ ಒಳ ಪಡಿಸಿದಾಗ ನೆಗೆಟಿವ್‌ ಬಂದಿದೆ. ಆದರೆ, ಮತ್ತೂಬ್ಬ ಒಮಿಕ್ರಾನ್‌ ಸೋಂಕಿತ 46 ವರ್ಷದ ವ್ಯಕ್ತಿಯು 13 ಪ್ರಾಥಮಿಕ ಮತ್ತು 205 ದ್ವಿತೀಯ ಸಂಪರ್ಕಿತರನ್ನು ಹೊಂದಿದ್ದು, ಅವರಲ್ಲಿ ಐವರಿಗೆ ಕೊರೊನಾ ಪಾಸಿಟಿವ್‌ ಬಂದಿದೆ.

ಅವರನ್ನು ಆಸ್ಪತ್ರೆಯಲ್ಲಿ ಐಸೋಲೇಷನ್‌ ಮಾಡಲಾಗಿದೆ. ಆದರೆ, ಈ ವ್ಯಕ್ತಿ ಯಾವುದೇ ವಿದೇಶ ಪ್ರವಾಸದ ಟ್ರಾವೆಲ್‌ ಹಿಸ್ಟರಿ ಪತ್ತೆಯಾಗಿಲ್ಲದಿರುವುದರಿಂದ ಇವರಿಗೆ ಹೇಗೆ ಒಮಿಕ್ರಾನ್‌ ಬಂದಿದೆ ಎಂಬುದು ನಿಗೂಢವಾಗಿದೆ. ಜತೆಗೆ ಇನ್ನೂ ಹಲವು ಸಂಪರ್ಕಿತರಿರುವ ಸಾಧ್ಯತೆ ಇದೆ. ಹಾಗಾಗಿ, ಜನ ಹೆಚ್ಚು ಮುಂಜಾಗ್ರತ ಕ್ರಮಗಳನ್ನು ವಹಿಸಬೇಕು ಎಂದು ಗೌರವ್‌ ಗುಪ್ತ ತಿಳಿಸಿದರು. ಎರಡನೇ ವ್ಯಕ್ತಿ ಮೂಲತಃ ಬೆಂಗಳೂರಿ ನವರಾಗಿದ್ದು, ಇಲ್ಲಿಯೇ ನೆಲೆಸಿದ್ದಾರೆ.

ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆ ಸೀಲ್‌ಡೌನ್‌ ಮಾಡುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಸದ್ಯಕ್ಕೆ ಇವರೊಂದಿಗೆ ಪ್ರಾಥ ಮಿಕ ಸಂಪರ್ಕ ಹೊಂದಿದ್ದ 13ರಲ್ಲಿ ಮೂವರು ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 205ರಲ್ಲಿ ಇಬ್ಬರಿಗೆ ಕೊರೊನಾ ಕಾಣಿಸಿಕೊಂಡಿದೆ. ಇಬ್ಬರೂ ಒಮಿಕ್ರಾನ್‌ ಸೋಂಕಿತರ ಎಲ್ಲ ಸಂಪರ್ಕಿತರನ್ನು ಪಾಲಿಕೆಯಿಂದ ಐಸೋಲೇಷನ್‌ ಮತ್ತು ಕ್ವಾರಂಟೈನ್‌ ಮಾಡಲಾಗಿದೆ ಎಂದರು. ಒಮಿಕ್ರಾನ್‌ ಸೋಂಕಿತ ಮೊದಲ ವ್ಯಕ್ತಿ ಈಗಾಗಲೇ ನೆಗೆಟಿವ್‌ ವರದಿಯೊಂದಿಗೆ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

