ವಿದ್ಯುತ್ ‌ಬಿಲ್ ‌ಹೊರೆ ಮುಕ್ತಕ್ಕೆ ಸೋಲಾರ್ ‌ಮೊರೆ

ಸೋಲಾರ್‌ ದೀಪ ಅಳವಡಿಸಲು ಪಿಡಿಒಗಳಿಗೆ ಸೂಚನೆ

Team Udayavani, Nov 10, 2020, 2:39 PM IST

ವಿದ್ಯುತ್ ‌ಬಿಲ್ ‌ಹೊರೆ ಮುಕ್ತಕ್ಕೆ ಸೋಲಾರ್ ‌ಮೊರೆ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಪಂ ವ್ಯಾಪ್ತಿಗಳಲ್ಲಿ ವಿದ್ಯುತ್‌ ವೆಚ್ಚ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್‌ ದೀಪಗಳ ಬದಲಾಗಿ ಸೋಲಾರ್‌ ದೀಪ ಅಳವಡಿಸಿ ವಿದ್ಯುತ್‌ ಬಿಲ್‌ ಕಡಿಮೆಗೊಳಿಸುವ ದೂರದೃಷ್ಟಿಯನ್ನು ಜಿಪಂ ಹಂತದಲ್ಲಿ ಯೋಜನೆ ರೂಪಿಸಿದೆ.

ಪಿಡಿಒಗಳಿಗೆ ಸೂಚನೆ: ಜಿಲ್ಲೆಯಲ್ಲಿ 105 ಗ್ರಾಪಂಗಳು ಬರಲಿದ್ದು, ಎಲ್ಲಾ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಸೋಲಾರ್‌ ಬೀದಿದೀಪ ಅಳವಡಿಸಿ, ಪ್ರತಿ ತಿಂಗಳು ಲಕ್ಷಾಂತರ ರೂ.ಖರ್ಚು ಮಾಡುತ್ತಿದ್ದ ಪಂಚಾಯಿತಿಗಳಿಗೆ ಈ ಪ್ರಸ್ತುತ ವರ್ಷದಿಂದ ವಿದ್ಯುತ್‌ ದೀಪದ ಬದಲು ಸೋಲಾರ್‌ ದೀಪ ಅಳವಡಿಸುವುದಕ್ಕೆ ಆದ್ಯತೆ ನೀಡುವಂತೆ ಜಿಪಂ ಸಿಇಒ ಎನ್‌.ಎಂ.ನಾಗರಾಜು ಈಗಾಗಲೇ ಪಿಡಿಒಗಳಿಗೆ ಸೂಚನೆ ನೀಡಿದ್ದಾರೆ.

ಅನುದಾನ ಅಭಿವೃದ್ಧಿ ಕಾರ್ಯಕ್ಕೆ ಬಳಕೆ: ಪ್ರಾಯೋಗಿಕವಾಗಿ ಬೀದಿ ದೀಪಗಳಿಗೆ ಸೋಲಾರ್‌ ಅಳವಡಿಕೆಕಾರ್ಯ ನಡೆಯುತ್ತಿದ್ದು, ನಂತರ ಪಂಚಾಯ್ತಿ ಕಚೇರಿ, ಕಸ ಸಂಸ್ಕರಣಾ ಘಟಕ ಸೇರಿದಂತೆ ಎಲ್ಲಾ ಕಡೆಗಳಲ್ಲಿ ವಿಸ್ತರಣೆ ಮಾಡುವ ಚಿಂತನೆ ನಡೆಯುತ್ತಿದೆ. ಬೀದಿ ದೀಪಗಳಿಗೆ ಬಳಸುವ ವಿದ್ಯುತ್‌ ಬಿಲ್‌ಗೆ ಸಾಕಷ್ಟು ಹಣ ವ್ಯಯ ಮಾಡಲಾಗುತ್ತಿದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಸೋಲಾರ್‌ ದೀಪದ ಮೊರೆ ಹೋಗಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಈ ಹಣ ಸದ್ಬಳಕೆಗೆ ಸಹಕಾರಿಯಾಗಲಿದೆ ಎಂಬ ಉದ್ದೇಶ ಹೊಂದಲಾಗಿದೆ.

