ಸಮಾಜದ ಏಳಿಗೆಗೆ ದುಡಿದವರನ್ನು ಗುರುತಿಸಿ

Team Udayavani, Nov 4, 2019, 3:00 AM IST

ನೆಲಮಂಗಲ: ಸಮುದಾಯದ ಪ್ರತಿಭಾವಂತರು, ಹಾಗೂ ಸಮಾಜದ ಏಳಿಗಾಗಿ ದುಡಿದವರ ಮಹನೀಯರನ್ನು ಸಮಾಜಕ್ಕೆ ಪರಿಚಯಿಸಬೇಕಿದೆ ಎಂದು ಹಂಪಿ ಹೇಮಕೂಟ-nಚಿಟ; ಗಾಯತ್ರಿ ಪೀಠದ ಶ್ರೀ ದಯಾನಂದಪುರಿ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಕೆಂಪಲಿಂಗನಹಳ್ಳಿ ಗ್ರಾಮದ ಶ್ರೀ ಗಾಯತ್ರಿಪೀಠ ಮಹಾಸಂಸ್ಥಾನ ಶಾಖಾಮಠದಲ್ಲಿ ಭಾನುವಾರ ಕರ್ನಾಟಕ ರಾಜ್ಯ ದೇವಾಂಗ ಸಂಘ ಆಯೋಜಿಸಿದ್ದ ದಾಸಿಮಯ್ಯ ರತ್ನ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾದಾನಿ ಕಿರುಹೊತ್ತಿಗೆ ಬಿಡುಗಡೆ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ದೇವಾಂಗ ಸಮಾಜ ಶೈಕ್ಷಣಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಮುಂದೆ ಬರಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾಜದ ಅಭಿವೃದ್ಧಿಗಾಗಿ ದುಡಿದವರನ್ನು ಗುರುತಿಸಿ ಗೌರವಿಸಿ ದಾಸಿಮಯ್ಯ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು, ಪ್ರತಿಭಾ ಪುರಸ್ಕಾರವನ್ನು ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶಿದಿಂದ ಕಾರ್ಯಕ್ರಮ ಆಯೋಜಿಸಿರುವುದು ಅರ್ಥ ಪೂರ್ಣವಾಗಿದೆ. ಮಕ್ಕಳಲ್ಲಿರುವ ಬುದ್ದಿಮಟ್ಟ, ಜ್ಞಾಪಕ ಶಕಿು¤ಂದಾಗಿ ಹೆಚ್ಚಿನ ಪಲಿತಾಂಶ ಪಡೆಯಲು ಕಾರಣವಾಗಿದೆ. ದೇವಾಂಗ ಸಂಘದ ಜತೆಗೆ ಸಮುದಾಯದ ಮುಖಂಡರು ಸಮಾಜದ ಸಂಘಟನೆಗೆ ಮುಂದಾಗಿರುವುದು ನಿಜಕ್ಕೂ ಪ್ರಶಂಸನೀಯ. ಮುಂದಿನ ದಿನಗಳಲ್ಲಿ ಸಹಸ್ರ ಸಂಖ್ಯೆಯ ಮಕ್ಕಳನ್ನು ಗೌರಸುವಂತಾಗಬೇಕು ಎಂದರು.

ಬೆಂಗಳೂರು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಸಂತ್‌ಕುಮಾರ್‌ ಮಾತನಾಡಿ ಕೃಷಿಯಿಂದ ವಿಜ್ಞಾನ, ಸಾಹಿತ್ಯ ಕ್ಷೇತ್ರದವರೆಗೂ ಸಾಧನೆ ಮಾಡಿದ ಸಮುದಾಯದ ಮಹಾಸಾಧಕರನ್ನು ಸ್ಮರಿಸಿಕೊಳ್ಳುವುದರ ಜತೆಗೆ ಸದಾ ಗೌರವಿಸಬೇಕಿದೆ. ಸಮುದಾಯದ ಶ್ರಮಧಾನ ದೇವಾಂಗ ಎಂಬುದು ಜಾತಿ ಸೂಚಕ ಪದವಲ್ಲ, ಸಂಸ್ಕೃತಿಯ ಅರಿಲ್ಲದೇ ಬಂದಿರುವುದು. ಬನಹಟ್ಟಿ ಫ‌ಗುಹಳಕಟ್ಟಿಯಂತವರನ್ನು ಬೆಳೆಸಿದ ಕೀರ್ತಿ ಸಮುದಾಯಕ್ಕಿದೆ. ವಚನಸಾಹಿತ್ಯ ಎಂಬುದು ಉಳಿದುಕೊಂಡಿದ್ದರೆ ಸಮುದಾಯದ ಕೊಡುಗೆ ಅನನ್ಯ. ಸಮುದಾಯದ ಅದ್ಭುತ ಇತಿಹಾಸವನ್ನು ಇಂದಿನ ಮಕ್ಕಳಿಗೆ ತಿಳಿಸಿಕೊಡುವ ಅನಿವಾರ್ಯತೆ ಇದ್ದು ಕಾರ್ಯಕ್ರಮಗಳನ್ನು ರೂಪಿಸಬೇಕಿದೆ.

