Udayavni Special

ಸೆಸ್ಕ್ ಕಿರಿಯ ಎಂಜಿನಿಯರ್‌ ಮೇಲೆ ಪವರ್‌ಮ್ಯಾನ್‌ ಮಚ್ಚಿನಿಂದ ಹಲ್ಲೆ


Team Udayavani, Jan 28, 2021, 4:37 PM IST

incident held at  chamarajanagara

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್)ದ ಪವರ್‌ಮ್ಯಾನ್‌ ಓರ್ವರು ಕಿರಿಯ ಎಂಜಿನಿಯರ್‌ ಅವರಿಗೆ ಕಚೇರಿಯಲ್ಲೇ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಬದನಗುಪ್ಪೆಯಲ್ಲಿ ಬುಧವಾರ ಜರುಗಿದೆ.

ಬದನಗುಪ್ಪೆ ಸೆಸ್ಕ್ ಶಾಖಾ ಕಚೇರಿಯ ಶಾಖಾ ಅಧಿಕಾರಿ, ಪ್ರಭಾರ ಕಿರಿಯ ಎಂಜಿನಿಯರ್‌ ಚಂದ್ರನಾಯಕ ಹಲ್ಲೆ ಗೊಳಗಾದವರು. ಪವರ್‌ಮ್ಯಾನ್‌ ಆರ್‌. ಎಂ. ಮಹದೇವಸ್ವಾಮಿ ಹಲ್ಲೆ ನಡೆಸಿದ ವರಾಗಿದ್ದು, ಆರೋಪಿಯನ್ನು ಪೊಲೀ ಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಚಂದ್ರನಾಯಕ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪವರ್‌ಮ್ಯಾನ್‌ ಮಹದೇವಸ್ವಾಮಿಯನ್ನು ಕಾರ್ಯನಿರ್ವಾಹಕ ಇಂಜಿನಿಯರ್‌ ಅವರು ದುರ್ನಡತೆ, ಅವಿಧೇ ಯತೆ, ಅನಧಿಕೃತ ಗೈರು ಹಾಜರಿ ಮತ್ತು ಕರ್ತವ್ಯ ನಿರತ ಅಧಿಕಾರಿಗೆ ಅಡಚಣೆ ಮಾಡಿದ ಕಾರಣದಿಂದ ಸೇವೆಯಿಂದ ಅಮಾನತು ಗೊಳಿಸಿದ್ದಾರೆ.

ಬದನಗುಪ್ಪೆ ಶಾಖಾ ಕಚೇರಿಯಲ್ಲಿ ಕಿರಿಯ ಎಂಜಿನಿಯರ್‌ ಆಗಿದ್ದ ಚಂದ್ರನಾಯಕ್‌ ಹಾಗೂ ಪವರ್‌ಮ್ಯಾನ್‌ ಮಹದೇವಸ್ವಾಮಿ ನಡುವೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಪದೇ ಪದೆ ಇವರಿಬ್ಬರ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆಯುತ್ತಿತ್ತೆನ್ನಲಾಗಿದೆ. ಜ. 26ರಿಂದ ಮೂರು ದಿವಸ ಚಾಮರಾಜ ನಗರ ಉಪವಿಭಾಗ ಕಚೇರಿಯಲ್ಲಿಕರ್ತವ್ಯ ನಿರ್ವಹಿಸುವಂತೆ ಕಿರಿಯ ಎಂಜಿನಿಯರ್‌ ಸೂಚಿಸಿದ್ದರು.

ಇದನ್ನೂ ಓದಿ:ಪೊಲೀಸ್‌ ಪಹರೆಯಲ್ಲಿ ಹಳ್ಳಿ ಸುತ್ತಿದ ಮಾಜಿ ಶಾಸಕ!

ಮಹದೇವಸ್ವಾಮಿ ಜ.26ರಂದು ಒಂದು ದಿನ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಬುಧವಾರ ಬೆಳಿಗ್ಗೆ ಬದನಗುಪ್ಪೆ ಶಾಖಾ ಕಚೇರಿ ಕೆಲಸದಲ್ಲಿ ಬರೆಯುತ್ತಾ ಕುಳಿತಿದ್ದ ಕಿರಿಯ ಎಂಜಿನಿಯರ್‌ ಚಂದ್ರನಾಯಕ ಅವರ ಬಳಿ ತೆರಳಿದ ಮಹದೇವಸ್ವಾಮಿ ಮಚ್ಚಿನಿಂದ ಅವರ ತಲೆಗೆ, ಕೈಗೆ, ಹೊಡೆದಿದ್ದಾನೆ.

ಅಚಾನಕ್‌ ಆಗಿ ನಡೆದ ಈ ಘಟನೆ ಕಂಡ ಇತರ ಸಿಬ್ಬಂದಿ ಚಂದ್ರನಾಯಕ್‌ ಅವರ ರಕ್ಷಣೆಗೆ ಧಾವಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂಲತಃ ಚಾಮರಾಜನಗರ ರಾಮ ಸಮುದ್ರದವರಾದ ಪವರ್‌ಮ್ಯಾನ್‌ ಮಹದೇವ ಸ್ವಾಮಿ ಅವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೆಸ್ಕ್ ಇಇ ಅವರು ಘಟನೆಯ ಕುರಿತು ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.

ಟಾಪ್ ನ್ಯೂಸ್

ಕಾರ್ಮಿಕರ ಜೊತೆ ಚಹಾ ಎಲೆ ಬಿಡಿಸಿದ ಪ್ರಿಯಾಂಕಾ : ವಿಡಿಯೋ ನೋಡಿ!

