ಸದಾಶಿವ ವರದಿ ಜಾರಿಗೆ ಬೃಹತ್‌ ಪ್ರತಿಭಟನೆ

ಕೇಂದ್ರಕ್ಕೆ ವರದಿ ಶಿಫಾರಸು ಮಾಡಲು ಆಗ್ರಹ „ ಬೇಡಿಕೆ ಈಡೇರಿಕೆಗೆ ಸಹಸ್ರಾರು ಮಂದಿಯಿಂದ ಪ್ರತಿಭಟನಾ ಮೆರವಣಿಗೆ

Team Udayavani, Oct 13, 2021, 5:47 PM IST

ಸದಾಶಿವ ವರದಿಗೆ ವಿರೋಧ

ಚಾಮರಾಜನಗರ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿ ಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ, ಜಿಲ್ಲಾ ಬಾಬೂ ಜಗಜೀವನರಾಂ ಸಂಘಗಳ ಒಕ್ಕೂಟ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲೆಯ ಐದು ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಮಾದಿಗ ಸಮುದಾಯದವರು ಮೆರವಣಿಗೆ ಹೊರಟರು. ಭುವನೇಶ್ವರಿ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಸದಾಶಿವ ಆಯೋಗ ವರದಿ ಜಾರಿಗೆ ಅಗ್ರಹಿಸಿದರು. ಬಳಿಕ ಜೋಡಿ ರಸ್ತೆಯ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತಲುಪಿ, ಮುಂಭಾಗ ಧರಣಿ ನಡೆಸಿದರು. ಸ್ಥಳಕ್ಕಾಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ್‌, ಕರ್ನಾಟಕದಲ್ಲಿ ಮಾದಿಗ ಜನಾಂಗವು ಎಲ್‌.ಜಿ. ಹಾವನೂರು ವರದಿ ಪ್ರಕಾರ ಪರಿಶಿಷ್ಟ ಜಾತಿಯಲ್ಲಿ ಶೇ. 57.3 ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಸುಮಾರು 30 ವರ್ಷಗಳಿಂದಲೂ ಜನಸಂಖ್ಯಾವಾರು ಒಳಮೀಸ ಲಾತಿ ನೀಡುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದುವರಿಗೆ ನಮ್ಮನ್ನು ಆಳಿದ ಸರ್ಕಾರಗಳು ಓಟ್‌ ಬ್ಯಾಂಕ್‌ ರಾಜಕಾರಣ ಮಾಡಿಕೊಂಡು ಬಂದಿದೆ.

ಇದನ್ನೂ ಓದಿ;- ಚಿರತೆ ಸಂಚಲನ : ಹಣಕುಣಿ ಗ್ರಾಮಕ್ಕೆ ಶಾಸಕರು, ಅರಣ್ಯ ಅಧಿಕಾರಿಗಳ ತಂಡ ದೌಡು

ಮಾದಿಗ ಜನಾಂಗವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿವೆ ಎಂದು ದೂರಿದರು. ಮಾದಿಗ ಜನಾಂಗವು ಬಹಳ ಹಿಂದುಳಿದ ಸಮು ದಾಯವಾಗಿದ್ದು, ರಾಜಕೀಯ, ಶೈಕ್ಷಣಿಕ ಹಾಗು ಉದ್ಯೋಗದಲ್ಲಿ ಮೀಸಲಾತಿಯನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಸಾಧ್ಯವಾಗದೆ ಹಳ್ಳಿ ಹಳ್ಳಿಗಳಲ್ಲಿ ಕಷ್ಟದಿಂದ ಜೀವನ ನಡೆಸುತ್ತಿದ್ದಾರೆ. ವಿಧಾನಸಭೆಯ ಚುನಾವಣೆಯಲ್ಲಿ 36 ಮಂದಿ ಮೀಸಲಾತಿಯಿಂದ ಗೆದ್ದು ಶಾಸಕರಾದರೂ, ಮಾದಿಗ ಸಮುದಾಯದ 5 ಮಂದಿ ಮಾತ್ರ ಶಾಸಕರಾಗಲು ಸಾಧ್ಯವಾಗುತ್ತಿದೆ. ಅದೇ ಇತರೇ ಜಾತಿಗಳಿಂದ ಮೀಸಲಾತಿ ಪಡೆದ 15 ರಿಂದ 20 ಮಂದಿ ವಿಧಾನಸಭೆ ಆಯ್ಕೆಯಾಗುತ್ತಿದ್ದಾರೆ.

ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮು ದಾಯವರು ಆಯ್ಕೆಯಾಗಲು ಸಾಧ್ಯವಾಗುತ್ತದೆ. ಮೀಸಲಾತಿಯನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಹಿರಿಯ ಮುಖಂಡ ಆರ್‌.ಎಂ. ಕಾಂತರಾಜು, ಮುಖಂಡರಾದ ಅರಕಲವಾಡಿ ನಾಗೇಂದ್ರ, ಪಾಳ್ಯರಾಚಪ್ಪ, ಶಿವಕುಮಾರ್‌, ರಾಚಪ್ಪ ರಾಮಸಮುದ್ರ, ಮರಪ್ಪ, ಎಂ. ರಾಜು, ದೇಮಹಳ್ಳಿ ನಾಗರಾಜು, ಅಂಕಳ್ಳಿ ಸಿದ್ದಯ್ಯ, ರಾಜೇಶ್‌ವಕೀಲರು, ಚಿನ್ನಸ್ವಾಮಿ, ಬಾಲರಾಜು, ರಂಗಸ್ವಾಮಿ, ಚಾಮರಾಜು, ಬಿ. ಗುರುಸ್ವಾಮಿ ಜೆ. ಜಗದೀಶ್‌, ಗೋಪಾಲ. ಸೋಮು, ಕಾಮಗೆರೆ ಮದಹೇವ್‌, ಬೂದಬಾಳು ಮಹದೇವ್‌, ಕರಿಯನಪುರ ರಾಚಪ್ಪ, ಹಸಗೂಲಿ ಸಿದ್ದಯ್ಯ ಮತ್ತಿತರರು ಭಾಗವಹಿಸಿದ್ದರು. ಬಲಾಡ್ಯರಿಗೆ ಮೀಸಲಾತಿ ಪ್ರಯೋಜನ ಮಾತನಾಡಿ, ಡಾ. ಬಿ.ಆರ್‌.ಅಂಬೇಡ್ಕರ್‌ ತಳ ಮಟ್ಟದಲ್ಲಿರುವ ಎಲ್ಲರಿಗೂ ಮೀಸಲಾತಿ ಸೌಲಭ್ಯ ದೊರೆಯ ಬೇಕೆಂಬ ಆಶಯ ಹೊಂದಿದ್ದರು.

ಆದರೆ, ಈಗ ಬಲಾಡ್ಯರಿಗೆ ಮಾತ್ರ ಮೀಸಲಾತಿಯ ಪ್ರಯೋಜನ ದೊರಕುತ್ತಿದೆ. ನಿಜವಾದ ಅಸ್ಪೃಶ್ಯ ಜಾತಿಗೆ ಸೇರಿದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ತಾರತಮ್ಯವನ್ನು ಸರಿಪಡಿಸಬೇಕು. ನಮ್ಮ ಹೋರಾಟ ನಿರಂತರವಾಗಿರುತ್ತದೆ. ಇಂದು ಜಿಲ್ಲಾ ಮಟ್ಟದಲ್ಲಿ ನಡೆದಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ರಾಜಧಾನಿಯಲ್ಲಿ ಪ್ರತಿಭಟನೆ ಮಾಡಲು ಮುಂದಾಗಬೇಕು ಎಂದು ಬಾಬೂ ಜಗಜೀವನರಾಂ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ ಮನವಿ ಮಾಡಿದರು.

ಟಾಪ್ ನ್ಯೂಸ್

1-wqewqeqwe

Prajwal ಪೆನ್ ಡ್ರೈವ್ ಬಿಡುಗಡೆ ಮಾಡಿದ್ದ ದೇವರಾಜೇ ಗೌಡ ಅರೆಸ್ಟ್

1-qewqeqwe

I am back ; ಜೈಲಿನಿಂದ ಬಿಡುಗಡೆಗೊಂಡು ಚುನಾವಣ ಪ್ರಚಾರಕ್ಕೆ ಧುಮುಕಿದ ಕೇಜ್ರಿವಾಲ್

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

ಖರ್ಗೆ

ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

3-kollegala

Kollegala: ಖಾಸಗಿ ಬಸ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

1-ewqeqwqewq

Gundlupete; ಸತತ‌ 25 ದಿನಗಳ ಕಾಲ ಕೂಂಬಿಂಗ್ ಯಶಸ್ವಿ:ಪುಂಡಾನೆ ಸೆರೆ

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-wqewqeqwe

Prajwal ಪೆನ್ ಡ್ರೈವ್ ಬಿಡುಗಡೆ ಮಾಡಿದ್ದ ದೇವರಾಜೇ ಗೌಡ ಅರೆಸ್ಟ್

1-qewqeqwe

I am back ; ಜೈಲಿನಿಂದ ಬಿಡುಗಡೆಗೊಂಡು ಚುನಾವಣ ಪ್ರಚಾರಕ್ಕೆ ಧುಮುಕಿದ ಕೇಜ್ರಿವಾಲ್

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Election Commission ಮೇಲ್ಮನೆ ಚುನಾವಣೆ: ಬಲಗೈ ತೋರು ಬೆರಳಿಗೆ ಶಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.