ಮಾತನಾಡಲು ಅವಕಾಶವಿಲ್ಲ, ಪಾದಯಾತ್ರೆ ಬಿಟ್ಟು ನಮಗೆ ಬೇರೆ ದಾರಿಯಿಲ್ಲ; ರಾಹುಲ್ ಗಾಂಧಿ

Team Udayavani, Sep 30, 2022, 12:34 PM IST

ಪಾದಯಾತ್ರೆ ಬಿಟ್ಟು ನಮಗೆ ಬೇರೆ ದಾರಿಯಿಲ್ಲ; ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ

ಗುಂಡ್ಲುಪೇಟೆ/ಚಾಮರಾಜನಗರ: ನಮ್ಮ ವಿಚಾರಗಳನ್ನು ಹೇಳಲು ಅವಕಾಶವಿಲ್ಲ. ಸಂಸತ್ತಿನಲ್ಲಿ ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತದೆ, ವಿಧಾನಸಭೆಗಳಲ್ಲೂ ಮಾತನಾಡಲು ಅವಕಾಶವಿಲ್ಲ. ಆದ್ದರಿಂದ ಪಾದಯಾತ್ರೆ ಬಿಟ್ಟು ಬೇರೆ ದಾರಿ ನಮಗಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಗುಂಡ್ಲುಪೇಟೆಯ ಮೂಲಕ ಶುಕ್ರವಾರ ರಾಜ್ಯ ಪ್ರವೇಶಿಸಿದ ‘ಭಾರತ್ ಜೋಡೋ ಯಾತ್ರೆ’ಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಈ ಯಾತ್ರೆ ದೇಶದ ಧ್ವನಿ. ಇಲ್ಲಿ ನಾನೊಬ್ಬನೇ ಅಲ್ಲ.‌ ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಅವರ ಕಷ್ಟಗಳನ್ನು ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಜಾತಿ, ಧರ್ಮ, ಭಾಷೆ ಎಂಬ ಭೇದ ಭಾವ ಇಲ್ಲ. ಸಂವಿಧಾನ ರಕ್ಷಣೆಯ ಉದ್ದೇಶವನ್ನು ಹೊಂದಿರುವ ಈ ಯಾತ್ರೆಯನ್ನು ತಡೆಯಲು ಯಾವ ವ್ಯಕ್ತಿ, ಶಕ್ತಿಗೂ ಸಾಧ್ಯವಿಲ್ಲ’ ಎಂದರು.

ದೇಶ ಎದುರಿಸುತ್ತಿರುವ ಸಮಸ್ಯೆಗಳು, ಇಲ್ಲಿ ನಡೆಯುತ್ತಿರುವ ಹಿಂಸೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡಲು ಇರುವ ಮಾರ್ಗಗಳನ್ನು ವಿರೋಧ ಪಕ್ಷದ ಪಾಲಿಗೆ‌ ಮುಚ್ಚಲಾಗಿದೆ. ಪಾದಯಾತ್ರೆ ಬಿಟ್ಟು ಜನರ ಬಗ್ಗೆ ಮಾತನಾಡಲು ಬೇರೆ ದಾರಿಯೇ ಇಲ್ಲ ಎಂದರು.

‘ಬಿಜೆಪಿ, ಆರ್ ಎಸ್ಎಸ್ ವಿಚಾರಧಾರೆಗಳು ದೇಶದಲ್ಲಿ ದ್ವೇಷ, ಹಿಂಸೆಯನ್ನು ಸೃಷ್ಟಿಸುತ್ತಿವೆ. ದೇಶದ ಸಂವಿಧಾನ ಇಲ್ಲದಿದ್ದರೆ, ತ್ರಿವರ್ಣ ಧ್ಬಜಕ್ಕೆ ಬೆಲೆ ಇಲ್ಲ. ಸಂವಿಧಾನವನ್ಜು ರಕ್ಷಿಸಬೇಕಾಗಿದೆ.  ನಮ ಯಾತ್ರೆಯಲ್ಲಿ ದ್ವೇಷ, ಹಿಂಸೆ‌‌ ಇಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುತ್ತೇವೆ. ಯಾತ್ರೆಯಲ್ಲಿ ಯಾರಾದರೂ ಎಡವಿ ಬಿದ್ದರೆ, ಉಳಿದವರು ಅವರನ್ನು ಮೇಲಕ್ಕೆತ್ತಿ ಮುನ್ನಡೆಸುತ್ತಾರೆ. ಬಿದ್ದವನ ಜಾತಿ, ಧರ್ಮ, ಭಾಷೆ ಎಂದು ಯಾರೂ ಕೇಳುವುದಿಲ್ಲ’ ಎಂದು ರಾಹುಲ್ ಹೇಳಿದರು.