ಪ್ರಗತಿ ಕಂಡಿರಲಿಲ್ಲ: ರಾಜ್ಯದ ಎಲ್ಲಾ ಗ್ರಾಪಂಗಳು ಯಾವುದಾದರೂ ಅನುದಾನದಲ್ಲಿ ಸೋಲಾರ್‌ ದೀಪ ಅಳವಡಿಸಿಕೊಂಡು, ವಿದ್ಯುತ್‌ ಬಿಲ್‌ ಪಾವತಿಸುವ ಹೊರೆಯಿಂದ ಹೊರಬಂದು ಅದರ ಉಳಿತಾಯ ಹಣ ಇನ್ನಿತರೆ ಅಭಿವೃದ್ಧಿಗೆ ಬಳಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿತ್ತು.ಈಬಗ್ಗೆ ಕೆಲವು ಪಂಚಾಯಿತಿಗಳು ಆಸಕ್ತಿ ತೋರಿದ್ದರೂ, ಭಾಗಶಃ ಗ್ರಾಪಂ ವ್ಯಾಪ್ತಿಗಳಲ್ಲಿ ಯಾವುದೇ ಪ್ರಗತಿ ಕಂಡಿರಲಿಲ್ಲ.

ವಿದ್ಯುತ್‌ ಬಿಲ್‌ ಹೊರೆಯಿಂದ ಮುಕ್ತ: ಈಗಾಗಲೇ ಪ್ರಾಯೋಗಿಕವಾಗಿ ಜಿಲ್ಲೆಯ ಚೊಕ್ಕನಹಳ್ಳಿ,

ಬಾಶೆಟ್ಟಹಳ್ಳಿ, ಮಜರಹೊಸಹಳ್ಳಿ, ಸಮೇತನಹಳ್ಳಿ, ವಿಶ್ವನಾಥಪುರ, ಕನ್ನಮಂಗಲ, ಅಣ್ಣೇಶ್ವರ, ಜಾಲಿಗೆ ಪಂಚಾಯಿಗಳು ಸೋಲಾರ್‌ ಅಳವಡಿಕೆಗೆ ಮುಂದಾಗಿ ಇತರೆ ಗ್ರಾಪಂಗಳಿಗೆ ಮಾದರಿ ಎನಿಸಿವೆ. ಚನ್ನರಾಯಪಟ್ಟಣದ ಬೆಟ್ಟಕೋಟೆ ಗ್ರಾಪಂ ವ್ಯಾಪ್ತಿಯ ಬೆಟ್ಟಕೋಟೆ, ರಾಯಸಂದ್ರ, ಬಾಲ ದಿಮ್ಮನಹಳ್ಳಿ ಗ್ರಾಮಗಳಲ್ಲಿ ಸೋಲಾರ್‌ ದೀಪಗಳನ್ನು ಅಳವಡಿಸಲಾಗಿದ್ದು, ವಿದ್ಯುತ್‌ ಬಿಲ್‌ ಹೊರೆಯಿಂದ ಮುಕರಾಗಿದ್ದಾರೆ.

ತಪ್ಪಲಿದೆ ವಿದ್ಯುತ್‌ಬಿಲ್‌ಪಾವತಿ ಹೊರೆ! :  ವಿದ್ಯುತ್‌ಬಿಲ್‌ ಪಾವತಿಹೊರೆ! ದೇವನಹಳ್ಳಿ ತಾಪಂ ಇಒ ವಸಂತ್‌ಕುಮಾರ್‌ ಅವರ ದೂರದೃಷ್ಟಿಕೋನದಲ್ಲಿ ತಾಲೂಕಿನ 24 ಗ್ರಾಪಂಗಳಿದ್ದು, ಎಲ್ಲಾ ಗ್ರಾಪಂ ಕಚೇರಿಗಳಿಗೆ ಸೋಲಾರ್‌ ಅಳವಡಿಸಿಕೊಂಡರೆ, ವಿದ್ಯುತ್‌ ಬಿಲ್‌ ಕಡಿತಗೊಳ್ಳುತ್ತದೆ. ಸೋಲಾರ್‌ನಿಂದ ಕಂಪ್ಯೂಟರ್‌, ಕಚೇರಿಯಲ್ಲಿ ದೀಪಗಳು, ಇತರೆ ವಿದ್ಯುತ್‌ ಅವಲಂಬಿತ ಪರಿಕರಗಳ ನಿರ್ವಹಣೆಗೆ ಬಳಸುವ ವಿದ್ಯುತ್‌ನ್ನು ನಿಲ್ಲಿಸಬಹುದು. ಇದರಿಂದ ಸಾಕಷ್ಟು ಅನುಕೂಲವಾಗಲಿದ್ದು, ವಿದ್ಯುತ್‌ ಬಿಲ್‌ ಪಾವತಿ ಹೊರೆ ತಪ್ಪುತ್ತದೆ ಎಂದು ತಾಪಂ ಇಒ ವಸಂತ್‌ಕುಮಾರ್‌ ಹೇಳುತ್ತಾರೆ.

