ಹನೂರು : ಬಸ್‌ ಪಲ್ಟಿ; ಮಹಿಳೆಯ ಕೈ ತುಂಡು, ಹಲವರಿಗೆ ಗಾಯ 

Team Udayavani, Aug 11, 2018, 11:55 AM IST

ಚಾಮರಾಜನಗರ : ಭೀಮನ ಅಮಾವಾಸ್ಯೆಗೆಂದು ಮಹದೇಶ್ವರಕ್ಕೆ ತೆರಳುತ್ತಿದ್ದ ಭಕ್ತರಿದ್ದ ಮಿನಿ ಬಸ್‌ ಪಲ್ಟಿಯಾಗಿ ಹಲವರು ಗಾಯಗೊಂಡಿರುವ ಘಟನೆ  ಶನಿವಾರ ನಡೆದಿದೆ. 

ಎದುರಿನಿಂದ ಬರುತ್ತಿದ್ದ ಇನ್ನೊಂದು ವಾಹನಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಸಂಭವಿಸಿದ ಈ ಅವಘಡದಲ್ಲಿ  ಹನೂರಿನ ಬೊಪ್ಪೆ ಗೌಡನಪುರ ನಿವಾಸಿ ಅಮ್ಮಣ್ಣಿಯಮ್ಮ (55) ಎನ್ನುವವರ ಕೈ ತುಂಡಾಗಿದೆ. ಹಲವರು ಸಣ್ಣ ಪುಟ್ಟ ಗಾಯಗಳಿಗೊಳಗಾಗಿದ್ದಾರೆ. 

ಗಾಯಾಳಾಗಿದ್ದ ಅಮ್ಮಣ್ಣಿಯಮ್ಮ ನರಳುತ್ತಿದ್ದರೂ ಯಾರೂ ಮಾನವೀಯತೆ ತೋರದೆ ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಅಪಘಾತವಾಗಿ ಒಂದೂವರೆ ಗಂಟೆ  ಕಳೆದ ಬಳಿಕ ಅಂಬುಲೆನ್ಸ್‌ ಬಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 

ಹನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಪೊಲೀಸರು  ಸ್ಥಳಕ್ಕಾಗಮಿಸಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