ನ. 20ರಂದು ದಕ್ಷಿಣ ಆಫ್ರಿಕಾದಿಂದ ನೆಗೆಟಿವ್‌ ವರದಿಯೊಂದಿಗೆ ಬಂದಿದ್ದ ಆ ವ್ಯಕ್ತಿಗೆ ತದನಂತರದಲ್ಲಿ ಪಾಸಿಟಿವ್‌ ಬಂದಿತ್ತು. ಈ ಮಧ್ಯೆ ಅವರು ಗುಣಮುಖರಾಗಿ ಮತ್ತೆ ಪರೀಕ್ಷೆಗೊಳಪಟ್ಟು ನೆಗೆಟಿವ್‌ ವರದಿಯೊಂದಿಗೆ ನ. 27ರಂದು ದುಬೈಗೆ ಹಿಂತಿರುಗಿದ್ದಾರೆ. ಈ ಮಧ್ಯೆ ಮಾದರಿಯನ್ನು ಜಿನೋಮಿಕ್‌ ಸಿಕ್ವೆನ್ಸಿಂಗ್‌ ಗೆ ಕಳುಹಿಸಿದಾಗ, ಆ ವ್ಯಕ್ತಿಗೆ ಒಮಿಕ್ರಾನ್‌ ಇರು ವುದು ದೃಢಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಸಂಪ ರ್ಕಿತರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದರು. ಬೆಂಗಳೂರು ಮೂಲದ ಎರಡನೇ ವ್ಯಕ್ತಿಗೆ ಸೋಂಕು ದೃಢಪಟ್ಟು ಆ ಮಾದರಿಯನ್ನು ಜಿನೋಮಿಕ್‌ ಸಿಕ್ವೆನ್ಸಿಂಗ್‌ ಕಳುಹಿಸಲಾಯಿತು. ಈ ಮಧ್ಯೆ ಸೋಂಕಿತ ವ್ಯಕ್ತಿಯು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದಾರೆ. ಗುರುವಾರ ಅವರಲ್ಲಿ ಒಮಿಕ್ರಾನ್‌ ದೃಢಪಟ್ಟಿದೆ ಎಂದು ಹೇಳಿದರು.

ದೇಶದ ಮೊದಲ ಪ್ರಕರಣ ಬೆಂಗಳೂರಲ್ಲಿ ಪತ್ತೆ

ಕೊರೊನಾ ಮೊದಲ ಹಂತದಲ್ಲಿ ದೇಶದ ಮೊದಲ ಸಾವು ಆಗಿದ್ದು ಕರ್ನಾಟಕದ ಕಲಬುರಗಿಯಲ್ಲಿ. ವಿಚಿತ್ರವೆಂದರೆ, ಈಗ ಜಗತ್ತಿನಲ್ಲಿ ಆತಂಕಕ್ಕೆ ಕಾರಣ ವಾಗಿರುವ ರೂಪಾಂತರಿ ಒಮಿಕ್ರಾನ್‌ ಪತ್ತೆಯಾಗಿರುವುದು ಕರ್ನಾಟಕದಲ್ಲೇ. ಇದರಲ್ಲಿ ಒಬ್ಬರು ದಕ್ಷಿಣ ಆಫ್ರಿಕಾದಿಂದ ಬಂದವರಾಗಿದ್ದರೆ, ಮತ್ತೂಬ್ಬರು ಯಾವುದೇ ಪ್ರಯಾಣ ಹಿನ್ನೆಲೆ ಇಲ್ಲದ ವೈದ್ಯರು. ಈ ವೈದ್ಯರಿಗೆ ರೂಪಾಂತರಿ ಹೇಗೆ ತಗುಲಿತು ಎಂಬ ಬಗ್ಗೆ ಇನ್ನೂ ಹುಡುಕಾಟ ನಡೆದಿದೆ. ಜತೆಗೆ, ಇವರ ಸಂಪರ್ಕದಲ್ಲಿರುವ ಐವರಿಗೆ ಸೋಂಕು ತಗುಲಿದ್ದು, ಇವರ ಬಗ್ಗೆಯೂ ಜಾಗ್ರತೆ ವಹಿಸಲಾಗಿದೆ.

