Udayavni Special

ಆಲಮಟ್ಟಿ ಸೌಂದರ್ಯ ಹೆಚ್ಚಿಸಿದ ಹಸಿರುಡುಗೆ


Team Udayavani, Jun 5, 2021, 7:44 PM IST

dfghgfdsafghjkjhg

ಆಲಮಟ್ಟಿ: ಎತ್ತ ನೋಡಿದರತ್ತ ಹಸಿರಿನಿಂದ ಕಂಗೊಳಿಸುತ್ತಿರುವ ಗುಡ್ಡಗಳು, ಧಾರಾಕಾರ ಹರಿಯುತ್ತಿರುವ ಕೃಷ್ಣೆಯ ಕಲರವ, ಪಕ್ಷಿಗಳ ಚಿಲಿಪಿಲಿ ನಿನಾದ, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿರುವ ತಾಣವೇ ಆಲಮಟ್ಟಿ. ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸ್ಥಾನವಾಗಿರುವ ಲಾಲ ಬಹದ್ದೂರಶಾಸ್ತ್ರಿ ಜಲಾಶಯ, ರಾಕ್‌ ಉದ್ಯಾನ, ಮೊಘಲ್‌ ಉದ್ಯಾನ, ಇಟಾಲಿಯನ್‌ ಉದ್ಯಾನ, ಗೋಪಾಲಕೃಷ್ಣ ಉದ್ಯಾನ, ಲವ-ಕುಶ ಉದ್ಯಾನ ಸೇರಿದಂತೆ ಸುತ್ತಲೂ ಹಸಿರುಮಯವಾಗಿದೆ.

ಬರದನಾಡು ಎಂದು ಹಣೆಪಟ್ಟಿ ಅಂಟಿಸಿಕೊಂಡಿರುವ ಉತ್ತರ ಕರ್ನಾಟಕದಲ್ಲಿ ಕೃಷ್ಣಾಭಾಗ್ಯ ಜಲ ನಿಗಮದ ವಿಶೇಷ ಕಾಳಜಿಯಿಂದ ಆಲಮಟ್ಟಿ ಈಗ ತಂಪಾಗಿದ್ದು ಪಟ್ಟಣ ಪ್ರವೇಶಿಸಿದರೆ ಸಾಕು ಬಿಸಿಲನಾಡಿನಲ್ಲಿಯೂ ಇಂತಹ ಸುಂದರ ಹಾಗೂ ತಂಪಾದ ಪರಿಸರ ಬಿಟ್ಟು ಹೋಗದಂತೆ ಪ್ರವಾಸಿಗರನ್ನು ಹಿಡಿದಿಟ್ಟುಕೊಳ್ಳುತ್ತಿದೆ. ಆಲಮಟ್ಟಿಗೆ ರೈಲು ಸಂಪರ್ಕ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆ ಹೊಂದಿ ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. ಇದರಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರ ದಂಡು ಕೋವಿಡ್‌ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿದೆ. ರಾಕ್‌ ಉದ್ಯಾನ: ರಾಷ್ಟ್ರೀಯ ಹೆದ್ದಾರಿಯಿಂದ ಲಾಲ ಬಹದ್ದೂರಶಾಸ್ತ್ರಿ ಜಲಾಶಯಕ್ಕೆ ಬರುವ ಮಾರ್ಗ ಮಧ್ಯದಲ್ಲಿ ರಾಕ್‌ ಉದ್ಯಾನವಿದೆ.

ಇಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಜಾತ್ರೆ ದೃಶ್ಯ, ಕಾಡು ಪ್ರಾಣಿಗಳು-ಪಕ್ಷಿಗಳು, ಕಾಡುಜನರ ಬದುಕು, ಚಿಣ್ಣರ ನೀರಾಟ, ಚಿಟ್ಟೆಗಳ ಜೀವನ ಚರಿತ್ರೆ, ಸರಿಸೃಪಗಳು, ಕಮಲದ ಹೂವು, ಸೂರ್ಯ ಪಾರ್ಕಿನಲ್ಲಿ ಭಾರತ ನಕ್ಷೆ ಅದರ ಸುತ್ತಲೂ ಸರ್ವ ಜನಾಂಗಗಳ ಶಾಂತಿಯ ತೋಟವೆನ್ನುವ ಕವಿ ವಾಣಿ ನೆನಪಿಸುವಂತೆ ವಿವಿಧ ಕಲಾಕೃತಿಗಳು ಹಾಗೂ ದೋಣಿ ವಿಹಾರ, ಚಿಣ್ಣರ ಉದ್ಯಾನ, ಜೋಕಾಲಿ, ರಾಜಸ್ಥಾನ ಮರುಭೂಮಿ ಜನರ ಬದುಕು, ಗುಹಾಂತರ ಕಲೆ ಹೀಗೆ ಹಲವಾರು ವಿಶೇಷತೆ ಹೊಂದಿದೆ. ಅಲುಗಾಡುವ ಗೋಡೆ: ಶಾಸ್ತ್ರಿ ಜಲಾಶಯದ ಬಲ ಭಾಗದಲ್ಲಿರುವ ಲವ-ಕುಶ ಉದ್ಯಾನದಲ್ಲಿ ಹಸಿರಿನಿಂದ ಕಂಗೊಳಿಸುವ ವಿವಿಧ ಸಸ್ಯಗಳಿಂದ ನಿರ್ಮಾಗೊಂಡಿರುವ ಹಸಿರು ಗೋಡೆ ಜನ ಅಲುಗಾಡಿಸಿದರೆ ಸಾಕು ಸಂಪೂರ್ಣ ಬಾಗುತ್ತದೆ.

