Udayavni Special

ಮುಷ್ಕರ ನಿರತರ ವಿರುದ್ಧ ಕಠಿಣ ಕ್ರಮ ಆರಂಭ


Team Udayavani, Apr 12, 2021, 8:10 PM IST

ಮನಬವಚಷಞ

ವಿಜಯಪುರ: ಆರನೇ ವೇತನಕ್ಕೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಏಪ್ರಿಲ್‌ 7ರಿಂದ ಆರಂಭಿಸಿರುವ ಅನಿ  ರ್ದಿಷ್ಟಾವಧಿ  ಮುಷ್ಕರ 5ನೇ ದಿನವೂ ಮುಂದುವರಿದಿದೆ. ಈ ಮಧ್ಯೆ ಸರ್ಕಾರದ ನಿರ್ದೇಶನದ ಮೇಲೆ ಜಿಲ್ಲೆಯಲ್ಲಿ ಮುಷ್ಕರ ನಿರತರ ವಿರುದ್ಧ ವಿವಿಧ ರೀತಿಯ ಕಠಿಣ ಕ್ರಮ ಕೈಗೊಳ್ಳುವ ಪ್ರಕ್ರಿಗೆ ಬಿರುಸುಗೊಂಡಿದೆ.

ಈಗಾಗಲೇ ಹಲವು ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ, ಮತ್ತೆ ಕೆಲವರನ್ನು ವಿವಿಧ ವಿಭಾಗ, ಘಕಟಗಳಿಗೆ ವರ್ಗಾವಣೆ ಮಾಡಿ, ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿದ ನಾಲ್ವರ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಿಸಿದ್ದು, ಮೂವರ ಬಂಧನವಾಗಿದೆ. ಸೋಮವಾರ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಸಂಬಳ ನೀಡದಿರಲು ನಿರ್ಧರಿಸುವಂಥ ಹಲವು ಕಠಿಣ ಕ್ರಮಕ್ಕೆ ಮುಂದಾಗಿದೆ.

ನಾಲ್ವರು ಸೇವೆಯಿಂದಲೇ ವಜಾ: ಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದಲ್ಲಿ ಮುಷ್ಕರಕ್ಕೆ ಬೆಂಬಲಿಸಿದ ಆರೋಪದಲ್ಲಿ 4 ಸಿಬ್ಬಂದಿಯನ್ನು ಸೇವೆಯಿಂದಲೇ ವಜಾಗೊಳಿಸಲಾಗಿದೆ. ಮತ್ತೂಂದೆಡೆ 6 ಸಿಬ್ಬಂದಿಯನ್ನು ವಿವಿಧ ಘಟಕ, ವಿಭಾಗಗಳಿಗೆ ವರ್ಗಾಣೆ ಮಾಡಿದ್ದು ರವಿವಾರ ಅವರನ್ನೆಲ್ಲ ವರ್ಗಾವಣೆಗೊಂಡ ಸ್ಥಳಕ್ಕೆ ತೆರಳಿ ಕರ್ತವ್ಯಕ್ಕೆ ಹಾಜರಾದ ವರದಿ ಮಾಡಿಕೊಳ್ಳಲು ಬಿಡುಗಡೆ ಮಾಡಲಾಗಿದೆ.

ನಾಲ್ವರ ವಿರುದ್ಧ ದೂರು-ಮೂವರ ಬಂಧನ: ಈ ಮಧ್ಯೆ ಬಸ್‌ ಸಂಚಾರ ಸೇವೆಗೆ ತೆರಳುತ್ತಿದ್ದ ಸಿಬ್ಬಂದಿಯ ಕರ್ತವ್ಯಕ್ಕೆ ಜಿಲ್ಲೆಯ ಎರಡು ಕಡೆ ನಾಲ್ವರು ಅಡ್ಡಿಪಡಿಸಿದ ಆರೋಪದಲ್ಲಿ ನಾಲ್ವರು ಸಿಬ್ಬಂದಿ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಾಗಿದೆ. ತಾಳಿಕೋಟೆ ನಿಲ್ದಾಣ, ಘಟಕದ ಬಳಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ತಾಳಿಕೋಟೆ ಘಟಕದ ಇಬ್ಬರು ಹಾಗೂ ಮಂಗಳೂರು ವಿಭಾಗದ ಓರ್ವ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅಲ್ಲಿನ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ.

ಮತ್ತೂಂದೆಡೆ ತಾಳಿಕೋಟೆ ನಿಲ್ದಾಣದಿಂದ ಸಿಂದಗಿ ಪಟ್ಟಣಕ್ಕೆ ಪ್ರಯಾಣ ಬೆಳೆಸಿದ್ದ ಬಸ್‌ನ್ನು ದೇವರಹಿಪ್ಪರಗಿ ಬಳಿ ತಡೆದು, ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿರೇಮಠ ಎಂಬ ಚಾಲಕನ ವಿರುದ್ಧ ದೂರು ದಾಖಲಾಗಿದೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಸುದ್ದಿ ತಿಳಿಯುತ್ತಲೇ ಸದರಿ ಆರೋಪಿತ ಚಾಲಕ ಪೊಲೀಸರ ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿದ್ದಾನೆ.