ಇದನ್ನೂ ಓದಿ:ಹಬ್ಬದ ಸಂದರ್ಭವೆಂದು ದರ ಏರಿಸಿದರೆ ಪರ್ಮಿಟ್ ರದ್ದು; ಸಾರಿಗೆ ಸಂಸ್ಥೆಗಳಿಗೆ ರಾಮುಲು ಎಚ್ಚರಿಕೆ

‘ನಾವಿಲ್ಲಿ ಉದ್ದುದ್ದ ಭಾಷಣ ಮಾಡುವುದಿಲ್ಲ. ಆರೇಳು ಗಂಟೆ ನಡೆಯುತ್ತೇವೆ. 15 ನಿಮಿಷ ಮಾತನಾಡುತ್ತೇವೆ. ಜನರ ಮಾತುಗಳನ್ನು ಕೇಳುತ್ತೇವೆ. ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ, ಸರ್ಕಾರಿ ಸಂಸ್ಥೆಗಳ ಖಾಸಗೀಕರರಣ ಬಗ್ಗೆ ಜನರು ಮಾತನಾಡುತ್ತಿದ್ದಾರೆ’ ಎಂದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಮಾತನಾಡಿ, ‘ರಾಹುಲ್ ಗಾಂಧಿ ಅವರು ಅಧಿಕಾರಕ್ಕಾಗಿ ಈ ಯಾತ್ರೆ ಹಮ್ಮಿಕೊಂಡಿಲ್ಲ. ದೇಶದ ಸಂಕಷ್ಟಗಳಿಗೆ‌ ಮುಕ್ತಿ ನೀಡುವುದು ಅವರ ಉದ್ದೇಶ. ದ್ವೇಷ, ಹಿಂಸೆ, ಜಾತಿ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಲಾಗಿದೆ. ಪ್ರೀತಿಯಿಂದ ದೇಶವನ್ನು ಜೋಡಿಸುವ ಆಶಯ ಅವರದು. 532 ಕಿ.ಮೀ ನಡೆಸಿದ್ದಾರೆ. ಇನ್ನೂ 3000 ಕಿ.ಮೀ ನಡೆಯುವುದಿದೆ. ಈ ಸಂಕಲ್ಪದಲ್ಲಿ ನಾವು ರಾಹುಲ್ ಜೊತೆಗಿರುತ್ತೇವೆ’ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಬಿಜೆಪಿಯವರು ಧರ್ಮ, ಕೋಮುವಾದ, ಜಾತಿ ಆಧಾರಿತ ರಾಜಕಾರಣ ಮಾಡುತ್ತಿದ್ದಾರೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಆತಂಕದಲ್ಲಿ ಬದುಕುವ ಸ್ಥಿತಿ‌ ನಿರ್ಮಾಣವಾಗಿದೆ. ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಲ್ಲ. ‘ದೇಶವನ್ನು ಧರ್ಮ, ಜಾತಿ ಆಧಾರದಲ್ಲಿ ವಿಭಜಿಸಬೇಕು ಎಂಬುದು ಅವರ ಉದ್ದೇಶ. ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಪ್ರಜಾಪ್ರಭುತ್ವ, ದೇಶದ ಸಂವಿಧಾನ ರಕ್ಷಣೆಗಾಗಿ ನಾವು ಎಲ್ಲ ತ್ಯಾಗಗಳಿಗೂ ಸಿದ್ಧರಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರು ಮಾಡುತ್ತಿರುವ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು’ ಎಂದರು.

