ಕೃಷಿ ಕಾಯ್ದೆ ವಾಪಸ್ಸು ಪಡೆಯದಿದ್ದರೆ ದ್ವಿತೀಯ ಸ್ವಾತಂತ್ರ್ಯಚಳುವಳಿ: ಕೋಡಿಹಳ್ಳಿ ಚಂದ್ರಶೇಖರ್
Team Udayavani, Jan 16, 2021, 11:30 PM IST
ಚಿಕ್ಕಬಳ್ಳಾಪುರ: ದೇಶದಲ್ಲಿ ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದಿದ್ದ ಪಕ್ಷದಲ್ಲಿ ಜನವರಿ 26 ರಂದು (ಸರ್ಕಾರದ ಮಟ್ಟದಲ್ಲಿ ಪರೇಡ್ ಬಳಿಕ) ರಾಜ್ಯ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರೀಯ ಧ್ವಜಗಳೊಂದಿಗೆ ರೈತ ಸಂಘದ ಸದಸ್ಯರು ಟ್ರ್ಯಾಕ್ಟರ್-ಟಿಪ್ಪರ್ ಇನ್ನಿತರೆ ವಾಹನಗಳೊಂದಿಗೆ ಪರೇಡ್ ನಡೆಸಲಿದ್ದೇವೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರ ಹೆಸರಿನಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ರೈತರು ಮತ್ತು ಜನಸಾಮಾನ್ಯರ ಹಿತವನ್ನು ಕಡೆಗಣಿಸಿ ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿ ಅವರ ಹಿತಾಸಕ್ತಿಗಾಗಿ ಕಾಯ್ದೆಗಳನ್ನು ಜಾರಿಗೊಳಿಸಿ ಸಾರ್ವಜನಿಕ ಉದ್ಯಮಗಳನ್ನು ಖಾಸಗೀರಣ ಮಾಡುವ ಮೂಲಕ ದೇಶವನ್ನು ಪರಕೀಯರ ಕೈಗೆ ನೀಡುವ ಹುನ್ನಾರವನ್ನು ನಡೆಸಿದ್ದು ಇದರ ವಿರುಧ್ಧ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಮಾದರಿಯ ದ್ವಿತೀಯ ಸ್ವಾತಂತ್ರ್ಯ ಹೋರಾಟವನ್ನು ಆರಂಭಿಸಲಾಗುವುದೆಂದು ಎಚ್ಚರಿಸಿದರು.
ಕೃಷಿಗೆ ಮಾರಕವಾಗಿರುವ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ರೈತರು ಹೋರಾಟವನ್ನು ನಡೆಸುತ್ತಿದರೂ ಸಹ ಕೇಂದ್ರ ಸರ್ಕಾರ 9ನೇ ಸುತ್ತು ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಪ್ರಧಾನಮಂತ್ರಿಗಳು ದೇಶವನ್ನು ಉದ್ದೇಶಿಸಿ ಮಾತನಾಡುವ ಮನ್‍ಕೀಬಾತ್ ನಲ್ಲಿ ರೈತರ ಬಗ್ಗೆ ಮಾತನಾಡುವುದಿಲ್ಲ ಮೊದಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾಯ್ದೆಗಳನ್ನು ವಾಪಸ್ ಪಡೆದು ನಂತರ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ : ಆರೋಪಿ ಸಹಿತ 22 ಲಕ್ಷ ಮೌಲ್ಯದ ಅಕ್ರಮ ದಾಸ್ತಾನು ವಶ
ಜಿಪಂ-ತಾಪಂ ಚುನಾವಣೆಗೆ ಸ್ಪರ್ಧೆ: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ರೈತರು ಮತ್ತು ಜನವಿರೋದಿ ಧೋರಣೆಯನ್ನು ಅನುಸರಿಸುತ್ತಿದ್ದು ಸರ್ವೋಚ್ಚ ನ್ಯಾಯಾಲಯ ಕಾಯ್ದೆಗಳನ್ನು ತಡೆಗಟ್ಟುವ ಆದೇಶವನ್ನು ಹೊರಡಿಸಿರುವ ಸ್ವಾಗತಿಸುತ್ತೇವೆ ಆದರೇ ಅದು ತಾತ್ಕಾಲಿಕ ಹೀಗಾಗಿ ಕೇಂದ್ರ ಸರ್ಕಾರವೇ ಕಾಯ್ದೆಗಳನ್ನು ಪಾಪಸ್ಸು ಪಡೆಯಬೇಕೆಂದು ಅವರು ಇತ್ತೀಚಿಗೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ರೈತ ಸಂಘದ ಸದಸ್ಯರನ್ನು ಆಯ್ಕೆ ಮಾಡುವ ಮೂಲಕ ಜನ ಬೆಂಬಲಿಸಿದ್ದಾರೆ ರೈತರಲ್ಲೂ ಸಹ ರಾಜಕೀಯ ಪ್ರಜ್ಞೆ ಬೆಳೆದಿದೆ ಯಾವ ಪಕ್ಷ ರೈತರ ಹಿತವನ್ನು ಕಾಪಾಡಿದೆಯೆಂದು ಅರಿವುಯಿದೆ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ರೈತ ಸಂಘದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರ ಗೆಲುವಿಗೆ ಶ್ರಮಿಸಲಾಗುವುದು ಎಂದರು.
