ಕಾರುಗಳಿಗೆ ಸಾಲ ಸಿಗೋದು ಕಷ್ಟವೇನಲ್ಲ

Team Udayavani, Oct 14, 2019, 3:07 AM IST

ಬೆಂಗಳೂರು: ಪ್ರಸ್ತುತ ಪರಿಸ್ಥಿತಿಗಳಲ್ಲಿ ಕಾರು ಕೊಳ್ಳುವ ಗ್ರಾಹಕರಿಗೆ ಶೋ ರೂಂ ಮತ್ತು ಬ್ಯಾಂಕ್‌ಗಳು ತುಂಬಾ ಗ್ರಾಹಕ ಸ್ನೇಹಿಯಾಗಿದೆ. ಸಾಮಾನ್ಯರು ಈ ಹಿಂದೆ ಕಾರ್‌ ಲೋನ್‌ ಪಡೆಯಲು ಬ್ಯಾಂಕ್‌ ಮ್ಯಾನೇಜರ್‌ಗಳ ಮುಂದೆ ಹರಸಾಹಸ ಪಡಬೇಕಿತ್ತು. ಆದರೆ, ಇಂದಿನ ಚಿತ್ರಣ ಸಂಪೂರ್ಣವಾಗಿ ತದ್ವಿರುದ್ದವಾಗಿದೆ. ಇಂದು ಕಾರ್‌ ಕೊಳ್ಳುವ ಗ್ರಾಹಕರು ಸಿಕ್ಕರೇ ಸಾಕು ಕ್ಷಣದಲ್ಲಿ ಸಾಲ ಮಂಜೂರು ಮಾಡಲು ಬ್ಯಾಂಕರ್‌ಗಳು ಸಿದ್ಧರಿದ್ದಾರೆ.

ಕಾರು ಕೊಳ್ಳುವುದು ಕಷ್ಟದ ಮಾತು ಎನ್ನುತ್ತಿದ್ದ ಕಾರ್‌ ಪ್ರಿಯರಿಗೆ ಈ ವರ್ಷ ಗೋಲ್ಡನ್‌ ಇಯರ್‌ ಎಂದೇ ಕರೆಯಬಹುದು. ಸದ್ಯ ಆಟೋಮೊಬೈಲ್‌ ಮಾರುಕಟ್ಟೆ ಮಂದಗತಿಯಲ್ಲಿ ಸಾಗುತಿದ್ದು, ಇದಕ್ಕೆ ವೇಗ ನೀಡಲು ಕಾರ್‌ ಕಂಪನಿಗಳು ಮತ್ತು ಶೋ ರೂಂಗಳು ಈ ಹಿಂದೆಂದೂ ನೀಡದಂತ ಆಫ‌ರ್‌ಗಳನ್ನು ನೀಡುತ್ತಿವೆ. ಹಿಂದಿನಂತೆ ಬ್ಯಾಂಕ್‌ ಲೋನ್‌ ಪಡೆ ಯಲು ಗ್ರಾಹಕರು ಬ್ಯಾಂಕ್‌ಗಳಿಗೆ ಅಲೆದಾ ಡುವಂತ ಪರಿಸ್ಥಿತಿ ಈಗ ಮಾಯವಾಗಿದೆ. ಈಗ ಶೋ ರೂಂಗಳಲ್ಲೇ ಬ್ಯಾಂಕ್‌ಗಳು ಲೋನ್‌ ವಿಭಾಗಗಳನ್ನು ತೆರೆದಿದ್ದು, ಬ್ಯಾಂಕ್‌ ಗಳಲ್ಲಿ ಕೂಡ ಕಾರ್‌ ಲೋನ್‌ ಗಳಿಗೆ ಪ್ರತ್ಯೇಕ ವಿಭಾಗಗಳಿವೆ. ಎರಡೂ ವಿಭಾಗಗಳಲ್ಲಿ ಕಾರ್‌ ಲೋನ್‌ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಗ್ರಾಹಕರ ಪಾನ್‌ ಕಾರ್ಡ್‌ ಮಾಹಿತಿ ನೀಡಿದರೆ ಕ್ಷಣದಲ್ಲೇ ಸಿಬಿಲ್‌ ಸ್ಕೋರ್‌ ಮಾಹಿತಿ ಸಿಗುತ್ತದೆ. ಸಂಬಳ, ಬ್ಯಾಂಕ್‌ ಅಕೌಂಟ್‌, ಕಾರ್ಯನಿರ್ವಹಿಸುವ ಕಚೇರಿ ಸಂಬಂಧ ಅಗತ್ಯ ದಾಖಲೆಗಳನ್ನು ಪೂರೈಸಿದರೆ ಗ್ರಾಹಕರ ಸಿಬಿಲ್‌ ಸ್ಕೋರ್‌ ಮತ್ತು ಆದಾಯಕ್ಕೆ ಅನುಗುಣವಾಗಿ ಗ್ರಾಹಕರ ಲೋನ್‌ ಮಿತಿಯನ್ನು ಸ್ಥಳದಲ್ಲೇ ತಿಳಿಸುತ್ತಾರೆ. ಗ್ರಾಹಕರ ಸಮ್ಮತಿ ಸೂಚಿಸಿದರೆ ಸ್ಥಳದಲ್ಲೇ ಲೋನ್‌ ಕೂಡ ಅಪ್ರೂವ್‌ ಮಾಡಿ ಕಾರ್‌ ಖರೀದಿಸಲು ಸಹಕರಿಸುತ್ತಾರೆ. ಇದಿಷ್ಟು ಸ್ಪಾಟ್‌ ಲೋನ್‌ ಪ್ರಕ್ರಿಯೆಯಾದರೆ, ಆನ್‌ ಲೈನ್‌ನಲ್ಲಿ ಕಾರ್‌ ಲೋನ್‌ ಪಡೆಯುವುದು ಮತ್ತಷ್ಟು ಸುಲಭವಾಗಿದೆ.

