Udayavni Special

ರಾತ್ರೋ ರಾತ್ರಿ ಕಾಲ್ಕಿತ್ತ ಕೋಚಿಂಗ್‌ ಸೆಂಟರ್‌

12 ಸಾವಿರ ರೂ. ಶುಲ್ಕ ಪಾವತಿಸಿದ್ದ ಉದ್ಯೋಗ ಆಕಾಂಕ್ಷಿಗಳು, ನಾಲ್ಕು ದಿನಗಳ ಹಿಂದೆ ಸೆಂಟರ್‌ಗೆ ಬೀಗ ಜಡಿದು ಪರಾರಿ

Team Udayavani, Aug 23, 2019, 2:26 PM IST

cb-tdy-2

ಚಿಂತಾಮಣಿ: ನಿರುದ್ಯೋಗಿ ಯುವಕ, ಯುವತಿಯರಿಗೆ ನಮ್ಮ ಬ್ಯಾಕಿಂಗ್‌ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆದರೆ ಉದ್ಯೋಗ ಸಿಗುವುದು ಖಾತ್ರಿ ಎಂದು ಹೇಳಿ ವಿದ್ಯಾರ್ಥಿಗಳಿಂದ ಲಕ್ಷಾಂ ತರ ರೂ. ಹಣ ಪಡೆದು ರಾತ್ರೋ ರಾತ್ರಿ ಕೋಚಿಂಗ್‌ ಸೆಂಟರ್‌ ಕಾಲ್ಕಿತ್ತಿರುವ ಘಟನೆ ಚಿಂತಾಮಣಿ ನಗರದಲ್ಲಿ ನಡೆದಿದೆ.

ನಗರದ ಚೇಳೂರು ವೃತ್ತದಲ್ಲಿನ ಅಂಚೆ ಕಚೇರಿ ಮೇಲೆ ಆಂಧ್ರಪ್ರದೇಶದ ಕಡಪ ಮೂಲದ ಉತ್ತಮರೆಡ್ಡಿ ಹಾಗೂ ಸ್ಥಳೀಯರಾದ ಅಂಬರೀಶ್‌ ಎಂಬು ವವರು ಟರ್ನಿಂಗ್‌ ಪಾಯಿಂಟ್ ಬ್ಯಾಂಕ್‌ ಕೋಚಿಂಗ್‌ ಸೆಂಟರ್‌ ತೆರೆದು ನಿರು ದ್ಯೋಗಿ ಯುವತಿ, ಯುವತಿಯರು ಹಾಗೂ ಪದವೀಧರರಿಗೆ ಕೋಚಿಂಗ್‌ ಸೆಂಟರ್‌ನಲ್ಲಿ ಬ್ಯಾಂಕಿಂಗ್‌, ರೈಲ್ವೆ ಹಾಗೂ ಅಂಚೆ ಇಲಾಖೆ ಮತಿತ್ತರ ಉದ್ಯೋಗ ಗಳಿಗೆ ತರಬೇತಿ ಪಡೆದರೆ ಉದ್ಯೋಗ ಗ್ಯಾರೆಂಟಿ ಸಿಗುತ್ತದೆ ಎಂದು ಪ್ರಾರಂಭ ದಲ್ಲಿ ತಿಳಿಸಿದೆ.

12 ಸಾವಿರ ರೂ.: ತರಬೇತಿ ಕೇಂದ್ರ ದಲ್ಲಿ ಒಂದು ಬಾರಿ ಶುಲ್ಕ ಪಾವತಿಸಿದರೆ ಉದ್ಯೋಗ ಸಿಗುವ ತನಕ ಕೋಚಿಂಗ್‌ ಉಚಿತವಾಗಿ ನೀಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಆಮಿಷ ನೀಡಿ ಮೂರು ವರ್ಷಗಳ ಹಿಂದೆ ಆರಂಭ ವಾದ ಕೋಚಿಂಗ್‌ ಸೆಂಟರ್‌ ಇದು ವರೆಗೂ 200ಕ್ಕೂ ಹೆಚ್ಚು ವಿದ್ಯಾರ್ಥಿ ಗಳನ್ನು ದಾಖಲು ಮಾಡಿಕೊಂಡು ತಲಾ ಒಬ್ಬೊಬ್ಬ ವಿದ್ಯಾರ್ಥಿಯಿಂದ ತಲಾ 12 ಸಾವಿರ ರೂ.ನಂತೆ ಹಣ ಕಟ್ಟಿಸಿ ಕೊಂಡಿದ್ದಾರೆ.

