Udayavni Special

ವಚನ ವಿಜಯೋತ್ಸವಕ್ಕೆ ಬೀದರ ಸಿದ್ಧ


Team Udayavani, Jan 29, 2018, 1:18 PM IST

bid-3.jpg

ಬೀದರ: ನಗರದ ಪವೀತ್ರ ಕ್ಷೇತ್ರ ಬಸವಗಿರಿ ಪರಿಸರದಲ್ಲಿ ಜ.29ರಿಂದ ಮೂರು ದಿನಗಳ ಕಾಲ ಜರುಗಲಿರುವ
18ನೇ ವಚನ ವಿಜಯೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಹತ್ತು ಸಾವಿರ ಜನರು ಕುಳಿತುಕೊಳ್ಳಲು
ಅನುವಾಗವಂತೆ ಶರಣಕವಿ ಸರ್ವಜ್ಞ ಮಹಾಮಂಟಪ ಮತ್ತು ಡಾ| ಎಂ.ಎಂ. ಕಲಬುರ್ಗಿ ವೇದಿಕೆ ನಿರ್ಮಾಗೊಂಡಿದೆ.

ವಿಜಯೋತ್ಸವಕ್ಕೆ ಆಗಮಿಸುವ ಶರಣ-ಶರಣೆಯರ ಹಸಿವು ತಣಿಸಲು “ನೀಲಮ್ಮನ ದಾಸೋಹ ಮಂಟಪ’ ತಲೆಯೆತ್ತಿದ್ದು, ಏಕ ಕಾಲಕ್ಕೆ ಸಾವಿರಾರು ಜನ ಪ್ರಸಾದ ಸೇವಿಸಬಹುದು. ಸ್ಥಳೀಯರಿಗೆ ಹೊರ ಜಿಲ್ಲೆಯ ಅತಿಥಿಗಳು ಮತ್ತು ಗಣ್ಯರಿಗೆ ಬೇರೆ ಬೇರೆ ಕಡೆ ಅಂದರೆ ಮೂರು ಕಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವಚನ ವಿಜಯೋತ್ಸವಕ್ಕೆ ಆಗಮಿಸುವ ಜನರನ್ನು ಸ್ವಾಗತಿಸಲು ನಗರದಾದ್ಯಂತ 40 ಸ್ವಾಗತ ಕಮಾನಗಳನ್ನು ಹಾಕಿ ನಗರವನ್ನು ಶೃಂಗರಿಸಲಾಗಿದೆ.

ಮೂರು ದಿನಗಳ ಕಾಲ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿದ್ದು. ಗೋದಿ ಹುಗ್ಗಿ, ರೊಟ್ಟಿ, ಚಟ್ನಿ, ಭಜ್ಜಿ,
ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಅನ್ನ, ಸಾಂಬಾರ್‌ ಪ್ರಸಾದ ಸಿದ್ಧತೆ ಮಾಡಲಾಗಿದೆ. ಈಗಾಗಲೇ ಭಕ್ತರು ಸಾವಿರ-ಸಾವಿರ ರೊಟ್ಟಿಗಳನ್ನು ತಯಾರಿಸಿ ದಾಸೋಹಕ್ಕೆ ಸಲ್ಲಿಸುತ್ತಿದ್ದಾರೆ. ನಗರದ ಎಲ್ಲ ಭಾಗಗಳಿಂದ ಬಸವಗಿರಿಗೆ ಆಗಮಿಸಲು ನಗರ ಸಾರಿಗೆ ಬಸ್‌ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೆ ಒಪ್ಪಿಗೆ ಸೂಚಿಸಿದೆ.

ಜ.29ರಂದು ಬೆಳಗ್ಗೆ 8ಕ್ಕೆ ಹಿರಿಯರಾದ ಪಿ.ಸಂಗಪ್ಪ ಅವರಿಂದ ಷಟ್‌ಸ್ಥಲ ಧ್ವಜಾರೋಹಣ ಮತ್ತು ಗುರುವಚನ ಪರುಷಕಟ್ಟೆಯಲ್ಲಿ ಧರ್ಮ ಗ್ರಂಥ ಗುರುವಚನಕ್ಕೆ ಗೌರವ ಸಲ್ಲಿಸುವುದರೊಂದಿಗೆ ವಚನ ವಿಜಯೋತ್ಸವದ ಕಾರ್ಯಕಲಾಪಗಳು ಆರಂಭವಾಗುವವು. ನಂತರ ಅಕ್ಕ ಅನ್ನಪೂರ್ಣತಾಯಿ ಮತ್ತು ಡಾ| ಗಂಗಾಂಬಿಕೆ
ಅಕ್ಕನವರ ಮಾರ್ಗದರ್ಶನದಲ್ಲಿ ಸಾಮೂಹಿಕ ಇಷ್ಠಲಿಂಗ ಯೋಗ ಸಂಪನ್ನಗೊಳ್ಳುವುದು. ಬೆಳಗ್ಗೆ 11ಕ್ಕೆ ಉತ್ಸವದ ಉದ್ಘಾಟನಾ ಸಮಾರಂಭ ಮತ್ತು ಯುವ ಪ್ರೇರಣಾ ಸಮಾವೇಶಕ್ಕೆ ವಿಜಯಪುರದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡುವರು.

