Udayavni Special

ಕೃಷ್ಣಾ ನದಿ ತಟದಲ್ಲಿ ಪಲ್ಲಕ್ಕಿಗಳ ವೈಭವ

Team Udayavani, Apr 12, 2021, 8:25 PM IST

ಃಘ‍್್ಧೇಋಥೈಃಝಭ

ಆಲಮಟ್ಟಿ : ಯುಗಾದಿ ಹಬ್ಬದ ಅಂಗವಾಗಿ ನೂರಾರು ಕಿ.ಮೀ. ಗಳ ದೂರದಿಂದ ಪಲ್ಲಕ್ಕಿಗಳೊಂದಿಗೆ ಬಂದ ಭಕ್ತರು ಡೊಳ್ಳು ಕುಣಿತ, ಹಲಗೆ ನಾದದೊಂದಿಗೆ ಹರ ಹರ ಮಹಾದೇವ ಘೋಷಣೆ ಮೊಳಗಿಸಿದರು. ನೆತ್ತಿ ಸುಡುವ ಕಡು ಬಿಸಿಲಿನ ತಾಪದ ಪರಿವೆಯಿಲ್ಲದ ದೇವತೆಗಳ ಪಲ್ಲಕ್ಕಿ, ಛತ್ರಿ ಚಾಮರದೊಂದಿಗೆ ಆಗಮಿಸಿದ್ದ ಭಕ್ತರು ಗಂಗಾಸ್ಥಳದಲ್ಲಿ ಪೂಜಾ ಕೈಂಕರ್ಯ ಮುಗಿಸಿದರು. ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶವಾದ ಚಂದ್ರಮ್ಮ ದೇವಸ್ಥಾನದಿಂದ ಪಾರ್ವತಿ ಕಟ್ಟೆ ಸೇತುವೆಯಾಚೆಗೂ ಮತ್ತು ಮುಂಭಾಗದಲ್ಲಿರುವ ಕೃಷ್ಣಾ ಸೇತುವೆ ಬಳಿ ನದಿ ದಡದಲ್ಲಿ ಪಲ್ಲಕ್ಕಿ, ಛತ್ರಿ ಚಾಮರಗಳೊಂದಿಗೆ ಬಂದ ಭಕ್ತರು, ಎತ್ತಿನ ಗಾಡಿ, ಟ್ರ್ಯಾಕ್ಟರ್‌, ಲಾರಿ, ಮಿನಿ ಬಸ್‌ ಹಾಗೂ ಕಾಲ್ನಡಿಗೆಯಲ್ಲಿ ಆಗಮಿಸಿದ್ದ ಭಕ್ತರು ನದಿಯಲ್ಲಿ ದೇವರ ಮೂರ್ತಿ, ಪಲ್ಲಕ್ಕಿ ಶುಚಿಗೊಳಿಸುತ್ತಿರುವುದು, ವಾಹನಗಳನ್ನು ಶುಚಿಗೊಳಿಸುತ್ತಿರುವುದು ಕಂಡು ಬಂತು.

ವಿವಿಧ ದರ್ಗಾಗಳಿಗೆ ಪವಿತ್ರ ಜಲ ಒಯ್ಯಲು ಆಗಮಿಸಿದ್ದ ಮಹಿಳಾ ಹಾಗೂ ಪುರುಷ ಭಕ್ತರು ಕೃಷ್ಣೆಯಲ್ಲಿ ಮಿಂದೆದ್ದು ಒದ್ದೆ ಬಟ್ಟೆಯಲ್ಲಿಯೇ ಹೊಸ ಮಣ್ಣಿನ ಬಿಂದಿಗೆಗಳಲ್ಲಿ ನೀರು ತುಂಬಿಕೊಂಡು ದಾರಿಯುದ್ದಕ್ಕೂ ಘೋಷಣೆ ಕೂಗುತ್ತಾ ಸಾಗಿದರು. ನದಿ ದಡದಲ್ಲಿ ಡೊಳ್ಳಿನ ಹಾಡು-ಭಜನಾ ಪದ: ಭಕ್ತರು ನದಿ ತೀರದ ಊರು ಹಾಗೂ ನದಿಯ ಪಕ್ಕದಲ್ಲಿ ಪಲ್ಲಕ್ಕಿಗಳ ಮುಂದೆ ಡೊಳ್ಳಿನ ಹಾಡು, ಚೌಡಕಿ ಪದ, ಭಜನಾ ಹಾಡು ಹಾಡಿ ನೆರೆದ ಭಕ್ತರಲ್ಲಿ ಅಧ್ಯಾತ್ಮದ ರಸದೌತಣ ನೀಡಿದರು.

ತೆಪ್ಪದಾರುತಿ: ನೂರಾರು ಕಿ.ಮೀ.ದೂರದಿಂದ ಆಗಮಿಸಿರುವ ಭಕ್ತರು ಪವಿತ್ರ ಕೃಷ್ಣೆಯಲ್ಲಿ ಮಿಂದೆದ್ದು ಮೂರ್ತಿ ಹಾಗೂ ಪಲ್ಲಕ್ಕಿ, ಛತ್ರಿ ಚಾಮರಗಳನ್ನು ಜಲದಲ್ಲಿ ತೊಳೆದು ಶುಚಿಗೊಳಿಸಿದ ನಂತರ ನದಿ ದಡದಲ್ಲಿ ಐದು ಕಲ್ಲುಗಳನ್ನಿಟ್ಟು ಅವುಗಳಿಗೆ ಪೂಜೆ ಸಲ್ಲಿಸಿ ನಂತರ ಉಡಿ ತುಂಬುವ ಕಾರ್ಯ ಮಾಡಿ ಸ್ಥಳದಲ್ಲಿಯೇ ನೈವೇದ್ಯ ತಯಾರಿಸಿ ನೈವೇದ್ಯ ಮಾಡಿ ನಂತರ ಜೋಳದ ದಂಟಿನಲ್ಲಿ ಮಾಡಿದ ತೆಪ್ಪದ ಮೇಲೆ ಹಗುರವಾದ ದೀಪವನ್ನಿಟ್ಟು ನದಿಯಲ್ಲಿ ತೇಲಿ ಬಿಡಲಾಗುತ್ತದೆ ಇದರಿಂದ ಗಂಗಾ ಮಾತೆ ಸಂತುಷ್ಟಳಾಗುತ್ತಾಳೆ ಅಲ್ಲದೇ ತಾವು ನಂಬಿದ ದೇವರುಗಳು ಮಳೆ-ಬೆಳೆ ಉತ್ತಮವಾಗಿ ಬರಲು ಆಶೀರ್ವದಿಸುತ್ತವೆ ಎಂಬ ನಂಬಿಕೆ ಇದೆ.

