ಮೇದಾರರ ಅನ್ನ ಕಸಿದ ಕೋವಿಡ್ !

ಲಾಕ್‌ಡೌನ್‌ ಎಫೆಕ್ಟ್ ಬಿದಿರಿನ ಬುಟ್ಟಿ-ಮರ ವ್ಯಾಪಾರವಿಲ್ಲದೇ ಬದುಕು ಸಂಕಷ್ಟದಲ್ಲಿ

Team Udayavani, May 7, 2020, 1:13 PM IST

Udayavani Kannada Newspaper

ನಿಡಗುಂದಿ: “ಅದ್ಯಾವ್ದೊ ಕೋವಿಡ್ ರೋಗ ಬಂದೈತೆಂತ್ರಿ, ಅದಕ್ಕ ಎಲ್ಲ ಸಂತಿ ಪ್ಯಾಟಿ ಬಂದ್‌ ಮಾಡ್ಯಾರ, ಊರಾಗ ಅಡ್ಡಾಡಿ ಮಾರೂನಂದ್ರ ಅದೂ ಆಗ್ವಲ್ದು. ಇದನ್ನ ನಂಬಿ ಹೊಟ್ಟಿ ತುಂಬಿಸಿಕೊಳ್ಳಾವ್ರು ನಾವು. ಈಗ ಮಾಡಿಟ್ಟ ಮಾಲ ಹಂಗ ಉಳದಾವ್‌, ಕೈಯಾಗಿನ ಕೆಲಸಾ ನಂಬಿ ಸಾಲ ಮಾಡಿವ್ರಿ ಈಗ ಏನ್‌ ಮಾಡಬೇಕಂತ ಗೊತ್ತಾಗವಲ್ಲದ್ರಿ…” ಇದು ಪಟ್ಟಣದ ಮೇದಾರ ಕುಟುಂಬಗಳ ಆರ್ಥನಾದ.

ಕೋವಿಡ್ ಲಾಕ್‌ಡೌನ್‌ ಘೋಷಿಸಿದ ನಂತರ ನಿಡಗುಂದಿ ಸೇರಿ ತಾಲೂಕಿನ ವಿವಿಧೆಡೆ ಮೇದಾರ ಕುಟುಂಬಗಳು ವ್ಯಾಪಾರ, ವಹಿವಾಟಿಲ್ಲದೇ ಕಣ್ಣೀರಲ್ಲಿ ಕೈ ತೊಳೆಯುತ್ತಿವೆ. ಮೇದಾರರು ಕೃಷಿಕರಿಗೆ ಬೇಕಾದ ಧಾನ್ಯ ಸಂಗ್ರಹದ ಬಿದಿರಿನ ಬುಟ್ಟಿ, ರೊಟ್ಟಿ ಹಾಕಲು ಕೆರೆಸಿ, ಧಾನ್ಯ ಸ್ವಚ್ಚ ಮಾಡಲು ಮರ, ಹೂವಿನ ಬುಟ್ಟಿ, ಮದುವೆ ಕಾರ್ಯದ ಭಾಸಿಂಗ ಬುಟ್ಟಿ ಸೇರಿದಂತೆ ಮುಂತಾದವುಗಳನ್ನು ಮಹಿಳೆಯರು ಮನೆಯಲ್ಲಿಯೇ ಹೆಣೆಯುತ್ತಾರೆ. ಪುರುಷರು ಮನೆ ಕಟ್ಟಡಕ್ಕೆ ಬೇಕಾದ ಏಣಿ ತಯಾರಿಸುತ್ತಾರೆ. ಇವುಗಳ ಮಾರಾಟಕ್ಕೆ ವಾರದ ಸಂತೆ, ಜಾತ್ರಾ ಮಹೋತ್ಸವಗಳಲ್ಲಿ ಮಾರುತ್ತಾರೆ. ಸಂತೆಯಲ್ಲಿ ಈ ವಸ್ತುಗಳು ಹೆಚ್ಚು ಮಾರಾಟವಾಗುತ್ತವೆ. ಆದರೆ, ಲಾಕ್‌ ಡೌನ್‌ನಿಂದಾಗಿ ವಾರದ ಸಂತೆ, ಜಾತ್ರಾ ಮಹೋತ್ಸವ ನಿರ್ಬಂಧಿಸಲಾಗಿದ್ದು, ಮೇದಾರ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ.

