ಕರ್ನಾಟಕ ಮಹಿಳಾ ಕ್ರಿಕೆಟ್ ತಂಡಕ್ಕೆ ವಿಜಯಪುರ ವಿದ್ಯಾರ್ಥಿನಿ ಆಯ್ಕೆ
Team Udayavani, Sep 24, 2022, 8:37 PM IST
ವಿಜಯಪುರ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 15 ಆಟಗಾರರ ಪಟ್ಟಿ ಶನಿವಾರ ಪ್ರಕಟವಾಗಿದ್ದು, ವಿಜಯಪುರ ಮೂಲದ ಅನ್ನಪೂರ್ಣ ಭೋಸಲೆ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿ ಆಯ್ಕೆಯಾಗಿದ್ದಾರೆ.
ಬಿಎಲ್‍ಡಿಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಮಹಿಳಾ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಬಿ.ಕಾಂ. ಮೊದಲ ವರ್ಷದಲ್ಲಿ ಓದುತ್ತಿರುವ ಅನ್ನಪೂರ್ಣ 19 ವರ್ಷದೊಳಗಿನ ಕರ್ನಾಟಕ ಮಹಿಳಾ ಟಿ 20 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹೈದರಾಬಾದಿನಲ್ಲಿ ಅಕ್ಟೋಬರ್ 1 ರಿಂದ 8 ವರೆಗೆ ಮಹಿಳೆಯರ ಟಿ 20 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
2019 ರಲ್ಲಿ 16 ವರ್ಷದೊಳಗಿನ ಏಕದಿನ ತಂಡಕ್ಕೆ ಆಯ್ಜೆಯಾಗಿದ್ದ ಅನ್ನಪೂರ್ಣ, 2021 ರಲ್ಲಿ 19ವರ್ಷದೊಳಗಿನ ಏಕದಿನ ತಂಡಕ್ಕೂ ಆಯ್ಕೆಯಾಗಿದ್ದಳು. ಇದೀಗ 19 ವರ್ಷದೊಳಗಿನ ಮಹಿಳಾ ಟಿ 20 ತಂಡಕ್ಕೆ ಆಯ್ಕೆಯಾಗಿದ್ದಾರೆ.
ಬಿಎಲ್‍ಡಿಇ ಸಂಸ್ಥೆಯ ಎಸ್‍ಬಿಎಸ್ ಮಹಿಳಾ ಕಲಾ ವಾಣಿಜ್ಯ ವಿಜ್ಞಾನ ಕಾಲೇಜಿನಲ್ಲೇ ಅಧ್ಯಯನ ಮಾಡಿದ್ದ ರಾಜೇಶ್ವರಿ ಗಾಯಕವಾಡ ಕರ್ನಾಟಕದ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
ಅನ್ನಪೂರ್ಣಾ ಸಾಧನೆಗೆ ಬಿಎಲ್‍ಡಿಇ ಸಂಸ್ಥೆಯ ಅಧ್ಯಕ್ಷರಾದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ. ಪಾಟೀಲ ಅಭಿನಂದಿಸಿದ್ದು, ವಿಜಯಪುರ ಜಿಲ್ಲೆಯ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಿಸುವ ಸಾಧನೆ ಮಾಡುವಂತೆ ಹಾರೈಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಿಕ್ಷಕರ ವರ್ಗಾವಣೆ: ಮೂರು ವರ್ಷ ಸೇವೆ ಸಲ್ಲಿಸಿದವರ ಪರಿಗಣನೆಗೆ ನಿರ್ಧಾರ
ವಿಜಯೇಂದ್ರಗೆ ಹೊಸ ಹೊಣೆ; ನಾನಾ ಮೋರ್ಚಾಗಳ ಜಿಲ್ಲಾ ಸಮಾವೇಶದ ಸಂಚಾಲಕ ಸ್ಥಾನ
ಮಾ. 23 – 30: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಸಚಿವ ಆರ್.ಅಶೋಕ್
ರಾಜ್ಯಕ್ಕೆ “ಹೆದ್ದಾರಿಗಳ’ ಕೊಡುಗೆ: ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ
ವಾಡಿ: ಮರಳು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಬಾಲಕ ಸಾವು
MUST WATCH
ಹೊಸ ಸೇರ್ಪಡೆ
ದೇವರ ಸ್ಮರಣೆಗೂ ಲಿಂಗತಟಸ್ಥ ಪದ ! ಇಂಗ್ಲೆಂಡ್ ಚರ್ಚ್ ಧರ್ಮಗುರುಗಳ ಸಲಹೆ
ಕೇರಳದಿಂದ ಪರಾರಿಯಾಗಿರುವ ಎಂಟು ಮಂದಿ ದಶಕಗಳು ಕಳೆದರೂ ಪತ್ತೆಯಿಲ್ಲ!
ಅಡಿಕೆಗೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಸಹಕಾರ ಸಚಿವರಿಗೆ ಮನವಿ: ಸಂಜೀವ ಮಠಂದೂರು
ರಾಶಿ ಫಲ: ಪರರಿಗೆ ಸಹಾಯ ಮಾಡಿದ ತೃಪ್ತಿ, ಉದ್ಯೋಗ ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ
ಬಡ್ಡಿ ಹೆಚ್ಚಳ: ಗೃಹ, ವಾಹನ ಸಾಲ ಮತ್ತಷ್ಟು ತುಟ್ಟಿ