ನದಿ ದಂಡೆಯಲ್ಲಿ ಭೋಜನ ಸವಿದ ಭಕ್ತರು: ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಸಾಮೂಹಿಕವಾಗಿ ಭೋಜನ ಸವಿಯುದರೊಂದಿಗೆ ಬೇರೆ ಭಕ್ತರಿಗೂ ಪ್ರಸಾದ ವಿತರಿಸುತ್ತಿರುವುದು ಕಂಡು ಬಂತು.

ಟಾಪ್ ನ್ಯೂಸ್

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಯಾವ ಶಿಕ್ಷೆ ಎದುರಿಸಲೂ ಸಿದ್ಧ: ಚು.ಆಯೋಗದ ಮುಖ್ಯಸ್ಥ ರಾಜೀವ್‌

ಯಾವ ಶಿಕ್ಷೆ ಎದುರಿಸಲೂ ಸಿದ್ಧ : ಚು.ಆಯೋಗದ ಮುಖ್ಯಸ್ಥ ರಾಜೀವ್‌ ಕುಮಾರ್‌

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು

gyjftyryr

ರಾಜ್ಯದಲ್ಲಿಂದು 47563 ಕೋವಿಡ್ ಹೊಸ ಪ್ರಕರಣ ಪತ್ತೆ: 482 ಜನರ ಸಾವು  

ದಾವಣಗೆರೆಯಲ್ಲಿ 323 ಪಾಸಿಟಿವ್ ಪ್ರಕರಣಗಳು ಪತ್ತೆ, 372 ಮಂದಿ ಗುಣಮುಖ

ದಾವಣಗೆರೆಯಲ್ಲಿ 323 ಪಾಸಿಟಿವ್ ಪ್ರಕರಣಗಳು ಪತ್ತೆ, 372 ಮಂದಿ ಗುಣಮುಖ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುದ್ದೇಬಿಹಾಳ ಆಸ್ಪತ್ರೆಗೆ ಆಕ್ಸಿಜನ್‌ ಪ್ಲಾಂಟ್‌ ಮಂಜೂರು

ಮುದ್ದೇಬಿಹಾಳ ಆಸ್ಪತ್ರೆಗೆ ಆಕ್ಸಿಜನ್‌ ಪ್ಲಾಂಟ್‌ ಮಂಜೂರು

ಹಸೆಮಣೆ ಏರಿ 15 ದಿನದಲ್ಲೇ ಕೋವಿಡ್ ಸೇವೆಗೆ ಹಾಜರಾದ ನರ್ಸ್‌

ಹಸೆಮಣೆ ಏರಿ 15 ದಿನದಲ್ಲೇ ಕೋವಿಡ್ ಸೇವೆಗೆ ಹಾಜರಾದ ನರ್ಸ್‌

ಕಕಹಗಜಹಜಹಜ

ಕೋವಿಡ್‌ ನಿಯಂತ್ರಣಕ್ಕೆ ಸಂಘ-ಸಂಸ್ಥೆ ಕೈ ಜೋಡಿಸಲಿ

hukyutyut6

ವಿಜಯಪುರ : ಸಿಡಿಲು ಬಡಿದು ಮೂವರು ಸಾವು

jump

ಸರ್ಕಾರಿ ಆಸ್ಪತ್ರೆ ಕಟ್ಟಡದಿಂದ ಜಿಗಿದು ಕೋವಿಡ್ ಸೋಂಕಿತ ಆತ್ಮಹತ್ಯೆ

MUST WATCH

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

udayavani youtube

ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾದ ಜನರನ್ನು ಊರಿಗೆ ಕಳುಹಿಸಿಕೊಡುವ ಮೂಲಕ ಮಾದರಿಯಾದ ಯುವಕರು

udayavani youtube

ಮೀನು‌ ಮಾರಾಟಕ್ಕೆ ನಗರಸಭೆ ಸಿಬ್ಬಂದಿ ಆಕ್ಷೇಪ

udayavani youtube

ಬಹು ದಿನಗಳ ಬಳಿಕ ಕಾಣಿಸಿಕೊಂಡ ಶಾಸಕ ರಮೇಶ್ ಜಾರಕಿಹೊಳಿ‌

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

ಹೊಸ ಸೇರ್ಪಡೆ

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಯಾವ ಶಿಕ್ಷೆ ಎದುರಿಸಲೂ ಸಿದ್ಧ: ಚು.ಆಯೋಗದ ಮುಖ್ಯಸ್ಥ ರಾಜೀವ್‌

ಯಾವ ಶಿಕ್ಷೆ ಎದುರಿಸಲೂ ಸಿದ್ಧ : ಚು.ಆಯೋಗದ ಮುಖ್ಯಸ್ಥ ರಾಜೀವ್‌ ಕುಮಾರ್‌

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.