ತಜ್ಞರ ಸಲಹೆ ಪಾಲಿಸಿ

ನಗರದಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿ ಒಮಿಕ್ರಾನ್‌ ನಿಯಂತ್ರಣಕ್ಕೆ ಈ ಹಿಂದೆ ಕೋವಿಡ್‌ ನಿರ್ವಹಣೆಗೆ ಅನುಸರಿಸಲಾದ ಎಲ್ಲ ಮಾರ್ಗಗಳನ್ನು ಪಾಲಿಸಲಾಗುತ್ತದೆ. ಈ ಹಿಂದೆ ಜೀನೋಮಿಕ್‌ ಕೋವಿಡ್‌ ಪರೀಕ್ಷೆಯ ವರದಿ ಬರುವುದು 2 ತಿಂಗಳು ತಡವಾಗುತ್ತಿತ್ತು. ಈಗ ಒಂದು ವಾರದಲ್ಲಿ ವರದಿ ಬರುತ್ತಿದ್ದು ಹೊಸ ತಳಿಯ ನಿಯಂತ್ರಣದ ಬಗ್ಗೆ ನಿಗಾ ವಹಿಸಲಾಗುತ್ತದೆ. ಈಗಾಗಲೇ ನಗರದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ತಜ್ಞರೊಂದಿಗೆ ಸಭೆ ನಡೆಸಲಾಗಿದ್ದು, ಅವರು ಸೂಚಿಸಿದ ಎಲ್ಲ ಸಲಹೆಗಳನ್ನು ಪಾಲಿಸಲಾಗುವುದು ಎಂದರು.

ಟಾಪ್ ನ್ಯೂಸ್

PSIಪೊಲೀಸ್‌ ಶ್ರೀಧರ್‌ ಮನೆಯಲ್ಲಿ 1.55 ಕೋ. ರೂ. ಪತ್ತೆ

ಪೊಲೀಸ್‌ ಶ್ರೀಧರ್‌ ಮನೆಯಲ್ಲಿ 1.55 ಕೋ. ರೂ. ಪತ್ತೆ

ಮೇಜರ್‌ ಕ್ರೈಂ ಮಾನಿಟರಿಂಗ್‌ ಸೆಲ್‌ ಸ್ಥಾಪನೆ: ಕಮಿಷನರ್‌

ಮೇಜರ್‌ ಕ್ರೈಂ ಮಾನಿಟರಿಂಗ್‌ ಸೆಲ್‌ ಸ್ಥಾಪನೆ: ಕಮಿಷನರ್‌

ಸ್ವಂತ ಮನೆಯಲ್ಲೇ ಯುವತಿಯಿಂದ ಕಳವು

ಸ್ವಂತ ಮನೆಯಲ್ಲೇ ಯುವತಿಯಿಂದ ಕಳವು

ಮತ್ತೆ ಆರೆಂಜ್‌ ಅಲರ್ಟ್‌; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಮತ್ತೆ ಆರೆಂಜ್‌ ಅಲರ್ಟ್‌; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

6 ತಿಂಗಳಲ್ಲಿ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಸಲು ಜೋ ಬೈಡೆನ್‌ ಅವರಿಗೆ ಶಿಫಾರಸು

6 ತಿಂಗಳಲ್ಲಿ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಸಲು ಜೋ ಬೈಡೆನ್‌ ಅವರಿಗೆ ಶಿಫಾರಸು

ಅಂತ್ಯಸಂಸ್ಕಾರಕ್ಕೆ ತೆರಳಿ ಹಿಂದಿರುಗುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು

ಅಂತ್ಯಸಂಸ್ಕಾರಕ್ಕೆ ತೆರಳಿ ಹಿಂದಿರುಗುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು

ಕ್ಷೀರಭಾಗ್ಯ ಹಾಲಿನ ಪುಡಿ ಪ್ಯಾಕೆಟ್‌ ತ್ಯಾಜ್ಯವಾಗಿ ಪತ್ತೆ

ಕ್ಷೀರಭಾಗ್ಯ ಹಾಲಿನ ಪುಡಿ ಪ್ಯಾಕೆಟ್‌ ತ್ಯಾಜ್ಯವಾಗಿ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್‌ ಪ್ರಕರಣ : ರಾಜ್ಯದಲ್ಲಿ 109 ಪಾಸಿಟವ್‌ ವರದಿ, 147ಮಂದಿ ಗುಣಮುಖ

