ರಾಜ್ಯ ಸರ್ಕಾರದಿಂದ ತಾರತಮ್ಯ

ಬರಗಾಲ ಪಟ್ಟಿಯಿಂದ ಜಿಲ್ಲೆಯ 3 ತಾಲೂಕು ಕೈಬಿಟ್ಟಿದ್ದು ಖಂಡನೀಯ: ಸಾಸನೂರ

Team Udayavani, Jun 29, 2019, 11:25 AM IST

ಬಸವನಬಾಗೇವಾಡಿ: ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರನ್ನು ಉದ್ದೇಶಿಸಿ ಶಾಸಕ ಸೋಮನಗೌಡ ಪಾಟೀಲ ಮಾತನಾಡಿದರು.

ಬಸವನಬಾಗೇವಾಡಿ: ರಾಜ್ಯಸರಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣವೆಂಬಂತೆ ಏಕೆ ತಾರತಮ್ಯ ಮಾಡುತ್ತದೆ ಗೊತ್ತಿಲ್ಲ. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಆದರೆ ಬಸವನಬಾಗೇವಾಡಿ ತಾಲೂಕು ಮಾತ್ರ ಕೈ ಬಿಟ್ಟಿರುವುದು ಖಂಡನೀಯ ಎಂದು ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಹೇಳಿದರು.

ಶುಕ್ರವಾರ ಪಟ್ಟಣದ ಮಿನಿವಿಧಾನ ಸೌಧದ ಮುಂದೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ತಾಲೂಕನ್ನು ಬರಗಾಲ ಪಟ್ಟಿಯಿಂದ ಕೈ ಬಿಟ್ಟಿದ್ದು ಸರಿಯಲ್ಲ. ಇದು ಮೂರು ತಾಲೂಕಿನ ರೈತರಿಗೆ ರಾಜ್ಯಸರಕಾರ ವಂಚನೆ ಮಾಡಿದಂತಾಗಿದೆ. ಬರಗಾಲ ಪಟ್ಟಿಗೆ ಸೇರಿಸಿ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡುವಂತೆ ಸರಕಾರದ ಮೇಲೆ ಒತ್ತಡ ತರಲಾಗುವುದು. ಒಂದು ವೇಳೆ ನನ್ನ ಮನವಿಗೆ ರಾಜ್ಯಸರಕಾರ ಸ್ಪಂದನೆ ಮಾಡದಿದ್ದರೆ ರೈತರೊಂದಿಗೆ ಸೇರಿಕೊಂಡು ಹೋರಾಟ ಮಾಡಲು ಸಿದ್ದ ಎಂದು ಹೇಳಿದರು.

ಜಿಲ್ಲಾಧಿಕಾರಿ ಭೇಟಿ: ಶುಕ್ರವಾರ ಪಟ್ಟಣದ ಮಿನಿವಿಧಾನ ಸೌಧದ ಮುಂದೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಭೇಟಿ ನೀಡಿ ಧರಣಿಯನ್ನು ಹಿಂಪಡೆಯುವಂತೆ ಮನವಿ ಮಾಡಿದರು.

ಧರಣಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ನಾವು ರಾಜ್ಯ ಸರಕಾರಕ್ಕೆ ಸರಿಯಾದ ಮಾಹಿತಿ ಕಳಿಸಿದ್ದೇವೆ. ನಿಮ್ಮ ಮನವಿಯನ್ನು ಮತ್ತೂಮ್ಮೆ ರಾಜ್ಯ ಸರಕಾರಕ್ಕೆ ಕಳಿಸುತ್ತೇವೆ. ಆದ್ದರಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ಕೈ ಬಿಡುವಂತೆ ಮನವಿ ಮಾಡಿದರು. ಇದಕ್ಕೆ ರೈತ ಸಂಘದ ಮುಖಂಡರು ನಮಗೆ ರಾಜ್ಯಸರಕಾರದಿಂದ ಅಧಿಕೃತ ಆದೇಶ ಬರುವರೆಗೂ ಆಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಿಂದೆ ತೆಗೆಯುವ ಮಾತೆಯಿಲ್ಲ ಎಂದು ಹೇಳಿದರು.

ನಮ್ಮ ಆಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಂದು ಭೇಟಿ ನೀಡಿದ್ದು ಸ್ವಾಗತಾರ್ಹ. ಆದಷ್ಟು ಬೇಗ ತಾವು ಕೂಡಾ ರಾಜ್ಯ ಸರಕಾರದ ಮೇಲೆ ಒತ್ತಡ ತಂದು ಕೈ ಬಿಟ್ಟು ಹೋಗಿರುವ ಬರಗಾಲ ಪಟ್ಟಿಯಿಂದ ತಾಲೂಕುಗಳನ್ನು ಪುನಃ ಸೇರ್ಪಡೆ ಮಾಡಿಸುವಂತೆ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ವಕೀಲರ ಬೆಂಬಲ: ಶುಕ್ರವಾರ ವಕೀಲರು ಕೋರ್ಟ್‌ ಕಲಾಪದಿಂದ ದೂರ ಉಳಿದು ರೈತರು ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ರಾಜ್ಯಸರಕಾರಕ್ಕೆ ಒತ್ತಾಯಿಸಿದರು.

