- Friday 13 Dec 2019
ಮಂಗನ ಕಾಯಿಲೆಗೆ ಮತ್ತೋರ್ವ ಬಲಿ
Team Udayavani, Jan 4, 2019, 1:05 AM IST
ಸಾಗರ: ಮಂಗನ ಕಾಯಿಲೆಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದು, ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಈ ಕಾಯಿಲೆ ಗಂಭೀರ ಸ್ವರೂಪ ತಾಳುತ್ತಿದೆ. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮರಬಿಡಿ ಗ್ರಾಮದ ಲೋಕರಾಜ್ ಜೈನ್ (28) ಬುಧವಾರ ರಾತ್ರಿ ಮೃತಪಟ್ಟಿದ್ದು, ಕಳೆದ ವಾರದಲ್ಲಿ ಒಟ್ಟೂ ನಾಲ್ಕು ಮಂದಿ ಈ ಕಾಯಲೆಗೆ ಮೃತರಾಗಿದ್ದಾರೆ.
ವಾರದ ಹಿಂದೆ ಜ್ವರ ಕಾಣಿಸಿಕೊಂಡಾಗ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜ್ವರ ನಿಯಂತ್ರಣಕ್ಕೆ ಬಾರದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಲೋಕರಾಜ್ ಬುಧವಾರ ಅಸುನೀಗಿದರು.
ಅರಳಗೋಡು ಗ್ರಾಪಂ ವ್ಯಾಪ್ತಿ ಮಂಗನ ಕಾಯಿಲೆಗೆ ಮಂಡವಳ್ಳಿಯ ಪಾರ್ಶ್ವನಾಥ ಜೈನ್, ವಾಟೆಮಕ್ಕಿ ಕೃಷ್ಣಪ್ಪ, ಕಂಚಿಕೈ ಮಂಜುನಾಥ್ ಮತ್ತು ಮರಬಿಡಿ ಗ್ರಾಮದ ಲೋಕರಾಜ್ ಬಲಿಯಾಗಿದ್ದಾರೆ. ಇಲ್ಲಿಯ ಕಾಡುಗಳಲ್ಲಿ ಮೃತ ಮಂಗಗಳು ಪತ್ತೆಯಾಗುತ್ತಲೇ ಇದ್ದು ಇನ್ನೂ ಹಲವು ಮಂದಿಗೆ ಸೋಂಕು ತಗುಲಿರುವ ಶಂಕೆ ಇದೆ. ಕಾಲೇಜು ವಿದ್ಯಾರ್ಥಿನಿ ಜೀಗಳದ ಶ್ವೇತಾ ಜೈನ್ ಗೆ ಕೂಡ ವೈರಸ್ ತಗುಲಿರುವ ಶಂಕೆಯಿದ್ದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅಲ್ಲದೆ ಇದೇ ಸೋಂಕಿನಿಂದ ಮೃತಪಟ್ಟ ಮಂಜುನಾಥ್ ಅವರ ತಾಯಿ ವೀರಮ್ಮ ಅವರ ದೇಹ ಸ್ಥಿತಿ ಕೂಡ ಗಂಭೀರವಾಗಿದ್ದು, ಮೆಗ್ಗಾನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗದಲ್ಲಿ ಒಟ್ಟು ಆರು ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರು ಗುಣಮುಖರಾಗುತ್ತಿದ್ದಾರೆ ಎಂದು ಕೆಎಫ್ಡಿ ಚಿಕಿತ್ಸಾ ವಿಭಾಗದ ಮೂಲಗಳು ತಿಳಿಸಿವೆ.
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು: ಸಂಪುಟ ವಿಸ್ತರಣೆಗೆ ವಿಳಂಬವಾಗಿಲ್ಲ. ಅದಕ್ಕಾಗಿ ನಮಗೇನೂ ಆತುರವೂ ಇಲ್ಲ. ನನಗೆ ಯಾವ ಖಾತೆ ಕೊಟ್ಟರೂ ಆಶೀರ್ವಾದ ಅಂತ ಸ್ವೀಕರಿಸುತ್ತೇನೆ. ಎಂದು ಶಾಸಕ...
-
ಬೆಂಗಳೂರು: ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿ ಜನರು ಸಂಕಷ್ಟ ಅನುಭವಿಸಿದ್ದು ಗೊತ್ತೇ ಇದೆ. ಉಳ್ಳಾಗಡ್ಡಿ ಬೆಲೆ ದ್ವಿಶತಕ ಸಮೀಪಿಸುತ್ತಿದ್ದಂತೆ ದೇಶದಾದ್ಯಂತ...
-
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಹೃದಯದ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನೂತನ ಬಿಜೆಪಿ...
-
ಬೆಂಗಳೂರು: ಹೃದಯದ ಚಿಕಿತ್ಸೆಗಾಗಿ ಆಸ್ಪತ್ರಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಭೇಟಿಯಾಗಿ ಆರೋಗ್ಯ...
-
ಬೆಂಗಳೂರು: ರಾಜ್ಯದ ಐತಿಹಾಸಿಕ ಪ್ರವಾಸೋದ್ಯಮ ತಾಣವಾಗಿರುವ ಪಟ್ಟದಕಲ್ಲನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ...
ಹೊಸ ಸೇರ್ಪಡೆ
-
ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಕ್ಕಳು ಹಾಗೂ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೂಡಲೇ ಪರಿಹಾರ ದೊರಕಿಸಿಕೊಡಲು ಸರಕಾರ ಮುಂದಾಗಬೇಕು...
-
ಅಮೀನಗಡ: ಗ್ರಾಮೀಣ ಪ್ರದೇಶದಲ್ಲಿರುವ ಸುಮಾರು 5 ಉಪಕೇಂದ್ರಗಳ ಸಾರ್ವಜನಿಕರಿಗೆ ಉಪಯುಕ್ತವಾದ ಆರೋಗ್ಯ ಸೇವೆ ಒದಗಿಸುವ ಗುಡೂರ(ಎಸ್.ಸಿ) ಗ್ರಾಮದ ಸರಕಾರಿ ಪ್ರಾಥಮಿಕ...
-
ಬೀದರ: ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ| ಎಚ್.ಆರ್.ಮಹಾದೇವ ಅವರ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಭಿವೃದ್ಧಿ ಕಾಮಗಾರಿಗಳ...
-
ಕೊರಟಗೆರೆ: ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಸಂಕಲ್ಪದಂತೆ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಯಂತಿ ಅಂಗವಾಗಿ ಆಯೋಜಿಸಿರುವ ರಥಯಾತ್ರೆಗೆ ಪಟ್ಟಣದಲ್ಲಿ ಅದ್ಧೂರಿ...
-
ತೀರ್ಥಹಳ್ಳಿ: ತಾಲೂಕಿನಲ್ಲಿ ಕೆರೆಗಳ ಸರ್ವೇ ಕಾರ್ಯ ಸಮಾಧಾನಕರ ಆಗಿಲ್ಲ. 305 ಕೆರೆಗಳ ಗಡಿ ಗುರುತಿಸುವ ಕಾರ್ಯ ವಿಳಂಬವಾಗಿದೆ. ಸಿಬ್ಬಂದಿ ಕೊರತೆ ಇದ್ದಲ್ಲಿ ಡಿಡಿಎಲ್ಆರ್...