ಕಷ್ಟದಲ್ಲೂ ಮಾನವೀಯತೆ ಮೆರೆದ ರೈತರು

Team Udayavani, Feb 21, 2020, 11:29 AM IST

ನೆಲಮಂಗಲ : ತರಕಾರಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು, ಬೆಳೆದ ಬೆಳೆಯನ್ನು ರಸ್ತೆಗೆ ಸುರಿಯದೇ ಮಠಗಳು ಹಾಗೂ ದಾಸೋಹ ಕೇಂದ್ರಗಳಿಗೆ ರವಾನೆ ಮಾಡುವ ಮೂಲಕ ಸಂಕಷ್ಟದಲ್ಲೂ ಮಾನವೀಯತೆ ಮೆರೆದಿದ್ದಾರೆ.

ಬೆಲೆ ಕುಸಿತ: ಬೆಂಗಳೂರಿನ ಕೆ.ಆರ್‌ ಮಾರುಕಟ್ಟೆ, ಯಶವಂತಪುರ ಹಾಗೂ ನೆಲಮಂಗಲ ಮಾರುಕಟ್ಟೆಯಲ್ಲಿ ಹುರುಳಿಕಾಯಿ ಕೆ.ಜಿ 15ರೂ, ಹಾಗಲಕಾಯಿ ಕೆ.ಜಿಗೆ 10 ರೂ, ಟಮೋಟ ಕೆ.ಜಿಗೆ 10 ಹಾಗೂ ಒಂದು ಸೋರೆಕಾಯಿ 3 ರೂಪಾಯಿಗೆ ಖರೀದಿಸುತಿದ್ದಾರೆ. ಇನ್ನೂ ಎಲೆಕೋಸು 35 ಕೆ.ಜಿಯ ಮೂಟೆಗೆ 70 ರೂ.ಬೆಲೆಗೆ ಕುಸಿತ ಕಂಡಿದೆ.

ನಷ್ಟ: ಎಲೆಕೋಸು ಬೆಳೆಗೆ ಖರ್ಚು ಮಾಡಲಾಗಿದ್ದ ಎಕರೆಗೆ 60ರಿಂದ 80 ಸಾವಿರ ರೂಪಾಯಿ ನಷ್ಟದ ಜೊತೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಹಾಗೂ ಕೆಲಸಗಾರರ ಕೂಲಿ ಖರ್ಚು ಲೆಕ್ಕಾಚಾರ ಮಾಡಿದ ಅನೇಕ ರೈತರು, ರಸ್ತೆಗೆ ಸುರಿಯುವುದಕ್ಕಿಂತ ನಷ್ಟದಲ್ಲಿ ಪುಣ್ಯದ ಕೆಲಸ ಮಾಡೋಣ ಎಂದು ಬೆಳೆದ ತರಕಾರಿಗಳನ್ನು ಮಠಗಳ ದಾಸೋಹ ಕೇಂದ್ರಗಳಿಗೆ ನೀಡಿದ್ದಾರೆ.

ಮಠಗಳಿಗೆ ರವಾನೆ: ತಾಲೂಕಿನ ಕೆರೆಕತ್ತಿಗನೂರು ಗ್ರಾಮದ ರೈತ ಬಾಬು ಹಾಗೂ ವಾಸು 300ಕ್ಕಿಂತ ಹೆಚ್ಚು ಮೂಟೆಗಳನ್ನು ಆದಿಚುಂಚನಗಿರಿ ದಾಸೋಹ ಭವನ, ಧರ್ಮಸ್ಥಳ ದಾಸೋಹ ಭವನ, ಸಿದ್ಧಗಂಗೆ ದಾಸೋಹಭವನ ಹಾಗೂ ಯಡಿಯೂರಿನ ದಾಸೋಹ ಭವನಕ್ಕೆ ಕಳುಹಿಸಿದ್ದಾರೆ.

ಉಚಿತ ಸೇವೆ : ರೈತರು ರಾಜ್ಯದ ಮಠಗಳ ದಾಸೋಹ ಕೇಂದ್ರಕ್ಕೆ ಎಲೆಕೋಸು ರವಾನೆ ಮಾಡುವ ವಿಷಯ ತಿಳಿದ ಗ್ರಾಮದ ಹತ್ತಾರು ಜನರು ಕೋಸುಗಳನ್ನು ಮೂಟೆಗೆ ತುಂಬಿ ಲಾರಿಗೆ ಲೋಡ್‌ ಮಾಡಿದರೆ, ಇನ್ನೂ ಕೆಲವರು ವಾಹನಗಳನ್ನು ಉಚಿತವಾಗಿ ನೀಡುವ ಮೂಲಕ ರೈತರಿಗೆ ನೆರವಾಗಿದ್ದಾರೆ.