ನ್ಯಾಯವಾಗಳ ಸಂಘದ ತಾಲೂಕಾಧ್ಯಕ್ಷ ಎನ್‌.ಎಸ್‌. ಪಾಟೀಲ, ನ್ಯಾಯವಾದಿಗಳಾದ ಆರ್‌.ವಿ. ಗುತ್ತರಗಿಮಠ, ಮಲ್ಲಿಕಾರ್ಜುನ ಗೊಳಸಂಗಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಕಳೆದ 4-5 ವರ್ಷದಿಂದ ಭೀಕರ ಬರಗಾಲಕ್ಕೆ ತುತ್ತಾಗಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಬಸವನಬಾಗೇವಾಡಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶದಿಂದ ಕೈ ಬಿಟ್ಟಿರುವುದು ರೈತರಿಗೆ ತುಂಬಾ ಅನ್ಯಾಯವಾಗಿದೆ ಎಂದು ಹೇಳಿದರು.

ನ್ಯಾಯವಾದಿಗಳಾದ ಪ್ರಕಾಶ ಗಬ್ಬೂರ, ರವಿ ರಾಠೊಡ, ಸುರೇಶ ಚಿಂಚೋಳಿ, ವೀರಣ್ಣ ಮರ್ತೂರ, ಮಲ್ಲಿಕಾರ್ಜುನ ದೇವರಮನಿ, ಜಿ.ಜಿ. ಬಿಸನಾಳ, ಪಿ.ಎಚ್. ಹಡಪದ, ಶಿವಾನಂದ ಒನರೆಟ್ಟಿ, ಆರ್‌.ಎನ್‌. ಮ್ಯಾಗೇರಿ, ಆರ್‌.ಎಸ್‌. ಬಂಡಿಪಾಟೀಲ, ಪಿ.ಪಿ. ರಾಠೊಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಧರಣಿಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಲ್. ಪಾಟೀಲ, ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ, ಅಶೋಕ ಹಾರಿವಾಳ, ಬಿ.ಎಸ್‌. ಹೊರ್ತಿ, ಕೃಷ್ಣಪ್ಪ ಬಮರೆಡಿ, ತಾಲೂಕು ಉಪಾಧ್ಯಕ್ಷ ಹೊನಕೆರೆಪ್ಪ ತೆಲಗಿ, ಸಂಜಯ ಕುಲಕರ್ಣಿ ಬಸಣ್ಣ ಗುರಡ್ಡಿ, ಕಲ್ಲಪ್ಪ ಕುಂಬಾರ, ರಾಮಣ್ಣ ಚಿಮ್ಮಲಗಿ, ಸಿದ್ದಪ್ಪ ಹಿಪ್ಪರಗಿ, ಕಾಸಪ್ಪ ಶಿವಣಗಿ, ಅಡಿವೇಪ್ಪ ಉಪ್ಪಾರ, ಯಲ್ಲಪ್ಪ ಯಂಬತ್ನಾಳ, ಶಾಂತಗೌಡ ಬಿರಾದಾರ, ರುದ್ರಪ್ಪ ಮಡಿಕೇಶ್ವರ, ಸಿದ್ದಪ್ಪ ಆಸಂಗಿ ಭಾಗವಹಿಸಿದ್ದರು.

ಬಸವನಬಾಗೇವಾಡಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ ಮೂರು ದಿನ ಪೂರೈಸಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.


ಈ ವಿಭಾಗದಿಂದ ಇನ್ನಷ್ಟು

  • ಅಳ್ನಾವರ: ಮಕ್ಕಳು ದೇಶದ ಆಸ್ತಿ ಇದ್ದಂಗೆ. ದೇಶದ ಭವಿಷ್ಯ ನಿರ್ಮಿಸುವ ಗುರುತರ ಜವಾಬ್ದಾರಿ ಅವರ ಹೆಗಲ ಮೇಲಿದೆ. ಅಂತಹ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವುದು ನಮ್ಮೆಲ್ಲರ...

  • ದಾವಣಗೆರೆ: ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಡಿ.16 ರಂದು ದಾವಣಗೆರೆಗೆ ಆಗಮಿಸುವರು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ತಿಳಿಸಿದ್ದಾರೆ. ನಳೀನ್‌...

  • ದಾವಣಗೆರೆ: ಮನುಷ್ಯ ಉತ್ಪಾದಿಸುವ ತಂಬಾಕು ಇಂದು ಆತನನ್ನೇ ಬಲಿ ಪಡೆಯುತ್ತಿದೆ. ತಂಬಾಕನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳುವುದರ ಮೂಲಕ ಮನುಷ್ಯ ಅದರ ದಾಸನಾಗುತ್ತಿದ್ದಾನೆ...

  • ಹುಬ್ಬಳ್ಳಿ: ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆಗೆ ಮುಂದಾಗುತ್ತಿದ್ದಂತೆ ಆಂತರಿಕ ಭದ್ರತಾ ಪಡೆ (ಐಎಸ್‌ಡಿ) ಹಾಗೂ ಪೊಲೀಸ್‌ ಇಲಾಖೆಯಿಂದ ಹು-ಧಾ ಅವಳಿ ನಗರ...

  • ಬೆಂಗಳೂರು: ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಕಾನೂನು ಜಾರಿ, ಅಂಬೇಡ್ಕರ್‌ ಸ್ಮಾರ್ಟ್‌ ಕಾರ್ಡ್‌ ವಿತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ...

ಹೊಸ ಸೇರ್ಪಡೆ