ಕಾರ್ಮಿಕರ ವಲಸೆ: ನಿರ್ಮಾಣ ವಲಯಕ್ಕೆ ಲಾಕ್‌?

ಜನತಾ ಕರ್ಫ್ಯೂ ಘೋಷಣೆ ಬೆನ್ನಲ್ಲೇ ಮರುವಲಸೆ ಹೋಗುತ್ತಿರುವ ನೂರಾರು ಕಟ್ಟಡ ಕಾರ್ಮಿಕರು

Team Udayavani, Apr 27, 2021, 10:46 AM IST

ಕಾರ್ಮಿಕರ ವಲಸೆ: ನಿರ್ಮಾಣ ವಲಯಕ್ಕೆ ಲಾಕ್‌?

ಸಾಂದರ್ಭಿಕ ಚಿತ್ರ

ಬೆಂಗಳೂರು: ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರ್ಮಾಣ ಮತ್ತು ಸಂಬಂಧಿಸಿದ ಕ್ಷೇತ್ರಗಳನ್ನು ಕೋವಿಡ್‌ ನಿರ್ಬಂಧಗಳಿಂದ ಸರ್ಕಾರ ಹೊರಗಿಟ್ಟಿದೆ. ಆದರೂ ಆ ವಲಯಗಳು ಎಂದಿನಂತೆ ಕಾರ್ಯಾಚರಣೆ ಮಾಡುವುದು ಅನುಮಾನ!

ಯಾಕೆಂದರೆ, ಸರ್ಕಾರವು ಜನತಾ ಕರ್ಫ್ಯೂ ಘೋಷಣೆ ಮಾಡಿದ ಬೆನ್ನಲ್ಲೇ ಅತಿಹೆಚ್ಚಿನ ಸಂಖ್ಯೆಯಲ್ಲಿಮರುವಲಸೆ ಹೋಗುತ್ತಿರುವುದು ಕಾರ್ಮಿಕ ವರ್ಗ. ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಮತ್ತು ಈಶಾನ್ಯ ರಾಜ್ಯಗಳ ಕಾರ್ಮಿಕರು ಹೆಚ್ಚಾಗಿದ್ದಾರೆ. ಇದು ನಿರ್ಮಾಣ ವಲಯವನ್ನು ತೀವ್ರವಾಗಿ ಬಾಧಿಸಲಿದೆ. ಯಾವುದೇ ಭರವಸೆಗಳನ್ನು ನೀಡಿದರೂ, ಕ್ಯಾಂಪ್‌ ಗಳಲ್ಲಿದ್ದ ಕಾರ್ಮಿಕರು ಕೇಳುತ್ತಿಲ್ಲ. ಈಗಾಗಲೇ ಶೇ. 50ರಷ್ಟು ಜನ ತಮ್ಮ ಊರುಗಳಿಗೆ ತೆರಳಿದ್ದಾರೆ.

ಬೆಂಗಳೂರು ಮಾತ್ರವಲ್ಲ; ಮಂಗಳೂರು, ಹುಬ್ಬಳ್ಳಿ ಮತ್ತಿತರ ಮಹಾನಗರಗಳಲ್ಲೂ ಇದೇ ಸಮಸ್ಯೆ ಆಗಿದೆ.ನಿರ್ಮಾಣ ವಲಯದ ಚಟುವಟಿಕೆಗಳು ಎಂದಿನಂತೆ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದ್ದರೂ, ಕಾರ್ಮಿಕರ ಕೊರತೆಯಿಂದ ಮುನ್ನಡೆಸುವುದೇ ಕಷ್ಟವಾಗಲಿದೆ ಎಂದು ಕ್ರೆಡಾಯ್‌ (ಕಾನ್ಫೇಡರೇಷನ್‌ಆಫ್ ರಿಯಲ್‌ ಎಸ್ಟೇಟ್‌ ಡೆವಲಪರ್ ಅಸೋಸಿಯೇಷನ್‌) ರಾಜ್ಯ ಘಟಕದ ಉಪಾಧ್ಯಕ್ಷ ಪ್ರದೀಪ್‌ ರಾಯ್ಕರ್‌ ತಿಳಿಸುತ್ತಾರೆ.

