Udayavni Special

ಸಿಸಿಬಿ ಇನ್‌ಸ್ಪೆಕ್ಟರ್‌ ಹೆಸರಲ್ಲಿ ವಂಚನೆ:ಆರೋಪಿ ಸೆರೆ


Team Udayavani, Mar 12, 2019, 6:36 AM IST

arrest3.jpg

ಬೆಂಗಳೂರು: ಸಿಸಿಬಿ ಇನ್‌ಸ್ಪೆಕ್ಟರ್‌ ಸೋಗಿನಲ್ಲಿ ಸಾಮಾಜಿಕ ಕಾರ್ಯಕರ್ತೆಯನ್ನು ಪರಿಚಯಿಸಿಕೊಂಡು ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಆಕೆಯಿಂದ ಚಿನ್ನಾಭರಣ, ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಮಹಾಲಕ್ಷ್ಮೀ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಜಯರಾಮು (45) ಬಂಧಿತ. ಆರೋಪಿಯ ವಿರುದ್ಧ ತುಮಕೂರು ಮೂಲದ ಮಹಿಳೆ ದೂರು ನೀಡಿದ್ದರು.

ಆರೋಪಿ ಜಯರಾಮು ಪತ್ನಿಯಿಂದ ವಿಚ್ಛೇದನ ಪಡೆದು, ಒಂಟಿಯಾಗಿ ವಾಸಿಸುತ್ತಿದ್ದ. ಕೌಟುಂಬಿಕ ಸಮಸ್ಯೆ ಇರುವವರನ್ನು ಹುಡುಕಿ, ಅವರನ್ನು ಭೇಟಿಯಾಗಿ ತಾನೊಬ್ಬ ಸಿಸಿಬಿ ಇನ್‌ಸ್ಪೆಕ್ಟರ್‌ ಎಂದು ಪರಿಚಯಿಸಿಕೊಳ್ಳುತ್ತಿದ್ದ. ನಂತರ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

ದೂರುದಾರ ಮಹಿಳೆ ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ಎರಡು ವರ್ಷದ ಹಿಂದೆ ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿದ್ದ ಸ್ನೇಹಿತರೊಬ್ಬರನ್ನು ನೋಡಲು ಹೋಗಿದ್ದರು. ಆಗ ಮಹಿಳೆಯನ್ನು ಗಮನಿಸಿದ ಆರೋಪಿ, ತಾನೊಬ್ಬ ಸಿಸಿಬಿ ಇನ್‌ಸ್ಪೆಕ್ಟರ್‌ ಎಂದು ಪರಿಚಯಿಸಿಕೊಂಡಿದ್ದಾನೆ.

ತನಗೆ ಕೆಲ ಉನ್ನತ ಅಧಿಕಾರಿಗಳ ಪರಿಚಯವಿದ್ದು, ಯಾವುದಾದರೂ ಸಮಸ್ಯೆಯಿದ್ದರೆ ಬಗೆಹರಿಸುವುದಾಗಿ ನಂಬಿಸಿದ್ದ. ಆತ‌ನ ಮಾತು ನಂಬಿದ ಮಹಿಳೆ, ತಮ್ಮ ಸಮಸ್ಯೆಯನ್ನು ಆತನ ಬಳಿ ಹೇಳಿಕೊಂಡಿದ್ದರು. ನಿಮ್ಮ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಅವರಿಂದ ಹಂತ-ಹಂತವಾಗಿ ಒಂದು ಲಕ್ಷ ರೂ. ಪಡೆದಿದ್ದಾನೆ ಎಂದು ಪೊಲೀಸರು ಹೇಳಿದರು.

ನಂತರ 2017ರ ಡಿಸೆಂಬರ್‌ನಲ್ಲಿ ಜೆ.ಕೆ.ಡಬ್ಲೂ ಲೇಔಟ್‌ನಲ್ಲಿ ತನ್ನ ಪ್ಲಾಟ್‌ ಇದ್ದು, “ನೀವು ಅಲ್ಲಿಗೆ ಹೋಗಿ ವಾಸ ಮಾಡಿ’ ಎಂದು ಹೇಳಿ, ಅವರ ಬಳಿಯಿದ್ದ ಟೈಲರಿಂಗ್‌ ಯಂತ್ರ, ದ್ವಿಚಕ್ರ ವಾಹನ, ಮೂರು ಮೊಬೈಲ್‌ಗ‌ಳು ಪಡೆದುಕೊಂಡಿದ್ದಾನೆ. ಆರೋಪಿಯ ವರ್ತನೆಯಿಂದ ಅನುಮಾನಗೊಂಡ ಮಹಿಳೆ, ವಿಚಾರಿಸಿದಾಗ ನಕಲಿ ಸಿಸಿಬಿ ಇನ್‌ಸ್ಪೆಕ್ಟರ್‌ ಎಂಬುದು ಗೊತ್ತಾಗಿದೆ.

