ಭಜರಂಗಿ ಸೆಟ್‌ಗೆ ತಹಶೀಲ್ದಾರ್ ಭೇಟಿ

Team Udayavani, Jan 21, 2020, 5:22 PM IST

ನೆಲಮಂಗಲ: ಭಜರಂಗಿ 2 ಚಿತ್ರದ ಸೆಟ್‌ ಬೆಂಕಿಗಾಹುತಿಯಾದ ಹಿನ್ನೆಲೆ ತಹಶೀಲ್ದಾರ್‌ ನೇತೃತ್ವದ ಅಧಿಕಾರಿಗಳ ತಂಡ ಸ್ಟುಡಿಯೋ ಪರಿಶೀಲಿಸಿ ಸೆಟ್‌ ಹಾಕಲಾಗಿದ್ದ ಕಟ್ಟಡವನ್ನು ಸೀಜ್‌ ಮಾಡಿದ್ದಾರೆ.

ತಾಲೂಕಿನ ಶ್ರೀನಿವಾಸಪುರ ಗ್ರಾಪಂ ವ್ಯಾಪ್ತಿಯ ಮರಸರಹಳ್ಳಿ ಗ್ರಾಮದಲ್ಲಿನ ಮೋಹನ್‌ ಬಿ.ಕೆರೆ ಸ್ಟುಡಿಯೋ ಕುಮುದ್ವತಿ ನದಿಯಿಂದ 300 ಮೀ. ವ್ಯಾಪ್ತಿಯಲ್ಲಿದ್ದು ಗ್ರೀನ್‌ಬೆಲ್ಟ್ ಪ್ರದೇಶವಾಗಿದೆ. ಸ್ಟುಡಿಯೋ ನಡೆಸಲು ಯಾವುದೇ ಅನುಮತಿ ಪಡೆದಿಲ್ಲ ಚಿತ್ರೀಕರಣದ ವೇಳೆ ಮುಂಜಾಗೃತ ಕ್ರಮವಾಗಿ ಅನುಸರಿಸಬೇಕಾದ ಯಾವುದೇ ನಿಯಮಗಳನ್ನು ಪಾಲಿಸದಿರುವುದು ತಿಳಿದುಬಂದಿದೆ. ಇದನ್ನು ಮನಗಂಡ ಅಧಿಕಾರಿಗಳು ಸೆಟ್‌ ಕಟ್ಟಡವನ್ನು ಬೀಗವಾಕಿ ಸೀಜ್‌ ಮಾಡಿದ್ದು, ದಾಖಲೆ ನೀಡುವಂತೆ ಎಚ್ಚರಿಕೆ ನೀಡಿದ್ದಾರೆ.

ಪ್ರಭಾವಿಗಳ ನೆರಳು!: ಸ್ಟುಡಿಯೋ ನಡೆಸಲು ರಾಜ್ಯ ಹಾಗೂ ಸ್ಥಳೀಯ ಪ್ರಭಾವಿಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಿರುವಕಾರಣ ಅನುಮತಿಯಿಲ್ಲದೆ ರಾಜಾರೋಷವಾಗಿ ಚಿತ್ರಗಳ ಚಿತ್ರೀಕರಣ ನಡೆಸಲಾಗಿದೆ. ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲು ಪ್ರತಿದಿನಕ್ಕೆ 80 ಸಾವಿರ ಬಾಡಿಗೆ ಪಡೆಯಲಾಗುತಿದ್ದು, ಗ್ರಾಪಂ ಅನುಮತಿ ಪಡೆಯದೆ ಕಂದಾಯ ನೀಡದೆ ಕಾನೂನು ಬಾಹಿರವಾಗಿ ನಡೆಸಿಕೊಂಡು ಹೋಗುತಿದ್ದಾರೆ.

ಕಂದಾಯ ಇಲಾಖೆಯ ಬೆಂಬಲವೇ?: ಶ್ರೀನಿವಾಸಪುರ ಗ್ರಾಪಂನಿಂದ ಅಧಿಕಾರಿಗಳು ತಹಶೀಲ್ದಾರ್‌ರವರಿಗೆ ಸ್ಟುಡಿಯೋ ಅನಧಿಕೃತವಾಗಿ ನಡೆಯುತ್ತಿರುವ ಬಗ್ಗೆ 8 ತಿಂಗಳ ಹಿಂದೆ ಮೂರು ಭಾರಿ ಅರ್ಜಿ ನೀಡುವ ಮೂಲಕ ಗಮನಕ್ಕೆ ತಂದರು.