ಕೋವಿಡ್‌ ಪ್ರಕರಣ : ರಾಜ್ಯದಲ್ಲಿ 109 ಪಾಸಿಟವ್‌ ವರದಿ, 147ಮಂದಿ ಗುಣಮುಖ

ಮದ್ಯ ಮಾರಾಟಗಾರರಿಗೆ ಶುಭ ಸುದ್ದಿ : ಇ-ಇಂಡೆಂಟಿಂಗ್ ಸಮಸ್ಯೆ ನಿವಾರಣೆಗೆ ಕ್ರಮ ; ಅಬಕಾರಿ ಸಚಿವ

ಮದ್ಯ ಮಾರಾಟಗಾರರಿಗೆ ಶುಭ ಸುದ್ದಿ : ಇ-ಇಂಡೆಂಟಿಂಗ್ ಸಮಸ್ಯೆ ನಿವಾರಣೆಗೆ ಕ್ರಮ ; ಅಬಕಾರಿ ಸಚಿವ

ಹಸಿ ಕಸದಿಂದ ನೈಸರ್ಗಿಕ ಅನಿಲ ಉತ್ಪಾದನೆ 

ಹಸಿ ಕಸದಿಂದ ನೈಸರ್ಗಿಕ ಅನಿಲ ಉತ್ಪಾದನೆ 

ಪೊಲೀಸರ ಹೆಸರು ಬಳಸಿಕೊಂಡು ಸುಲಿಗೆ: ಆರೋಪಿ ಬಂಧನ

ಪೊಲೀಸರ ಹೆಸರು ಬಳಸಿಕೊಂಡು ಸುಲಿಗೆ: ಆರೋಪಿ ಬಂಧನ

1sucide

ಬೇಲ್‌ಗೆ ಕುಟುಂಬ ಸಹಕರಿಸದಿದ್ದಕ್ಕೆ ಕೈದಿ ಜೈಲಿನಲ್ಲಿ ಆತ್ಮಹತ್ಯೆ

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

ಹೊಸ ಸೇರ್ಪಡೆ

PSIಪೊಲೀಸ್‌ ಶ್ರೀಧರ್‌ ಮನೆಯಲ್ಲಿ 1.55 ಕೋ. ರೂ. ಪತ್ತೆ

ಪೊಲೀಸ್‌ ಶ್ರೀಧರ್‌ ಮನೆಯಲ್ಲಿ 1.55 ಕೋ. ರೂ. ಪತ್ತೆ

ಮೇಜರ್‌ ಕ್ರೈಂ ಮಾನಿಟರಿಂಗ್‌ ಸೆಲ್‌ ಸ್ಥಾಪನೆ: ಕಮಿಷನರ್‌

ಮೇಜರ್‌ ಕ್ರೈಂ ಮಾನಿಟರಿಂಗ್‌ ಸೆಲ್‌ ಸ್ಥಾಪನೆ: ಕಮಿಷನರ್‌

ಸ್ವಂತ ಮನೆಯಲ್ಲೇ ಯುವತಿಯಿಂದ ಕಳವು

ಸ್ವಂತ ಮನೆಯಲ್ಲೇ ಯುವತಿಯಿಂದ ಕಳವು

ಮತ್ತೆ ಆರೆಂಜ್‌ ಅಲರ್ಟ್‌; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಮತ್ತೆ ಆರೆಂಜ್‌ ಅಲರ್ಟ್‌; ಎರ್ನಾಕುಳಂ, ಇಡುಕ್ಕಿ ಸೇರಿ 8 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

6 ತಿಂಗಳಲ್ಲಿ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಸಲು ಜೋ ಬೈಡೆನ್‌ ಅವರಿಗೆ ಶಿಫಾರಸು

6 ತಿಂಗಳಲ್ಲಿ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಸಲು ಜೋ ಬೈಡೆನ್‌ ಅವರಿಗೆ ಶಿಫಾರಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.