ದಲಿತ ಕೇರಿಯಲ್ಲಿ ಉಡುಪಿ ಶ್ರೀಗಳ ಪಾದಯಾತ್ರೆ

ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೊಣ: ಪೇಜಾವರ ಶ್ರೀ

Team Udayavani, Jan 31, 2021, 3:17 PM IST

31-15

ಬಳ್ಳಾರಿ: ನಗರದ ದಲಿತಕೇರಿ ಹರಿಶ್ಚಂದ್ರ·ನಗರಕ್ಕೆ ಉಡುಪಿಯ ಪೇಜಾವರ ಮಠದವಿಶ್ವಪ್ರಸನ್ನ ತೀರ್ಥ ಶ್ರೀಪಾದ ಶ್ರೀಗಳು
ಶನಿವಾರ ಭೇಟಿ ನೀಡಿ ಪಾದಯಾತ್ರೆ ನಡೆಸುವಮೂಲಕ ಜಾತಿ ಸಾಮರಸ್ಯ ಮೆರೆದರು.

ಶ್ರೀಗಳ ಸ್ವಾಗತಕ್ಕಾಗಿ ಸುಮಾರು·ಒಂದು ಕಿಮೀ ವರೆಗಿನ ರಸ್ತೆಯ ಎರಡೂ·ಬದಿ ತಳಿರು ತೋರಣಗಳನ್ನು ಕಟ್ಟಿ
ಸಿಂಗರಿಸಲಾಗಿತ್ತು. ಮನೆಗಳ ಅಂಗಳದಲ್ಲಿ·ಸ್ವತ್ಛಗೊಳಿಸಿ ಚಿತ್ತಚಿತ್ತಾರದ ರಂಗೋಲಿ ಹಾಕಿ·ಅಲಂಕರಿಸಲಾಗಿತ್ತು. ಸ್ವಲ್ಪ ತಡವೆನಿಸಿದರೂ·ದಲಿತ ಕೇರಿ ಹರಿಶ್ಚಂದ್ರನಗರಕ್ಕೆ ಆಗಮಿಸಿ·ಶ್ರೀಗಳನ್ನು ಸ್ಥಳೀಯ ಮಹಿಳೆಯರು ಕುಂಭ·ಕಳಸವನ್ನು ಹಿಡಿದು ಸ್ವಾಗತಿಸಿದರು. ಕೇರಿಯಲ್ಲಿ·ಸುಮಾರು 1 ಕಿಮೀವರೆಗೆ ಪಾದಯಾತ್ರೆ·ನಡೆಸಿದ ಶ್ರೀಗಳಿಗೆ ಹೂವು ಹಾಕಿ, ಕಾಲಿಗೆ·ನಮಸ್ಕರಿಸುತ್ತಲೇ ಸ್ವಾಗತಿಸಿದರು.
ಬಳಿಕ ಕೇರಿಯ ರಾಮು, ಉಮೇಶ್‌,·ಎರ್ರಿಸ್ವಾಮಿ, ನಾಗರಾಜ್‌, ಹೊನ್ನೂರಪ್ಪ·ಅವರು ತಮ್ಮ ತಮ್ಮ ಮನೆಗಳಲ್ಲಿ ದಂಪತಿ·ಸಮೇತ ಶ್ರೀಗಳಿಗೆ ಪಾದಪೂಜೆ ಮಾಡಿದರು.

ಶ್ರೀಗಳ ಪಾದಗಳನ್ನು ತೊಳೆದು, ಅರಿಶಿಣ·ಕುಂಕುಮ, ವಿಭೂತಿಯನ್ನು ಹಚ್ಚಿ, ಮಾಲೆ·ಹಾಕಿ ಪೂಜೆ ಸಲ್ಲಿಸಿದರು. ಪಾದಪೂಜೆ
ಸಲ್ಲಿಸಿದ ಭಕ್ತರಿಗೆ ಶ್ರೀಗಳು ಮಂತ್ರಾಕ್ಷತೆ ಹಾಕಿ·ಆಶೀರ್ವಚನ ನೀಡಿದರು. ಬಳಿಕ ನಡೆದ·ವೇದಿಕೆ ಕಾರ್ಯಕ್ರಮದಲ್ಲಿ ಆಶೀರ್ವಚನ·ನೀಡಿದ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದ ಶ್ರೀಗಳು,·ಭರತ ಭೂಮಿ ಸಾಮಾನ್ಯವಾದುದಲ್ಲ. ಮೋಕ್ಷ·ಪ್ರದವಾಗಿರುವಂತಹ ಅನೇಕ ಕ್ಷೇತ್ರಗಳು·ಇಲ್ಲಿವೆ. ಅದರಲ್ಲಿ ಅಯೋಧ್ಯಾವನ್ನು·ಪ್ರಥಮವಾಗಿ ಪರಿಗಣಿಸಲಾಗುತ್ತದೆ.·ಭಗವಂತನೇ ಶ್ರೀರಾಮನ ರೂಪದಲ್ಲಿ·ಅವತರಿಸಿರುವ ಅಯೋಧ್ಯೆಯಲ್ಲಿ ಭವ್ಯವಾದಶ್ರೀರಾಮ ಮಂದಿರ ಇತ್ತು. ವಿದೇಶಿಯರ·ಆಕ್ರಮಣದಿಂದ ಅದು ಹಾಳಾಗಿತ್ತು. ಸನಾತನ·ಹಿಂದೂ ಧರ್ಮಿಯರ ಶಾಂತಿಯುತ
ಹೋರಾಟದಿಂದಾಗಿ ಸುಪ್ರೀಂಕೋರ್ಟ್‌·ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಇತ್ತು·ಎಂದು ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ·ಹಿಂದೂಗಳ ಶತಮಾನಗಳ ಕನಸು ಈಗ·ನನಸಾಗುವ ಸಮಯ ಬಂದಿದೆ ಎಂದರು.

