ಪ್ರವಾಹ ಪೀಡಿತ ರಾಮದುರ್ಗಕ್ಕೆ ಭೇಟಿ ನೀಡಿದ ಬಿ ಎಸ್ ಯಡಿಯೂರಪ್ಪ

Team Udayavani, Sep 10, 2019, 3:54 PM IST

ಬೆಳಗಾವಿ; ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಗಳವಾರ ಪ್ರವಾಹ ಪೀಡಿತ ರಾಮದುರ್ಗ ತಾಲೂಕಿನ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದರು.

ರಾಮದುರ್ಗ ತಾಲೂಕಿನ ದೊಡ್ಡ ಹಂಪಿಹೋಳಿ ಗ್ರಾಮಕ್ಕೆ ಮಧ್ಯಾಹ್ನ 2.30 ಕ್ಕೆ ಆಗಮಿಸಿದ ಮುಖ್ಯಮಂತ್ರಿ ಗಳು ನೀರಿನಲ್ಲಿ ನಿಂತಿರುವ ಶಾಲೆ ಹಾಗೂ ಮನೆಗಳನ್ನು ವೀಕ್ಷಿಸಿದರು. ನಂತರ ಚಿಕ್ಕ ಹಂಪಿಹೋಳಿ ಗ್ರಾಮದಲ್ಲಿ ಬಿದ್ದಿರುವ ಮನೆಗಳ ಪರಿಶೀಲನೆ ಮಾಡಿದರು. ಬಳಿಕ ಸುರೇಬಾನ ಗ್ರಾಮದಲ್ಲಿನ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಸಂತ್ರಸ್ತರಿಗೆ ಎಲ್ಲ ರೀತಿಯ ಪರಿಹಾರ ಒದಗಿಸುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಸೋಮವಾರದಂದು ಗಂಜಿ ಕೇಂದ್ರದಲ್ಲಿದ್ದು ಜ್ವರದಿಂದ ಮೃತಪಟ್ಟಿದ್ದ ಬಾಲಕ ಅಬ್ದುಲ್ ಎಂಬ ಬಾಲಕನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಐದು ಲಕ್ಷ ರೂ ಗಳ ಪರಿಹಾರದ ಚೆಕ್ ವಿತರಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