ಸೌರ ಶಕ್ತಿಯಿಂದ ಓಡುತ್ತೆ ಈ ಸೈಕಲ್‌!


Team Udayavani, Aug 15, 2021, 2:09 PM IST

solar cycle

ಬೀದರ: ನಗರದ ಗುರುನಾನಕ್‌ ದೇವ್‌ಇಂಜಿನಿಯರಿಂಗ್‌ ಕಾಲೇಜಿನ ಅಂತಿಮವರ್ಷದ ಎಲೆಕ್ಟ್ರಾನಿಕ್‌ ಮತ್ತು ಎಲೆಕ್ಟ್ರಿಕಲ್‌ವಿಭಾಗದ ವಿದ್ಯಾರ್ಥಿಗಳು ತೈಲ ಅಷ್ಟೇ ಅಲ್ಲನಿರ್ವಹಣೆಗೂ ನಯಾಪೈಸೆ ಖರ್ಚಿಲ್ಲದ ಸೌರವಿದ್ಯುತ್‌ ಚಾಲಿತ ಪರಿಸರ ಸ್ನೇಹಿ ಸೈಕಲ್‌(ಬೈಕ್‌)ಆವಿಷ್ಕರಿಸಿದ್ದಾರೆ.

ವಿಭಾಗದ ಎಚ್‌ಒಡಿ ಡಾ|ಕೆ.ನೀಲಶೆಟ್ಟಿಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಸಚಿನ್‌ರಾಠೊಡ, ಉಜಾಲಾ ರಾಠೊಡ, ವೈಷ್ಣವಿದೇಶಮುಖ ಹಾಗೂ ಅಖೀಲಾ ರೆಡ್ಡಿ ಕಾಲೇಜು ಪ್ರೊಜೆಕ್ಟ್ಗಾಗಿ ಈ ಸೋಲಾರ್‌ ಬೈಸಿಕಲ್‌ಅಭಿವೃದ್ಧಿಪಡಿಸಿದ್ದಾರೆ.ದೇಶದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು,ಪರ್ಯಾಯ ಇಂಧನ ಚಾಲಿತ ವಾಹನಗಳಅಭಿವೃದ್ಧಿಯತ್ತ ಹೊಸ ಹೊಸ ಪ್ರಯತ್ನಗಳುನಡೆಯುತ್ತಲೇ ಇವೆ. ಈ ವಿದ್ಯಾರ್ಥಿಗಳ ತಂಡತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನೇಬಳಸಿಕೊಂಡು ಸೈಕಲ್‌ ರೂಪಿಸಿದೆ.

ನೋಡಲಷ್ಟೇ ಅಲ್ಲ ಚಲಾಯಿಸಲು ಬೈಕ್‌ನಂತೆಕಾಣುತ್ತಿದೆ.ಈ ಸೈಕಲ್‌ ಅನ್ನು ಒಂದು ತಿಂಗಳಲ್ಲಿತಯಾರಿಸಿರುವ ವಿದ್ಯಾರ್ಥಿಗಳು ಒಟ್ಟು 25ಸಾವಿರ ರೂ. ಖರ್ಚು ಮಾಡಿದ್ದಾರೆ. ಇದಕ್ಕೆಬೇಕಾದ ಸೋಲಾರ್‌ ಪ್ಯಾನಲ್‌, ಬ್ಯಾಟರಿಸೇರಿದಂತೆ ಕಚ್ಚಾ ವಸ್ತುಗಳನ್ನು ಹೈದ್ರಾಬಾದ್‌ನಲ್ಲಿಖರೀದಿಸಿದ್ದರೆ, ಗುಜರಿ ಅಂಗಡಿಯಿಂದ ಸೈಕಲ್‌ಪಡೆದಿದ್ದಾರೆ. 48 ವೋಲ್ಟ್ ಮೋಟಾರ್‌, 12ವೋಲ್ಟ್- 25 ವ್ಯಾಟ್‌ ಸಾಮರ್ಥ್ಯದ ಒಂದುಸೋಲಾರ್‌ ಪ್ಯಾನಲ್‌ ಬಳಸಿದ್ದಾರೆ. ಸೌರವಿದ್ಯುತ್‌ನಿಂದ ಓಡಾಡುವ ಈ ಸೈಕಲನ್ನುಬಿಸಿಲಿಲ್ಲದಿದ್ದಾಗ 12 ವೋಲ್ಟ್ನ ನಾಲ್ಕುಬ್ಯಾಟರಿಗಳನ್ನು ಚಾರ್ಜ್‌ ಮಾಡಿಯೂನಡೆಸಬಹುದು.

