Udayavni Special

ಮೋದಿಜೀ, ಭ್ರಷ್ಟರಿಗೇಕೆ ಟಿಕೆಟ್‌ ನೀಡಿದ್ರಿ ?


Team Udayavani, May 10, 2018, 6:00 AM IST

rahul-gandhi-interview.jpg

ಬೆಂಗಳೂರು: ರಾಜ್ಯವಿಧಾನ ಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಎರಡು ಬಾರಿ ರಾಜ್ಯ ಸುತ್ತಿ ಜನರ ನಾಡಿ ಮಿಡಿತ ಅರಿತಿದ್ದಾರೆ. ಅಲ್ಲದೆ ಕರ್ನಾಟಕದ ಫ‌ಲಿತಾಂಶದಿಂದ ದೇಶದ ಭವಿಷ್ಯದ ಮೇಲಾಗುವ ಪರಿಣಾಮ ಹಾಗೂ ರಾಜ್ಯದ ಜನತೆಯ ಉದಾರ ಪ್ರೀತಿಯ ಬಗ್ಗೆ ಉದಯವಾಣಿಯೊಂದಿಗೆ ಮಾತನಾಡಿದ್ದಾರೆ.

ಎರಡು ಬಾರಿ ರಾಜ್ಯ ಸುತ್ತಿದ್ದೀರಿ. ಜನರ ಪ್ರತಿಕ್ರಿಯೆ ಹೇಗಿದೆ ?
                 ಜನತೆಯ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ರಾಜ್ಯವನ್ನು ಆಳವಾಗಿ ಸುತ್ತುವಾಗ ಜನತೆಯ ಭಾವನೆಗಳನ್ನು ಅರಿಯುವ ಪ್ರಯತ್ನ ನಡೆಸಿದೆ. ಕರ್ನಾಟಕದ ಜನತೆ ಬಸವಣ್ಣನ ತತ್ವಗಳೊಂದಿಗೆ ಹೇಗೆ ಬೆರೆತುಕೊಂಡಿದ್ದಾರೆ ಎನ್ನುವುದನ್ನು  ತಿಳಿದುಕೊಂಡೆ. ಬಸವಣ್ಣ ಮಹಾ ಮಾನವತಾವಾದಿ. ಆದರೆ, ನನಗೆ ಅವರ ತತ್ವಗಳು ಸರಿಯಾಗಿ ಪಾಲನೆಯಾಗಿಲ್ಲ ಎನಿಸಿತು.

ಬಸವಣ್ಣ ರಾಜ್ಯದ ಜನತೆಯ ರಕ್ತದಲ್ಲಿ ಇದ್ದಾರೆ. ಇಲ್ಲಿನ ಜನತೆ ಬೇರೆ ಜನರ ಭಾವನೆಗಳನ್ನು ಸ್ವೀಕರಿಸುವ ಮನೊಭಾವ ಹೊಂದಿದ್ದಾರೆ.  ಸಹೋದರತ್ವ ಭಾವನೆ ಹೊಂದಿದ್ದಾರೆ. ಜನ ಅತ್ಯಂತ ಖುಷಿಯಾಗಿದ್ದಾರೆ. ಹೊಸ ಚಿಂತನೆಗಳನ್ನು ಸ್ವೀಕರಿಸುತ್ತಾರೆ. ಬೇರೆಯವರ ಆಲೋಚನೆಗಳನ್ನು ನಾಶ ಮಾಡಲು ಬಯಸುವುದಿಲ್ಲ. ಅದಕ್ಕೆ  ಬೆಂಗಳೂರು ಜಗತ್ತಿನ  ಎರಡನೇ ಸಿಲಿಕಾನ್‌ ವ್ಯಾಲಿಯಾಗಿದೆ. ಇನ್ನು ಹದಿನೈದು ವರ್ಷದಲ್ಲಿ ಬೆಂಗಳೂರು ಜನಗತ್ತಿನ ಮೊದಲನೇ ಸ್ಥಾನದಲ್ಲಿರಲಿದೆ. ಆ ನಂಬಿಕೆ ನನಗಿದೆ.

ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದಾಗಿ ಹೇಳುತ್ತಿದ್ದಾರೆ. ಅದಕ್ಕೆ ನೀವೇನು ಹೇಳುವಿರಿ ?
              ಬಿಜೆಪಿಯವರು ಯಾವಾಗಲೂ ಕೇಂದ್ರಿಕೃತ ಅಜೆಂಡಾ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಎಲ್ಲವೂ ತಾವು ಹೇಳಿದಂತೆ ನಡೆಯಬೇಕೆಂಬ ಮನೋಭಾವ ಅವರದು. ಬಸವಣ್ಣನ ಕರ್ನಾಟಕ ಮುಕ್ತ, ತಮಿಳುನಾಡು ಮುಕ್ತ, ಪಂಜಾಬ್‌ ಮುಕ್ತ, ಒಡಿಶಾ ಮುಕ್ತ ಆಗಬೇಕೆನ್ನುತ್ತಾರೆ. ಅವರಿಗೆ ದೇಶದ ವೈವಿಧ್ಯತೆಯಲ್ಲಿ ನಂಬಿಕೆಯಿಲ್ಲ. ಯಾವ ರಾಜ್ಯವೂ ತನ್ನದೇ ಅಸ್ಮಿತೆ ಹೊಂದಬಾರದು ಎನ್ನುವುದು ಅವರ ಅಭಿಪ್ರಾಯ.ಅವರು ಕನ್ನಡ, ತಮಿಳು, ಭಾಷೆ, ಸಂಸ್ಕೃತಿ ಇರಬೇಕೆಂದು ಬಯುಸುವುದಿಲ್ಲ. ಅವರು ಎಲ್ಲವನ್ನು ಜನರ ಮೇಲೆ ಒತ್ತಾಯ ಪೂರ್ವಕವಾಗಿ ಹೇರಲು ಬಯಸುತ್ತಾರೆ. ನಾವು ಪ್ರಾದೇಶಿಕ ಭಾಷೆ, ಸಂಸ್ಕೃತಿ ಎಲ್ಲವೂ ಇರಬೇಕೆಂದು ಬಯಸುತ್ತೇವೆ.

ಮೋದಿ ಮಾದರಿಯ ಅಭಿವೃದ್ಧಿ ಬಗ್ಗೆ ಏನು ಹೇಳುತ್ತಿರಿ ?
             ನಾನು ನಿಮಗೆ ಎರಡು ಉದಾಹರಣೆ ನೀಡುತ್ತೇನೆ. ನರೇಂದ್ರ ಮೋದಿ ತಮ್ಮದೇ ಆದ ಅಜೆಂಡಾ ಇಟ್ಟುಕೊಂಡಿದ್ದಾರೆ. ಮೋದಿ ಬುಲೆಟ್‌ ಟ್ರೇನ್‌ ಐಡಿಯಾ ತೆಗೆದುಕೊಂಡು ಬಂದಿದ್ದಾರೆ. ಅದನ್ನು ಜನರ ಮೇಲೆ ಹೇರಲು ಬಯಸುತ್ತಾರೆ. ಅದಕ್ಕೆ 1 ಲಕ್ಷ ಕೋಟಿ ಹಣ ಹೂಡಲು ಮುಂದಾಗಿದ್ದಾರೆ. ಅದರ ಬದಲು ರೈಲು ಅಭಿವೃದ್ಧಿಗೆ ಹಾಕಿದ್ದರೆ ಸಾಮಾನ್ಯ ಜನರಿಗೆ ಅನುಕೂಲವಾಗುತ್ತಿತ್ತು.  ಬುಲೆಟ್‌ ಟ್ರೇನ್‌ನಿಂದ ಜಪಾನಿಗರು ಉದ್ಯೋಗ ಸೃಷ್ಠಿಸಿಕೊಳ್ಳುತ್ತಾರೆ. ಅವರಿಗೆ ಲಾಭವಾಗುತ್ತದೆ. ಇದರ ಹಿಂದೆ ಅವರ ಅಜೆಂಡಾ ಏನಿದೆಯೋ ಗೊತ್ತಿಲ್ಲ. ಇದು ಜನರ ಮೇಲೆ ಹೇರುವ ಅಭಿವೃದ್ಧಿ ಮಾದರಿ.

