ಗುಟ್ಕಾ-ಪಾನ್ ಪರಾಗ್ ಕಂಪನಿ ಬಂದ್‌ಗೆ ಆಗ್ರಹ
Team Udayavani, Dec 9, 2020, 2:11 PM IST
ಭಾಲ್ಕಿ: ಕೋವಿಡ್-19 ಹರಡುವಿಕೆ ತಡೆಯುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗುಟ್ಕಾ, ಪಾನ್ ಪರಾಗ್ ಮಾರಾಟ ನಿಷೇಧಿ ಸಿದ್ದರೂ, ಬೀದರನಲ್ಲಿ ಎರಡು ಗುಟ್ಕಾ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳನ್ನು ಬಂದ್‌ಮಾಡಬೇಕು ಎಂದು ಅಖೀಲ ಭಾರತೀಯ ಭ್ರಷ್ಟಾಚಾರ ವಿರೋಧಿ ಸಮಿತಿಯ ರಾಜ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಗೋಪಾಲ ಪಾಲಂ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತೆಲಂಗಾಣ, ಮಹಾರಾಷ್ಟ್ರಗಳಲ್ಲಿ ಗುಟ್ಕಾ ನಿಷೇಧವಿದೆ.ಜಿಲ್ಲೆಯ ಗುಟ್ಕಾ ಕಂಪನಿಯವರು ಹೊರರಾಜ್ಯಗಳಲ್ಲಿ ದುಪ್ಪಟ್ಟು ದರಕ್ಕೆ ಮಾರಾಟಮಾಡುತ್ತಿದ್ದಾರೆ. ಇದನ್ನು ತಡೆಯುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.
ಪ್ರತಿ ತಿಂಗಳು ಒಂದು ಕೋಟಿ ರೂ. ಮೌಲ್ಯದ ರೇಷನ್ ಅಕ್ಕಿ ತೆಲಂಗಾಣ,ಮಹಾರಾಷ್ಟ್ರ ರಾಜ್ಯಕ್ಕೆ ಕಳ್ಳ ಸಾಗಾಣಿಕೆಆಗುತ್ತಿದೆ. ರೇಷನ್ ಅಕ್ಕಿಗೆ ಪಾಲಿಸ್ ಮಾಡಿದ ನಂತರ ಬೀದರಜಿಲ್ಲೆಯಲ್ಲಿ ಕೆಜಿಗೆ 40 ರೂ.ಗಳಂತೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಮಳೆಗಾಲದಲ್ಲಾದ ಅತಿವೃಷ್ಟಿಯಿಂದ ಬೆಳೆ, ಮನೆ ಹಾನಿಗೊಳಗಾದ ರೈತರಿಗೆ, ಫಲಾನುಭವಿಗಳಿಗೆ ಇದುವರೆಗೆ ಪರಿಹಾರ ಧನ ನೀಡಿಲ್ಲ. ತಕ್ಷಣವೇ ಸರ್ಕಾರ ಪರಿಹಾರ ಧನ ವಿತರಿಸಬೇಕು ಎಂದುಒತ್ತಾಯಿಸಿದರು. ಸಾರ್ವಜನಿಕರು ಭ್ರಷ್ಟಾಚಾರ, ಕುಂದು-ಕೊರತೆಗಳಿದ್ದಲ್ಲಿ,ನೇರವಾಗಿ ನನ್ನ ಮೊ. 9986183902ಗೆಸಂಪರ್ಕಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಶಿವಾಜಿರಾವ ಪಾಟೀಲ, ಓಂಪ್ರಕಾಶ ರೊಟ್ಟೆ ಇದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶೇ.7.3ರ ದರದಲ್ಲಿ ಭಾರತದ ಅರ್ಥ ವ್ಯವಸ್ಥೆ ಬೆಳವಣಿಗೆ: ವಿಶ್ವಸಂಸ್ಥೆ
ರಫೇಲ್ ವಿರಾಟ ರೂಪ, ವೈವಿಧ್ಯತೆಯ ವೈಭವ : ಗಣರಾಜ್ಯ ಪರೇಡ್ ನಲ್ಲಿ ರಕ್ಷಣಾಪಡೆಗಳ ಬಲಪ್ರದರ್ಶನ
ರೈತರು, ಕಾರ್ಮಿಕರು, ಜನರ ಧ್ವನಿಯಾಗಿ ಕಾಂಗ್ರೇಸ್ ಕೆಲಸ ಮಾಡಲಿದೆ : ಡಿಕೆಶಿ
ಅನ್ನದಾತ ಎಂದೂ ನೆತ್ತರು ಹರಿಸುವುದಿಲ್ಲ; ‘ಕಾಣದ ಕೈಗಳು’ ಅವರ ದಿಕ್ಕು ತಪ್ಪಿಸಿವೆ: ಸುಧಾಕರ್
ರೈತರು ಕಾನೂನು ಬಾಹೀರವಾಗಿ ನಡೆದುಕೊಂಡಿರುವುದು “ಅತ್ಯಂತ ದುರದೃಷ್ಟಕರ”: ಶಶಿ ತರೂರ್