ರಾಮ ಮಂದಿರ ನಿರ್ಮಿಸುವುದಾಗಿ ಹಲವು ಶ್ರೀಮಂತರು ಮುಂದ ಬಂದಿದ್ದರಾದರೂ ಮಂದಿರವನ್ನು ಒಬ್ಬರಿಂದ ನಿರ್ಮಿಸುವುದು ಸರಿಯಲ್ಲ. ಎಲ್ಲರೂ ಸೇರಿ ನಿರ್ಮಿಸಬೇಕು. ಹಾಗಾಗಿ ಮಂದಿರ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ನಮ್ಮೆಲ್ಲರ ಮೇಲೂ ರಾಮದೇವರ ಅನುಗ್ರಹ
ಇರಲಿದೆ. ಟಿವಿ, ರೇಡಿಯೋಗಳಿಂದ ಬದುಕಲ್ಲಿ ಶಾಂತಿ ನೆಮ್ಮದಿ ಕೊಡಲಾಗುವುದಿಲ್ಲ. ಸಂಸ್ಕೃತಿಯ ಪುನರುತ್ಥಾನದಿಂದ ಮಾತ್ರ
ಬದುಕಲ್ಲಿ ಶಾಂತಿ ನೆಮ್ಮದಿ ಸಿಗಲಿದೆ. ಎಲ್ಲರ ಮನೆಯಲ್ಲಿ ನಿತ್ಯ ರಾಮನಾಮ ಜಪ ಮಾಡಬೇಕು. ಮನೆಯಲ್ಲಿ ಏನೇ ಒಳ್ಳೆಯ
ಕೆಟ್ಟ ಕೆಲಸಗಳನ್ನು ಮಾಡಿದಾಗಲೂ ರಾಮ ರಾಮ ಎಂದು ರಾಮನಾಮ ಸ್ಮರಿಸಬೇಕು. ಅದು ನಮ್ಮ ಬದುಕಿನ ಮಂತ್ರವಾಗಬೇಕು.
ರಾಮ ಮಂದಿರ ಶತ ಶತಮಾನಗಳ ಕಾಲ ಶಾಶ್ವತವಾಗಿ ಹಿಂದೂ ಧರ್ಮಿಯರ ಕೈಯಲ್ಲೇ ಉಳಿಯಬೇಕು. ನಮ್ಮ ಸಂಸ್ಕೃತಿ, ನಮ್ಮ ಸಂತತಿಯನ್ನು ಸಹ ಹಾಗೆ ಬೆಳೆಸಬೇಕು. ಇಲ್ಲದಿದ್ದಲ್ಲಿ ಇನ್ನೆರಡು ಶತಮಾನಗಳಲ್ಲಿ
ಇನ್ನೊಬ್ಬರ ಪಾಲಾಗಲಿದೆ ಎಂದು ಆಶೀರ್ವಚನ ನೀಡಿದರು.

ಈ ವೇಳೆ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್‌.ಹನುಮಂತಪ್ಪ, ಪಾಲಿಕೆ ಮಾಜಿ ಸದಸ್ಯ ಶ್ರೀನಿವಾಸ್‌ ಮೋತ್ಕರ್‌, ರಾಬಕೋ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ ರೆಡ್ಡಿ, ಸ್ಥಳೀಯ ಯುವ ಮುಖಂಡರಾದ ಷಣ್ಮುಖ, ಉಮೇಶ್‌ ಇದ್ದರು.

ಓದಿ : ಟೊಯೋಟಾ ಬಿಕ್ಕಟ್ಟು ಶಮನಕ್ಕೆ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕು: ಸಿದ್ದರಾಮಯ್ಯ

ಟಾಪ್ ನ್ಯೂಸ್

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

1-wqewqe

Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

ಹುಚ್ಚು ರಾಜಕಾರಣಕ್ಕೆ ಸಿದ್ದು ದೊಡ್ಡ ಬೆಲೆ ತೆರಬೇಕಾದೀತು: ಡಿವಿಎಸ್‌

ಹುಚ್ಚು ರಾಜಕಾರಣಕ್ಕೆ ಸಿದ್ದು ದೊಡ್ಡ ಬೆಲೆ ತೆರಬೇಕಾದೀತು: ಡಿವಿಎಸ್‌

dvs

Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ

Bellary; ದಲಿತಕೇರಿಯಲ್ಲಿ ಒಡಾಡಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್

Bellary; ದಲಿತಕೇರಿಯಲ್ಲಿ ಒಡಾಡಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್

ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ

ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

1-wqewqe

Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.