Udayavni Special

ಚಿಕ್ಕಬಳ್ಳಾಪುರದಲ್ಲಿ 4ನೇ ಹಂತದ ಪೂರ್ಣ ಲಾಕ್‌ ಘೋಷಣೆ


Team Udayavani, Jun 8, 2021, 12:45 PM IST

Untitled-1

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಮೂರು ಹಂತದಲ್ಲಿ ಸಂಪೂರ್ಣ ಲಾಕ್‌ಡೌನ್‌ ಯಶಸ್ವಿಯಾಗಿದ್ದು, ಮೊತ್ತಮ್ಮೆ ಜೂನ್‌ 10ರ ಬೆಳಗ್ಗೆ 6 ಗಂಟೆಯಿಂದ 14ರ ಬೆಳಗ್ಗೆ 6 ಗಂಟೆಯವರೆಗೆ ಜಿಲ್ಲಾದ್ಯಂತ ಸಂಪೂರ್ಣ ವಾಗಿ ಲಾಕ್‌ಡೌನ್‌ ಮಾಡಲು ಜಿಲ್ಲಾ ಕಾರ್ಯಪಡೆ ಸಭೆಯಲ್ಲಿ ತೀರ್ಮಾನಿಸಲಾಗಿದೆಯೆಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದ್ದಾರೆ.

ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿಗಳು ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಅವರ ಸೂಚನೆಯ ಮೇರೆಗೆ ಮೂರು ಹಂತದಲ್ಲಿ ಜಿಲ್ಲೆಯಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವೊಂದು ರಿಯಾಯ್ತಿ ನೀಡಲಾಗಿದೆ ಇನ್ನೂಳಿದಂತೆ ಜಿಲ್ಲೆಯಲ್ಲಿ ಸೋಂಕು ನಿಯಂತ್ರಿಸಲು ಮತ್ತೂಮ್ಮೆ ಲಾಕ್‌ಡೌನ್‌ ಅನಿವಾರ್ಯವಾಗಿದ್ದು, ಹೀಗಾಗಿ ಜೂನ್‌10 ರ ಬೆಳಗ್ಗೆ 6 ಗಂಟೆಯಿಂದ ಜೂನ್‌ 14ರ ಬೆಳಗ್ಗೆ 6 ಗಂಟೆಯವರೆಗೆ ಜಿಲ್ಲಾದ್ಯಂತ ಸಂಪೂರ್ಣವಾಗಿ ಲಾಕ್‌ಡೌನ್‌ ಘೋಷಣೆ ಮಾಡಿದ್ದು ನಾಗರಿಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಹಾಲಿನ ಮಳಿಗೆಗಳನ್ನು ತೆರೆದು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯಾಪಾರ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಹಾಗೆಯೇ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಆಸ್ಪತ್ರೆಯ ಸಮೀಪ ಇರುವ ಹೋಟೆಲ್‌ಗ‌ಳಲ್ಲಿ ಪಾರ್ಸಲ್‌ ಮೂಲಕ ಉಪಹಾರ ನೀಡಲು ಅವಕಾಶವನ್ನು ಒದಗಿಸಲಾಗಿದೆ ಇನ್ನೂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೆಟ್ರೋಲ್‌ ಬಂಕ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸಿದ್ದು ನಗರ ಪ್ರದೇಶದಲ್ಲಿರುವ ಪೆಟ್ರೋಲ್‌ ಬಂಕ್‌ಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಮೂರು ಹಂತದಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿದ ಪರಿಣಾಮ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಗೊಂಡಿದೆ. ಜೂ. 10 ರಿಂದ 13 ವರೆಗೆ ಜಿಲ್ಲೆಯ ತಹಶೀಲ್ದಾರ್‌ ಅವರು ಮದುವೆ ಕಾರ್ಯಕ್ರಮಗಳು ನಡೆಸಲು ಅನುಮತಿ ನೀಡಿದಲ್ಲಿ ಕೇವಲ ಇಪ್ಪತ್ತು ಜನರಿಗೆ ಮಾತ್ರ ಮದುವೆಗೆ ಅವಕಾಶ ಕಲ್ಪಿಸಿ ಆಯಾ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾ ಕಾರಿಗಳು , ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮದುವೆಕಾರ್ಯಕ್ರಮದಲ್ಲಿ ಅನುಮತಿಸಲಾದ 20 ಜನಕ್ಕಿಂತ ಸೇರಿಲ್ಲ ಎಂಬುದರ ಬಗ್ಗೆ ಹಾಗೂ ಕೋವಿಡ್‌ ಸಮುಚಿತ ವರ್ತನೆಗಳಾದ (ಸಿ.ಎ.ಬಿ) ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸರ್‌ ಬಳಕೆ ಮಾಡುವುದರ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ವಿಡಿಯೋಗ್ರಫಿ ಮೂಲಕ ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ.