ಕಂದಾಯ ಇಲಾಖೆ ಅಧಿಕಾರಿಗಳು ಕಂಡರೂ ಕಾಣದಂತ್ತಿರುವುದರಿಂದ ಇವರೇ ಬೆಂಬಲವಾ ಗಿರುವ ಅನುಮಾನ ವ್ಯಕ್ತವಾಗಿದೆ. ಮೋಹನ್‌ ಬಿ.ಕೆರೆ ಸ್ಟುಡಿಯೋ ಸೀಜ್‌ ಮಾಡಿ ಕಾನೂನು ಕ್ರಮ ಕೈಗೊಳ್ಳುವ ಎಲ್ಲಾ ಲಕ್ಷಣಗಳು ಕಂಡುಬಂದಿದೆ. ಪಟ್ಟಣ ಸಮೀಪದ ಸ್ಟುಡಿಯೋ ಅನುಮತಿಯಿಲ್ಲದೆ ನಡೆಸುತ್ತಿರುವುದು ಸೆಟ್‌ ಬೆಂಕಿಬಿದ್ದ ಕಾರಣ ತಿಳಿದಿದೆ ಎಂದರೆ ಈ ರೀತಿಯ ಕಾನೂನಿಗೆ ವಿರುದ್ಧವಾಗಿ ನಿರ್ಮಾಣವಾಗಿರುವ ಸ್ಟುಡಿಯೋಗಳು , ಕಟ್ಟಡ ಹಾಗೂ ರೆಸಾರ್ಟ್‌ ಗಳು ತಾಲೂಕಿನ ಅಧಿಕಾರಿಗಳು ಹಾಗೂ ಸದಸ್ಯರ ನೆರಳಿನಲ್ಲಿ ಬಹಳಷ್ಟಿವೆ ಎಂಬುದು ಮನಗಾಣಬೇಕಾಗಿದೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದೊಡ್ಡಬಳ್ಳಾಪುರ:  ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಂದ ಪ್ರಸ್ತುತ ಖರೀದಿಸಲಾಗುತ್ತಿರುವ 10 ಕ್ವಿಂಟಲ್‌ ರಾಗಿ ಪ್ರಮಾಣವನ್ನು 15 ಕ್ವಿಂಟಲ್‌ಗೆ ಏರಿಸಬೇಕು....

  • ದೊಡ್ಡಬಳ್ಳಾಪುರ : ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿನೂತನ ಸಪ್ತಪದಿ ಯೋಜನೆಯ ಪ್ರಚಾರದ ಸಲುವಾಗಿ ತಾಲೂಕಿನ ಎಸ್‌.ಎಸ್‌ ಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯಸ್ವಾಮಿ...

  • ನೆಲಮಂಗಲ: ರಾಷ್ಟ್ರದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿ, ಶತ್ರು ರಾಷ್ಟ್ರಗಳ ಪರ ಘೋಷಣೆ ಕೂಗುವ ಪ್ರತಿಯೊಬ್ಬರಿಗೂ ದೇಶದ ಅನ್ನ, ನೀರು ನೀಡದೆ ಗಡಿಪಾರು ಮಾಡಬೇಕು ಎಂದು...

  • ದೇವನಹಳ್ಳಿ: ಯಾವುದೇ ಅಗ್ನಿ ಅವಘಡಗಳು ಸಂಭವಿಸಿದಾಗ ಮುನ್ನೆಚ್ಚರಿಕೆ ಕ್ರಮ ವಹಿಸಿದರೆ, ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಬಹುದೆಂದುಇಂಡಿಯನ್‌ ಆಯಿಲ್‌...

  • ನೆಲಮಂಗಲ : ರೈತರಿಗೆ ಎದುರಾಗುವ ಬೆಲೆ ಕುಸಿತ, ಬೆಳೆಹಾನಿಯ ಸಂಕಷ್ಟಗಳ ನಡುವೆ ಸರ್ವರ್‌ ಸಮಸ್ಯೆಯಿಂದಾಗಿ, ಸಾಲ ಸೌಲಭ್ಯಕ್ಕಾಗಿ ಬೆಳೆ ಆಧಾರ್‌ ಪತ್ರ ಪಡೆಯಲು ಅಲೆದಾಡುವ...

ಹೊಸ ಸೇರ್ಪಡೆ