ಇಂದು ಕರ್ತವ್ಯಕ್ಕೆ ಬಂದರೆ ಸಂಬಳ: ಈ ಮಧ್ಯೆ ಮಷ್ಕರ ನಿರತ ಸಿಬ್ಬಂದಿ ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಸಂಬಳ ನೀಡದಿರಲು ನಿರ್ಧರಿಸಲಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ಸಂಸ್ಥೆಗೆ ಆರ್ಥಿಕ ಆದಾಯವೂ ಇಲ್ಲದೇ, ಪ್ರಯಾಣಿಕರ ಕೊರತೆಯ ಕಾರಣ ಓಡಿಸಿದ ಬಸ್‌ಗಳೂ ನಿರೀಕ್ಷಿತ ಆದಾಯ ತಂದಿಲ್ಲ. ಇಂತ ಕಾರಣಗಳಿಂದ ಏಪ್ರಿಲ್‌ 12ರಿಂದ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗೆ ಸಂಬಳ ನೀಡುವಂತಿಲ್ಲ. ಒಂದೊಮ್ಮೆ ತಕ್ಷಣ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಸೋಮವಾರವೇ ಸಂಬಳ ನೀಡುವಂತೆ ಸೂಚಿಸಿದೆ. ಮನೆಗೆ ತೆರಳಿ ಮನವಿ: ಈ ಮಧ್ಯೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮುಷ್ಕರ ನಿರತ ಸಿಬ್ಬಂದಿ ಮನೆ ಮನೆಗೆ ತೆರಳಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡುತ್ತಿದ್ದಾರೆ. ಸೇವೆಗೆ ಬರದಿದ್ದಲ್ಲಿ ಮನೆ ಹಂಚಿಕೆ ರದ್ದು ಮಾಡುವ ತಿಳಿವಳಿಕೆ ನೋಟಿಸ್‌ ನೀಡಿದ ಮಧ್ಯೆಯೂ ಕರ್ತವ್ಯಕ್ಕೆ ಹಾಜರಾಗಲು ಮನವಿ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.

ಮನೆಗೆ ತೆರಳಿದ ಸಂದರ್ಭದಲ್ಲಿ ಕುಟುಂಬ ಸದಸ್ಯರಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಪ್ರೀತಿಯಿಂದ, ಒತ್ತಡ ಹೇರುವ ಕೆಲಸದಲ್ಲೂ ನಿರತರಾಗಿದ್ದಾರೆ. ಮನೆಯಲ್ಲಿ ಸಿಬ್ಬಂದಿ ಇಲ್ಲದಿದ್ದರೂ ಮೊಬೈಲ್‌ ಮೂಲಕ ಮಕ್ಕಳೊಂದಿಗೆ ಮಾತನಾಡಿಸಿ ಮುಷ್ಕರ ಬಿಟ್ಟು ಸೇವೆಗೆ ತೆರಳಿ ಎಂದು ಭಾವನಾತ್ಮಕವಾಗಿ ಸಿಬ್ಬಂದಿಯನ್ನು ಸೆಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಾರ್ಮಿಕ ಮುಖಂಡರ ಜೊತೆ ಸಭೆ: ಮತ್ತೂಂದೆಡೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾ ಧಿಕಾರಿ ನಾರಾಯಣ ಕುರುಬರ ಅವರು ಜಿಲ್ಲೆಯಲ್ಲಿರುವ ಸಾರಿಗೆ ಸಂಸ್ಥೆಯ ಕಾರ್ಮಿಕರ 9 ಸಂಸ್ಥೆಗಳ ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ.

ಸರ್ಕಾರ ನೀಡಿರುವ ಸೂಚನೆಯಂತೆ ನಿಗಮಗಳ ಆರ್ಥಿಕ ಸ್ಥಿತಿಗತಿ, ಮುಷ್ಕರದಿಂದ ಸಾರ್ವಜನಿಕರಲ್ಲಿ ಮೂಡಿರುವ ಆಕ್ರೋಶ, ಸಂಸ್ಥೆಗೆ ಆದಾಯದ ಕೊರತೆ, ಆರ್ಥಿಕ ನಷ್ಟ, ಕೌಟುಂಬಿಕ ಸಮಸ್ಯೆಗಳ ಉಲ್ಬಣದಂಥ ಸಂಗತಿಗಳನ್ನು ಮುಂದಿಟ್ಟು ಮುಷ್ಕರ ಬಿಟ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಮನವಿ ಮಾಡಿದ್ದಾರೆ.