ಲೋನ್‌ ಪ್ರೊಸೆಸಿಂಗ್‌ ಫೀಸ್‌ ಫ್ರೀ: ಈ ಹಿಂದೆ ಕಾರ್‌ ಲೋನ್‌ ಪಡೆಯಲು ಗ್ರಾಹಕರು ಕಾರ್‌ ಲೋನ್‌ ಪ್ರೊಸೆಸಿಂಗ್‌ ಫೀಸ್‌ ಕಟ್ಟಬೇಕಿತ್ತು. ಅಂದರೆ ತಾವು ಲೋನ್‌ ಪಡೆಯುವ ಮೊತ್ತದಲ್ಲಿ ಶೇ. 1ರಷ್ಟು ಪ್ರೊಸೆಸಿಂಗ್‌ ಫೀಸ್‌ ಎಂದು ಬ್ಯಾಂಕ್‌ ಗಳಿಗೆ ಕಟ್ಟಬೇಕಿತ್ತು. ಆದರೆ ಈಗ ಇದನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಪ್ರೊಸೆಸಿಂಗ್‌ ಫೀಸ್‌ ಇಲ್ಲದೆ ಲೋನ್‌ ನೀಡುತ್ತಿವೆ . ಒಂದು ವೇಳೆ ಗ್ರಾಹಕ 10ಲಕ್ಷ ರೂ.ನ ಕಾರ್‌ ಲೋನ್‌ ಪಡೆದರೆ 10ಸಾವಿರ ರೂ.ನಷ್ಟು ಉಳಿತಾಯ ಮಾಡಬಹುದು ಎನ್ನುತ್ತಿವೆ ಬ್ಯಾಕಿಂಗ್‌ ವಲಯಗಳು.