ಕೈ ಬಿಟ್ಟರೆ ಮೊದಲಿನಂತೆ ಎದ್ದು ನಿಲ್ಲುತ್ತದೆ. ಇಲ್ಲಿ ಲವ-ಕುಶರ ಜೀವನ ಚರಿತ್ರೆ. ಶ್ರೀರಾಮ ಹಾಗೂ ಲವ-ಕುಶರ ಮಧ್ಯೆ ಅಶ್ವಮೇಧ ಯಾಗದ ಕುದುರೆ ಕಟ್ಟಿದ ಪರಿಣಾಮ ಯುದ್ಧ ಸೇರಿದಂತೆ ರಾಮಾಯಣದ ವಿವಿಧ ಪಾತ್ರ ಇಲ್ಲಿ ಕಾಣಬಹುದು. ಕೃಷ್ಣನ ಬಾಲಲೀಲೆ: ಜಲಾಶಯದ ಬಲಭಾಗದಲ್ಲಿ ಹೊಂದಿಕೊಂಡಂತಿರುವ ಗೋಪಾಲಕೃಷ್ಣ ಉದ್ಯಾನದಲ್ಲಿ ಶ್ರೀಕೃಷ್ಣ ಗೋವುಗಳನ್ನು ಮೇಯಿಸುವ ವೇಳೆ ನೀರಿನಲ್ಲಿ ಜಲಕನ್ಯೆಯರು ಚೆಲ್ಲಾಟವಾಡುವಾಗ ಅವರ ಬಟ್ಟೆ ಕದ್ದೊಯ್ದಿರುವ ದೃಶ್ಯ, ತಾಯಿ ಕಣ್ತಪ್ಪಿಸಿ ಬೆಣ್ಣೆ ಕದಿಯುವುದು ಹೀಗೆ ಕೃಷ್ಣನ ಬಾಲ್ಯ ನೆನಪಿಸುವ ದೃಶ್ಯಗಳು ಮುದ ನೀಡುತ್ತವೆ.

ಗಮನ ಸೆಳೆದ ಪುಟಾಣಿ ರೈಲು: ದೂರದ ಊರುಗಳಿಂದ ಆಗಮಿಸಿದ್ದ ಜನರು ಮಕ್ಕಳೊಂದಿಗೆ ತಾವೂ ಕೂಡ ಪುಟಾಣಿ ರೈಲಿನಲ್ಲಿ ಕುಳಿತು ರಾಕ್‌ ಉದ್ಯಾನ ವೀಕ್ಷಿಸಲು ವ್ಯವಸ್ಥೆಯಿದೆ. ಆಲಮಟ್ಟಿಯ ವಿವಿಧ ಉದ್ಯಾನಗಳಲ್ಲಿ ಎಲ್ಲಿ ನೋಡಿದರೂ ಶ್ರೀಗಂಧದ ಮರಗಳು ಕಾಣ ಸಿಗುತ್ತವೆ. ಇವುಗಳ ರಕ್ಷಣೆಗೆ ಅರಣ್ಯ ಇಲಾಖೆ ಪರದಾಡುವಂತಾಗಿದೆ. ಇಲ್ಲಿ ಎಷ್ಟೇ ಪೊಲೀಸ್‌-ಅರಣ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಗಸ್ತು ತಿರುಗಿದರೂ ವರ್ಷದಲ್ಲಿ ಎರಡೂ¾ರು ಬಾರಿಯಾದರೂ ಕಳ್ಳರ ಕೈಚಳಕ ಕಂಡುಬರುತ್ತಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಬೇಕು ಅಧಿಕಾರ: ಕೆಬಿಜೆಎನ್ನೆಲ್‌ ವ್ಯಾಪ್ತಿಯ ಅರಣ್ಯ ವಿಭಾಗಕ್ಕೆ ಕೇವಲ ಅರಣ್ಯ ಬೆಳೆಸಲು ಮಾತ್ರ ಅಧಿ  ಕಾರವಿದೆ. ಅವುಗಳನ್ನು ರಕ್ಷಿಸಲು ಮತ್ತೆ ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ಮೊರೆ ಹೋಗಬೇಕಾಗಿದೆ. ಇದರಿಂದ ಕಳ್ಳರಿಗೆ ಯಾವುದೇ ಅಡೆತಡೆ ಇಲ್ಲದಂತಾಗಿದೆ. ಕಳ್ಳರನ್ನು ಹೆಡೆಮುರಿ ಕಟ್ಟಬೇಕಾದರೆ ಇಲ್ಲಿನ ಅರಣ್ಯ ವಿಭಾಗಕ್ಕೂ ಪ್ರಕರಣ ದಾಖಲು ಹಾಗೂ ತನಿಖೆ ಅ ಕಾರ ನೀಡಬೇಕು ಎನ್ನುತ್ತಾರೆ ಅಧಿ ಕಾರಿಗಳು. ಒಟ್ಟಾರೆ ಬರದ ಬೆಂಗಾಡಾಗಿದ್ದ ಆಲಮಟ್ಟಿ ಪರಿಸರ ಅರಣ್ಯ ಇಲಾಖೆ ದೂರದೃಷ್ಟಿ ಫಲವಾಗಿ ಆಲಮಟ್ಟಿ ಸುತ್ತ ಸೇರಿದಂತೆ 30 ಕಿ.ಮೀವರೆಗೆ ಹಸಿರಿನಿಂದ ಕಂಗೊಳಿಸುವಂತಾಗಿದೆ.