2019 ಕ್ಕೆ ನಿಮ್ಮ ಅಜೆಂಡಾ ಏನು ?
            ಈಗ ಕರ್ನಾಟಕ ಚುನಾವಣೆ ನಡೆಯುತ್ತಿದೆ. ಈಗ ನಾನು 2019 ರ ಚುನಾವಣೆಯ ಬಗ್ಗೆ ಹೇಳುವುದು ಸರಿಯಲ್ಲ ಆದರೆ, ದೇಶಾದ್ಯಂತ ನರೇಂದ್ರ ಮೋದಿಯ ಆಡಳಿತ ವೈಖರಿಯನ್ನು ದೇಶದ ಜನತೆ ವಿರೋಧಿಸುತ್ತಿದಾರೆ. ಆರ್‌ಎಸ್‌ಎಸ್‌ ಎಲ್ಲ ಸಂಸ್ಥೆಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಬಯಸುವುದನ್ನು ವಿರೋಧಿಸುತ್ತಿದ್ದಾರೆ. ಎಲ್ಲ ಪ್ರತಿಪಕ್ಷಗಳು ಮೋದಿ ವಿರುದ್ಧ ಒಂದಾಗಲು ಬಯಸುತ್ತಿವೆ.

ದೇಶಾದ್ಯಂತ ಕಾಂಗ್ರೆಸ್‌ ಯಾಕೆ ವೀಕ್‌ ಆಗಿದೆ ? ನಾಯಕತ್ವದಲ್ಲಿ ಏನಾದರೂ ಸಮಸ್ಯೆ ಇದೆ‌ಯಾ ?
            ನಾವು ಕೇಂದ್ರದಲ್ಲಿ ಡಾ. ಮನಮೋಹನ್‌ ಸಿಂಗ್‌ ನೇತೃತ್ವದಲ್ಲಿ ಹತ್ತು ವರ್ಷ ಅಧಿಕಾರ ನಡೆಸಿದ್ದೇವೆ. ಆ ಸಮಯದಲ್ಲಿ ನಾವು ಕೆಲವೊಂದು ತಪ್ಪುಗಳನ್ನು ಮಾಡಿದ್ದೇವೆ. ನಾವು ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ಎದುರಿಸಿದೆವು. ತೈಲ ಬೆಲೆ ಈಗಿನ ಸರ್ಕಾರಕ್ಕಿಂತ ಕಡಿಮೆ ಇತ್ತು. ದೇಶದ ಜನತೆ ನಮ್ಮ ಬಗ್ಗೆ ಅಸಮಾಧಾನಗೊಂಡಿದ್ದರು. ನಾವು ಜನರ ಭಾವನೆಗಳನ್ನು ಗೌರವಿಸಿ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದೇವೆ. 

ಯುಪಿಎ ಅವಧಿಯಲ್ಲಿ ನೀವು ಯಾವ ತಪ್ಪುಗಳನ್ನು ಮಾಡಿದ್ದೀರಿ ?
           2004 ರಲ್ಲಿ ನಾವು ಕೆಲವು ಯೋಜನೆಗಳನ್ನು ಹಾಕಿಕೊಂಡು ಅಧಿಕಾರಕ್ಕೆ ಬಂದೆವು. ನರೆಗಾ, ಆರ್‌ಟಿಐ, ರೈತರ ಸಾಲ ಮನ್ನಾ, ವಿದ್ಯುದ್ದೀಕರಣ ಯೋಜನೆಗಳನ್ನು ಹಾಕಿಕೊಂಡಿದ್ದೆವು. ಆ ಯೋಜನೆಗಳ ದೂರದೃಷ್ಟಿ ಕೆಲಸ ಮಾಡಲಿಲ್ಲ. ಹೀಗಾಗಿ ನಾವು ಹೊಸ ಆಲೋಚನೆಗಳೊಂದಿಗೆ ದೇಶವನ್ನು ಮುಂದೆ ತೆಗೆದುಕೊಂಡು ಹೋಗಲು ಬಯಸುತ್ತೇವೆ. ಹೀಗಾಗಿ ಈಗ ಚುನಾವಣೆಗೆ ಜನರ ಅಭಿಪ್ರಾಯ ಪಡೆದು ಪ್ರಣಾಳಿಕೆ ರಚನೆ ಸಿದ್ದಪಡಿದ್ದೇವೆ. ಬಿಜೆಪಿಯವರು ಮೂದು ದಿನದಲ್ಲಿ ಪ್ರಣಾಳಿಕೆ ರಚಿಸಿದ್ದಾರೆ.