100% ಫೈನಾನ್ಸ್‌ ಸ್ಕೀಂ: ಈ ಹಿಂದೆ ಕಾರುಗಳನ್ನು ಖರೀದಿಸಲು ಕಾರಿನ ಒಟ್ಟು ಬೆಲೆಯ ಕನಿಷ್ಠ ಶೇ.30ರಷ್ಟು ಡೌನ್‌ ಪೇಯೆ¾ಂಟ್‌ ಮಾಡಬೇಕಿತ್ತು. ಇನ್ನುಳಿದ ಶೇ.70ಕ್ಕೆ ಬ್ಯಾಂಕ್‌ಗಳು ಫೈನಾನ್ಸ್‌ ಮಾಡುತಿದ್ದವು. ಆದರೆ, ಈಗ ಪ್ರಸಕ್ತ ಸಾಲಿನಲ್ಲಿ ಏಪ್ರಿಲ್‌ ತಿಂಗಳಿಂದ ಮಾರುಕಟ್ಟೆಗೆ ಹೊಸದಾಗಿ ಪರಿಚಯವಾಗುತ್ತಿರುವ ಕಾರುಗಳಿಗೆ ಬ್ಯಾಂಕ್‌ಗಳು 100 % ಫೈನಾನ್ಸಿಂಗ್‌ ಮಾಡುತ್ತಿವೆ.

ಬಡ್ಡಿ ದರ ಕಡಿಮೆ ಮಾಡಲಾಗಿದೆ: ಕಳೆದ ವರ್ಷ ಕಾರ್‌ ಲೋನ್‌ ಬಡ್ಡಿ ದರ ಶೇ.9.5 -10ರವರೆಗೆ ಇತ್ತು. ಆದರೆ ಈಗ ಅದು ಶೇ.8.6ಕ್ಕೆ ಇಳಿದಿದೆ. ಇದರಿಂದ ಗ್ರಾಹಕರು ಸುಮಾರು 10 ರಿಂದ 20ಸಾವಿರದಷ್ಟು ಪ್ರತಿ ವರ್ಷ ಉಳಿತಾಯ ಮಾಡಬಹುದು,. ಇಡೀ ಭಾರತೀಯ ಬ್ಯಾಂಕಿಂಗ್‌ ಇತಿಹಾಸದಲ್ಲೇ ಇಷ್ಟು ಕಡಿಮೆ ಕಾರ್‌ ಲೋನ್‌ ಬಡ್ಡಿ ದರ ಹಿಂದೆಂದೂ ಕಾಣಲು ಸಾಧ್ಯವಿಲ್ಲ.

ಪ್ರಸಕ್ತ ಸಾಲಿನಲ್ಲಿ ಕಾರು ಲೋನ್‌ ಮೇಲಿನ ಬಡ್ಡಿ ದರ ಕಡೆಮೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಶೇ.1ರಷ್ಟು ಕಾರ್‌ ಲೋನ್‌ ಬಡ್ಡಿ ಕಡಿತಗೊಳಿಸಲಾಗಿದೆ. ಕಾರ್‌ ಕೊಳ್ಳುವವರ ಸಹಾಯಕ್ಕೆ ಬ್ಯಾಂಕ್‌ಗಳು ಸದಾ ಸಿದ್ದವಾಗಿವೆ. ಕಾರ್‌ ಲೋನ್‌ ನೀಡಲು ಲೋನ್‌ ಮೇಳಗಳನ್ನು ಮಾಡಲಾಗುತ್ತಿದೆ. ಆಟೋಮೊಬೈಲ್‌ ಮಾರುಕಟ್ಟೆ ಮತ್ತೆ ಚೇತರಿಸಿಕೊಳ್ಳುತ್ತಿದೆ.
-ನಾಗರಾಜ್‌, ಬ್ಯಾಂಕ್‌ ನೌಕರ ಸಂಘದ ಕಾರ್ಯದರ್ಶಿ