 2018 ಮೇ ತಿಂಗಳಲ್ಲಿ ಮಹಿಳೆ ರಾಜಾಜಿನಗರದ ಮೆಟ್ರೋ ನಿಲ್ದಾಣದ ಬಳಿ ಆರೋಪಿ ಜಯರಾಮ್‌ರನ್ನು ಭೇಟಿಯಾಗಿದ್ದರು. ಈ ವೇಳೆ ಮಹಿಳೆ, “ನೀನು ಪೊಲೀಸ್‌ ಇನ್‌ಸ್ಪೆಕ್ಟರ್‌ ಅಲ್ಲ ಎಂಬುದು ಗೊತ್ತಾಗಿದೆ. ಕೂಡಲೇ ಕೊಟ್ಟಿರುವ ಹಣ, ವಾಹನ ವಾಪಸ್‌ ಕೊಡುವಂತೆ ಕೇಳಿಕೊಂಡಿದ್ದಾರೆ’.

ಆಗ ಆರೋಪಿ ಜಯರಾಮ್‌ ಮಹಿಳೆಯನ್ನು ಬೆದರಿಸಿ, ಈ ಬಗ್ಗೆ ಹೊರಗಡೆ ಮಾತನಾಡಿದರೆ, ನಿನ್ನ ಗಂಡನಿಗೆ ತಿಳಿಸುವುದಾಗಿ ಹೇಳಿದ್ದಾನೆ. ಹೀಗಾಗಿ ಆರೋಪಿ ವಿರುದ್ಧ ಮಹಿಳೆ ಮಾ.10ರಂದು ದೂರು ನೀಡಿದ್ದರು ಎಂದು ಪೊಲೀಸರು ಹೇಳಿದರು. ಬಳಿಕ ಪೋನ್‌ ನಂಬರ್‌ ತೆಗೆದುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

eshwarappa

ದಿಟ್ಟ ನಿಲುವಿಗೆ ಇಂದಿರಾ ಗಾಂಧಿಯವರನ್ನೂ ಹೊಗಳಿದ್ದೆವು : ಸಚಿವ ಕೆ.ಎಸ್. ಈಶ್ವರಪ್ಪ

aaryan

ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿಲ್ಲ: ಆರ್ಯನ್ ಖಾನ್ ಗೆ ಜೈಲೇ ಗತಿ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

1-bc

ಕರ್ನಾಟಕದ 12 ದ್ವೀಪಗಳಿಗಾಗಿ ಗೋವಾ ಸರಕಾರದಿಂದ ಕೇಂದ್ರಕ್ಕೆ ಮನವಿ

1-bb

ಬಜರಂಗದಳದಿಂದ ಐವನ್ ಡಿಸೋಜ ಮನೆಗೆ ಮುತ್ತಿಗೆ ಯತ್ನ

Untitled-1

ಆರ್ ಎಸ್ಎಸ್ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಒಬ್ಬ ಬುದ್ಧಿಮಾಂದ್ಯ: ಸೋಮಶೇಖರ ರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಸ್ತೆ ಗುಂಡಿ ಮುಚ್ಚಲು ಆರಕ್ಷಕರು ಬದ್ಧ

ರಸ್ತೆ ಗುಂಡಿ ಮುಚ್ಚಲು ಆರಕ್ಷಕರು ಬದ್ಧ

metro

ದಶಕ ಪೂರೈಸಿದ ನಮ್ಮ ಮೆಟ್ರೋ

ಬ್ಯಾಂಕ್‌ ಆಫ್ ಬರೋಡದಿಂದ ರೈತ ದಿವಸ್‌

ಬ್ಯಾಂಕ್‌ ಆಫ್ ಬರೋಡದಿಂದ ರೈತ ದಿವಸ್‌

Harassment of officers when issuing a license

ಪರವಾನಗಿ ನೀಡುವಾಗ ಅಧಿಕಾರಿಗಳ ಕಿರುಕುಳ ಸಲ್ಲದು

ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ „ ಅನುಮತಿ ವೇಳೆ ಸಮಸ್ಯೆ ನಿವಾರಣೆಗೆ ಒತ್ತು

ಕನ್ನಡ ಚಿತ್ರಗಳ ಪೈರಸಿ ತಡೆಗೆ ಕ್ರಮ

MUST WATCH

udayavani youtube

ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

ಹೊಸ ಸೇರ್ಪಡೆ

chitradurga news

ಭೋವಿ ಸಮುದಾಯದ ಅಭಿವೃದಿಗೆ ಬದ್ಧ

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

davanagere news

ಕೆಳಸೇತುವೆ ನಿರ್ಮಿಸಲು ಆಗ್ರಹಿಸಿ 22ರಂದು ಹೆದ್ದಾರಿ ತಡೆ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

ನಿರಂತರ ಮಳೆಯಿಂದ ಕಳೆಗಟ್ಟಿದ ಬೆಳೆ

eshwarappa

ದಿಟ್ಟ ನಿಲುವಿಗೆ ಇಂದಿರಾ ಗಾಂಧಿಯವರನ್ನೂ ಹೊಗಳಿದ್ದೆವು : ಸಚಿವ ಕೆ.ಎಸ್. ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.