ಜಿಲ್ಲೆಯ ಎಲ್ಲಾ ಎಪಿಎಂಸಿ ಮಾರ್ಕೆಟ್‌ಗಳು ರಾಜ್ಯ ಸರ್ಕಾರದ ಆದೇಶದಂತೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಕೋವಿಡ್‌ ಮಾರ್ಗಸೂಚಿ ಅನುಸರಿಸಿ ಸ್ಥಳೀಯವಾಗಿ ವ್ಯಾಪಾರ ವ್ಯವಹಾರ ನಡೆಸಬೇಕು. ಅಂತೆಯೇ ಕೃಷಿ ಪರಿಕರ ಮಾರಾಟ ಮಳಿಗೆಗಳನ್ನು ಬೆಳಗ್ಗೆ 6 ಗಂಟೆಯಿಂದ10 ಗಂಟೆವರೆಗೆ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಕೃಷಿ ಪರಿಕರಗಳನ್ನು ಮಾರಾಟ ಮಾಡಲು ಅನುಮತಿ ನೀಡಲಾಗಿದೆ.

ಲಾಕ್‌ಡೌನ್‌ ಯಶಸ್ವಿಗೆ ಸಹಕಾರ ನೀಡಿ :

ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಸೋಂಕು ಮುಕ್ತ ಮಾಡುವ, ಪಾಸಿಟಿವ್‌ ಪ್ರಕರಣಗಳನ್ನು ಕಡಿಮೆ ಮಾಡಲು ನಾಲ್ಕನೇ ಹಂತದಲ್ಲಿ ಜಿಲ್ಲಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ಯಶಸ್ವಿಗೊಳಿಸಲು ನಾಗರಿಕರು ಸಹಕಾರ ನೀಡಿದ್ದು ಜೂನ್‌10 ರಿಂದ 13 ವರೆಗೆ ಜಾರಿಯಾಗಲಿರುವ ಲಾಕ್‌ಡೌನ್‌ ಯಶಸ್ವಿಗೊಳಿಸಲು ಸಹಕಾರ ನೀಡಿ ಸೋಂಕು ಮುಕ್ತ ಜಿಲ್ಲೆ ಮಾಡಲು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಆರ್‌. ಲತಾ ಕೋರಿದ್ದಾರೆ.

ಟಾಪ್ ನ್ಯೂಸ್

ಎಲ್‌ಜೆಪಿಗೆ ಲೈಂಗಿಕ ಕಿರುಕುಳದ ಸವಾಲು

ಎಲ್‌ಜೆಪಿಗೆ ಲೈಂಗಿಕ ಕಿರುಕುಳದ ಸವಾಲು

ಕಾಂಗ್ರೆಸ್‌ ಸಂಸದ ಮುಕುಲ್‌ ರಾಯ್‌ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರಕಾರ

ಕಾಂಗ್ರೆಸ್‌ ಸಂಸದ ಮುಕುಲ್‌ ರಾಯ್‌ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರಕಾರ

ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ತಪ್ಪು ಮಾಹಿತಿ ನೀಡಿರುವ ಆರೋಪ ರಾಮ್‌ದೇವ್‌ ವಿರುದ್ಧ FIR

ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ತಪ್ಪು ಮಾಹಿತಿ ನೀಡಿರುವ ಆರೋಪ ರಾಮ್‌ದೇವ್‌ ವಿರುದ್ಧ FIR

“ಕೊರೊನಾ ಮುಕ್ತ’ ಟೋಕಿಯೊ : ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ

“ಕೋವಿಡ್ ಮುಕ್ತ’ ಟೋಕಿಯೊ : ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ

mantana

ವನಿತಾ ಟೆಸ್ಟ್‌ ಪಂದ್ಯ : ಮಂಧನಾ, ಶಫಾಲಿ ಶತಕದ ಜತೆಯಾಟ

ನಾಯಿಗೂ ತೂಕ ಇಳಿಕೆ ಶಸ್ತ್ರಚಿಕಿತ್ಸೆ :  ದೇಶದಲ್ಲಿಯೇ ಇಂಥ ಆಪರೇಷನ್‌ ಇದೇ ಮೊದಲು

ನಾಯಿಗೂ ತೂಕ ಇಳಿಕೆ ಶಸ್ತ್ರಚಿಕಿತ್ಸೆ :  ದೇಶದಲ್ಲಿಯೇ ಇಂಥ ಆಪರೇಷನ್‌ ಇದೇ ಮೊದಲು

568

ಹುಟ್ಟೂರು ಮಂಡ್ಯಕ್ಕೆ ಐಸಿಯು ಘಟಕ ಕೊಡುಗೆ ನೀಡಿದ ನಿರ್ಮಾಪಕ ವಿಜಯ್ ಕಿರಂಗದೂರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chikkaballapura news