ವಿದ್ಯಾರ್ಥಿಗಳ ಆತಂಕ: ಎರಡು ವರ್ಷ ಉತ್ತಮವಾಗಿ ನಡೆದುಕೊಂಡು ಬಂದ ಕೋಚಿಂಗ್‌ ಸೆಂಟರ್‌, ಇದೀಗ ನಾಲ್ಕು ದಿನಗಳ ಹಿಂದೆ ಇದ್ದಕ್ಕಿದಂತೆ ವಿದ್ಯಾರ್ಥಿ ಗಳಿಗೆ ಯಾವುದೇ ಮುನ್ಸೂಚನೆ ನೀಡದೆ ರಾತ್ರೋ ರಾತ್ರಿ ಕಚೇರಿಗೆ ಬೀಗ ಜಡಿದು ಕಾಲ್ಕಿತ್ತಿರುವುದನ್ನು ಕಂಡು ಕೋಚಿಂಗ್‌ಗೆ ಬರುತ್ತಿದ್ದ ವಿದ್ಯಾರ್ಥಿಗಳು ಆತಂಕಗೊಳ ಗಾಗಿದ್ದಾರೆ.

ಕರೆ ಮಾಡಿದರೆ ಬೆದರಿಕೆ: ಉತ್ತಮ ತರಬೇತಿ ಪಡೆದು ಉದ್ಯೋಗ ಪಡೆ ಯಲಿ ಎಂಬ ಉದ್ದೇಶದಿಂದ ಬಡವ ರಾದ ನಮ್ಮ ಪೋಷಕರು, ಕೂಲಿ ನಾಲಿ ಸಾಲ ಮಾಡಿ ಬ್ಯಾಂಕಿಂಗ್‌ ಕೋಚಿಂಗ್‌ ಸೆಂಟರ್‌ಗೆ ಕಳುಹಿಸಿದ್ದರು. ಆದರೆ ಸೆಂಟರ್‌ನವರು ಯಾವುದೇ ಮುನ್ಸೂ ಚನೆ ನೀಡದೆ ರಾತ್ರೋ ರಾತ್ರಿ ಸೆಂಟರ್‌ಗೆ ಬೀಗ ಜಡಿದು ಪರಾರಿಯಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಕರೆ ಮಾಡಿ ಕೇಳಿದರೆ ಬೆದರಿಕೆ ಹಾಕುತ್ತಾರೆ ಎಂದು ವಿದ್ಯಾರ್ಥಿಗಳು ಅಳಲು ತೋಡಿ ಕೊಂಡರು.

ಪ್ರಕರಣ ದಾಖಲು: ಕೋಚಿಂಗ್‌ ಸೆಂಟರ್‌ ಅವರನ್ನು ಕರೆಸಿ ನಮಗೆ ನ್ಯಾಯ ಒದ ಗಿಸಿಕೊಡುವಂತೆ ಆಗ್ರಹಿಸಿ ವಿದ್ಯಾರ್ಥಿ ಗಳು ಚಿಂತಾಮಣಿ ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ಪೊಲೀ ಸರು ಕೋಚಿಂಗ್‌ ಸೆಂಟರ್‌ನ ಮಾಲೀ ಕರ ವಿರುದ್ಧ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Pandya”ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

“ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

ಲಂಡನ್‌ನಲ್ಲಿ ಲಸಿಕೆ ಪ್ರಯೋಗ

ಲಂಡನ್‌ನಲ್ಲಿ ಲಸಿಕೆ ಪ್ರಯೋಗ

5.87 ಕೋಟಿ ಅಮೆರಿಕನ್ನರ ಅಂಚೆ ಮತ

5.87 ಕೋಟಿ ಅಮೆರಿಕನ್ನರ ಅಂಚೆ ಮತ

IPL-2

ಪ್ಲೇಆಫ್ ಹೋರಾಟದಲ್ಲಿ ಪಂಜಾಬ್‌ ಮೇಲುಗೈ

ಟೀಕೆಯೇ ಬಂಡವಾಳ… ತೇಜಸ್ವಿಗೆ ನಿತೀಶ್‌ ಟಾಂಗ್‌; ಮೊದಲ ಹಂತದ ಪ್ರಚಾರಕ್ಕೆ ತೆರೆ

ಟೀಕೆಯೇ ಬಂಡವಾಳ… ತೇಜಸ್ವಿಗೆ ನಿತೀಶ್‌ ಟಾಂಗ್‌; ಮೊದಲ ಹಂತದ ಪ್ರಚಾರಕ್ಕೆ ತೆರೆ

ಅನನ್ಯಾ ಬಿರ್ಲಾ ಹೊರದಬ್ಬಿದ ರೆಸ್ಟಾರೆಂಟ್‌

ಅನನ್ಯಾ ಬಿರ್ಲಾ ಹೊರದಬ್ಬಿದ ರೆಸ್ಟಾರೆಂಟ್‌

ಸಂಸಾರಕ್ಕೆ ಒಪ್ಪದ ಪ್ರಿಯಕರ: ಯುವತಿ ಆತ್ಮಹತ್ಯೆ

ಸಂಸಾರಕ್ಕೆ ಒಪ್ಪದ ಪ್ರಿಯಕರ: ಯುವತಿ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಗ್ನೇಯ ಪದವೀಧರ ಕ್ಷೇತ್ರವನ್ನು ವೈ.ಎ. ನಾರಾಯಣಸ್ವಾಮಿ ಅಪವಿತ್ರಗೊಳಿಸಿದ್ದಾರೆ: ಡಾ.ಹಾಲನೂರ್

ಆಗ್ನೇಯ ಪದವೀಧರ ಕ್ಷೇತ್ರವನ್ನು ವೈ.ಎ. ನಾರಾಯಣಸ್ವಾಮಿ ಅಪವಿತ್ರಗೊಳಿಸಿದ್ದಾರೆ: ಡಾ.ಹಾಲನೂರ್

cb-tdy-1

ಬಾಗೇಪಲ್ಲಿ: ಪುರಸಭೆ ಪಟ್ಟಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ

cd-tdy-2

ತಾ.ಕಚೇರಿಗೆ ವಿದ್ಯುತ್‌ ಶಾಕ್‌

ಸ್ಥಳೀಯ ಸಂಸ್ಥೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ

ಸ್ಥಳೀಯ ಸಂಸ್ಥೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮದ್ಯಮಾರಾಟವನ್ನು ನಿರ್ಬಂಧಿಸಿ “ಒಣ ದಿನ” ಘೋಷಣೆ:ಜಿಲ್ಲಾಧಿಕಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮದ್ಯಮಾರಾಟವನ್ನು ನಿರ್ಬಂಧಿಸಿ “ಒಣ ದಿನ” ಘೋಷಣೆ:ಜಿಲ್ಲಾಧಿಕಾರಿ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

“ಸಾಂಪ್ರದಾಯಿಕ ಪದ್ಧತಿಗೆ ಆಧುನಿಕ ಸ್ಪರ್ಶದಿಂದ ಕೃಷಿಯಲ್ಲಿ ಕ್ರಾಂತಿ’

“ಸಾಂಪ್ರದಾಯಿಕ ಪದ್ಧತಿಗೆ ಆಧುನಿಕ ಸ್ಪರ್ಶದಿಂದ ಕೃಷಿಯಲ್ಲಿ ಕ್ರಾಂತಿ’

ಯಕ್ಷಗಾನದಿಂದ ಜ್ಞಾನದ ಆರಾಧನೆ: ಡಾ| ನಿರಂಜನ ಭಟ್‌

ಯಕ್ಷಗಾನದಿಂದ ಜ್ಞಾನದ ಆರಾಧನೆ: ಡಾ| ನಿರಂಜನ ಭಟ್‌

Pandya”ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

“ಕರಿಯ ಜೀವಗಳಿಗೂ ಬೆಲೆಯಿದೆ’ ಅಭಿಯಾನಕ್ಕೆ ಹಾರ್ದಿಕ್‌ ಬೆಂಬಲ

ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳ ದಸ್ತಗಿರಿ

ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳ ದಸ್ತಗಿರಿ

ಕರಾವಳಿ: ಸಂಭ್ರಮದ ನವರಾತ್ರಿ, ದಸರಾ ಸಮಾಪನ

ಕರಾವಳಿ: ಸಂಭ್ರಮದ ನವರಾತ್ರಿ, ದಸರಾ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.