 

ಟಾಪ್ ನ್ಯೂಸ್

6-16

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

yytyyt

2ನೇ ಮೀರಜ್‌ ಖ್ಯಾತಿ ಬಾಗಲಕೋಟೆಯಲ್ಲಿ ಆಕ್ಸಿಜನ್‌ ಆತಂಕ

ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಮಾರಕ ತಾರತಮ್ಯ ಬದಲಾಗಬೇಕು : ಹೆಚ್.ಡಿಕೆ

ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಮಾರಕ ತಾರತಮ್ಯ ಬದಲಾಗಬೇಕು : ಹೆಚ್.ಡಿಕೆ

ಪರೀಕ್ಷೆ ವೇಳೆ ಕೋವಿಡ್ ಲಕ್ಷಣ ಇರುವವರಿಗೆ ಮಾತ್ರೆ ನೀಡುವಂತೆ ಅರೋಗ್ಯ ಇಲಾಖೆ ಸೂಚನೆ

yuyutu6

ತಂದೆ ಕಳೆದುಕೊಂಡ ಮರುದಿನವೇ ವೈದ್ಯ ಸೇವೆಗೆ ಹಾಜರ್‌

ಮನೆಯಲ್ಲೇ ಕ್ವಾರಂಟೈನ್‌ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಿಸಿಎಂ ಡಾ.ಅಶ್ವತ್ಥನಾರಾಯಣ

ಮನೆಯಲ್ಲೇ ಕ್ವಾರಂಟೈನ್‌ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಿಸಿಎಂ ಡಾ.ಅಶ್ವತ್ಥನಾರಾಯಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hukyutyut6

ವಿಜಯಪುರ : ಸಿಡಿಲು ಬಡಿದು ಮೂವರು ಸಾವು

jump

ಸರ್ಕಾರಿ ಆಸ್ಪತ್ರೆ ಕಟ್ಟಡದಿಂದ ಜಿಗಿದು ಕೋವಿಡ್ ಸೋಂಕಿತ ಆತ್ಮಹತ್ಯೆ

ವಿಜಯಪುರ : ಜಿಲ್ಲೆಯಲ್ಲಿ ಮತ್ತೆ 596 ಸೋಂಕಿತರು ಪತ್ತೆ,  ನಾಲ್ವರ ಸಾವು

ವಿಜಯಪುರ : ಜಿಲ್ಲೆಯಲ್ಲಿ ಮತ್ತೆ 596 ಸೋಂಕಿತರು ಪತ್ತೆ,  ನಾಲ್ವರ ಸಾವು

ವಚಬಬವಬವಚಷವ

ವದಂತಿಗೆ ಕಿವಿಗೊಡಬೇಡಿ: ಯತ್ನಾಳ

As one for exploitation free society

ಶೋಷಣೆ ಮುಕ್ತ ಸಮಾಜಕ್ಕಾಗಿ ಒಂದಾಗಿ

MUST WATCH

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

udayavani youtube

ಅಮಾಸೆ ಗಿರಾಕಿ ಎಂದು ತೇಜಸ್ವಿ ಸೂರ್ಯ ವಿರುದ್ಧ ಡಿ ಕೆ ಶಿವಕುಮಾರ್​ ಗರಂ..!

udayavani youtube

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

ಹೊಸ ಸೇರ್ಪಡೆ

ಈಶ ಫೌಂಡೇಶನ್‌ನಿಂದ ಕೋವಿಡ್‌ ನೆರವು

ಈಶ ಫೌಂಡೇಶನ್‌ನಿಂದ ಕೋವಿಡ್‌ ನೆರವು

ಸಂಪಾದನೆಯಿಲ್ಲದೆ ಜೀವನ ದುಸ್ತರ; ಅವಧಿ ವಿಸ್ತರಣೆಗೆ ಬೇಡಿಕೆ

ಸಂಪಾದನೆಯಿಲ್ಲದೆ ಜೀವನ ದುಸ್ತರ; ಅವಧಿ ವಿಸ್ತರಣೆಗೆ ಬೇಡಿಕೆ

ದ.ಕ.: ಕೋವಿಡ್‌ ಪರೀಕ್ಷೆಗೆ ಏಕರೂಪ ದರವಿಲ್ಲ 

ದ.ಕ.: ಕೋವಿಡ್‌ ಪರೀಕ್ಷೆಗೆ ಏಕರೂಪ ದರವಿಲ್ಲ 

ನವಜಾತ ಶಿಶು ಸಹಿತ 238 ಮಂದಿಗೆ ಚಿಕಿತ್ಸೆ, 121 ಸುರಕ್ಷಿತ ಹೆರಿಗೆ

ನವಜಾತ ಶಿಶು ಸಹಿತ 238 ಮಂದಿಗೆ ಚಿಕಿತ್ಸೆ, 121 ಸುರಕ್ಷಿತ ಹೆರಿಗೆ

ತೋಟಗಾರಿಕೆ ಬೆಳೆಗೆ ಸಿದ್ಧಗೊಂಡಿವೆ 3.08 ಲಕ್ಷ ಸಸಿಗಳು

ತೋಟಗಾರಿಕೆ ಬೆಳೆಗೆ ಸಿದ್ಧಗೊಂಡಿವೆ 3.08 ಲಕ್ಷ ಸಸಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.