ಬಿಸಿಲನಾಡಿನ ಕೆರೆಗಳೆಲ್ಲ ಈ ಬಾರಿ ಭರ್ತಿ!

ಕಂಗೆಟ್ಟಿದ್ದ ರೈತರ ಆತಂಕ ದೂರಒಟ್ಟು 89 ಕೆರೆಗಳಲ್ಲಿ ಬಹುತೇಕ ನೀರು ಸಂಗ್ರಹನೀರಿನ ಮಟ್ಟ ಏರಿಕೆ

Team Udayavani, Nov 4, 2019, 2:56 PM IST

„ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ಮುಂಗಾರಿನ ಅವಕೃಪೆಯಿಂದ ಕಂಗೆಟ್ಟಿದ್ದ ರೈತರಿಗೆ ಹಿಂಗಾರಿನಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಗಣಿ ಜಿಲ್ಲೆಯಲ್ಲಿನ ಬಹುತೇಕ ಕೆರೆಗಳು ಭರ್ತಿಯಾಗಿ ರೈತರ ಆತಂಕವನ್ನು ದೂರ ಮಾಡಿದೆ.

ಹೌದು…! ಪ್ರಸಕ್ತ ವರ್ಷ ಮಾನ್‌ ಸೂನ್‌ ಪೂರ್ವ (ಮುಂಗಾರು) ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯ ತುಂಬುವುದೇ ಎಂಬ ಅನುಮಾನ ಕಾಡಿತ್ತು. ಮಾನ್ಸೂನ್‌ ಆರಂಭವಾದ ನಂತರ ಉತ್ತಮ ಮಳೆ ಆಗಲಿದೆ ಎಂಬ ರೈತರ ನಿರೀಕ್ಷೆಯೂ ಹುಸಿಯಾಗಿತ್ತು.

ಆದರೆ, ನಡೆದಿದ್ದೇ ಬೇರೆ. ಮಾನ್‌ಸೂನ್‌ ಕೊನೆ ದಿನಗಳು, ಹಿಂಗಾರಿನ ಆರಂಭದ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿ ತುಂಗಭದ್ರಾ ಜಲಾಶಯ ಹಾಗೂ ಬಹುತೇಕ ಕೆರೆಗಳು ಈ ಬಾರಿ ಭರ್ತಿಯಾಗಿದೆ.

ಹಲವು ಕಡೆ ಕೆರೆಗಳು ಕೋಡಿ ಹರಿದು ಅಲ್ಪಸ್ವಲ್ಪ ಅವಾಂತರ ಸೃಷ್ಟಿಸಿದ್ದು ಒಂದೆಡೆಯಾದರೆ, ವರುಣನ ಮುನಿಸಿನಿಂದಾಗಿ ರೈತರಲ್ಲಿ ಮಡುಗಟ್ಟಿದ್ದ ಆತಂಕ ದೂರವಾದಂತಾಗಿದೆ. ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಬಹುತೇಕ ಕೆರೆಗಳು ಈ ವರ್ಷ ನೀರು ಕಂಡಿವೆ. ಒಟ್ಟು 89 ಕೆರೆಗಳ ಪೈಕಿ 6 ಕೆರೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕೆರೆಗಳು ಭರ್ತಿಯಾಗಿವೆ.

ಇದು ರೈತರು, ಗ್ರಾಮೀಣ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ 89 ಕೆರೆಗಳಲ್ಲಿ 9 ಕೆರೆಗಳು ಸಂಪೂರ್ಣ ಭರ್ತಿಯಾಗಿ ಕೋಡಿ ಹರಿದಿವೆ. ಇನ್ನು ಹಡಗಲಿ ತಾಲೂಕಿನ ಹಿರೇಹಡಗಲಿ, ದೇವಗೊಂಡನಹಳ್ಳಿ, ಬೂದನೂರು ಕೆರೆಗಳು ಭರ್ತಿಯಾಗಿವೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು, ಬಲ್ಲಹುಣಸಿ ಕೆರೆಗಳಲ್ಲೂ ಶೇ. 100ರಷ್ಟು ನೀರು ಸಂಗ್ರಹವಾಗಿದೆ. ಹೊಸಪೇಟೆ ತಾಲೂಕಿನ ಹೊಸ ಚಿನ್ನಾಪುರ, ಸಂಡೂರು ತಾಲೂಕಿನ ಓಬಳಾಪುರ, ಜೋಗಾ, ಕೋಡಾಲು ಕೆರೆಗಳು ಸಂಪೂರ್ಣ ಭರ್ತಿ ಆಗಿವೆ. ಹೂವಿನ ಹಡಗಲಿಯ ಜಿ. ಕೋಡಿಹಳ್ಳಿ ಕೆರೆ ಶೇ.70, ಹಗರನೂರು ಕೆರೆ ಶೇ.60, ಹಗರಿಬೊಮ್ಮನಹಳ್ಳಿ ತಾಲೂಕಿನ ಜಿ.ಕೋಡಿಹಳ್ಳಿ ಕೆರೆ ಶೇ. 80ರಷ್ಟು, ಹೊಸಕೆರೆ ಶೇ.60ರಷ್ಟು ಭರ್ತಿ ಆಗಿವೆ.

