ಜಾಲತಾಣ: ಕಾಂಗ್ರೆಸ್‌ ಸಂಚಾಲಕರ ನೇಮಕ

Team Udayavani, Jan 4, 2019, 1:20 AM IST

ಬೆಂಗಳೂರು: ಲೋಕಸಭೆ ಚುನಾವಣೆಗೆ ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕಾಂಗ್ರೆಸ್‌, ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ಪ್ರತ್ಯೇಕವಾಗಿ ಸಂಚಾಲಕರು ಹಾಗೂ ಸಹ ಸಂಚಾಲಕರ ನೇಮಕ ಮಾಡಿದೆ. 

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆದೇಶದ ಮೇರೆಗೆ ಬೆಂಗಳೂರು ವಿಭಾಗದ ಸಂಚಾಲಕರಾಗಿ ಎ.ವಾಸುದೇವ ಮೂರ್ತಿ, ಸಹ ಸಂಚಾಲಕರಾಗಿ ದೀಪಕ್‌ ಸಿಂಗ್‌, ಕಲಬುರಗಿ ವಿಭಾಗಕ್ಕೆ ಸಂಚಾಲಕರಾಗಿ ನಿಂಬಗಲ್‌ ರಾಮಕೃಷ್ಣ, ಸಹ ಸಂಚಾಲಕರಾಗಿ ಸಚಿನ್‌ ಶಿರ್ವಾಲ್‌, ಮೈಸೂರು ವಿಭಾಗಕ್ಕೆ ಚೇತನ್‌ ದೊರೈರಾಜು, ಸಹ ಸಂಚಾಲಕರಾಗಿ ಐ.ಜಿ.ಚಿನ್ನಪ್ಪ, ಬೆಳಗಾವಿ ವಿಭಾಗಕ್ಕೆ ವಿಶ್ವನಾಥ ದೇಸಾಯಿ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಕೆಪಿಸಿಸಿ ಜಾಲತಾಣ ವಿಭಾಗದ ಸಂಚಾಲಕ ಎ.ಎನ್‌.ನಟರಾಜ್‌ ಗೌಡ ಆದೇಶದಲ್ಲಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