ಹೊರರಾಜ್ಯ ಕಾರ್ಮಿಕರು: ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆಯಲ್ಲಿ ಎರಡು ತಿಂಗಳು ಹಿಂದೆಯೇಹೋದ ಕಾರ್ಮಿಕರು ಇನ್ನೂ ವಾಪಸ್ಸಾಗಿಲ್ಲ. ಅಷ್ಟರಲ್ಲಿಇಲ್ಲಿ ಸಮಸ್ಯೆ ಉಂಟಾಗಿದೆ. ಈ ಮಧ್ಯೆ ಕಲಬುರಗಿ,ರಾಯಚೂರು, ಯಾದಗಿರಿ ಮತ್ತಿತರ ಕಡೆಗಳಿಂದಮಹಾನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು, ಸರ್ಕಾರ ಜನತಾ ಕರ್ಫ್ಯೂ ಘೋಷಣೆ ಮಾಡಿದ ಬೆನ್ನಲ್ಲೇ ಊರುಗಳತ್ತ ಮುಖಮಾಡುತ್ತಿದ್ದಾರೆ. ನಗರದಲ್ಲಿ ಉಂಟಾದ ಹಾಸಿಗೆಗಳ ಸಮಸ್ಯೆಗಳನ್ನು ನೋಡಿದ್ದಾರೆ.

ಅಲ್ಲದೆ, ಕೇವಲ 15 ದಿನಗಳಲ್ಲಿ ಈ ನಿರ್ಬಂಧ ಮುಗಿಯುವುದಿಲ್ಲ ಎಂಬ ಮನಃ ಸ್ಥಿತಿಯಲ್ಲಿದ್ದಾರೆ. ಕಳೆದ ಬಾರಿಯ ಲಾಕ್‌ಡೌನ್‌ ಕೂಡಕಣ್ಮುಂದೆ ಇದೆ. ಇನ್ನು ಲಾಕ್‌ಡೌನ್‌ ತೀವ್ರವಾದರೆ,ದಿನಗೂಲಿಗೂ ಕತ್ತರಿ ಬೀಳಬಹುದು. ಊಟ ಸೇರಿದಂತೆಪ್ರತಿಯೊಂದಕ್ಕೂ ಅವಲಂಬನೆ ಆಗಬೇಕಾಗುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಜನ ಕಾಲ್ಕೀಳುತ್ತಿದ್ದಾರೆ. ರೈಲ್ವೆ ಸೇವೆಗಳಿಗೂ ನಿರ್ಬಂಧ ಘೋಷಣೆಯಾದರೆ, ಇದು ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಪ್ರದೀಪ್‌ ರಾಯ್ಕರ್‌ ಹೇಳುತ್ತಾರೆ.

ಶಹರದ ಸಹವಾಸ ಬೇಡ ಸರ್‌: ಸರ್‌, ಈಗ ಮಾಲಿಕರು ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಇಲ್ಲಿಯೇ ಆರಾಮಾಗಿ ಇರಬಹುದು. ಲಾಕ್‌ಡೌನ್‌ ಜಾರಿಯಾದರೂ ಸಂಬಳಕ್ಕೆಕತ್ತರಿ ಹಾಕುವುದಿಲ್ಲ ಎಂದೆಲ್ಲಾ ಭರವಸೆ ನೀಡುತ್ತಾರೆ. ಆದರೆ, ಕಳೆದ ಬಾರಿಯಂತಾದರೆ ಏನು ಮಾಡೋದು? ಕೆಲಸ ಇಲ್ಲದಿದ್ದರೂ ಪರವಾಗಿಲ್ಲ. ಊರಲ್ಲೇ ಇರುತ್ತೇವೆ. ಈ ಶಹರದ ಸಹವಾಸ ಬೇಡ ಎಂದು ಕಲುಬುರಗಿಯತ್ತ ಹೊರಟ ಗಿರಿಯಪ್ಪ ಕೋಳಿ ತಿಳಿಸಿದರು.

