ಇಂದು ಕೃಷಿ ಮೇಳಕ್ಕೆ ಚಾಲನೆ

Team Udayavani, Nov 15, 2018, 11:33 AM IST

ಬೆಂಗಳೂರು: ಕೃಷಿ ಸಮಸ್ಯೆಗಳಿಗೆ ಪರಿಹಾರಗಳು, ಉತ್ಪನ್ನಗಳ ಮೌಲ್ಯವರ್ಧನೆ, ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ರೈತರನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಸಂವಾದ, ಕೃಷಿಯಲ್ಲಿ ಬಳಕೆಯಾಗುತ್ತಿರುವ ಸುಧಾರಿತ ಹಾಗೂ ನವೀನ ತಂತ್ರಜ್ಞಾನ, ಹೊಸ ಯಂತ್ರಗಳ ಪ್ರದರ್ಶನ, ಹೊಸ ತಳಿಗಳ ಪ್ರಾತ್ಯಕ್ಷಿತೆ ಹೀಗೆ ಒಂದೇ ಸೂರಿನಡಿ ಹತ್ತಾರು ಸೇವೆಗಳನ್ನು ಒದಗಿಸುವ “ಕೃಷಿ ಮೇಳ-2018’ಕ್ಕೆ ಗುರುವಾರ (ನ.15) ಚಾಲನೆ ದೊರೆಯಲಿದೆ.

ಬೆಂಗಳೂರು ಕೃಷಿ ವಿದ್ಯಾಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರಗಳ (ಜಿಕೆವಿಕೆ) ಆಯೋಜಿಸಿರುವ ಕೃಷಿ ಮೇಳಕ್ಕೆ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಚಾಲನೆ ನೀಡಲಿದ್ದು, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಮಧ್ಯಾಹ್ನ 2.30ಕ್ಕೆ ವಿವಿಧ ಪ್ರಶಸ್ತಿ ಪ್ರದಾನ ನಡೆಯಲಿದೆ.
 
ಸಚಿವರಾದ ಎನ್‌.ಎಚ್‌.ಶಿವಶಂಕರ ರೆಡ್ಡಿ, ಕೃಷ್ಣಬೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌,
ಅಧಿಕಾರಿಗಳಾದ ಎಂ.ಮಹೇಶ್ವರ್‌ ರಾವ್‌, ಐಎಸ್‌ ಎನ್‌ ಪ್ರಸಾದ್‌, ಡಾ.ವಂದಿತಾ ಶರ್ಮ, ಡಾ.ಕೆ.ಜಿ.ಜಗದೀಶ್‌, ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.

ನ.15ರಿಂದ 18ವರೆಗೆ ಬ್ಯಾಟರಾಯನಪುರದ ಜಿಕೆವಿಕೆಯಲ್ಲಿ ಮೇಳ ನಡೆಯಲಿರುವ ಹಿನ್ನೆಲೆಯಲ್ಲಿ ಬುಧವಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಗುರುವಾರದಿಂದ ರಾಜಧಾನಿಯ ಕಡೆಗೆ ಅನ್ನದಾತರು ಲಗ್ಗೆಯಿಡಲಿದ್ದಾರೆ. ಅದರಂತೆ ತಾವು ಅನುಸರಿಸುತ್ತಿರುವ ಸುಧಾರಿತ ಕೃಷಿ ಮಾದರಿಗಳು, ಕಡಿಮೆ ನೀರು ಬಳಕೆ ಮಾಡಿ ಹೆಚ್ಚಿನ ಆದಾಯ ಬರುತ್ತಿರುವುದು, ಕೃಷಿಯ ಸಮಸ್ಯೆಗಳನ್ನು ಎದುರಿಸಿದ ಬಗ್ಗೆ ರೈತರು ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