ಆರ್ಥಿಕವಾಗಿ ದಿವಾಳಿಯಾಗಿರುವ ಸರ್ಕಾರ: ದೇಶದಲ್ಲಿ ಕೋವಿಡ್, ಪಾಕಿಸ್ತಾನ ಮತ್ತು ಚೀನಾ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ರೈತರು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆಗಳನ್ನು ಜಾರಿಗೊಳಿಸುತ್ತಿಲ್ಲ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಕೇವಲ ಭಾಷಣ ಮತ್ತು ಪ್ರಚಾರಕ್ಕೆ ಸರ್ಕಾರದ ಸಾಧನೆ ಸೀಮಿತವಾಗಿದೆಯೆಂದು ಲೇವಡಿ ಮಾಡಿದ ಅವರು ದೇಶಾದ್ಯಂತ ಸುಮಾರು 100 ಕೋಟಿ ಜನರಿಗೆ ಕೋವಿಡ್ ಸೋಂಕು ಬಂದು ಹೋಗಿದೆ ಈ ದೇಶದ ಜನರು ಮತ್ತು ಮಣ್ಣಿಗೆ ರೋಗನಿರೋಧಕ ಶಕ್ತಿಯಿದೆ ಸೋಂಕು ಬಂದರು ಸಹ ಸಹಿಸಿಕೊಳ್ಳುವ ಶಕ್ತಿ ಭಾರತೀಯರ ರಕ್ತಕ್ಕಿದೆ ಎಂದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್‍ಡೌನ್ ಮಾಡಿ ಲಸಿಕೆ ತಂದು ಕೊಡದಿದ್ದರು ಸಹ ಏನು ಆಗುತ್ತಿರಲಿಲ್ಲ ಕೋವಿಡ್ ಸೋಂಕಿನ ಕುರಿತು ಭಾಷಣ ಮಾಡುವ ಪ್ರಧಾನಮಂತ್ರಿಗಳು ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಏಕೆ ಲಸಿಕೆಯನ್ನು ಪಡೆದುಕೊಂಡಿಲ್ಲ ಎಂದು ಪ್ರಶ್ನಿಸಿದ ಅವರು ಭಾರತ ಸರ್ಕಾರ ಲಸಿಕೆ ತಯಾರು ಕಂಪನಿಗಳಿಗೆ ಕೇವಲ ಲಾಭ ಮಾಡಿಕೊಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆಯೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ,ಕಾರ್ಯದರ್ಶಿ ವೀರಭದ್ರಸ್ವಾಮಿ,ರಾಜ್ಯ ಹಸಿರುಸೇನೆ ಸಂಚಾಲಕ ಲಕ್ಷ್ಮಣರೆಡ್ಡಿ, ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರಾಮನಾಥ್, ಕಾರ್ಯದರ್ಶಿ ವೇಣುಗೋಪಾಲ್,ರೈತ ಸಂಘದ ಮಹಿಳಾ ನಾಯಕಿ ಉಮಾ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್,ಚಿಂತಾಮಣಿ ಅಧ್ಯಕ್ಷ ರಮಣರೆಡ್ಡಿ,ಗೌರಿಬಿದನೂರು ಅಧ್ಯಕ್ಷ ಮಾಳಪ್ಪ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್
ವಿಜಯಾನಂದ ಕಾಶಪ್ಪನವರ್ ದೊಡ್ಡವರು ಅವರಷ್ಟು ದೊಡ್ಡ ನಾಯಕ ನಾನಲ್ಲ : ನಿರಾಣಿ
ಇಂದು ಸಿಎಂ ಯಡಿಯೂರಪ್ಪ ಹುಟ್ಟುಹಬ್ಬ: ಶುಭಾಶಯ ಕೋರಿದ ನರೇಂದ್ರ ಮೋದಿ, ನಡ್ಡಾ, ಶಾ
ಪಂಚ ರಾಜ್ಯ ಚುನಾವಣೆಗೆ ದಿನ ನಿಗದಿ: ಕರ್ನಾಟಕದ ಉಪಚುನಾವಣೆ ಯಾವಾಗ?
ತಮಿಳುನಾಡು ಸ್ವೇಚ್ಛಾಚಾರಕ್ಕೆ ಅವಕಾಶವಿಲ್ಲ