ಬಿಎಸ್‌ವೈಗೆ ಈಶ್ವರಪ್ಪ ಟಾಂಗ್‌; ಶಾಸಕರಿಗೆ ಬ್ರಿಗೇಡ್ ಇಷ್ಟ

Team Udayavani, Jan 12, 2017, 3:45 AM IST

yeddy-1.jpg

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಬಣಕ್ಕೆ ಸಡ್ಡು ಹೊಡೆದಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ, ಬುಧವಾರ ನಡೆದ ಬ್ರಿಗೇಡ್‌ನ‌ ಸಮಾವೇಶದಲ್ಲಿ ತಮ್ಮ ಭಾಷಣದುದ್ದಕ್ಕೂ ಪಕ್ಷ ನಿಷ್ಠೆ ಮಾತುಗಳನ್ನಾಡಿ, ಯಡಿಯೂರಪ್ಪ ಅವರಿಗೆ ಮಾತುಮಾತಿಗೂ ಟಾಂಗ್‌ ಕೊಡುವ ಮೂಲಕ ಕುತೂಹಲ ಮೂಡಿಸಿದರು.

ತಮ್ಮ ಭಾಷಣದ ಆರಂಭದಲ್ಲಿಯೇ, ಬೆಂಗಳೂರು ನಗರ ನಾಯಕರಾಗಿದ್ದ ವೆಂಕಟೇಶ್‌ ಮೂರ್ತಿ ಅವರನ್ನು ಅಮಾನತು ಮಾಡುವ ಮೂಲಕ ರಾಜ್ಯ ನಾಯಕರನ್ನಾಗಿ ಮಾಡಲಾಗಿದೆ. ಇದಕ್ಕೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು ಎಂದು ಹೇಳುವ ಮೂಲಕ ವ್ಯಂಗ್ಯವಾಡಿದರು.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಈ ತಿಂಗಳ 26ರಂದು ನಡೆಯುವ ಬ್ರಿಗೇಡ್‌ ಸಮಾವೇಶದ ಸಿದ್ಧತೆ ಕುರಿತು ಚರ್ಚಿಸಲು ನಡೆಸಲು ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿನ ಶ್ರೀಹರಿ ಕಲ್ಯಾಣಮಂಟಪದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ತಮ್ಮ ಭಾಷಣದುದಕ್ಕೂ ನೆಪಮಾತ್ರಕ್ಕೆ ಕಾಂಗ್ರೆಸ್‌ ವಿರುದ್ಧ ಮಾತನಾಡಿದರೂ ನಾಜೂಕಾಗಿ ಯಡಿಯೂರಪ್ಪ ವಿರುದ್ಧವೇ ವಾಗ್ಧಾಳಿ ನಡೆಸಿದರು.

ಅಲ್ಲದೇ, ಸಭೆಯಲ್ಲಿ ಸಮಾವೇಶದ ಪೂರ್ವ ಸಿದ್ಧತೆ ಕುರಿತು ಚರ್ಚೆ ನಡೆಯುವುದಕ್ಕಿಂತ ಹೆಚ್ಚಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಪ್ರಧಾನ ಕಾರ್ಯದರ್ಶಿ ವೆಂಕಟೇಶ್‌ ಮೂರ್ತಿ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಿದ ವಿಷಯದ ಬಗ್ಗೆಯೇ ಪ್ರಮುಖವಾಗಿ ಮಾತನಾಡಿದರು. ಮಾತ್ರವಲ್ಲ, ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿತು.

ಎಲ್ಲಾ ವರ್ಗದ ಬಡವರಿಗೆ ನ್ಯಾಯ ಒದಗಿಸಲು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಂಘಟನೆ ಕಟ್ಟಲಾಗಿದೆ. ಇದೊಂದು ಪಕ್ಷಾತೀತ ಸಂಘಟನೆಯಾಗಿದೆ. ಸಂಘಟನೆ ಪ್ರಾರಂಭಿಸಿರುವುದಕ್ಕೆ ಬಿಜೆಪಿಯ ಶಾಸಕರು ಸೇರಿದಂತೆ ಮುಖಂಡರಿಗೆ ಸಂತೋಷ ಇದ್ದು, ಖಾಸಗಿಯಾಗಿ ಬಂದು ಒಳ್ಳೆಯ ಮಾತುಗಳನ್ನಾಡುತ್ತಾರೆ. ಮುಂದಿನ ಚುನಾವಣೆಗೆ ನಮಗೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯಗಳನ್ನು ವೈಯಕ್ತಿಕವಾಗಿ ಹೇಳುತ್ತಾರೆ. ಆದರೆ, ಯಾರೂ ಸಹ ಬಹಿರಂಗವಾಗಿ ಹೇಳುವುದಿಲ್ಲ. ಯಾಕೆಂದರೆ ಎಲ್ಲರಿಗೂ ಯಡಿಯೂರಪ್ಪ ಬೆದರಿಕೆ ಇದೆ ಎಂದು ಈಶ್ವರಪ್ಪ ಮಾರ್ಮಿಕವಾಗಿ ನುಡಿದರು. 

ಯಡಿಯೂರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಬೇಡ ಎನ್ನುತ್ತಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಬೇಡ ಎಂಬುದನ್ನು ಮಾತ್ರ ಹೇಳುತ್ತಿಲ್ಲ. ಬ್ರಿಗೇಡ್‌ ಕುರಿತು ಅವರಿಗೆ ಯಾರೋ ತಪ್ಪಾಗಿ ಹೇಳಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಕಾರಣಕ್ಕಾಗಿ ಸಂಘಟನೆ ಆರಂಭಿಸಲಾಗಿದೆ. ಅವರಿಗೆ ಗೊಂದಲ ಮೂಡಿದ್ದು, ಬ್ರಿಗೇಡ್‌ ಪ್ರಾರಂಭಕ್ಕೆ ಸಂತೋಷ ಪಡಬೇಕಾಗಿತ್ತು ಎಂದು ಚಾಟಿ ಬೀಸಿದರು.

ಪಕ್ಷದ ಮೋರ್ಚಾಗಳ ಮೂಲಕ ಸಮಾವೇಶಗಳನ್ನು ನಡೆಸಿ ಎಂಬುದಾಗಿ ಯಡಿಯೂರಪ್ಪ ಹೇಳುತ್ತಿದ್ದಾರೆ. ಆದರೆ, ಪಕ್ಷದ ಮೋರ್ಚಾಗಳ ಮೂಲಕ ಸಮಾವೇಶ ನಡೆಸಿದರೆ ಪಕ್ಷದ ಬಾವುಟಗಳು ರಾರಾಜಿಸುತ್ತವೆ. ಇವುಗಳನ್ನು ನೋಡಿ ಬಿಜೆಪಿಯೇತರ ನಾಯಕರು, ಸ್ವಾಮೀಜಿಗಳು ಸಮಾವೇಶದಲ್ಲಿ ಭಾಗವಹಿಸುತ್ತಾರಾ ಎಂದು ಯಡಿಯೂರಪ್ಪ ಅವರನ್ನು ನೇರವಾಗಿ ಪ್ರಶ್ನಿಸಿದರು.

ಈಶ್ವರಪ್ಪ ಮತ್ತು ಯಡಿಯೂರಪ್ಪ ಬಡಿದಾಡಿಕೊಂಡ್ರೆ ನಮಗೆ ಲಾಭ ಅಂತ ಕಾಂಗ್ರೆಸ್‌ನವರು ತಿಳಿದುಕೊಂಡಿದ್ದಾರೆ. ಆದರೆ ನಮ್ಮನ್ನು ಕೇಳಲು ಕೇಂದ್ರದ ವರಿಷ್ಠರು ಇದ್ದಾರೆ. ದೊಡ್ಡವರು ಗೊಂದಲವನ್ನು ಬಗೆಹರಿಸುತ್ತಾರೆ. ನಾವಿಬ್ಬರೂ ಮತ್ತೆ ಒಂದಾಗುತ್ತೇವೆ.
– ಕೆ.ಎಸ್‌. ಈಶ್ವರಪ್ಪ, ಬಿಜೆಪಿ ನಾಯಕ

ಅಮಾನತಿನಿಂದ ನೋವಾಗಿದೆ,
ಆದರೂ ಬ್ರಿಗೇಡ್‌ ನಿಲ್ಲಿಸಲ್ಲ

ಪಕ್ಷದ ನಿಷ್ಠಾವಂತ ಕಾರ್ಯಕರ್ತ ವೆಂಕಟೇಶ್‌ ಮೂರ್ತಿ ಅವರನ್ನು ಅಮಾನತುಗೊಳಿಸಿರುವುದು ನನಗೆ ನೋವು ತಂದಿದೆ ಎಂದು ಈಶ್ವರಪ್ಪ ಹೇಳಿದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ‌ಲ್ಲಿ ಗುರುತಿಸಿಕೊಳ್ಳುವುದು ತಪ್ಪಾ? ಇದನ್ನೇ ಪಕ್ಷದ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಅಮಾನತು ಮಾಡಲಾಗಿದೆ. ಪಕ್ಷದ ಈ ಕ್ರಮದಿಂದ ನನಗೆ ನೋವಾಗಿದೆ. ಯಾರು ಏನೇ ಮಾಡಿದರೂ ರಾಯಣ್ಣ ಬ್ರಿಗೇಡ್‌ ಚಟುವಟಿಕೆಯನ್ನು ನಿಲ್ಲಿಸುವುದಿಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದರು. 