ಬಿಜೆಪಿಯವರು ಸಂವಿಧಾನ ಬದಲಾಯಿಸಲು ಅಧಿಕಾರಕ್ಕೆ ಬಂದಿರುವುದಾಗಿ ಹೇಳುತ್ತಿದ್ದಾರೆ. ಅದಕ್ಕೆ ನೀವೇನು ಹೇಳುತ್ತೀರಿ ?
           ಭಾರತದ ಸಂವಿಧಾನ ಆರ್‌ಎಸ್‌ಎಸ್‌ನವರನ್ನು ವಿಚಲಿತರನ್ನಾಗಿ ಮಾಡಿದೆ. ಅವರು ದೇಶದ ಎಲ್ಲರೂ ಸಮಾನ ಅವಕಾಶ ಪಡೆಯುವುದು ಬಯಸುವುದಿಲ್ಲ. ಬಿಜೆಪಿಯವರಿಗೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ಬರೆದ ಸಂವಿಧಾನ ಮತ್ತು ಕಾಂಗ್ರೆಸ್‌ ಮಾಡಿರುವ ಬದಲಾವಣೆಯ ಬಗ್ಗೆ ನಂಬಿಕೆ ಇಲ್ಲ. ಸಮಾಜದ ಎಲ್ಲ ವರ್ಗದವರಿಗೆ ಸಮಾನತೆ ನೀಡುವುದು ಅವರಿಗೆ ಬೇಕಾಗಿಲ್ಲ. ದಲಿತರು, ಆದಿವಾಸಿಗಳು, ಇತರ ವರ್ಗದವರಿಗೆ ಸ್ವಾತಂತ್ರ್ಯ ನೀಡುವುದು ಅವರಿಗೆ ಬೇಕಾಗಿಲ್ಲ.

ಸಂವಿಧಾನ ಬದಲಾವಣೆಯಾಗದಷ್ಟು ಪರಿಪೂರ್ಣವಾಗಿದೆಯಾ?
           ಹಾಗಲ್ಲ ಅದು, ಸಂವಿಧಾನದಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡುವುದಕ್ಕೆ ವಿರೋಧವಿಲ್ಲ. ಆದರೆ, ಬಿಜೆಪಿಯವರು ಸಂವಿಧಾನದ ಮೂಲ ಆಶಯವನ್ನೇ ಬದಲಾಯಿಸಲು ಹೊರಟಿದ್ದಾರೆ. ತಿದ್ದುಪಡಿ ಮತ್ತು ಬದಲಾವಣೆಯಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಸಂವಿಧಾನ ಬದಲಾಯಿಸುತ್ತೇನೆ ಎಂದು ಅವರ ಮಂತ್ರಿ ಹೇಳಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮಾತ್ರ ಮೌನವಾಗಿದ್ದಾರೆ. ಅಂದರೆ, ಬದಲಾವಣೆಗೆ ಅವರ ಒಪ್ಪಿಗೆ ಇದೆ ಎಂದರ್ಥ

ಕಾಂಗ್ರೆಸ್‌ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆಯೇ?
          ಖಂಡಿತವಾಗಿಯೂ ಇದೆ. ಸ್ಪ ಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. ಅದರಲ್ಲಿ ಅನುಮಾನವಿಲ್ಲ.

ಸಿದ್ದರಾಮಯ್ಯ ಜಾತಿ ಮತ್ತು ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರಲ್ಲಾ ?
          ದೇಶದಲ್ಲಿ ಧರ್ಮ ಹಾಗೂ ಜಾತಿಯ ಆಧಾರದಲ್ಲಿ ಜನರನ್ನು ಒಡೆಯುತ್ತಿರುವುದು ಬಿಜೆಪಿ. ಈ ದೇಶದಲ್ಲಿ ದಲಿತರು ಮತ್ತು ಆದಿವಾಸಿಗಳ ಮೇಲೆ ನಿರಂತರ ದಬ್ಟಾಳಿಕೆ ನಡೆಯುತ್ತಿದೆ. ಬಿಜೆಪಿ ದಲಿತರು, ಆದಿವಾಸಿಗಳು ಅಲ್ಪ ಸಂಖ್ಯಾತರನ್ನು ಹೊಡೆಯುವುದು, ಕೊಲ್ಲುವುದನ್ನು ಬಿಜೆಪಿ ಮಾಡುತ್ತಿದೆ.