ಒಂದು ವೇಳೆ ಸೋಲಾರ್‌,ಬ್ಯಾಟರಿಗಳು ಕೈಕೊಟ್ಟರೂ ಕಾಲಿನಿಂದತುಳಿದುಕೊಂಡು ಸೈಕಲ್‌ ಚಲಾಯಿಸಿಕೊಂಡುಮನೆಗೆ ತಲುಪಬಹುದು.ಈ ಬ್ಯಾಟರಿಗಳನ್ನು ನಾಲ್ಕು ಗಂಟೆಗಳಕಾಲ ಚಾರ್ಜ್‌ ಮಾಡಿದರೆ 30 ಕಿ.ಮೀ.ವರೆಗೂ ಓಡಾಡಬಹುದು. ಜತೆಗೆಸೋಲಾರ್‌ ಅಳವಡಿಸಿರುವ ಕಾರಣ ಸೈಕಲ್‌ಚಾಲನೆಯಾಗುತ್ತಲೇ ಬ್ಯಾಟರಿಗಳು ಚಾರ್ಜ್‌ಆಗುತ್ತವೆ. ಹೀಗಾಗಿ ಎಷ್ಟು ಮೈಲಿ ಹೋದರೂತೊಂದರೆಯಾಗಲ್ಲ. ಈ ಸೈಕಲ್‌ ಎಂತಹರಸ್ತೆಯಾದರೂ ಸರಿ ಸಲೀಸಾಗಿ ಓಡುತ್ತದೆಎನ್ನುತ್ತಾರೆ ಸಾಧಕ ವಿದ್ಯಾರ್ಥಿಗಳು.

75 ಕೆ.ಜಿ ಭಾರ ಹೊತ್ತುಕೊಂಡು ಸಾಗಬಲ್ಲಸಾಮರ್ಥ್ಯ ಇದಕ್ಕಿದ್ದು, ಬ್ಯಾಟರಿ ಪ್ರಮಾಣಹೆಚ್ಚಿಸಿದ್ದಲ್ಲಿ ಸಾಮರ್ಥ್ಯವೂ ಅಧಿಕ ಆಗಲಿದೆ. ಪ್ರತಿಗಂಟೆಗೆ 30 ಕಿ.ಮೀ ವೇಗದಲ್ಲಿ ಓಡುವ ಬ್ಯಾಟರಿಚಾಲಿತ ಈ ಸೈಕಲ್‌ ಇಡೀ ಕಾಲೇಜಿನಲ್ಲಿ ಈಗಮನ್ನಣೆ ಪಡೆದಿದೆ. ಸದ್ಯ ಈ ಸೈಕಲ್‌ ನೋಡಲುದಿನಕ್ಕೆ ಹತ್ತಾರು ಕಾಲೇಜು ವಿದ್ಯಾರ್ಥಿಗಳು ಬಂದು ಹೋಗುತ್ತಿದ್ದಾರೆ.

ಶಶಿಕಾಂತ ಬಂಬುಳಗ

ಟಾಪ್ ನ್ಯೂಸ್

ಪತ್ನಿ ದುಬಾರಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಪತ್ನಿ ದುಬಾರಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಸವದತ್ತಿ: ಕಂದಮ್ಮಗಳ ಶಿಕ್ಷಣಕ್ಕೆ ಸಂಗೀತ ಸ್ಪರ್ಶ ನೀಡಿದ ಪಿಎಸ್‌ಐ.!

ಸವದತ್ತಿ: ಕಂದಮ್ಮಗಳ ಶಿಕ್ಷಣಕ್ಕೆ ಸಂಗೀತ ಸ್ಪರ್ಶ ನೀಡಿದ ಪಿಎಸ್‌ಐ.!