ರೈತರ ಮನವಿ : ಸರ್ಕಾರ ಬೆಳೆಗಳ ಬೆಲೆ ಕುಸಿತದ ಬಗ್ಗೆ ಯೋಚನೆ ಮಾಡುತ್ತಿಲ್ಲ, ರಾಗಿ ಖರೀದಿ ಕೇಂದ್ರ ಮಾಡಿ ನೂರೆಂಟು ದಾಖಲೆ ಕೇಳುತ್ತಾರೆ.ರೈತ ನಷ್ಟದಿಂದ ನರಳುತಿದ್ದರೂ, ಸರ್ಕಾರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಭಿನಂದನೆ: ರೈತರ ಸಮಾಜಮುಖೀ ನಿರ್ಧಾರಕ್ಕೆ ಕೆಲವು ಮಠಗಳ ಮಠಾಧೀಶರು, ಸ್ಥಳೀಯ ಮುಖಂಡರು, ರೈತರು,ಗ್ರಾಮಸ್ಥರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಸಂಪೂರ್ಣ ಕುಸಿತ ಕಂಡಿದೆ. ಎಲೆಕೋಸು ಮಾರುಕಟ್ಟೆಗೆ ತೆಗೆದುಕೊಂಡು ಬರುವ ಖರ್ಚು ಸಿಗುತ್ತಿಲ್ಲ. ರಸ್ತೆಗೆ ಸುರಿಯುವುದಕ್ಕಿಂತ ಬಡಮಕ್ಕಳು, ಸಮಾಜದ ಜನರು ತಿನ್ನಲಿ ಎಂದು ಮಠಗಳ ದಾಸೋಹ ಕೇಂದ್ರಗಳಿಗೆ ನೀಡಿದ್ದೇವೆ .ಬಾಬು , ರೈತ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಆನೇಕಲ್‌: ಕೋವಿಡ್ 19 ಮಹಾಮಾರಿ ವೇಗವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಘೋಷಿಸಿರುವ ಕರ್ಫ್ಯೂಗೆ ತಾಲೂಕು ಸಂಪೂರ್ಣ ಬಂದ್‌ ಆಗಿತ್ತು. ಯುಗಾದಿ ಹಿನ್ನಲೆಯಲ್ಲಿ...

  • ದೇವನಹಳ್ಳಿ: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಸಪ್ತಪದಿ ಸಾಮೂಹಿಕ ಸರಳ ವಿವಾಹವೆಂಬ...

  • ನೆಲಮಂಗಲ: ಕೋವಿಡ್ 19 ವೈರಸ್‌ ಮನುಕುಲವನ್ನು ಆತಂಕಕ್ಕೆ ತಳ್ಳಿದೆ. ಹೀಗಾಗಿ ಎಲ್ಲರೂ ಜಾಗೃತಿ ವಹಿಸಿ, ಸುತ್ತ ಮುತ್ತಲ ಪ್ರದೇಶವನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕು...

  • ದೊಡ್ಡಬಳ್ಳಾಪುರ: ಬೇಸಿಗೆ ಆರಂಭವಾಗಿದ್ದು, ಜತೆಗೆ ನೀರಿನ ಸಮಸ್ಯೆಯೂ ಹೆಚ್ಚುತ್ತಿದೆ. ಸರಬರಾಜಾಗುತ್ತಿರುವ ನೀರಿನ ಸ್ಥಿತಿಗತಿ ಅರಿಯಬೇಕಿದ್ದು, ನೀರಿನ ಮಿತ...

  • ದೇವನಹಳ್ಳಿ: ವಿದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 183 ವಿದೇಶಿ ಪ್ರಯಾಣಿಕರನ್ನು ಕೋವಿಡ್ 19 ಶಂಕೆ ಹಿನ್ನೆಲೆ ತಪಾಸಣೆ ನಡೆಸಲಾಗಿದೆ...

ಹೊಸ ಸೇರ್ಪಡೆ