Indian Americans are divided about India’s future, but still broadly support Modi, finds survey

ಅನಿವಾಸಿ ಭಾರತೀಯರಲ್ಲಿ ಮೋದಿ ಬಗ್ಗೆ ಮಿಶ್ರ ಅಭಿಪ್ರಾಯ : ಅಧ್ಯಯನ ವರದಿ

ಪ್ರಯಾಣದ ವೇಳೆ ವಿಮಾನದಲ್ಲೇ ಪ್ರಯಾಣಿಕ ನಿಧನ; ಕರಾಚಿಯಲ್ಲಿ ವಿಮಾನ ತುರ್ತು ಲ್ಯಾಂಡಿಂಗ್

ಪ್ರಯಾಣದ ವೇಳೆ ವಿಮಾನದಲ್ಲೇ ಪ್ರಯಾಣಿಕ ನಿಧನ; ಕರಾಚಿಯಲ್ಲಿ ವಿಮಾನ ತುರ್ತು ಲ್ಯಾಂಡಿಂಗ್

Untitled-2

ಅವಕಾಶ ಸಿಕ್ಕರೆ ಖಂಡಿತ ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತೇನೆ : ಎಚ್‌. ವಿಶ್ವನಾಥ್

ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮಾರ ಈ ಫೋಟೋ..!

ಹತ್ರಾಸ್ ಲೈಂಗಿಕ ಕಿರುಕುಳ ಕೇಸ್: ಮಗಳ ಎದುರಲ್ಲೇ ತಂದೆಯನ್ನು ಹತ್ಯೆಗೈದ ಆರೋಪಿ

ಹತ್ರಾಸ್ ಲೈಂಗಿಕ ಕಿರುಕುಳ ಕೇಸ್: ಮಗಳ ಎದುರಲ್ಲೇ ತಂದೆಯನ್ನು ಹತ್ಯೆಗೈದ ಆರೋಪಿ

puneeth raj

ಧಾರಾವಾಹಿ ನಿರ್ಮಾಣಕ್ಕೆ ಮುಂದಾದ ಪುನೀತ್ ರಾಜಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದಿನಿಂದ ಹಿರಿಯ ನಾಗರಿಕರಿಗೆ ಕೋವಿಡ್‌ ಲಸಿಕೆ

ಇಂದಿನಿಂದ ಹಿರಿಯ ನಾಗರಿಕರಿಗೆ ಕೋವಿಡ್‌ ಲಸಿಕೆ

2ಎಗೆ ಗೌಡ ಲಿಂಗಾಯತರಿಂದ ಬೆಂಗಳೂರು ಚಲೋ

2ಎಗೆ ಗೌಡ ಲಿಂಗಾಯತರಿಂದ ಬೆಂಗಳೂರು ಚಲೋ

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

Untitled-1

ಮತಾಂತರ ವೈಯಕ್ತಿಕ ಆಯ್ಕೆ

ನನ್ನ  ಸೋಲಿಗೆ ಬಹುಜನ ವಿದ್ಯಾರ್ಥಿ ಸಂಘದ ಅಪಪ್ರಚಾರವೂ ಕಾರಣ : ಆರ್‌. ಧ್ರುವನಾರಾಯಣ

ನನ್ನ ಸೋಲಿಗೆ ಬಹುಜನ ವಿದ್ಯಾರ್ಥಿ ಸಂಘದ ಅಪಪ್ರಚಾರವೂ ಕಾರಣ : ಆರ್‌. ಧ್ರುವನಾರಾಯಣ

MUST WATCH

udayavani youtube

ಹಳೆಯ ವೃತ್ತ ಪತ್ರಿಕೆಯಿಂದ ಶಿವಾಜಿ ಮಹಾರಾಜರ ಕಲಾಕೃತಿ:

udayavani youtube

ಚಿಟ್ ಚಾಟ್ ವಿಥ್ ಸಿಂಗರ್ ಶ್ರೀ ಹರ್ಷ | Interview with Shree Harsha | Harshadhwani

udayavani youtube

FRIDGE ನೀರು ದೇಹದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ?

udayavani youtube

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್‌.ಶೆಟ್ಟಿ

udayavani youtube

30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು

ಹೊಸ ಸೇರ್ಪಡೆ

ಈ ಬಾರಿಯಾದರೂ ಈಡೇರುವವೇ ಬೇಡಿಕೆ?

ಈ ಬಾರಿಯಾದರೂ ಈಡೇರುವವೇ ಬೇಡಿಕೆ?

ಕಾರ್ಮಿಕರ ಜೊತೆ ಚಹಾ ಎಲೆ ಬಿಡಿಸಿದ ಪ್ರಿಯಾಂಕಾ : ವಿಡಿಯೋ ನೋಡಿ!

ಅನುದಾನ ಸಂಪೂರ್ಣ ವಿನಿಯೋಗಕ್ಕೆ ಕ್ರಮ ಕೈಗೊಳ್ಳಿ

ಅನುದಾನ ಸಂಪೂರ್ಣ ವಿನಿಯೋಗಕ್ಕೆ ಕ್ರಮ ಕೈಗೊಳ್ಳಿ

2ನೇ ಹಂತದ ಕೋವಿಡ್ ಲಸಿಕೆಗೆ ಚಾಲನೆ

2ನೇ ಹಂತದ ಕೋವಿಡ್ ಲಸಿಕೆಗೆ ಚಾಲನೆ

Indian Americans are divided about India’s future, but still broadly support Modi, finds survey

ಅನಿವಾಸಿ ಭಾರತೀಯರಲ್ಲಿ ಮೋದಿ ಬಗ್ಗೆ ಮಿಶ್ರ ಅಭಿಪ್ರಾಯ : ಅಧ್ಯಯನ ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.