ಅರೆಯದ ಕಬ್ಬು; ಸೊರಗಿದ ಅನ್ನದಾತ


Team Udayavani, Feb 22, 2019, 9:29 AM IST

bid-2.jpg

ಹುಮನಾಬಾದ: ಕಳೆದೊಂದು ತಿಂಗಳ ಹಿಂದೆಯಷ್ಟೇ ಕಬ್ಬು ನುರಿಸುವಿಕೆ ಆರಂಭಿಸಿರುವ ಬೀದರ್‌ ಸಹಕಾರ ಸಕ್ಕರೆ ಯಂತ್ರೋಪಕರಣ ತಾಂತ್ರಿಕ ದೋಷದಿಂದ ಮತ್ತೆ ಕಳೆದ ಒಂದು ವಾರದಿಂದ ಕಬ್ಬು ನುರಿಸುವಿಕೆ ಸ್ಥಗಿತಗೊಳಿಸಿದೆ. ಇದರಿಂದ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳಹಿಸಿದ ರೈತರ ಕಬ್ಬು ಕಾರ್ಖಾನೆ ಪ್ರಾಂಗಣದಲ್ಲಿ ಒಣಗುತ್ತಿರುವುದು ರೈತರಲ್ಲಿ ಆತಂಕವನ್ನುಂಟು ಮಾಡಿದೆ.

ಕಾರ್ಖಾನೆ ಆರಂಭಿಸುವುದೇ ಕಷ್ಟಸಾಧ್ಯವಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ, ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ರಾಜಶೇಖರ ಬಿ. ಪಾಟೀಲ ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ತಂದ 2 ಕೋಟಿ ರೂ. ಆರ್ಥಿಕ ನೆರವಿನ ಪೈಕಿ 65 ಲಕ್ಷ ರೂ. ಅನುದಾನ ಜನವರಿ 10ರಂದು ಕಾರ್ಖಾನೆ ಕಬ್ಬು ನುರಿಸುವಿಕೆ ಆರಂಭಿಸಿದ್ದರು. ಆರಂಭದಿಂದ ಈ ವರೆಗೆ ಒಟ್ಟು 68,869 ಸಾವಿರ ಟನ್‌ ಕಬ್ಬು ಯಶಸ್ವಿಯಾಗಿ ನುರಿಸಲಾಗಿದೆ. 

ಆದರೆ ಇದೀಗ ತಾಂತ್ರಿಕ ದೋಷದಿಂದಾಗಿ ಫೆ.14ರಿಂದ ಕಬ್ಬು ನುರಿಸುವಿಕೆ ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಅನ್ನದಾತರ ಪಾಡು ಹೇಳತೀರದಾಗಿದೆ.

ಒಣಗುತ್ತಿರುವ ಕಬ್ಬು: ಕಬ್ಬು ನುರಿಸುವ ವಿಶ್ವಾಸದಿಂದ ರೈತರು ಕಬ್ಬು ಕಟಾವು ಮಾಡಿ ಕಾರ್ಖಾನೆ ಪ್ರಾಂಗಣದಲ್ಲಿ ಲಾರಿಗಳಲ್ಲಿ ತುಂಬಿ ನಿಲ್ಲಿಸಿರುವ ಕಬ್ಬು ಮತ್ತು ಹೊಲಗಳಲ್ಲಿ ಕಟಾವು ಮಾಡಿ ಸಂಗ್ರಹಿಸಿಟ್ಟ ಕಬ್ಬು ದಿನದಿಂದ ದಿನಕ್ಕೆ ಒಣಗುತ್ತಿರಯವುದರಿಂದ ರೈತರ ಮುಖದಲ್ಲಿ ಕಳೆಯೇ ಇಲ್ಲದಂತೆ ಮಾಡಿದೆ.

