ಅನೈತಿಕ ಸಂಬಂಧಕ್ಕೆ ಅಡ್ಡಿ: ಜಿರಳೆ ಬಿಟ್ಟು ಪತ್ನಿಗೆ ಹೆದರಿಸುವ ಟೆಕ್ಕಿ
Team Udayavani, Jan 18, 2017, 3:31 PM IST
ಬೆಂಗಳೂರು: ನಗರದ ಪ್ರತಿಷ್ಠಿತ ಕಂಪೆನಿಯೊಂದರ ಟೆಕ್ಕಿ ಪತ್ನಿಯ ಮೈ ಮೇಲೆ ಜಿರಳೆ ಬಿಟ್ಟು ಕಿರುಕುಳ ನೀಡಿದ ಬಗ್ಗೆ ಮಹಿಳಾ ಸಹಾಯವಾಣಿಗೆ ದೂರು ಬಂದಿದೆ.
ಇಂದಿರಾನಗರದ ನಿವಾಸಿ ಅವಿನಾಶ್ ಎಂಬ ಟೆಕ್ಕಿ ಪತ್ನಿ ಅನೈತಿಕ ಸಂಬಂಧ ಪ್ರಶ್ನಿಸಿ ಮುನಿಸಿಕೊಂಡ ಕಾರಣಕ್ಕೆ ಆಕೆಗೆ ಕಿರುಕುಳ ನೀಡಿ ವಿಕೃತ ಆನಂದ ಪಡೆದಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಪತ್ನಿಯ ಜಿರಳೆಗೆ ಹೆದರುವ ದೌರ್ಬಲ್ಯವನ್ನೇ ಲಾಭ ಮಾಡಿಕೊಳ್ಳಲು ಮುಂದಾದ ಭೂಪ ದಿನಂಪ್ರತಿ ಆಕೆಯ ಮೈಮೇಲೆ ಜಿರಳೆಗಳನ್ನು ಬಿಟ್ಟು ಸಂಭ್ರಮಿಸುತ್ತಿದ್ದ ಎಂದು ಹೇಳಲಾಗಿದೆ.
ದೂರಿನ ಹಿನ್ನಲೆಯಲ್ಲಿ ಮಹಿಳಾ ಸಹಾಯವಾಣಿಯ ಕಚೇರಿಗೆ ಅವಿನಾಶ್ನನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ನನ್ನ ಪತ್ನಿ ನನಗೆ ಹಾಸಿಗೆಯಲ್ಲಿ ಸಹಕರಿಸುತ್ತಿಲ್ಲ ಎಂದು ಹೀಗೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.
ನನ್ನ ಪತಿ ಆವಿನಾಶ್ ಇನ್ನೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ,ಅದನ್ನು ಬಿಡಬೇಕೆಂದು ಅವರೊಂದಿಗೆ ಮುನಿಸಿಕೊಂಡಿದ್ದೆ ಎಂದು ಪತ್ನಿ ಹೇಳಿದ್ದಾಳೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.