ಮೇಳದಲ್ಲಿ ಇತ್ತೀಚೆಗೆ ಬಿಡುಗಡೆಯಾದ ವಿವಿಧ ತಳಿಗಳ ಪ್ರಾತ್ಯಕ್ಷಿಕೆ, ಖುಷ್ಕಿ ಬೇಸಾಯಕ್ಕೆ ಸೂಕ್ತ ಬೆಳೆ ಪದ್ಧತಿಗಳು, ಸಿರಿಧಾನ್ಯಗಳು ಮತ್ತು ಅವುಗಳ ಮಹತ್ವ, ಇಸ್ರೇಲ್‌ಗೆ ಭೇಟಿ ನೀಡಿದ್ದ ಕೃಷಿ ತಜ್ಞರು ಮತ್ತು ಪ್ರಗತಿಪರ ರೈತರೊಂದಿಗೆ ಸಂವಾದ, ಸಾಂದರ್ಭಿಕ ಚಿತ್ರ ಕೃಷಿ ವಸ್ತು ಪ‹ದರ್ಶನದ ವಿಶೇಷತೆ ಈ ಬಾರಿಯ ಕೃಷಿ ವಸ್ತು ಪ್ರದರ್ಶನದಲ್ಲಿ ಕೃಷಿ ಎಂಜನಿಯರಿಂಗ್‌ ವಿಭಾಗದ ಮಳಿಗೆಯಲ್ಲಿ 150ಕ್ಕೂ ಅಧಿಕ ದೇಶದ ಪ್ರತಿಷ್ಠಿತ ಸಂಸ್ಥೆಗಳು ತಮ್ಮ ವಿನೂತನ ಉಪಕರಣಗಳ ಜತೆ ಭಾಗವಹಿಸಿ ರೈತರ ಗಮನ ಸೆಳೆಯಲಿವೆ. ಇದರೊಂದಿಗೆ ಪಶು ಸಂಗೋಪನೆಗೆ ಸಂಬಂಧಿಸಿದಂತೆ 50 ಹೆಚ್ಚು ಮಳಿಗೆಗಳಲ್ಲಿ ವಿವಿಧ ತಳಿಯ ಹಸು, ಕುರಿ, ಮೇಕೆ, ಕೋಳಿ, ಹಂದಿ ಹಾಗೂ ಮೊಲಗಳ ಪ್ರದರ್ಶನ ಇರಲಿದೆ.

ಮಾಹಿತಿ ಜೊತೆ ಮನರಂಜನೆ ಕೃಷಿ ಜ್ಞಾನ ಭಂಡಾರದ ಜತೆಗೆ ನಮ್ಮ ನಾಡಿನ ಸಾಂಸ್ಕೃತಿಕ ಕಲಾ ವೈಭವಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಭಾಗವಹಿಸಿದವರಿಗೆ ನಾಡಿನ ಹಿರಿಮೆ ಗರಿಮೆ ಕುರಿತು ಜ್ಞಾನದ ಜತೆಗೆ ಮನೋರಂಜನೆಯೂ ದೊರೆಯಲಿದೆ.

ವಿಶೇಷ ಬಸ್‌ ವ್ಯವಸ್ಥೆ ಬಸ್‌ಗಳಲ್ಲಿ ಜಿಕೆವಿಕೆಗೆ ಬರುವವರ ಅನುಕೂಲಕ್ಕಾಗಿ ಬೆಂಗಳೂರು ಕೃಷಿ ವಿದ್ಯಾಲಯದ ಬಸ್‌ಗಳನ್ನು ನಿಯೋಜಿಸಲಾಗಿದೆ. ಜಿಕೆವಿಕೆ ಗೇಟ್‌ನಿಂದ ಮೇಳದ ಜಾಗದವರೆಗೆ ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಿರುವುದರಿಂದ ಸುಲಭವಾಗಿ ಜನರು ಮೇಳದ ಜಾಗಕ್ಕೆ ತಲುಪಬಹುದಾಗಿದೆ. ಅದೇ ರೀತಿ ಮೇಳದ ಜಾಗದಿಂದಲೂ ಗೇಟಿಗೆ ಬರಲು ಬಸ್‌ ವ್ಯವಸ್ಥೆಯಿದೆ. ಇದರೊಂದಿಗೆ ಮೇಳದ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಲು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕೃಷಿ ಮೇಳಕ್ಕೆಯಾವ ಬಸ್‌?
ಮೆಜೆಸ್ಟಿಕ್‌ನಿಂದ ಹೊರಡುವ ಬಿಎಂಟಿಸಿ ಬಸ್‌ಗಳ ಸಂಖ್ಯೆ: 277, 280, 281, 282, 283, 284, 284ಎ, ಬಿ, ಸಿ ಮತ್ತು ಡಿ, 285, 286ಎ, 289, 289ಎ, 402, 298ಎಂ, 299 ಹಾಗೂ ಸುವರ್ಣ ಸಾರಿಗೆ ಮೂಲಕ ರೈತರು ಮೇಳದ ಸ್ಥಳ ತಲುಪಬಹುದು. 