ಪ್ರತಿ ಜಾತ್ರೆಯಲ್ಲಿ ಹತ್ತಾರು ಸಾವಿರ ವ್ಯಾಪಾರ ನಡೆಸುವ ಜತೆಗೆ ವಾರದ ಸಂತೆಯಲ್ಲಿ 1000 ರೂ.ವರೆಗೆ ದುಡಿಮೆ ಮಾಡುತ್ತಿದ್ದ ಮೇದಾರ ಕುಟುಂಬಗಳ ಅನ್ನವನ್ನು ಕೋವಿಡ್ ಕಿತ್ತುಕೊಂಡಿದೆ. ಜಾತ್ರೆಯಲ್ಲಿ ಮಾರಾಟ ಮಾಡಲು ತಯಾರಿಸಿದ ಹಲವಾರು ವಸ್ತುಗಳೆಲ್ಲ ಮನೆಯಲ್ಲಿ ಉಳಿದಿವೆ. ಕಳೆದ ಒಂದು ತಿಂಗಳಿಂದ ಯಾವುದೇ ವಹಿವಾಟು ಇಲ್ಲದ ಪರಿಣಾಮ ಜೀವನ ನಡೆಸುವುದು ಕಷ್ಟವಾಗುತ್ತದೆ ಎಂದು ಮೇದಾರರು ಅಳಲು ತೋಡಿಕೊಂಡಿದ್ದಾರೆ.

ಬಿದಿರು ತಂದು ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ನಮ್ಮ ಜೀವನ ಕೋವಿಡ್  ನಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ. ಜಾತ್ರೆ ಸೇರಿದಂತೆ ವಾರದ ಸಂತೆಗಳಲ್ಲಿ ನಾವು ತಯಾರಿಸಿದ ವಸ್ತಗಳು ಮಾರಾಟವಾಗುತ್ತವೆ. ಆದರೆ, ಕಳೆದ ಹಲವಾರು ದಿನಗಳಿಂದ ಜಾತ್ರೆ, ಸಂತೆ ರದ್ದಾದ ಪರಿಣಾಮ ವಸ್ತುಗಳು ಮಾರಾಟವಾಗಿಲ್ಲ. ಬಿದಿರಿನ ಹಣ ಕೊಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ತಿಪ್ಪವ್ವ ಮೇದಾರ

ಕರಕುಶಲ ವಸ್ತು ತಯಾರಿಸಿ ಮಾರಾಟ ಮಾಡುವ ಮೇದಾರ ಕುಟುಂಬಗಳು ಲಾಕ್‌ ಡೌನ್‌ದಿಂದ ಸಂಕಷ್ಟಕ್ಕೆ ಸಿಲುಕಿವೆ. ಸರಕಾರ ಮೇದಾರ ಕುಟುಂಬಗಳಿಗೆ ಸಹಾಯ ನೀಡಬೇಕು.
ಸಿಂದೂರ ಬೈರವಾಡಗಿ,
ದಲಿತ ಮುಖಂಡ

ಮುತ್ತು ಕುಪ್ಪಸ್ತ

ಟಾಪ್ ನ್ಯೂಸ್

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಅಶೋಕ್‌

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಆರ್‌. ಅಶೋಕ್‌

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಗೆ ದಾಖಲು

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಯಲ್ಲಿ ಚಿಕಿತ್ಸೆ

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ

Karnataka ಮುಷ್ಕರ ಕೈಬಿಟ್ಟ 108 ಆ್ಯಂಬುಲೆನ್ಸ್‌ ಸಿಬಂದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಅಶೋಕ್‌

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಆರ್‌. ಅಶೋಕ್‌

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಗೆ ದಾಖಲು

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಯಲ್ಲಿ ಚಿಕಿತ್ಸೆ

Jharkhand 32 crore discovery case: Two arrested

Jharkhand 32 ಕೋಟಿ ಪತ್ತೆ ಪ್ರಕರಣ: ಇಬ್ಬರ ಸೆರೆ

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.