 

ಟಾಪ್ ನ್ಯೂಸ್

“ಮುಂದಿನ ಮುಖ್ಯಮಂತ್ರಿ” ಹೇಳಿಕೆ ಕೊಡಬೇಡಿ: ಶಾಸಕರಲ್ಲಿ ಸಿದ್ದರಾಮಯ್ಯ ಮನವಿ

“ಮುಂದಿನ ಮುಖ್ಯಮಂತ್ರಿ” ಹೇಳಿಕೆ ಕೊಡಬೇಡಿ: ಶಾಸಕರಲ್ಲಿ ಸಿದ್ದರಾಮಯ್ಯ ಮನವಿ

03

ನಟಿ ಪೂಜಾ ಹೆಗ್ಡೆಗೆ ಫುಲ್ ಡಿಮ್ಯಾಂಡ್;ಒಂದು ಚಿತ್ರಕ್ಕೆ ಈ ಬೆಡಗಿ ಸಂಭಾವನೆ ಎಷ್ಟು ಕೋಟಿ ?

ಡೆಲ್ಟಾ ಪ್ಲಸ್ ಹರಡದಂತೆ ಕೂಡಲೇ ಕ್ರಮ ವಹಿಸಿ: ಸರ್ಕಾರಕ್ಕೆ ಪತ್ರ ಬರೆದ ಸಿದ್ದರಾಮಯ್ಯ

ಡೆಲ್ಟಾ ಪ್ಲಸ್ ಹರಡದಂತೆ ಕೂಡಲೇ ಕ್ರಮ ವಹಿಸಿ: ಸರ್ಕಾರಕ್ಕೆ ಪತ್ರ ಬರೆದ ಸಿದ್ದರಾಮಯ್ಯ

02

ರೈಡರ್ ಬಿಡುಗಡೆ ಮುನ್ನವೇ ಮತ್ತೊಂದು ಬಿಗ್ ಸಿನಿಮಾದಲ್ಲಿ ನಿಖಿಲ್

ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹಾರಿದ ತಾಯಿ: ಮೂವರು ಸಾವು

ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹಾರಿದ ತಾಯಿ: ಮೂವರು ಸಾವು

shivamogga airport design

ಶಿವಮೊಗ್ಗ ಏರ್ ಪೋರ್ಟ್ ನೀಲ ನಕ್ಷೆ ವಿವಾದ: ಕಾಂಗ್ರೆಸ್ ಟೀಕೆಗೆ ಕಿಡಿಕಾರಿದ ಸಚಿವ ಈಶ್ವರಪ್ಪ

ಬೆಂಗಳೂರು: ಹಾಡುಹಗಲೇ ಕಚೇರಿ ಮುಂದೆ ಮಾಜಿ ಕಾರ್ಪೊರೇಟರ್ ಭೀಕರ ಹತ್ಯೆ

ಬೆಂಗಳೂರು: ಹಾಡುಹಗಲೇ ಕಚೇರಿ ಮುಂದೆ ಮಾಜಿ ಕಾರ್ಪೊರೇಟರ್ ಭೀಕರ ಹತ್ಯೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sdfghgfdsdfghjhgfds

