ಜನಪ್ರತಿನಿಧಿಗಳ ಅಣಕು ಶವಯಾತ್ರೆ
Team Udayavani, Jan 2, 2021, 4:16 PM IST
ಬಳ್ಳಾರಿ: ಜಿಲ್ಲಾ ವಿಭಜನೆಯನ್ನು ಖಂಡಿಸಿ ನಗರದ ಡಿಸಿ ಕಚೇರಿ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ ಶುಕ್ರವಾರ 19ನೇ ದಿನ ಪೂರ್ಣಗೊಳಿಸಿದ್ದು,ಧರಣಿಗೆ ಬೆಂಬಲಿಸಿದ ಅಪ್ಪು ಸೇವಾ ಸಮಿತಿ ವತಿಯಿಂದ ಜಿಲ್ಲೆಯ ಜನಪ್ರತಿನಿಧಿ ಗಳ ಅಣಕು ಶವಯಾತ್ರೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿತು.
ಅಣಕು ಶವವನ್ನು ಸಿದ್ಧಪಡಿಸಿದ್ದ ಸಮಿತಿಯ ಸದಸ್ಯರು, ಅದರ ಮೇಲೆ ಷಂಡ ಜನಪ್ರತಿನಿಧಿ ಗಳ ಅಣಕುಶವಯಾತ್ರೆ ಎಂದು ಬರೆದು ಜಿಲ್ಲೆಯ ಜನಪ್ರತಿನಿ ಧಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳಿಗೆ, ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗುವುದರ ಜತೆಗೆ ಜಿಲ್ಲೆ ಜನಪ್ರತಿನಿಧಿಗಳೆಲ್ಲರೂ ಡಿ. 31ರಂದು ಮಧ್ಯರಾತ್ರಿ ಸತ್ತು ಹೋಗಿದ್ದಾರೆ ಎಂದು ಗೋಳಾಡಿವ್ಯಂಗ್ಯವಾಡುವ ಮೂಲಕ ಜಿಲ್ಲೆ ವಿಭಜನೆ ಬಗ್ಗೆ ಧ್ವನಿ ಎತ್ತದ, ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿರುವ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಗೂಬೆಂಬಲ ವ್ಯಕ್ತಪಡಿಸಿದ ಜಿಲ್ಲೆಯ ಜನಪ್ರತಿನಿಧಿ ಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಧರಣಿ ಸ್ಥಳದಿಂದ ಡಿಸಿ ಕಚೇರಿವರೆಗೆ ಅಣಕು ಶವಯಾತ್ರೆ ಮೂಲಕ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಸಿದ್ಮಲ್ ಮಂಜುನಾಥ್,ಪಾಲಿಕೆ ಮಾಜಿ ಸದಸ್ಯರಾದ ಪರ್ವಿನ್‌ಬಾನು, ಬಿ.ಕೆ.ಕೆರೆಕೋಡಪ್ಪ,ಶಿವರಾಜ್, ನಾಗಮ್ಮ, ಬೆಣಕಲ್ ಬಸವರಾಜಗೌಡ, ಶಂಕರ್, ಸಮಿತಿ ಮುಖಂಡರಾದ ಸಿರಿಗೇರಿ ಪನ್ನಾರಾಜ್, ಟಿ.ಜಿ. ವಿಠuಲ್, ಕೆ.ಎರ್ರಿಸ್ವಾಮಿ,ಕುಡತಿನಿ ಶ್ರೀನಿವಾಸ್, ಬಿ.ಎಂ.ಪಾಟೀಲ್ ಸೇರಿದಂತೆ ಹಲವಾರು ಜನರು ಇದ್ದರು.
ದೆಹಲಿ ಹೋರಾಟ ಬೆಂಬಲಿಸಿ ಪ್ರತಿಜ್ಞಾ ದಿನ ಆಚರಣೆ :
ಬಳ್ಳಾರಿ: ಕೇಂದ್ರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿ ತಾಲೂಕಿನ ಕೋಳೂರು,ಶ್ರೀಧರಗಡ್ಡೆ, ಕೊರ್ಲಗುಂದಿ ಗ್ರಾಮಗಳಲ್ಲಿರೈತ ಕೃಷಿ ಕಾರ್ಮಿಕ ಸಂಘಟನೆಯಿಂದಶುಕ್ರವಾರ ಪ್ರತಿಜ್ಞಾ ದಿನವನ್ನು ಆಚರಿಸಲಾಯಿತು.
ಕೇಂದ್ರ ಬಿಜೆಪಿ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಲು ಆಗ್ರಹಿಸಿ”ಮರಣಶಾಸನವಾದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು.ಕಾರ್ಪೋರೇಟ್ ಮಾಲೀಕರ ಪರವಾದಕಾನೂನನ್ನು ರದ್ದುಪಡಿಸಬೇಕು ಎಂದುಒತ್ತಾಯಿಸಿ, ಅಂಬಾನಿ-ಅದಾನಿಗಳಏಜೆಂಟ್ ಮೋದಿ ಸರ್ಕಾರಕ್ಕೆ, ಕೇಂದ್ರಸರ್ಕಾರದ ಹಠಮಾರಿ ಧೋರಣೆಗೆ ಕ್ಕಾರಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ವಿರೋಧಿ ಕಾಯ್ದೆಗಳನ್ನು ಸಂಪೂರ್ಣ ವಾಪಸ್ ತೆಗೆದುಕೊಳ್ಳುವವರೆಗೂ ಹೋರಾಟವನ್ನುತೀವ್ರಗೊಳಿಸುವುದಾಗಿ ಇದೇ ವೇಳೆ ರೈತರುಪ್ರತಿಜ್ಞೆ ಮಾಡಿದರು. ಸಂಘಟನೆಯ ಜಿಲ್ಲಾಸಮಿತಿ ಸದಸ್ಯ ಸೋಮಶೇಖರ್ ಗೌಡಮಾತನಾಡಿ, ದೇಶದ ಪ್ರಜ್ಞಾವಂತ ಜನರುಕೇಂದ್ರ ಬಿಜೆಪಿ ಸರ್ಕಾರದ ಕುತಂತ್ರಗಳನ್ನುಸೋಲಿಸಿ, ರೈತರ ನ್ಯಾಯಸಮ್ಮತಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ತೀವ್ರಗೊಳಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಆರ್.ಕೆ.ಎಸ್ ಜಿಲ್ಲಾಕಾರ್ಯದರ್ಶಿ ಈ. ಹನುಮಂತಪ್ಪ, ಜಿಲ್ಲಾ ಮುಖಂಡರು ಗೋವಿಂದ್, ಪಂಪಾಪತಿ, ಬಸಣ್ಣ, ಅಂಜಿನೇಯ ಇದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444