ಬೆಳೆಹಾನಿ ಪರಿಹಾರಕ್ಕೆ ರೈತರ ಹಕ್ಕೋತ್ತಾಯ


Team Udayavani, Sep 10, 2022, 5:35 PM IST

13-demand

ತಾಳಿಕೋಟೆ: 2021-22ನೇ ಸಾಲಿನ ಬೆಳೆಹಾನಿ ಪರಿಹಾರ ತಾಳಿಕೋಟೆ ತಾಲೂಕಿನಲ್ಲಿ ಬಂದಿಲ್ಲವೆಂದು ಆರೋಪಿಸಿ ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಉಪಾಧ್ಯಕ್ಷರನ್ನೊಳಗೊಂಡ ಕೆಲವು ರೈತರು ತಹಶೀಲ್ದಾರ್‌ ಮೂಲಕ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ತಾಳಿಕೋಟೆ ತಾಲೂಕಿನಲ್ಲಿ ಕಳೆದ ವರ್ಷ ಈ ವರ್ಷದ ಬೆಳೆಹಾನಿ ಪರಿಹಾರ ಬಂದಿಲ್ಲ. ಈ ಹಿಂದೆ ತಾಳಿಕೋಟೆ ತಹಶೀಲ್ದಾರ್‌ಗೆ ಈ ಕುರಿತು ಪತ್ರ ಬರೆದಾಗ ಅವರಿಂದ 7-4-2022ರಂದು ಉತ್ತರಿಸಿದ್ದ ಅವರು ಹಾನಿ ಪರಿಹಾರ ಕೊಡಿಸುವ ಕುರಿತು ನಿಯಮಾನುಸಾರ ಪರಿಹಾರ ತಂತ್ರಾಂಶದಲ್ಲಿ ಕ್ರಮವಹಿಸಲಾಗಿದೆ ಎಂದಿದ್ದರು. ಈಗಾಗಲೇ ಸುರಿದ, ಸುರಿಯುತ್ತಿರುವ ಮಳೆಯಿಂದ ತಾಳಿಕೋಟೆ ಭಾಗದ ಎಲ್ಲ ರೈತರ ಜಮೀನುಗಳಲ್ಲಿ ಬಿತ್ತಿದ ಬೆಳೆಗಳು ನಾಶವಾಗಿವೆ. ಈ ಕುರಿತು ರೈತರಿಗೆ ಯಾವುದೇ ಪರಿಹಾರ ದೊರಕಿಲ್ಲ. ಸದರಿ ಜಮೀನುಗಳಲ್ಲಿ ಬಿತ್ತಿದ ಹತ್ತಿ, ತೊಗರಿ ನಾಶವಾಗಿವೆ ಡೋಣಿ ತೀರದ ಎಡ ಬಲದಲ್ಲಿ ಇದ್ದ ಜಮೀನುಗಳಲ್ಲಿ ಡೋಣಿ ಪ್ರವಾಹದ ಹಾಗೂ ಸೋಗಲಿ ಹಳ್ಳದ ಪ್ರವಾಹದ ನೀರು ಜಮೀನುಗಳಲ್ಲಿ ಹಾಯ್ದಿದ್ದರಿಂದ ಬೆಳೆ ಅಷ್ಟೇ ಅಲ್ಲಾ ಜಮೀನು ಕೂಡಾ ಬಿತ್ತನಕ್ಕೆ ಬರಲಾರದಂತಾಗಿದೆ ಎಂದು ಪತ್ರದಲ್ಲಿ ದೂರಿದ್ದಾರೆ.

ಈ ಕುರಿತು ಜಿಲ್ಲಾ ಧಿಕಾರಿಗಳು ಸಮೀಕ್ಷಾ ಕಾರ್ಯ ಕೈಗೊಂಡು ಶೀಘ್ರ ಪರಿಹಾರ ದೊರಕಿಸಿಕೊಡುವ ಕಾರ್ಯ ಮಾಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಮೂಕಿಹಾಳ ಹತ್ತಿರದ ಸೋಗಲಿ ಹಳ್ಳಕ್ಕೆ ಇತ್ತೀಚೆಗೆ ನಿರ್ಮಿಸಲಾದ ಸೇತುವೆ ನೀರಿನ ಪ್ರವಾಹಕ್ಕೆ ಕಿತ್ತುಕೊಂಡು ಹೋಗಿದೆ. ಇದರಿಂದ ವಾಹನ ಸಂಚಾರ ಜನ ಸಂಚಾರಕ್ಕೆ ತೊಂದರೆಯಾಗಿದೆ. ಇದಕ್ಕೆ ಪರ್ಯಾಯವಾಗಿ ಡೋಣಿ ಹತ್ತಿರದ ಭಾಗಮ್ಮದೇವಿ ಮಂದಿರದ ಮಗ್ಗಲಿರುವ ಬಾವೂರ ರಸ್ತೆ ದುರಸ್ತಿ ಕಂಡಿಲ್ಲ. ಈ ರಸ್ತೆ ದುರಸ್ತಿಯಾದಲ್ಲಿ ತಾಳಿಕೋಟೆಯಿಂದ ಬಾವೂರ, ಮುದ್ದೇಬಿಹಾಳ, ವಿಜಯಪುರಕ್ಕೆ ತೆರಳುವ ಬಸ್‌ಗಳಿಗೆ ಡೋಣಿ ಹಾಗೂ ಸೋಗಲಿಯ ಮಹಾಪುರ ಬಂದಾಗ ಅನುಕೂಲವಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಭಾರತೀಯ ಕಿಸಾನ್‌ ಸಂಘದ ತಾಳಿಕೋಟೆ ಅಧ್ಯಕ್ಷ ಹಣಮಗೌಡ ಬಸರಡ್ಡಿ, ರಾಮಪ್ಪ ಗೊಟಗುಣಕಿ, ಸಂಗನಗೌಡ ಹೆಗರಡ್ಡಿ, ಗುರನಗೌಡ ಪಾಟೀಲ, ಬಸಯ್ಯ ಹಿರೇಮಠ, ನಿಜಲಿಂಗಪ್ಪ ಅಂಬಿಗೇರ, ಜಲಾಲ್‌ ಪಟೇಲ, ಉಸ್ಮಾನಪಟೇಲ ಬಿರಾದಾರ, ಗುರನಗೌಡ ಚೌದ್ರಿ, ಎಚ್‌. ಎನ್‌.ಗೋಡಿಹಾಳ, ಎಸ್‌.ಜಿ.ಬೂದಿ, ಎಂ.ಸಿ.ಪಾಟೀಲ, ಪಿ.ಎಂ.ದರ್ಗಾ, ಎಚ್‌. ಎಸ್‌.ಬಿರಾದಾರ ಅವರನ್ನೋಳಗೊಂಡು 30 ಜನ ರೈತರು ಪತ್ರಕ್ಕೆ ಸಹಿ ಹಾಕಿದ್ದಾರೆ.

ಟಾಪ್ ನ್ಯೂಸ್

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

20

Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.