ಹೊಸಪೇಟೆ ತಾಲೂಕಿನ ಡಿ.ಎನ್‌. ಕೆರೆ ಶೇ.75, ಕಾಕುಬಾಳ ಕೆರೆ ಶೇ. 80, ನಲ್ಲಾಪುರದ ಎರಡೂ ಕೆರೆಗಳು ಶೇ. 85, ನಾಗಲಾಪುರ ಕೆರೆ ಶೇ. 60ರಷ್ಟು ಭರ್ತಿ ಆಗಿವೆ. ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕೆರೆ ಶೇ. 63ರಷ್ಟು ನೀರು ಕಂಡಿವೆ. ಸಂಡೂರು ತಾಲೂಕಿನ ಸಿ.ಕೆ. ಹಳ್ಳಿ ಕೆರೆ ಶೇ. 70ರಷ್ಟು, ರಾಘವಪುರ ಕೆರೆ ಶೇ. 60ರಷ್ಟು ಭರ್ತಿ ಆಗಿವೆ. ಬಳ್ಳಾರಿ ತಾಲೂಕಿನ ಬೆಳಗಲ್ಲು ಕೆರೆ ಶೇ. 44, ಮುಂಡ್ರಿಗಿ ಕೆರೆ ಶೇ. 47, ಹೊನ್ನಳ್ಳಿ ಕೆರೆ ಶೇ. 44, ಸಂಜೀವರಾಯನಕೋಟೆ ಕೆರೆ ಶೇ. 49, ಜಾನೆಕುಂಟೆ ಕೆರೆ ಶೇ. 44, ಹೊನ್ನಳ್ಳಿ ತಾಂಡಾ ಕೆರೆ ಶೇ. 46, ಹಲಕುಂದಿ ಕೆರೆ ಶೇ.
46, ಹರಗಿನಡೋಣಿ ಕೆರೆ ಶೇ.44 ರಷ್ಟು ತುಂಬಿವೆ.

ಹೊಸಪೇಟೆ ತಾಲೂಕಿನ ಶೆಟ್ಟಿಕೆರೆ ಶೇ. 40, ಬ್ಯಾಲಕುಂದಿ ಕೆರೆ ಶೇ. 50, ಜೋಗಯ್ಯನ ಕೆರೆ ಶೇ. 50ರಷ್ಟು ಭರ್ತಿ ಆಗಿವೆ. ಹೂವಿನಹಡಗಲಿ ತಾಲೂಕು ತಳಕಲ್ಲಿನ ಕೆರೆ ಶೇ.35, ದಾಸನಹಳ್ಳಿ ಕೆರೆ ಶೇ.40, ಹಗರಿಬೊಮ್ಮನಹಳ್ಳಿಯ ದಶ್ಮಾಪುರ ಕೆರೆ ಶೇ. 50ರಷ್ಟು, ಹನಸಿ ಕೆರೆ ಶೇ. 35, ಮಾಗಿಮಾವಿನಹಳ್ಳಿಯ ಸಣ್ಣ ಕೆರೆ ಶೇ. 35, ಚಿತ್ರಂಪಳ್ಳಿ ಕೆರೆ ಶೇ. 40, ಕೂಡ್ಲಿಗಿ ತಾಲೂಕಿನ ಬೈರದೇವರಗುಡ್ಡ ಕೆರೆ, ಕರ್ನಾರ ಹಟ್ಟಿ ಕೆರೆ ಶೇ.50, ಚೌಡಾಪುರ ಕೆರೆ ಶೇ. 35, ಸುಂಕದಕಲ್ಲು ಕೆರೆ ಶೇ.45, ರಾಯಪುರ ಕೆರೆ ಶೇ. 35, ಟಿ. ಬಸಾಪುರದ ಎರಡೂ ಕೆರೆಗಳು, ತಿಮ್ಲಾಪುರ, ಗಂಡಬೊಮ್ಮನಹಳ್ಳಿ ಕೆರೆ ಶೇ.40, ಇಮದಾಪುರ ಕೆರೆ ಶೇ. 32ರಷ್ಟು ಭರ್ತಿ ಆಗಿವೆ.

ಉಳಿದಂತೆ 33 ಕೆರೆಗಳು ಶೇ. 30ಕ್ಕೂ ಹೆಚ್ಚು, 29 ಕೆರೆಗಳು ಶೇ. 30ರಷ್ಟು ನೀರು ಭರ್ತಿಯಾಗಿವೆ. ಮಳೆಗಾಲ ಆರಂಭವಾದ ಸಂದರ್ಭದಲ್ಲಿ ಚಿಂತೆಗೀಡಾಗಿದ್ದ ರೈತರು ಇದೀಗ ಸಂತಸದಲ್ಲಿದ್ದಾರೆ. ಒಂದು ಕಡೆ ಹಿಂಗಾರು ಬೆಳೆ ನಿರೀಕ್ಷಿತ ಮಟ್ಟದಲ್ಲಿ ಫಸಲು ಕೊಡಲಾರದು ಎಂದು ತಿಳಿದು ಚಿಂತಿತರಾಗಿದ್ದರೂ ಕೆರೆಗಳ ನೀರಿನ ಮಟ್ಟದಿಂದ ಖುಷಿಯಾಗಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