ಶಿಕ್ಷಣ ತಜ್ಞ ಕೆ.ಇ. ರಾಧಾಕೃಷ್ಣ, ವ್ಯಕ್ತಿತ್ವ ವಿಕಸನ ತರಬೇತಿದಾರ ಎಸ್‌.ಜಿ. ಪಾಟೀಲ ಮತ್ತು ಅಂತಾರಾಷ್ಟ್ರೀಯ
ಶ್ರೇಷ್ಠ ನೇತ್ರ ತಜ್ಞ ಡಾ| ಚಂದ್ರಪ್ಪಾ ಎಸ್‌. ರೇಷ್ಮೆ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವರು. ಈ 
ಸಂದರ್ಭದಲ್ಲಿ ಕಾರ್ಗಿಲ್‌ ಹೀರೋ ಕ್ಯಾ| ನವೀನ ನಾಗಪ್ಪಾ ಅವರಿಗೆ ವೀರಮಾತೆ ಅಕ್ಕ ನಾಗಲಾಂಬಿಕಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು.

 ಶರಣರ ತ್ಯಾಗ ಬಲಿದಾನದ ಸ್ಮರಣೆಗಾಗಿ ಪ್ರತಿ ವರ್ಷವೂ ಆಚರಿಸಿಲಾಗುತ್ತಿರುವ “ವಚನ ವಿಜಯೋತ್ಸವ’ಕ್ಕೆ ಎಲ್ಲ ಜಿಲ್ಲೆಗಳಿಂದ ಪ್ರತಿನಿಧಿಗಳು, ನೆರೆ ಜಿಲ್ಲೆಗಳಿಂದಲೂ ಶರಣ ಸಂಕುಲ ಆಗಮಿಸುತ್ತಿರುವುದು ಬೀದರ ಜಿಲ್ಲೆಯ ಹೆಮ್ಮೆಯಾಗಿದೆ. 
 ಅಕ್ಕ ಅನ್ನಪೂರ್ಣ ತಾಯಿ

ಈ ಸಲದ ವಚನ ವಿಜಯೋತ್ಸವದಲ್ಲಿ ಯುವ ಪ್ರೇರಣೆ, ಮಹಿಳಾ ಸಬಲೀಕರಣ ಮತ್ತು ಆರೋಗ್ಯ ಕುರಿತು ಗೋಷ್ಠಿಗಳನ್ನು ಏರ್ಪಡಿಸಿರುವುದು ವಿಶೇಷ. ಮೂರು ದಿನಗಳ ಉತ್ಸವದಲ್ಲಿ ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆ ಇದೆ.
 ನೀಲಮ್ಮ ರೂಗನ, ಅಧ್ಯಕ್ಷರು, ಸ್ವಾಗತ ಸಮಿತಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಯಚೂರು ಸಿಡಿಲು ಬಡಿದು ನಾಲ್ಕು ಜಾನುವಾರು ಸಾವು

ರಾಯಚೂರು ಸಿಡಿಲು ಬಡಿದು ನಾಲ್ಕು ಜಾನುವಾರು ಸಾವು

ಬಾಡಿಗೆ ತಾಯಂದಿರಿಗೆ ಜನಿಸಿದ ನವಜಾತ ಶಿಶುಗಳು ಉಕ್ರೇನ್‌ ಆಸ್ಪತ್ರೆಗಳಲ್ಲೇ ಬಾಕಿ!

ಬಾಡಿಗೆ ತಾಯಂದಿರಿಗೆ ಜನಿಸಿದ ನವಜಾತ ಶಿಶುಗಳು ಉಕ್ರೇನ್‌ ಆಸ್ಪತ್ರೆಗಳಲ್ಲೇ ಬಾಕಿ!