ಶಿವಕುಮಾರ್ ಚಿಕ್ಕಬಳ್ಳಾಪುರ ಜಿಪಂ ಉಪ ಕಾರ್ಯದರ್ಶಿ

covid news

ಕೊರೊನಾ ತಡೆಗೆ ಕೇಂದ್ರ ವಿಫ‌ಲ

ಚಿಕ್ಕಬಳ್ಳಾಪುರ ಜಿ.ಪಂ ಉಪ ಕಾರ್ಯದರ್ಶಿಯಾಗಿ ಶಿವಕುಮಾರ್ ನೇಮಕ

ಚಿಕ್ಕಬಳ್ಳಾಪುರ ಜಿ.ಪಂ ಉಪ ಕಾರ್ಯದರ್ಶಿಯಾಗಿ ಶಿವಕುಮಾರ್ ನೇಮಕ

Oil prices rise

ತೈಲ ಬೆಲೆ ಏರಿಕೆ ವಿರುದ್ಧ”ಕೈ’ ಕಿಡಿ

chikkaballapura  news

ವೈದ್ಯರು ಸೇರಿ 35 ಮಂದಿಗೆ 7.5 ಲಕ್ಷ ರೂ. ವೇತನ

MUST WATCH

udayavani youtube

ಹೆಬ್ರಿ ಸುತ್ತಮುತ್ತ ಭಾರೀ ಗಾಳಿಮಳೆ, ಬೃಹತ್ ಮರಗಳು ಧರೆಗೆ ,ಅಪಾರ ಹಾನಿ

udayavani youtube

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್

udayavani youtube

ಮಳೆ ಕೊಯ್ಲು: 15 ನಿಮಿಷದ ಮಳೆಗೆ ಸಂಗ್ರಹವಾದ ನೀರು ಎಷ್ಟು ಗೊತ್ತಾ?

udayavani youtube

ಪೇರಳೆ ಕೃಷಿಯಲ್ಲಿ ಖುಷಿ ಕಾಣಲು, ಉಡುಪಿ ಕೃಷಿಕರಿಗೆ ಇಲ್ಲಿದೆ ಸುವರ್ಣವಕಾಶ ,

udayavani youtube

ಮಲೆನಾಡಲ್ಲಿ ಮುಂದುವರೆದ ಮಳೆಯಬ್ಬರ , ತುಂಬಿ ಹರಿಯುತ್ತಿರುವ ಹೇಮಾವತಿ ನದಿ

ಹೊಸ ಸೇರ್ಪಡೆ

ಎಲ್‌ಜೆಪಿಗೆ ಲೈಂಗಿಕ ಕಿರುಕುಳದ ಸವಾಲು

ಎಲ್‌ಜೆಪಿಗೆ ಲೈಂಗಿಕ ಕಿರುಕುಳದ ಸವಾಲು

ಕಾಂಗ್ರೆಸ್‌ ಸಂಸದ ಮುಕುಲ್‌ ರಾಯ್‌ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರಕಾರ

ಕಾಂಗ್ರೆಸ್‌ ಸಂಸದ ಮುಕುಲ್‌ ರಾಯ್‌ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರಕಾರ

ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ತಪ್ಪು ಮಾಹಿತಿ ನೀಡಿರುವ ಆರೋಪ ರಾಮ್‌ದೇವ್‌ ವಿರುದ್ಧ FIR

ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ತಪ್ಪು ಮಾಹಿತಿ ನೀಡಿರುವ ಆರೋಪ ರಾಮ್‌ದೇವ್‌ ವಿರುದ್ಧ FIR

“ಕೊರೊನಾ ಮುಕ್ತ’ ಟೋಕಿಯೊ : ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ

“ಕೋವಿಡ್ ಮುಕ್ತ’ ಟೋಕಿಯೊ : ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ

mantana

ವನಿತಾ ಟೆಸ್ಟ್‌ ಪಂದ್ಯ : ಮಂಧನಾ, ಶಫಾಲಿ ಶತಕದ ಜತೆಯಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.