ಸಚಿವ ಅಶೋಕ್

ಸಿದ್ದು, ಡಿಕೆಶಿ ಜತೆ ನಾವು ಗಾಳಿಯಲ್ಲಿ ಗುಂಡು ಹೊಡೆಯುತ್ತೇವೆ: ಸಚಿವ ಅಶೋಕ್

ಕಾರ್ಕಳ: ಕಾರು – ರಿಕ್ಷಾ ಭೀಕರ ಅಪಘಾತ; ಆಟೋ ಚಾಲಕ ಸಾವು,ಓರ್ವ ಗಂಭೀರ

ಕಾರ್ಕಳ: ಕಾರು – ರಿಕ್ಷಾ ಭೀಕರ ಅಪಘಾತ; ಆಟೋ ಚಾಲಕ ಸಾವು,ಓರ್ವ ಗಂಭೀರ

sreeleela

ರವಿತೇಜ ಜೊತೆ ಶ್ರೀಲೀಲಾ ಡ್ಯುಯೆಟ್‌!: ಧಮಾಕಾ ಸಿನಿಮಾಕ್ಕೆ ಕಿಸ್‌ ನಾಯಕಿ

ಒಳ್ಳೆ ಸೇಬು ಇರುವಾಗ ಕೊಳೆತ ಮಾವಿನ ಹಣ್ಣು ಯಾರಿಗ್ರಿ ಬೇಕು : ಕಾಂಗ್ರೆಸ್ ಗೆ ಈಶ್ವರಪ್ಪ ಟಾಂಗ್

ಒಳ್ಳೆ ಸೇಬು ಇರುವಾಗ ಕೊಳೆತ ಮಾವಿನ ಹಣ್ಣು ಯಾರಿಗ್ರಿ ಬೇಕು : ಕಾಂಗ್ರೆಸ್ ಗೆ ಈಶ್ವರಪ್ಪ ಟಾಂಗ್

bommai

ದೆಹಲಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಕ್ರಮ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25rice

ಕಾಳಸಂತೆಯಲ್ಲಿ ಅಕ್ಕಿ ಮಾರಾಟ: ವಾಹನ ಜಪ್ತಿ

24sheeps

ಕುರಿ ಕಳ್ಳರು ಪರಾರಿ: ಬೊಲೆರೊ ವಾಹನ ಜಪ್ತಿ

22camp

ಲಕ್ಷ್ಮೀಕ್ಯಾಂಪ್‌ನಲ್ಲಿ ಆರೋಗ್ಯ ತಪಾಸಣೆ ಶಿಬಿರ

19balki

ನೀರಾವರಿ ಪ್ರದೇಶ ವೃದ್ದಿಸಲು ಆದ್ಯತೆ

18anubhava-mantapa

ಅನುಭವ ಮಂಟಪ ನಿರ್ಮಾಣ ಶೀಘ್ರ ಆರಂಭಿಸಿ

MUST WATCH

udayavani youtube

ಕಾಂಗ್ರೆಸ್ ಕೊಳೆತು ನಾರುತ್ತಿರುವ ಮಾವಿನ ಹಣ್ಣು : ಈಶ್ವರಪ್ಪ ಲೇವಡಿ

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

udayavani youtube

ಮುದ್ದು ಮಕ್ಕಳ ಜೊತೆ ಮಗುವಾಗಿ ಬೆರೆತ ಸವದತ್ತಿ ಪಿಎಸ್ಐ ಶಿವಾನಂದ ಗುಡಗನಟ್ಟಿ

udayavani youtube

ಮದುವೆ ದಿನದಂದು ಕಾಫಿದೊರೆ ಸಿದ್ದಾರ್ಥ ಹೆಗ್ಗಡೆ ಅವರಿಗೆ ನುಡಿ ನಮನ ಸಲ್ಲಿಸಿದ ಮದುಮಗ

udayavani youtube

ಅಭಿಮಾನದಿಂದ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ ! ದಂಗಾದ ಅಭಿಮಾನಿ

ಹೊಸ ಸೇರ್ಪಡೆ

ಪತ್ನಿ ದುಬಾರಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಪತ್ನಿ ದುಬಾರಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

13formers

ಖರೀದಿ ಕೇಂದ್ರದ ಒಳಗೆ ಹೋಗದ ರೈತರು!

ಮುಂಡಗೋಡ : ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿ

ಮುಂಡಗೋಡ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿ

madagaja

‘ಮದಗಜ’ನಿಗೆ 50ರ ಸಂಭ್ರಮ

ಸವದತ್ತಿ: ಕಂದಮ್ಮಗಳ ಶಿಕ್ಷಣಕ್ಕೆ ಸಂಗೀತ ಸ್ಪರ್ಶ ನೀಡಿದ ಪಿಎಸ್‌ಐ.!

ಸವದತ್ತಿ: ಕಂದಮ್ಮಗಳ ಶಿಕ್ಷಣಕ್ಕೆ ಸಂಗೀತ ಸ್ಪರ್ಶ ನೀಡಿದ ಪಿಎಸ್‌ಐ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.