ಹಾಲಿನ ಬೃಹತ್‌ ಟ್ಯಾಂಕ್‌ ಸಿದ್ಧಪಡಿಸಿದ ರೈಲ್ವೇ ; 44,660 ಲೀ. ಸಂಗ್ರಹ

ಹಾಲಿನ ಬೃಹತ್‌ ಟ್ಯಾಂಕ್‌ ಸಿದ್ಧಪಡಿಸಿದ ರೈಲ್ವೇ ; 44,660 ಲೀ. ಸಂಗ್ರಹ

ಮೂಳೂರು : ವಾಹನಗಳೆರಡು ಢಿಕ್ಕಿ : ಸಂಚಾರ ಅಸ್ತವ್ಯಸ್ತ

ಮೂಳೂರು : ವಾಹನಗಳೆರಡು ಢಿಕ್ಕಿ, ಸಂಚಾರ ಅಸ್ತವ್ಯಸ್ತ

ಬಾಳೆಗೂ ಬಂತು ಬನಾನಾ ಕೋವಿಡ್‌ ; ಉತ್ತರ ಪ್ರದೇಶ, ಬಿಹಾರವೇ ಪ್ರಧಾನ ಹಾಟ್‌ಸ್ಪಾಟ್‌

ಬಾಳೆಗೂ ಬಂತು ಬನಾನಾ ಕೋವಿಡ್‌ ; ಉತ್ತರ ಪ್ರದೇಶ, ಬಿಹಾರವೇ ಪ್ರಧಾನ ಹಾಟ್‌ಸ್ಪಾಟ್‌

ಲಡಾಖ್, ಎಲ್ ಎಸಿ ಬಳಿ ಸೇನೆ ಜಮಾವಣೆ; ಯುದ್ಧ ಸನ್ನದ್ಧರಾಗಿ ಎಂದು ಕರೆ ಕೊಟ್ಟ ಚೀನಾ

ಲಡಾಖ್, ಎಲ್ ಎಸಿ ಬಳಿ ಸೇನೆ ಜಮಾವಣೆ; ಯುದ್ಧ ಸನ್ನದ್ಧರಾಗಿ ಎಂದು ಕರೆ ಕೊಟ್ಟ ಚೀನಾ

coviod19

ವಿಶ್ವದಾದ್ಯಂತ ಒಂದೇ ದಿನ 1 ಲಕ್ಷ ಜನರಿಗೆ ಸೋಂಕು: ಅಮೆರಿಕದಲ್ಲಿ 1ಲಕ್ಷ ದಾಟಿದ ಮೃತರ ಪ್ರಮಾಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್‌ ಪರೀಕ್ಷಾ ಕೇಂದ್ರ ಶೀಘ್ರ ಆರಂಭ

ಕೋವಿಡ್‌ ಪರೀಕ್ಷಾ ಕೇಂದ್ರ ಶೀಘ್ರ ಆರಂಭ

ಕ್ವಾರಂಟೈನ್ ನಲ್ಲಿದ್ದ ಎರಡು ತಿಂಗಳ ಹಿಂದೆ ಮದುವೆಯಾದ ಯುವಕ ಆತ್ಮಹತ್ಯೆ

ಕ್ವಾರಂಟೈನ್ ನಲ್ಲಿದ್ದ ಎರಡು ತಿಂಗಳ ಹಿಂದೆ ಮದುವೆಯಾದ ಯುವಕ ಆತ್ಮಹತ್ಯೆ

Bidar-tdy-1

ಕೆಂಡದಂಥ ಬಿಸಿಲಿಗೆ ಬಸವಳಿದ ಜನ

ನವ ವಿವಾಹಿತೆ ಆತ್ಮಹತ್ಯೆ ; ಮಗಳ ಸಾವಿನ ಕುರಿತಾಗಿ ಹೆತ್ತವರಿಗೆ ಸಂಶಯ

ನವ ವಿವಾಹಿತೆ ಆತ್ಮಹತ್ಯೆ ; ಮಗಳ ಸಾವಿನ ಕುರಿತಾಗಿ ಹೆತ್ತವರಿಗೆ ಸಂಶಯ

ಬೀದರ್ – ಬೆಂಗಳೂರು ವಿಮಾನಯಾನ ಆರಂಭ

ಬೀದರ್ – ಬೆಂಗಳೂರು ವಿಮಾನಯಾನ ಆರಂಭ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ಗ್ರಾಪಂಗಳ ಅವಧಿ ಪೂರ್ಣ; ಸಚಿವ ಸಂಪುಟ ಸಭೆಯಲ್ಲಿ  ಚರ್ಚಿಸಿ ತೀರ್ಮಾನ

ಗ್ರಾಪಂಗಳ ಅವಧಿ ಪೂರ್ಣ; ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ

ರಾಯಚೂರು ಸಿಡಿಲು ಬಡಿದು ನಾಲ್ಕು ಜಾನುವಾರು ಸಾವು

ರಾಯಚೂರು ಸಿಡಿಲು ಬಡಿದು ನಾಲ್ಕು ಜಾನುವಾರು ಸಾವು

27-May-02

45 ಜನರ ಗಂಟಲು ದ್ರವ ಪರೀಕ್ಷೆಗೆ-ಆತಂಕ

ಬಾಡಿಗೆ ತಾಯಂದಿರಿಗೆ ಜನಿಸಿದ ನವಜಾತ ಶಿಶುಗಳು ಉಕ್ರೇನ್‌ ಆಸ್ಪತ್ರೆಗಳಲ್ಲೇ ಬಾಕಿ!

ಬಾಡಿಗೆ ತಾಯಂದಿರಿಗೆ ಜನಿಸಿದ ನವಜಾತ ಶಿಶುಗಳು ಉಕ್ರೇನ್‌ ಆಸ್ಪತ್ರೆಗಳಲ್ಲೇ ಬಾಕಿ!

27-May-01

ಭೂ ಸ್ವಾಧೀನಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.