ರಾಜ್ಯ ಪ್ರವೇಶಿಸಿದ ಪಾದಯಾತ್ರೆಯ ಮೊದಲ ದಿನ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಚ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಧ್ರುವನಾರಾಯಣ, ಬಿ ಕೆ ಹರಿಪ್ರಸಾದ್, ಆರ್ ವಿ ದೇಶಪಾಂಡೆ, ಎಂಬಿ ಪಾಟೀಲ್ ಸೇರಿದಂತೆ ಹಲವಾರು ಪ್ರಮುಖ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.

ಟಾಪ್ ನ್ಯೂಸ್

ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿ ತರಂಜಿತ್‌ ಸಿಂಗ್‌ ಸಂಧು ಮುಂದುವರಿಕೆ

ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿ ತರಂಜಿತ್‌ ಸಿಂಗ್‌ ಸಂಧು ಮುಂದುವರಿಕೆ

ಕೇಂದ್ರ ಜಲ ಆಯೋಗಕ್ಕೆ ಚಂದ್ರಶೇಖರ್‌ ಅಧ್ಯಕ್ಷ

ಕೇಂದ್ರ ಜಲ ಆಯೋಗಕ್ಕೆ ಚಂದ್ರಶೇಖರ್‌ ಅಧ್ಯಕ್ಷ

ಶಿವಮೊಗ್ಗ: ಮಗಳನ್ನು ಕಾಲೇಜಿಗೆ ಬಿಟ್ಟು ವಾಪಾಸ್‌ ಬರುವಾಗ ಟಿಪ್ಪರ್‌ ಢಿಕ್ಕಿ ; ಬೈಕ್‌ ಸವಾರ ಸಾವು

ಶಿವಮೊಗ್ಗ: ಮಗಳನ್ನು ಕಾಲೇಜಿಗೆ ಬಿಟ್ಟು ವಾಪಾಸ್‌ ಬರುವಾಗ ಟಿಪ್ಪರ್‌ ಢಿಕ್ಕಿ ; ಬೈಕ್‌ ಸವಾರ ಸಾವು

14–dsadsa

ಬೆಳಗಿನ ವಾಕಿಂಗ್‌ಗೆ ಹೋದಾಗ ಇಹಲೋಕ ತ್ಯಜಿಸಿದ ದೇವಸ್ಥಾನದ ಆನೆ ಲಕ್ಷ್ಮಿ

1-saddasd

ಡಿ.5 ರಂದು ಲಾಲು ಪ್ರಸಾದ್ ಯಾದವ್ ಅವರಿಗೆ ಕಿಡ್ನಿಕಸಿ: ತೇಜಸ್ವಿ

1-wqewqwqe

ಗೆಹ್ಲೋಟ್-ಪೈಲಟ್ ಏಕತೆಯ ಪ್ರದರ್ಶನ ಕೇವಲ ‘ರಾಜಕೀಯ ವಿರಾಮ’ ಎಂದ ಬಿಜೆಪಿ

ವಿಜಯಪುರ: ಅನಾಮಧೇಯನಿಂದ ನಗರದ ಮತದಾರರ ಮಾಹಿತಿ ಸಂಗ್ರಹ

ವಿಜಯಪುರ: ಅನಾಮಧೇಯನಿಂದ ನಗರದ ಮತದಾರರ ಮಾಹಿತಿ ಸಂಗ್ರಹಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿವಮೊಗ್ಗ: ಮಗಳನ್ನು ಕಾಲೇಜಿಗೆ ಬಿಟ್ಟು ವಾಪಾಸ್‌ ಬರುವಾಗ ಟಿಪ್ಪರ್‌ ಢಿಕ್ಕಿ ; ಬೈಕ್‌ ಸವಾರ ಸಾವು