ಕೃಷಿ ಹೊರತುಪಡಿಸಿದರೆ, ಅತಿಹೆಚ್ಚು ಕಾರ್ಮಿಕರನ್ನುಹೊಂದಿರುವ ವಲಯ ನಿರ್ಮಾಣ ಉದ್ಯಮ. ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರದ ಕಾರ್ಮಿಕರು ಹೆಚ್ಚಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಹಾಕಿದ ನಿರ್ಬಂಧಗಳಿಂದ ಆಕಾರ್ಮಿಕರನ್ನು ಹಿಡಿದಿಡುವುದು ತುಸು ಕಷ್ಟ ಆಗಬಹುದು. ಆದರೆ, ಈ ನಿಟ್ಟಿನಲ್ಲಿ ಉದ್ಯಮಿಗಳ ಜತೆ ಸರ್ಕಾರ ಕೂಡ ಮನಸ್ಸು ಮಾಡಬೇಕಾಗುತ್ತದೆ.ಕಾರ್ಮಿಕರಲ್ಲಿ ಆತ್ಮವಿಶ್ವಾಸ ತುಂಬುವ ಕ್ರಮಗಳಿಗೆ ಮುಂದಾಗಬೇಕು.

ಏನು ಮಾಡಬಹುದು? ಕ್ಯಾಂಪ್‌ಗ್ಳಲ್ಲಿ ಉಚಿತ ಲಸಿಕೆ ಅಭಿಯಾನ ನಡೆಸಲು ನೆರವಾಗಬೇಕು. ಆಯ್ದ ಕಡೆಗಳಲ್ಲಿ ಕೋವಿಡ್ ಪರೀಕ್ಷೆ ಶಿಬಿರ ನಡೆಸಬೇಕು.ಸೋಂಕು ದೃಢಪಟ್ಟವರನ್ನು ಪ್ರತ್ಯೇಕವಾಗಿಡುವುದು. ಅವರೆಲ್ಲರಿಗೂ ಆಹಾರ, ಚಿಕಿತ್ಸಾ ಸೌಲಭ್ಯದಂತಹ ಕ್ರಮಕೈಗೊಳ್ಳಬೇಕಾಗುತ್ತದೆ. ಹಾಗಂತ, ಎಲ್ಲವನ್ನೂ ಸರ್ಕಾರಮಾಡಬೇಕು ಎಂದು ನಾನು ಹೇಳುವುದಿಲ್ಲ; ಸರ್ಕಾರನೆರವಾದರೆ, ಉದ್ಯಮಿಗಳೂ ಕೈಜೋಡಿಸುತ್ತಾರೆ ಎಂದು ಕ್ರೆಡಾಯ್‌ ಮೆಂಟರ್‌ ಬಾಲಕೃಷ್ಣ ಹೆಗಡೆ ತಿಳಿಸುತ್ತಾರೆ.

ನಗರದಲ್ಲಿ ನಾಲ್ಕೂವರೆ ಲಕ್ಷ ಅಧಿಕ ಕಾರ್ಮಿಕರು : ಬೆಂಗಳೂರಿನಲ್ಲೇ ಸುಮಾರು ನಾಲ್ಕೂವರೆ ಲಕ್ಷ ಕಾರ್ಮಿಕರಿರಬಹುದು ಎಂದುಅಂದಾಜಿಸಲಾಗಿದೆ. ಈ ಪೈಕಿ ಕೆಲವರು ಈಗಾಗಲೇವಲಸೆ ಹೋಗಿದ್ದಾರೆ. ಉಳಿದವರನ್ನು ಹಿಡಿದಿಡಬೇಕಾಗಿದೆ. ಇನ್ನು ಅಪಾರ್ಟ್‌ಮೆಂಟ್‌ಗಳವ್ಯಾಪಾರ ವಹಿವಾಟು ಕೊರೊನಾ ಪೂರ್ವದಲ್ಲಿರುವಂತೆ ಇದೆ. ನಗರದಲ್ಲಿ ಕೊರೊನಾ ಪೂರ್ವ ದಲ್ಲಿ ವಾರ್ಷಿಕ 35-40 ಸಾವಿರ ಯೂನಿಟ್‌ಗಳುಮಾರಾಟ ಆಗುತ್ತಿದ್ದವು. ಈಗ ವಾರ್ಷಿಕ 30ಸಾವಿರ ಯೂನಿಟ್‌ಗಳು ಮಾರಾಟ ಆಗುತ್ತಿವೆ ಎಂದು ಬಾಲಕೃಷ್ಣ ಹೆಗಡೆ ಅಭಿಪ್ರಾಯಪಟ್ಟರು.

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.