ಕಾರ ಹುಣ್ಣಿಮೆಗೆ ಕೊರೊನಾ ಕರಿನೆರಳು

09

ವಿಜಯಪುರ : ಸಲಾದಹಳ್ಳಿಯಲ್ಲಿ ಪ್ರೇಮಿಗಳ ಮರ್ಯಾದಾ ಹತ್ಯೆ

Bihala

ಕೂಚಬಾಳ-ದೇಸಾಯಿ ಕಾರ್ಯ ಮಾದರಿ

pura

ಬಸವನಾಡಲ್ಲಿ ಸರ್ವಂ ಯೋಗ ಮಯಂ

ಪ್ರತ್ಯೇಕ ಗ್ರಾಮಗಳ ಪುರುಷ ಮತ್ತು ಮಹಿಳೆ ಒಂದೇ ಕಡೆ ವಿಷ ಸೇವನೆ: ಮಹಿಳೆ ಸಾವು

ಪ್ರತ್ಯೇಕ ಗ್ರಾಮಗಳ ಪುರುಷ ಮತ್ತು ಮಹಿಳೆ ಒಂದೇ ಕಡೆ ವಿಷ ಸೇವನೆ: ಮಹಿಳೆ ಸಾವು

MUST WATCH

udayavani youtube

‘ಯಾವ ಸಭೆಗೂ ನನ್ನನ್ನು ಕರೆಯಲ್ಲ’: ಎಂಎಲ್ ಸಿ ಭೋಜೇಗೌಡ ಏಕಾಂಗಿ ಪ್ರತಿಭಟನೆ

udayavani youtube

ಒಲಿಂಪಿಕ್ಸ್‌ : ವನಿತಾ ಹಾಕಿಗೆ ರಾಣಿ ರಾಮ್‌ಪಾಲ್‌ ನಾಯಕಿ

udayavani youtube

udayavani youtube

ಪಾಕಿಸ್ತಾನ: ಉಗ್ರ ಹಫೀಜ್ ಸಯೀದ್ ನಿವಾಸದ ಬಳಿ ಸ್ಫೋಟ

udayavani youtube

ಜಮ್ಮು-ಕಾಶ್ಮೀರ: ಭಯೋತ್ಪಾದಕರ ಗುಂಡಿನ ದಾಳಿಗೆ ಸಿಐಡಿ ಇನ್ಸ್ ಪೆಕ್ಟರ್ ಸಾವು

ಹೊಸ ಸೇರ್ಪಡೆ

ಒಲಿಂಪಿಕ್‌ ನಡೆಯುವ ಸ್ಥಳಗಳಲ್ಲಿ ಮದ್ಯ ನಿಷೇಧ

ಒಲಿಂಪಿಕ್‌ ನಡೆಯುವ ಸ್ಥಳಗಳಲ್ಲಿ ಮದ್ಯ ನಿಷೇಧ

“ಮುಂದಿನ ಮುಖ್ಯಮಂತ್ರಿ” ಹೇಳಿಕೆ ಕೊಡಬೇಡಿ: ಶಾಸಕರಲ್ಲಿ ಸಿದ್ದರಾಮಯ್ಯ ಮನವಿ

“ಮುಂದಿನ ಮುಖ್ಯಮಂತ್ರಿ” ಹೇಳಿಕೆ ಕೊಡಬೇಡಿ: ಶಾಸಕರಲ್ಲಿ ಸಿದ್ದರಾಮಯ್ಯ ಮನವಿ

03

ನಟಿ ಪೂಜಾ ಹೆಗ್ಡೆಗೆ ಫುಲ್ ಡಿಮ್ಯಾಂಡ್;ಒಂದು ಚಿತ್ರಕ್ಕೆ ಈ ಬೆಡಗಿ ಸಂಭಾವನೆ ಎಷ್ಟು ಕೋಟಿ ?

ಡೆಲ್ಟಾ ಪ್ಲಸ್ ಹರಡದಂತೆ ಕೂಡಲೇ ಕ್ರಮ ವಹಿಸಿ: ಸರ್ಕಾರಕ್ಕೆ ಪತ್ರ ಬರೆದ ಸಿದ್ದರಾಮಯ್ಯ

ಡೆಲ್ಟಾ ಪ್ಲಸ್ ಹರಡದಂತೆ ಕೂಡಲೇ ಕ್ರಮ ವಹಿಸಿ: ಸರ್ಕಾರಕ್ಕೆ ಪತ್ರ ಬರೆದ ಸಿದ್ದರಾಮಯ್ಯ

kome

ಕೊಮೆ-ಕೊರವಡಿ ಮೀನುಗಾರರಿಂದ ವಿಶೇಷ ಸಮುದ್ರ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.