ಕೃಷಿ ಆಧುನಿಕ ಖುಷಿ ಜೀವನ ಸಾವಯವ ಕೃಷಿ, ಮನೆಯಲ್ಲಿ ಬೆಳೆಯುವಂತಹ ತರಕಾರಿಗಳು ಸೇರಿದಂತೆ ಒಟ್ಟು 750
ಮಳಿಗೆಗಳು ತಲೆಯೆತ್ತಲಿವೆ. ಪ್ರಸಕ್ತ ಸಾಲಿನ ಕೃಷಿ ಮೇಳಕ್ಕೆ 12 ಲಕ್ಷ ಜನರು ಬರುವ ನಿರೀಕ್ಷೆಯನ್ನು ಹೊಂದಲಾಗಿದೆ.

ಅದರಂತೆ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಜತೆಗೆ ಮೇಳಕ್ಕೆ ದೂರದ ಊರುಗಳಿಂದ ಬರುವವರಿಗೆ ಮಾಹಿತಿ ನೀಡುವ ಉದ್ದೇಶದಿಂದ ವಿಶೇಷವಾದ ಆ್ಯಪ್‌ ಅಭಿವೃದ್ಧಿಪಡಿಸಲಾಗಿದ್ದು, ಕೃಷಿ ಮೇಳಕ್ಕೆ ಹೇಗೆ ಬರಬೇಕು, ಪ್ರದರ್ಶನದಲ್ಲಿನ ಈ ಬಾರಿಯ ವಿಶೇಷತೆಗಳು, ಕಾರ್ಯಕ್ರಮ ಹಾಗೂ ಸಂವಾದ ವಿವರಗಳು ಸೇರಿದಂತೆ ಸಮಗ್ರ ಮಾಹಿತಿ “ಕೃಷಿ ಮೇಳ -2018′ ಆ್ಯಪ್‌ನಲ್ಲಿ ದೊರೆಯಲಿವೆ.

ಕೃಷಿ ಪ್ರದರ್ಶನದಲ್ಲಿ 750 ಮಳಿಗೆಗಳಿದ್ದು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಅಂಗ ಸಂಸ್ಥೆಗಳು, ರಾಜ್ಯ ಸರ್ಕಾರದ ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಲು ಮಹಾಮಂಡಳಿ, ಕೃಷಿ ಪರಿಕರ ಸಂಸ್ಥೆ, ಸ್ವಯಂ ಸೇವಾ ಸಂಸ್ಥೆಗಳು, ಸ್ವ-ಸಹಾಯ ಸಂಸ್ಥೆಗಳು ಭಾಗವಹಿಸಿ ಮಳಿಗೆ ಹಾಕಲಿವೆ.

ಕೃಷಿ ಮೇಳಕ್ಕೆಯಾವ ಬಸ್‌?
ಮೆಜೆಸ್ಟಿಕ್‌ ನಿಂದ ಹೊರಡುವ ಬಿಎಂಟಿಸಿ ಬಸ್‌ಗಳ ಸಂಖ್ಯೆ: 277, 280, 281, 282, 283, 284, 284ಎ, ಬಿ, ಸಿ ಮತ್ತು ಡಿ, 285, 286ಎ, 289, 289ಎ, 402, 298ಎಂ, 299 ಹಾಗೂ ಸುವರ್ಣ ಸಾರಿಗೆ ಮೂಲಕ ರೈತರು ಮೇಳದ ಸ್ಥಳ ತಲುಪಬಹುದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

 • ಬೆಂಗಳೂರು: ಟೆಲಿಫೋನ್‌ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿರುವುದು ರಾಜಕೀಯ ಮುಖಂಡರು ಮಾತ್ರವಲ್ಲದೆ, ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳಲ್ಲಿ...

 • ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜು ಕ್ಯಾಂಪಸ್‌ಗಳೀಗ ಪ್ಲಾಸ್ಟಿಕ್‌ ಬಳಕೆಯಿಂದ ಮುಕ್ತವಾಗಿವೆ. ವಿದ್ಯಾರ್ಥಿಗಳನ್ನು...

 • ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿದ್ದ 210ನೇ ಫ‌ಲಪುಷ್ಪ ಪ್ರದರ್ಶನಕ್ಕೆ ಭಾನುವಾರ ತೆರೆಬಿದ್ದಿತು. ಜಯಚಾಮರಾಜ ಒಡೆಯರ್‌...

 • ಬೆಂಗಳೂರು: ಮಳೆ ಬಂದರೆ ನೀರು ಅಂಗಡಿಗಳಿಗೆ ನುಗ್ಗುತ್ತದೆ. ರಸ್ತೆ ಸಂಚಾರ ದುಸ್ತರವಾಗುತ್ತದೆ. ಒಳಚರಂಡಿ ನೀರು ರಸ್ತೆ ಮೇಲೆ ನಿಲ್ಲುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳ...

 • ಬೆಂಗಳೂರು: ಬಟ್ಟೆ ವ್ಯಾಪಾರಿಯೊಬ್ಬರನ್ನು ಅವರ ಮನೆಯ ಸ್ನಾನದ ಕೊಣೆಯಲ್ಲಿ ಚಾಕುವಿನಿಂದ ಇರಿದು ಕೊಂದು, ಬೆಂಕಿ ಹಚ್ಚಿ ಸುಟ್ಟ ಘಟನೆ ರಾಜಾಜಿನಗರದ ಬಾಷ್ಯಂ ವೃತ್ತದ...

ಹೊಸ ಸೇರ್ಪಡೆ

 • ರಾಜ್ಯ ರಾಜಕೀಯದಲ್ಲಿ ತಲ್ಲಣ ಉಂಟು ಮಾಡಿರುವ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಲು ನಿರ್ಧರಿಸಿದ್ದು, ಪ್ರಕರಣ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ...

 • ಬೆಂಗಳೂರು: ಟೆಲಿಫೋನ್‌ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿರುವುದು ರಾಜಕೀಯ ಮುಖಂಡರು ಮಾತ್ರವಲ್ಲದೆ, ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳಲ್ಲಿ...

 • ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜು ಕ್ಯಾಂಪಸ್‌ಗಳೀಗ ಪ್ಲಾಸ್ಟಿಕ್‌ ಬಳಕೆಯಿಂದ ಮುಕ್ತವಾಗಿವೆ. ವಿದ್ಯಾರ್ಥಿಗಳನ್ನು...

 • ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ನಿಮಿತ್ತ ಭಾನುವಾರ ಪ್ರಹ್ಲಾದರಾಜರ ರಥೋತ್ಸವ ಅಸಂಖ್ಯ ಭಕ್ತರ...

 • ಬೆಳಗಾವಿ: ಪ್ರವಾಹ ಮತ್ತು ಮಳೆಯಿಂದ ಸಂಪೂರ್ಣ ಮನೆ ಬಿದ್ದಿದ್ದರೆ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂ.ಪರಿಹಾರ ನೀಡಲಾಗುವುದು. ಮನೆ ನಿರ್ಮಾಣ ಮಾಡುವವರೆಗೆ 10 ತಿಂಗಳವರೆಗೆ...

 • ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿದ್ದ 210ನೇ ಫ‌ಲಪುಷ್ಪ ಪ್ರದರ್ಶನಕ್ಕೆ ಭಾನುವಾರ ತೆರೆಬಿದ್ದಿತು. ಜಯಚಾಮರಾಜ ಒಡೆಯರ್‌...