ಆರ್ಥಿಕ ಸಂಕಷ್ಟದಲ್ಲಿ ರೈತರು: ಸದ್ಯ ಕಾರ್ಖಾನೆ ಪ್ರಾಂಗಣದಲ್ಲಿ ಕಟಾವು ಮಾಡಿ, 200ಕ್ಕೂ ಅಧಿಕ ಲಾರಿಗಳಲ್ಲಿ 2000ಕ್ಕೂ ಅಧಿಕ ಟನ್‌ ಕಬ್ಬು ದಿನೇ ದಿನೇ ಒಣಗುತ್ತಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅನ್ಯ ಕಾರ್ಖಾನೆಗೆ ಸಾಗಣೆ: ಲಾರಿಯಲ್ಲಿ ತುಂಬಿರುವ ಕಬ್ಬು ಒಣಗುತ್ತಿರುವ ಆತಂಕದಿಂದಾಗಿ ಅದೆಷ್ಟೋ ರೈತರು ಕಬ್ಬನ್ನು ತಾಲೂಕಿನ ಮೊಗದಾಳ ಹತ್ತಿರದ ಬೀದರ್‌ ಕಿಸಾನ್‌ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಕಲ್ಬುರ್ಗಿ ಜಿಲ್ಲೆ ಆಳಂದ ಸಹಕಾರ ಸಕ್ಕರೆ ಕಾರ್ಖಾನೆಗೆ ಸಾಗಿಸುವಲ್ಲಿ ನಿರತರಾಗಿದ್ದಾರೆ.

ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರು ಇನ್ನು ವಿಳಂಬ ಮಾಡದೇ ಸಾಧ್ಯವಾದಷ್ಟು ಶೀಘ್ರ ಕಬ್ಬು ನುರಿಸುವಿಕೆ ಆರಂಭಿಸುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆನ್ನುವುದು ಅನ್ನದಾತರ ಅಂಬೋಣ. 
 
ಬೀದರ್‌ ಸಹಕಾರ ಸಕ್ಕರೆ ಆರಂಭಗೊಂಡಿದ್ದಕ್ಕೆ ಸಂತಸ ಪಟ್ಟಿದ್ದೆ. ನಮ್ಮ 6 ಎಕರೆ ತೋಟದಲ್ಲಿ 160 ಟನ್‌ಗಿಂತಲೂ ಅಧಿಕ ಕಬ್ಬು ಬೆಳೆಯಲಾಗಿದೆ. ಆ ಪೈಕಿ 100 ಟನ್‌ ಕಬ್ಬು ನುರಿಸಲಾಗಿದೆ. ಉಳಿದ 30 ಟನ್‌ ಕಾರ್ಖಾನೆ ಪ್ರಾಂಗಣದಲ್ಲಿ ಒಣಗಿದೆ. ಈಗಾಗಲೇ ಕಟಾವು ಮಾಡಿದ 30 ಟನ್‌ ಕಬ್ಬು ಸಹ ತನ್ನ ತೂಕ ಕಳೆದುಕೊಳ್ಳುತ್ತಿದೆ. ಈ ಹಾನಿಗೆ ಹೊಣೆ ಯಾರು?. 
 ರಾಜಣ್ಣ ಹುಡಗೀಕರ್‌, ಕಬ್ಬು ಬೆಳೆಗಾರ, ಹಣಕುಣಿ

ಬಾಯ್ಲರ್‌ನಲ್ಲಿ ಕಂಡುಬಂದ ದೋಷ ಈಗಾಗಲೇ ಸರಿಪಡಿಸಲಾಗಿದೆ. ಈಗ ಟರ್ಬನ್‌ ಎಲೆಕ್ಟ್ರಿಕಲ್‌ ವಿಭಾಗದಲ್ಲಿ ಮುಖ್ಯ ಬೇರಿಂಗ್‌ ಕೆಟ್ಟು ಹೋಗಿದ್ದರಿಂದ ಅನಿವಾರ್ಯವಾಗಿ ಕಬ್ಬು ನುರಿಸುವಿಕೆ ಕಾರ್ಯ ಸ್ಥಗಿತಗೊಂಡಿದೆ. ಸರಪಡಿಸಲು ಈಗಾಗಲೇ ಹೈದ್ರಾಬಾದನಿಂದ ತಜ್ಞ ಎಂಜಿನಿಯರ್‌ಗಳನ್ನು ಬಂದ್‌ ದುರಸ್ತಿ ಕೈಗೊಳ್ಳುತ್ತಿದ್ದಾರೆ. ಶನಿವಾರ ಅಥವಾ ರವಿವಾರ ಕಬ್ಬು ನುರಿಸುವಿಕೆ ಆರಂಭಗೊಳ್ಳಲಿದೆ.
 ಒಬ್ಬಣಗೋಳ್‌ ವ್ಯವಸ್ಥಾಪಕ ನಿರ್ದೇಶಕರು, ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ

„ಶಶಿಕಾಂತ ಭಗೋಜಿ

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.