ಪಕ್ಷದ ಶಿಸ್ತು ಸಮಿತಿಯಲ್ಲಿ ಅಶಿಸ್ತು 
ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಪಕ್ಷದ ಶಿಸ್ತು ಸಮಿತಿಗೆ ಅಶಿಸ್ತು ಬಂದಿದೆಯಾ ಎಂಬ ಅನುಮಾನ ಮೂಡಿದೆ ಎಂದು ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು. 

ಪಕ್ಷದ ಮುಖಂಡರಾದ ಸೊಗಡು ಶಿವಣ್ಣ ಮತ್ತು ನಂದೀಶ್‌ ಅವರಿಗೆ ನೊಟೀಸ್‌ ಜಾರಿ ಮಾಡಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪಕ್ಷದ ಶಿಸ್ತು ಸಮಿತಿ ಏನು ಮಾಡುತ್ತಿದೆ ಎಂಬುದೇ ಗೊತ್ತಿಲ್ಲ. ವೆಂಕಟೇಶ್‌ ಮೂರ್ತಿಗೆ ನೋಟಿಸ್‌ ಜಾರಿಗೊಳಿಸದೆ ಅಮಾನತುಗೊಳಿಸಲಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷದ ಬಗ್ಗೆ ಮತ್ತು ವ್ಯವಸ್ಥೆ ಕುರಿತು ಅನುಮಾನ ಮೂಡಿದೆ ಎಂದರು. 

ದಕ್ಷಿಣ ಕರ್ನಾಟಕಕ್ಕೂ ಬ್ರಿಗೇಡ್‌ ಬರಲಿದೆ
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಪ್ರಸ್ತುತ ಉತ್ತರ ಕರ್ನಾಟಕದಲ್ಲಿ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದೆ. ಜ.26ರಂದು ಕೂಡಲ ಸಂಗಮ ಸಮಾವೇಶದ ಬಳಿಕ ದಕ್ಷಿಣ ಕರ್ನಾಟಕಕ್ಕೂ ಸಂಘಟನೆ ಕಾರ್ಯಗಳು ವ್ಯಾಪಿಸಲಿವೆ ಎಂದು ಈಶ್ವರಪ್ಪ ತಿಳಿಸಿದರು. ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಎಲ್ಲಾ ವರ್ಗದ ಬಡವರ ಏಳ್ಗೆಗಾಗಿ 10 ಸಾವಿರ ಕೋಟಿ ರೂ .ಮೀಸಲಿರಿಸುತ್ತೇವೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಈಶ್ವರಪ್ಪ ಆಸೆ ಎಂದು ಹೇಳಿದರು. 

ಟಾಪ್ ನ್ಯೂಸ್

Jet Airways ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್‌ನಿಂದ ನಿಧನ

Jet Airways ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್‌ನಿಂದ ನಿಧನ

Lok Sabha Election: ರಾಹುಲ್‌ ಗಾಂಧಿ ಪಿಎಂ ಆಗುತ್ತಾರೆ: ಕೈ ನಾಯಕ

Lok Sabha Election: ರಾಹುಲ್‌ ಗಾಂಧಿ ಪಿಎಂ ಆಗುತ್ತಾರೆ: ಕೈ ನಾಯಕ

Lok Sabha Polls: ಪಂಜಾಬ್‌ನ ಖಡೂರ್‌ ಕ್ಷೇತ್ರದಿಂದ ಖಲಿಸ್ಥಾನ ಉಗ್ರ ಅಮೃತ್‌ ಸ್ಪರ್ಧೆ

Lok Sabha Polls: ಪಂಜಾಬ್‌ನ ಖಡೂರ್‌ ಕ್ಷೇತ್ರದಿಂದ ಖಲಿಸ್ಥಾನ ಉಗ್ರ ಅಮೃತ್‌ ಸ್ಪರ್ಧೆ

Mallikarjun Kharge: ಮಟನ್‌-ಚಿಕನ್‌ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಖರ್ಗೆ

Mallikarjun Kharge: ಮಟನ್‌-ಚಿಕನ್‌ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಖರ್ಗೆ

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ಗೆ ಗುಂಡೇಟು…

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ ಮೇಲೆ ಗುಂಡಿನ ದಾಳಿ…

Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್‌ ಆಟ!

Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್‌ ಆಟ!

Ipl 2024: ಹೈದರಾಬಾದ್‌ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್‌ ಟೈಟಾನ್ಸ್‌

Ipl 2024: ಹೈದರಾಬಾದ್‌ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್‌ ಟೈಟಾನ್ಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kar49 ಅಭ್ಯರ್ಥಿಗಳಿಂದ ಉಮೇದುವಾರಿಕೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ

49 ಅಭ್ಯರ್ಥಿಗಳಿಂದ ಉಮೇದುವಾರಿಕೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ

ಪ್ರಜ್ವಲ್‌ ಎಲ್ಲಿ? ಕುಟುಂಬದವರು ಸಹಿತ ಯಾರಿಗೂ ಗೊತ್ತಿಲ್ಲ: ಜಿ.ಟಿ.ದೇವೇಗೌಡ

JDS MP ಪ್ರಜ್ವಲ್‌ ಎಲ್ಲಿ? ಕುಟುಂಬದವರು ಸಹಿತ ಯಾರಿಗೂ ಗೊತ್ತಿಲ್ಲ: ಜಿ.ಟಿ.ದೇವೇಗೌಡ

ಪರಿಷತ್‌ ಚುನಾವಣೆ: 3 ಪಕ್ಷಕ್ಕೂ ಬಂಡಾಯ ಬಿಸಿ

ಪರಿಷತ್‌ ಚುನಾವಣೆ: 3 ಪಕ್ಷಕ್ಕೂ ಬಂಡಾಯ ಬಿಸಿ; ಪಕ್ಷದ ವಿರುದ್ಧವೇ ಸಡ್ಡು ಹೊಡೆದು ಸ್ಪರ್ಧೆ

Attendance ಕೊರತೆ ಇದ್ದರೂ ಎಸೆಸೆಲ್ಸಿ ಪರೀಕ್ಷೆ-2ಕ್ಕೆ ಅವಕಾಶ

Attendance ಕೊರತೆ ಇದ್ದರೂ ಎಸೆಸೆಲ್ಸಿ ಪರೀಕ್ಷೆ-2ಕ್ಕೆ ಅವಕಾಶ

Karnataka ಸಿಎಂ ಸಿದ್ದರಾಮಯ್ಯ-ಎಂ.ಬಿ. ಪಾಟೀಲ್‌ ಭೇಟಿ

Karnataka ಸಿಎಂ ಸಿದ್ದರಾಮಯ್ಯ-ಎಂ.ಬಿ. ಪಾಟೀಲ್‌ ಭೇಟಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Jet Airways ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್‌ನಿಂದ ನಿಧನ

Jet Airways ಸಂಸ್ಥಾಪಕ ನರೇಶ್ ಗೋಯಲ್ ಪತ್ನಿ ಅನಿತಾ ಗೋಯಲ್ ಕ್ಯಾನ್ಸರ್‌ನಿಂದ ನಿಧನ

Lok Sabha Election: ರಾಹುಲ್‌ ಗಾಂಧಿ ಪಿಎಂ ಆಗುತ್ತಾರೆ: ಕೈ ನಾಯಕ

Lok Sabha Election: ರಾಹುಲ್‌ ಗಾಂಧಿ ಪಿಎಂ ಆಗುತ್ತಾರೆ: ಕೈ ನಾಯಕ

Lok Sabha Polls: ಪಂಜಾಬ್‌ನ ಖಡೂರ್‌ ಕ್ಷೇತ್ರದಿಂದ ಖಲಿಸ್ಥಾನ ಉಗ್ರ ಅಮೃತ್‌ ಸ್ಪರ್ಧೆ

Lok Sabha Polls: ಪಂಜಾಬ್‌ನ ಖಡೂರ್‌ ಕ್ಷೇತ್ರದಿಂದ ಖಲಿಸ್ಥಾನ ಉಗ್ರ ಅಮೃತ್‌ ಸ್ಪರ್ಧೆ

Mallikarjun Kharge: ಮಟನ್‌-ಚಿಕನ್‌ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಖರ್ಗೆ

Mallikarjun Kharge: ಮಟನ್‌-ಚಿಕನ್‌ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಖರ್ಗೆ

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ಗೆ ಗುಂಡೇಟು…

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ ಮೇಲೆ ಗುಂಡಿನ ದಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.