ರಾಜ್ಯದಲ್ಲಿ ಲಿಂಗಾಯತ ಧರ್ಮ ಒಡೆದಿದ್ದಾರೆ ಎಂಬ ಆರೋಪ ಇದೆಯಲ್ಲಾ ?
          ಸಿದ್ದರಾಮಯ್ಯ ಅವರು ಲಿಂಗಾಯತ ಧರ್ಮವನ್ನು ಒಡೆದಿಲ್ಲ. ಲಿಂಗಾಯತ ಸಮುದಾಯದ ಜನರ ಭಾವನೆಗಳಿಗೆ ಸ್ಪಂದಿಸಿದ್ದಾರೆ. ಒಂದು ಸರ್ಕಾರವಾಗಿ ಅವರ ಬೇಡಿಕೆಗೆ ಸ್ಪಂದಿಸಿದೆ. ಅದರಲ್ಲಿ ಧರ್ಮ ಒಡೆಯುವ ಪ್ರಶ್ನೆ ಎಲ್ಲಿಂದ ಬಂತು. ಬಿಜೆಪಿ ಸಮುದಾಯಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ನೋಟು ಅಮಾನ್ಯ ಮಾಡಿ ಸಾಮಾನ್ಯ ಜನರ ಜೀವನ ಹಾಳು ಮಾಡಿದ್ದಾರೆ.
ಬಾಕ್ಸ್‌

ಸಿದ್ದರಾಮಯ್ಯ ಅವರದು 10 % ಸರ್ಕಾರ ಎಂದು ಮೋದಿ ಅಮಿತ್‌ ಶಾ ಹೇಳುತ್ತಿದ್ದಾರಲ್ಲಾ ?
          ಮೋದಿ ರಾಜ್ಯಕ್ಕೆ ಬಂದಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ದೇಶ ಎಂದೂ ಕೇಳರಿಯದ ಭಷ್ಟಾಚಾರ ಮಾಡಿ, ಜೈಲಿಗೆ ಹೋಗಿದ್ದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಇನ್ನೊಂದೆಡೆ 8 ಜನ ರೆಡ್ಡಿ ಆಪ್ತರಿಗೆ ಟಿಕೆಟ್‌ ನೀಡಿದ್ದಾರೆ. ರಾಜ್ಯದ ಜನತೆಯ 35 ಸಾವಿರ ಕೋಟಿ ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆ.

ರೆಡ್ಡಿಗಳಿಗೆ ಯಾಕೆ ಟಿಕೆಟ್‌ ನೀಡಿದ್ದಾರೆ ಎಂದು ಮೋದಿ ಹೇಳಬೇಕು. ಕೊಲೆ ಆರೋಪ ಹೊತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಯಾಕೆ ಮಾಡಿದ್ದಾರೆ ಎಂದು ರಾಜ್ಯದ ಜನತೆಗೆ ತಿಳಿಸಬೇಕು. ಬಿಜೆಪಿ ನಾಯಕರಾಗಲು ಭ್ರಷ್ಟಾಚಾರ ಪ್ರಮುಖ ಮಾನದಂಡ ಆಗಿದೆಯೇ?

– ಶಂಕರ ಪಾಗೋಜಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪಿಲಿಕುಳ: ‘ಚಿಂಟು’ ಚಿರತೆಗೆ ಸಿಸೇರಿಯನ್ : ಬದುಕುಳಿಯಲಿಲ್ಲ ಮರಿಗಳು!

ಪಿಲಿಕುಳ: ‘ಚಿಂಟು’ ಚಿರತೆಗೆ ಸಿಸೇರಿಯನ್ : ಬದುಕುಳಿಯಲಿಲ್ಲ ಮರಿಗಳು!

96

ಮಧ್ಯಾಹ್ನ ಕಾಣೆಯಾಗಿ ಸಂಜೆಯ ವೇಳೆ Google’s Play Store‌ನಲ್ಲಿ ಪ್ರತ್ಯಕ್ಷವಾದ Paytm !

ಮಂಡ್ಯ: 66 ಹೊಸ ಕೋವಿಡ್ 19 ಪ್ರಕರಣ ಪತ್ತೆ ; ಇಬ್ಬರ ಸಾವು

ಮಂಡ್ಯ: 66 ಹೊಸ ಕೋವಿಡ್ 19 ಪ್ರಕರಣ ಪತ್ತೆ ; ಇಬ್ಬರ ಸಾವು

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

tiktok

ಸೆ.20ರಿಂದ ಅಮೆರಿಕದಲ್ಲಿ ಟಿಕ್ ಟಾಕ್, ವಿ-ಚಾಟ್ ಅಧಿಕೃತವಾಗಿ ಬ್ಯಾನ್

ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

ಪಾರ್ಲಿಮೆಂಟ್ ನೊಳಗೆ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಥಾಯ್ ಸಂಸದ!