ಸಮುದಾಯದ ಮಕ್ಕಳಿಗೆ ಉತ್ತಮ ದ್ಯಾಬ್ಯಾಸದ ಅಗತ್ಯದೆ. ಸಮುದಾಯ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯ ಜತೆಗೆ ಹೃದಯವಂತಿಕೆಯನ್ನು ಬೆಳೆಸಿಕೊಳ್ಳಬೇಕಿದೆ. ಭಾರತದ ಅತ್ಯಂತ ಪ್ರಾಚೀನ ನಾಗರೀಕತೆಯ ಬೇರುಗಳು ಸಮುದಾಯದಲ್ಲಿವೆ. ಮಾನವನ ದೇಹದಲ್ಲಿರುವ ಅಗಮ್ಯ ಚೈತನ್ಯಶಕ್ತಿಯ ಇರುವಿಕೆಯನ್ನು ಸಮುದಾಯದ ಮಹನೀಯರು ಪರಿಚಯಿಸಿದ್ದರೆಂಬುದು ಹೆಮ್ಮೆಯ ಸಂಗತಿ ಎಂದರು.

ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ರಾಜ್ಯರಾಜಕೀಯ ವಲಯದಲ್ಲಿನ ಬದಲಾವಣೆಗಳಿಗೆ ಸಿದ್ಧರಾಮಯ್ಯ ಅವರನ್ನು ದೂರುವುದು ತಪ್ಪು. ಅವರು ತಮ್ಮ ಅಧಿಕಾರವಧಿಯಲ್ಲಿ 165 ಯೋಜನೆ ಜಾರಿಗೆತಂದು ನುಡಿದಂತೆ ನಡೆದ ಮುಖ್ಯಮಂತ್ರಿಗಳಾಗಿದ್ದಾರೆ. ಕೆಟ್ಟದಾದಾಗ ಸಿದ್ದರಾಮಯ್ಯ ಅವರನ್ನು ತೆಗಳುವುದು ಸರಿಯಲ್ಲ, ಪಠ್ಯದಿಂದ ಟಿಪ್ಪು ವಿಷಯವನ್ನು ತೆಗೆಯುವ ವಿಚಾರವಾಗಿ ಮಾತನಾಡಿದ ಎಸ್‌ ಆರ್‌.ಪಾಟೀಲ್‌ ಯಾರೊಬ್ಬರು ಳಿಸುವ ಕೆಲಸವನ್ನು ಮಾಡಬಾರದು ಪಠ್ಯದಲ್ಲಿದ್ದರೆ ತಪ್ಪೇನಿದೆ,

ಕೇಂದ್ರ ಗೃಹಮಂತ್ರಿಗಳು ಹಾಗೂ ರಾಜ್ಯದ ಅನೇಕ ಬಿಜೆಪಿ ನಾಯಕರು ಸೇರಿಕೊಂಡು ನ್ಯಾಯಯುತವಾಗಿ ಆಯ್ಕೆಯಾಗಿದ್ದ ಸರ್ಕಾರವನ್ನು ಬೀಳಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂಬುದನ್ನು ನಾಡಿನ ಜತೆಗೆ ರಾಷ್ಟ್ರದ ಜನತೆ ನೋಡಿದ್ದಾರೆ. ಮುಂದಿನ ದಿನಗಳಲ್ಲಿ ನಾಡಿನ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಬಿಎಸ್‌ ಯಡಿಯೂರಪ್ಪ ಅವರುಗಳು ನೈತಿಕಹೊಣೆಯಿಂದ ಗೌರವಯುತವಾಗಿ ರಾಜೀನಾಮೆಯನ್ನು ಕೂಡಲೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್‌ ಪ್ರಚಲಿತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಧ್ಯಮದವರು ಕುರಿತ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ದಾಸಿಮಯ್ಯ ರತ್ನ ಪ್ರಶಸ್ತಿ ಪುರಸ್ಕಾರ: ಕೃಷಿ, ಸಮಾಜಸೇವೆ, ಜ್ಞಾನ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಗ್ರಾಮೀಣ ಸಾಧಕರು, ರಂಗಭೂಮಿ, ಶಿಕ್ಷಣ ಕ್ಷೇತ್ರ, ನೇಕಾರಿಕೆ ಮತ್ತು ವಿದ್ಯುತ್‌ ಮಗ್ಗ, ಕೈ ಮಗ್ಗ, ದೇಶ ಸೇವೆ, ಕ್ರೀಡಾ ಕ್ಷೇತ್ರಗಳಲ್ಲಿ ಅನೇಕ ರೀತಿಯಲ್ಲಿ ತಮ್ಮದೇ ಆದ ಸೇವೆ ಮತ್ತು ಸಾಧನೆ ಮಾಡಿರುವ 11 ಜನ ಸಾಧಕರಿಗೆ ದಾಸಿಮಯ್ಯ ರತ್ನಪ್ರಶಸ್ತಿ ನೀಡಿ ಗೌರಸಿದರೆ, ಸಮುದಾಯದ 125 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರಸಲಾಯಿತು.

ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ಡಾ. ಜಿ.ರಮೇಶ್‌ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯೆ ಮಂಜುಳನಾರಾಯಣಸ್ವಾು, ಕರ್ನಾಟಕ ದೇವಾಂಗ ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ಪಿ. ಕಲಬುರ್ಗಿ, ಖಜಾಂಚಿ ಡಾ.ಕೆ ನಾರಾಯಣ್‌, ಬೆಂ.ಗ್ರಾ ಜಿಲ್ಲಾದ್ಯಕ್ಷ ಸೂರ್ಯನಾರಾಯಣ್‌, ಹಿರಿಯ ಸಂಶೋಧಕ ಶಂಕರ್‌, ಲಗ್ಗರೆ ದೇವಾಂಗ ಸಂಘದ ಅದ್ಯಕ್ಷ ನಿರಂಜನ್‌, ರ್ಹತಾ ಸೇವಾ ಟ್ರಸ್ಟ್‌ ಕಾರ್ಯದರ್ಶಿ ನಾರಾಯಣ, ವ್ಯವಸ್ಥಾಪಕ ಮಧುಸೂದನ್‌ ಮತ್ತಿತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