ಸೋಲಾರ್‌ ದೀಪಕ್ಕೆ ಪಂಚಾಯತಿ ಆದಾಯ ಬಳಕೆ : ರಿಯಿತಿಗಳಲ್ಲಿ ಬೀದಿದೀಪ ಸೇರಿದಂತೆ ಅವಶ್ಯಕತೆ ಇರುವಕಡೆಗಳಲ್ಲಿ ಹೈಮಾಸ್ಕ್ ದೀಪ ಅಳವಡಿಕೆಗೆ ತಲಾ5 ಲಕ್ಷ ರೂ. ಅನುದಾನಬಿಡುಗಡೆಗೆ ಜಿಪಂ ಸಿದ್ಧತೆ ನಡೆಸಿದೆ. ಹಂತ ಹಂತವಾಗಿ ಎಲ್ಲಾ ಪಂಚಾಯಿತಿಗಳಿಗೂ ಅನುದಾನ ವಿಸ್ತರಿಸುವ ಯೋಜನೆ ಇದ್ದು, ಪ್ರಾಥಮಿಕವಾಗಿ ಆಯಾ ಪಂಚಾಯಿತಿ ಆದಾಯವನ್ನು ಸೋಲಾರ್‌ ದೀಪ ಅಳವಡಿಕೆಗೆ ಬಳಸಲು ಜಿಪಂ ಮುಂದಾಗಿದೆ.

ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಪಂ ವ್ಯಾಪ್ತಿಯ 3 ಹಳ್ಳಿಗಳಿಗೆಪ್ರಾಯೋಗಿಕ ವಾಗ ಸೋಲಾರ್‌ ದೀಪಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಟ್ಟಕೋಟೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೂ ವಿಸ್ತಿರಿಸಲಾಗುವುದು. ಇದರಿಂದ ವಿದ್ಯುತ್‌ ಬಿಲ್‌ ಹೆಚ್ಚಳ ಕಡಿಮೆ ಮಾಡುವ ದೃಷ್ಟಿಕೋನ ಹೊಂದಲಾಗಿದೆ. ಎಚ್‌.ಸಿ.ಬೀರೇಶ್‌, ಬೆಟ್ಟಕೋಟೆ ಗ್ರಾಪಂ ಪಿಡಿಒ

ವಿದ್ಯುತ್‌ ಸ್ವಾವಲಂಬನೆ ಸಾಧಿಸುವಲ್ಲಿ ಇದೊಂದು ಮೈಲಿಗಲ್ಲಾಗಲಿದೆ. ಜಿಲ್ಲೆಯ 22 ಗ್ರಾಪಂ ವ್ಯಾಪ್ತಿಯಲ್ಲಿ ಸೋಲಾರ್‌ ಅಳವಡಿಕೆಗೆ ಅನುದಾನ ಬಿಡುಗಡೆಯಾಗಿದೆ. ಹಂತಹಂತವಾಗಿ ಎಲ್ಲಾ ಗ್ರಾಪಂಗೂ ವಿಸ್ತರಿಸುವ ಯೋಜನೆ ಇದಾಗಿದೆ. ವಿದ್ಯುತ್‌ ಬಿಲ್‌ ತಗ್ಗಿಸಲು ಇದೊಂದು ಉತ್ತಮ ಕಾರ್ಯಕ್ರಮ. ಎನ್‌.ಎಂ.ನಾಗರಾಜ್‌, ಜಿಪಂ ಸಿಇಒ

ದೇವನಹಳ್ಳಿ ತಾಲೂಕಿನ 24 ಗ್ರಾಪಂ ಕಚೇರಿಗಳಿಗೂ ಸೋಲಾರ್‌ ದೀಪ ಅಳವಡಿಸುವ ಯೋಜನೆ ರೂಪಿಸಲಾಗುತ್ತಿದೆ. ವಿಶ್ವನಾಥಪುರ ಗ್ರಾಪಂನ 2 ಹಳ್ಳಿಗಳಿಗೆ ಅಳವಡಿಸಲು ಕ್ರಿಯಾಯೋಜನೆ ರೂಪಿಸಿ ಅನುದಾನ ಕಾಯ್ದಿರಿಸಲಾಗಿದೆ. ಅಣ್ಣೇಶ್ವರ, ಕನ್ನಮಂಗಲ, ಜಾಲಿಗೆ ಇತರೆ ಗ್ರಾಪಂ ವ್ಯಾಪ್ತಿಯಲ್ಲಿ ಅಳವಡಿಕೆಗೆ ಕ್ರಿಯಾ ಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ. ಎಚ್‌.ಡಿ.ವಸಂತ್‌ಕುಮಾರ್‌, ಇಒ, ದೇವನಹಳ್ಳಿ ತಾಪಂ

 

-ಎಸ್‌.ಮಹೇಶ್‌

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.