ಬ್ಯಾಂಕ್‌ಗಳಲ್ಲಿ ಹಿಂದಿಗಿಂತಲೂ ಕಾರಿನ ಸಾಲಗಳು ಸುಲಭವಾಗಿ ಸಿಗುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಕಾರು ಕೊಳ್ಳುವ ಗಾರಹಕರಿಗೆ ಹೆಚ್ಚು ಬೇಗ ಸಾಲ ದೊರೆಯಲಿದ್ದು, ಈ ಹಿಂದೆ ಬ್ಯಾಂಕ್‌ ಗಳು ಪಡೆಯುತಿದ್ದ ಲೋನ್‌ ಪ್ರೊಸೆಸಿಂಗ್‌ ಫೀಸ್‌ ಈಗ ಪಡೆಯುತ್ತಿಲ್ಲ. ಗ್ರಾಹಕರ ಆದಾಯದ ವಿವರಗಳನ್ನು ಪರಿಶೀಲಿಸಿ 30ನಿಮಿಷದಲ್ಲಿ ಕಾರ್‌ ಲೋನ್‌ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
-ಶ್ರೀನಿವಾಸ್‌, ಬ್ಯಾಂಕ್‌ ಕಾರ್‌ ಲೋನ್‌ ವಿಭಾಗದ ಮುಖ್ಯಸ್ಥ

* ಲೋಕೇಶ್‌ ರಾಮ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಸಂಚಾರ ದಟ್ಟಣೆ ನಿರ್ವಹಣೆಯೇ ದೊಡ್ಡ ಸವಾಲಾಗಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ನಾನಾ ಪ್ರಯೋಗಗಳು ನಡೆಯುತ್ತಿವೆ. ಇದರ ಮುಂದುವರಿದ ಭಾಗವಾಗಿ ಇತ್ತೀಚೆಗೆ...

  • ಬೆಂಗಳೂರು: ಉಪ ಚುನಾವಣೆ ಬಳಿಕ "ಇಂದಿರಾ ಕ್ಯಾಂಟೀನ್‌' ಹೆಸರು ಬದಲಾಯಿಸಿ "ಕೆಂಪೇಗೌಡ ಕ್ಯಾಂಟೀನ್‌' ಎಂದು ಮರು ನಾಮಕರಣ ಮಾಡುವುದಕ್ಕೆ ಬಿಬಿಎಂಪಿ ಆಡಳಿತ ಚಿಂತನೆ...

  • ಬೆಂಗಳೂರು: ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಿಂದಾಗಿ ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಅನುಪಾತ...

  • ಬೆಂಗಳೂರು: ಸದಾ ಪೊಲೀಸ್‌ ಬೂಟುಗಳ ಸದ್ದು ಕೇಳಿ ಬರುತ್ತಿದ್ದ ಸ್ಥಳದಲ್ಲಿ ಮಕ್ಕಳ ಕಲರವ... ಖಾಕಿಯ ಭಯವಿಲ್ಲದೆ ನಾನಾ ವೇಷದಲ್ಲಿ ಕುಣಿದು ಕಪ್ಪಳಿಸಿದ ಮಕ್ಕಳು... ಪುಟಾಣಿ...

  • ಬೆಂಗಳೂರು: ಸಂಚಾರ ಪೊಲೀಸ್‌ ಅಧಿಕಾರಿಗಳು ನಿರ್ವಹಿಸಬೇಕಾದ ಪಿಡಿಎ ಯಂತ್ರ (ದಂಡ ವಿಧಿಸುವ ಯಂತ್ರ) ವನ್ನು ಟೋಯಿಂಗ್‌ ಸಿಬ್ಬಂದಿ ಇಟ್ಟುಕೊಂಡಿದ್ದು, ಅದನ್ನು ಪ್ರಶ್ನಿಸಿದ...

ಹೊಸ ಸೇರ್ಪಡೆ