ಶಿವಮೊಗ್ಗ: ಮಗಳನ್ನು ಕಾಲೇಜಿಗೆ ಬಿಟ್ಟು ವಾಪಾಸ್‌ ಬರುವಾಗ ಟಿಪ್ಪರ್‌ ಢಿಕ್ಕಿ ; ಬೈಕ್‌ ಸವಾರ ಸಾವು

ಪಿಎಫ್ಐ ನಿಷೇಧಿಸಿ ಕೇಂದ್ರ ಸರ್ಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್

ಪಿಎಫ್ಐ ನಿಷೇಧಿಸಿ ಕೇಂದ್ರ ಸರ್ಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್

mb-patil

ಸಿದ್ದು, ಡಿಕೆಶಿ ಮಾತ್ರವಲ್ಲ.. ಸಿಎಂ ಆಗುವವರು ಇನ್ನೂ ಹಲವರಿದ್ದಾರೆ: ಎಂ.ಬಿ.ಪಾಟೀಲ್

ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು: ಸೂಕ್ತ ವೈದ್ಯರು, ಅಂಬ್ಯುಲೆನ್ಸ್‌ ಇಲ್ಲದ ಆರೋಪ; ಪ್ರತಿಭಟನೆ

ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು: ಸೂಕ್ತ ವೈದ್ಯರು, ಅಂಬ್ಯುಲೆನ್ಸ್‌ ಇಲ್ಲದ ಆರೋಪ; ಪ್ರತಿಭಟನೆ

ಸಿರಿಗೇರಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಉಮಾಪತಿ, ಉಪಾಧ್ಯಕ್ಷರಾಗಿ ದಾನಪ್ಪ ಅವಿರೋಧ ಆಯ್ಕೆ

ಸಿರಿಗೇರಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಉಮಾಪತಿ, ಉಪಾಧ್ಯಕ್ಷರಾಗಿ ದಾನಪ್ಪ ಅವಿರೋಧ ಆಯ್ಕೆ

MUST WATCH

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

ಹೊಸ ಸೇರ್ಪಡೆ

ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿ ತರಂಜಿತ್‌ ಸಿಂಗ್‌ ಸಂಧು ಮುಂದುವರಿಕೆ

ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿ ತರಂಜಿತ್‌ ಸಿಂಗ್‌ ಸಂಧು ಮುಂದುವರಿಕೆ

ಕೇಂದ್ರ ಜಲ ಆಯೋಗಕ್ಕೆ ಚಂದ್ರಶೇಖರ್‌ ಅಧ್ಯಕ್ಷ

ಕೇಂದ್ರ ಜಲ ಆಯೋಗಕ್ಕೆ ಚಂದ್ರಶೇಖರ್‌ ಅಧ್ಯಕ್ಷ

ಶಿವಮೊಗ್ಗ: ಮಗಳನ್ನು ಕಾಲೇಜಿಗೆ ಬಿಟ್ಟು ವಾಪಾಸ್‌ ಬರುವಾಗ ಟಿಪ್ಪರ್‌ ಢಿಕ್ಕಿ ; ಬೈಕ್‌ ಸವಾರ ಸಾವು

ಶಿವಮೊಗ್ಗ: ಮಗಳನ್ನು ಕಾಲೇಜಿಗೆ ಬಿಟ್ಟು ವಾಪಾಸ್‌ ಬರುವಾಗ ಟಿಪ್ಪರ್‌ ಢಿಕ್ಕಿ ; ಬೈಕ್‌ ಸವಾರ ಸಾವು

14–dsadsa

ಬೆಳಗಿನ ವಾಕಿಂಗ್‌ಗೆ ಹೋದಾಗ ಇಹಲೋಕ ತ್ಯಜಿಸಿದ ದೇವಸ್ಥಾನದ ಆನೆ ಲಕ್ಷ್ಮಿ

1-saddasd

ಡಿ.5 ರಂದು ಲಾಲು ಪ್ರಸಾದ್ ಯಾದವ್ ಅವರಿಗೆ ಕಿಡ್ನಿಕಸಿ: ತೇಜಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.