‘ಬೆಳೆ ಸಮೀಕ್ಷೆ ಆಪ್’ಗೆ ರೈತರಿಂದ ಉತ್ತಮ ಸ್ಪಂದನೆ : ಏನು? ಎತ್ತ? ಇಲ್ಲಿದೆ ಮಾಹಿತಿ

‘ಬೆಳೆ ಸಮೀಕ್ಷೆ ಆಪ್’ಗೆ ರೈತರಿಂದ ಉತ್ತಮ ಸ್ಪಂದನೆ : ಏನು? ಎತ್ತ? ಇಲ್ಲಿದೆ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

‘ಬೆಳೆ ಸಮೀಕ್ಷೆ ಆಪ್’ಗೆ ರೈತರಿಂದ ಉತ್ತಮ ಸ್ಪಂದನೆ : ಏನು? ಎತ್ತ? ಇಲ್ಲಿದೆ ಮಾಹಿತಿ

‘ಬೆಳೆ ಸಮೀಕ್ಷೆ ಆಪ್’ಗೆ ರೈತರಿಂದ ಉತ್ತಮ ಸ್ಪಂದನೆ : ಏನು? ಎತ್ತ? ಇಲ್ಲಿದೆ ಮಾಹಿತಿ

ಶಾಸಕರಿಗೆ ಕೋವಿಡ್ 19 ಪರಿಕ್ಷೆ : ತಪಾಸಣೆಗೊಳಗಾದ ಸ್ಪೀಕರ್ ಕಾಗೇರಿ

ಶಾಸಕರಿಗೆ ಕೋವಿಡ್ 19 ಪರಿಕ್ಷೆ : ತಪಾಸಣೆಗೊಳಗಾದ ಸ್ಪೀಕರ್ ಕಾಗೇರಿ

ಡ್ರಗ್ ದಂಧೆ: ನಿರೂಪಕ ಅಕುಲ್, ಸಂತೋಷ್, ಕಾಂಗ್ರೆಸ್ ನ ಮಾಜಿ ಶಾಸಕರ ಪುತ್ರನಿಗೆ CCB ನೋಟಿಸ್

ಡ್ರಗ್ ದಂಧೆ: ನಿರೂಪಕ ಅಕುಲ್, ಸಂತೋಷ್, ಕಾಂಗ್ರೆಸ್ ನ ಮಾಜಿ ಶಾಸಕರ ಪುತ್ರನಿಗೆ ಸಿಸಿಬಿ ಶಾಕ್

ಶ್ರೀರಾಮುಲು ಸಭೆ ಯಶಸ್ವಿ: ಪ್ರತಿಭಟನೆ ಕೈಬಿಡಲು ವೈದ್ಯರ ನಿರ್ಧಾರ

ಶ್ರೀರಾಮುಲು ಸಭೆ ಯಶಸ್ವಿ: ಪ್ರತಿಭಟನೆ ಕೈಬಿಡಲು ವೈದ್ಯರ ನಿರ್ಧಾರ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

cd-tdy-1

ಹೊಳಲ್ಕೆರೆ: ಬಿಜೆಪಿಯ 70 ಕಾರ್ಯಕರ್ತರಿಂದ ರಕ್ತದಾನ

ವಿಶ್ವ ಕರ್ಮರು ತಾಂತ್ರಿಕತೆಯ ಪಿತಾಮಹ: ಸಿ.ಟಿ. ರವಿ

ವಿಶ್ವ ಕರ್ಮರು ತಾಂತ್ರಿಕತೆಯ ಪಿತಾಮಹ: ಸಿ.ಟಿ. ರವಿ

ಪಿಲಿಕುಳ: ‘ಚಿಂಟು’ ಚಿರತೆಗೆ ಸಿಸೇರಿಯನ್ : ಬದುಕುಳಿಯಲಿಲ್ಲ ಮರಿಗಳು!

ಪಿಲಿಕುಳ: ‘ಚಿಂಟು’ ಚಿರತೆಗೆ ಸಿಸೇರಿಯನ್ : ಬದುಕುಳಿಯಲಿಲ್ಲ ಮರಿಗಳು!

ಬಳ್ಳಾರಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

ಬಳ್ಳಾರಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

96

ಮಧ್ಯಾಹ್ನ ಕಾಣೆಯಾಗಿ ಸಂಜೆಯ ವೇಳೆ Google’s Play Store‌ನಲ್ಲಿ ಪ್ರತ್ಯಕ್ಷವಾದ Paytm !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.