ಗುಡಿಬಂಡೆ ತಾಲೂಕಿಗೆ ಉಪ ಮಾರುಕಟ್ಟೆ ಮರೀಚಿಕೆ

ಜಾಗ ಗುರುತಿಸಿದ್ರೂ ಮಾರುಕಟ್ಟೆ ಪ್ರಾರಂಭಿಸಲು ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ; ರೈತರಿಗೆ ಆರ್ಥಿಕ ನಷ್ಟ

Team Udayavani, Sep 25, 2021, 4:09 PM IST

ಗುಡಿಬಂಡೆ ತಾಲೂಕಿಗೆ ಉಪ ಮಾರುಕಟ್ಟೆ ಮರೀಚಿಕೆ

ಗುಡಿಬಂಡೆ: ತಾಲೂಕಿನಲ್ಲಿ ಎಪಿಎಂಸಿ ಉಪಮಾರು ಕಟ್ಟೆ ತೆರೆಯಲು ಅಧಿಕಾರಿಗಳು ನಿರ್ಲಕ್ಷ್ಯವಹಿಸು ತ್ತಿರುವ ಕಾರಣ, ದಶಕದಿಂದ ಈ ಭಾಗದ ರೈತರು ಆರ್ಥಿಕ ನಷ್ಟಕ್ಕೆ ಒಳಗಾಗುವಂತಾಗಿದೆ.

ಬಾಗೇಪಲ್ಲಿಯಲ್ಲಿ ಏಪ್ರಿಲ್‌ 2007ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾರಂಭವಾಗಿದ್ದು, ಆ ಸಮಯ ದಲ್ಲಿಯೇ ಗುಡಿಬಂಡೆ ತಾಲೂಕಿನಲ್ಲಿ ಉಪಮಾರುಕಟ್ಟೆ ಪ್ರಾರಂಭಿಸಲು ಘೋಷಣೆ ಮಾಡಲಾಗಿತ್ತು ಎಂದು ಎಪಿಎಂಸಿ ಅಧಿಕಾರಿಗಳೇ ಹೇಳುತ್ತಿದ್ದಾರೆ.

ಅಂದಿನಿಂದಲೂ ಉಪಮಾರುಕಟ್ಟೆಗೆ ಜಾಗದ ವಿಚಾರವಾಗಿ ಎಪಿಎಂಸಿ, ಕಂದಾಯ ಅಧಿಕಾರಿಗಳ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಈಗ ಕಂದಾಯ ಇಲಾಖೆ ಜಾಗ ಗುರುತಿಸಿಕೊಟ್ಟರೂ ಎಪಿಎಂಸಿ ಅಧಿಕಾರಿಗಳು ಮಾತ್ರ ಮಾರುಕಟ್ಟೆ ಸ್ಥಾಪಿಸಲು ಬೇಜವಾಬ್ದಾರಿ ತೋರುತ್ತಿರುವುದು ದುರಂತವೇ ಸರಿ.

ಇದನ್ನೂ ಓದಿ:ಬಾಲಿವುಡ್ ನಲ್ಲಿ ಬಿಡುಗಡೆಗೆ ಸಿದ್ದವಾಗಿದೆ ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳು

ಪೂರೈಕೆಗೆ ಪರದಾಟ: ತಾಲೂಕಿನಿಂದ ರೈತರು ಪ್ರತಿ ದಿನ ತಾವು ಬೆಳೆದ ಬೆಳೆಯನ್ನು ಬಾಗೇಪಲ್ಲಿ (20 ಕಿ. ಮೀ.), ಗೌರಿಬಿದನೂರು, ಚಿಕ್ಕಬಳ್ಳಾಪುರ, ಹಿಂದೂಪುರ ಮಾರುಕಟ್ಟೆಗಳಿಗೆ (35 ರಿಂದ 45 ಕಿ.ಮೀ.) ಬಾಡಿಗೆ ವಾಹನದಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬರಬೇಕಾದ ಪರಿಸ್ಥಿತಿಯಲ್ಲಿ ಇದೆ. ಅಲ್ಲಿಗೆ ಹೋಗಿ ಮಾರಾಟ ಮಾಡಿದ ನಂತರ ಕೆಲವೊಮ್ಮೆ ಸಾಗಾಣಿಕೆ ವೆಚ್ಚವೂ ಬಾರದೇ ರೈತರು ತಲೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಬಂದಂತಹ ದಿನಗಳೂ ಇದೆ.

ಜಾಗ ಗುರುತಿಸಿ ಮಂಜೂರಾತಿಗೆ ಸಲ್ಲಿಕೆ: ಬಾಗೇಪಲ್ಲಿ ಎಪಿಎಂಸಿ ಸಭೆಯಲ್ಲಿ ಮಾ.8.2017ರಂದು ಗುಡಿಬಂಡೆ ತಾಲೂಕಿನ, ಪಲ್ಲೆ„ಗಾರಹಳ್ಳಿ ಗ್ರಾಮದ ಸರ್ವೆ ನಂ. 8/1ಬಿ ನಲ್ಲಿ 14.05 ಎಕರೆ ಜಮೀನು ಮಂಜೂರಾತಿ ತೀರ್ಮಾನಿಸಿ ಅದರಂತೆ ತಹಶೀ ಲ್ದಾರ್‌ಗೆ ಜಮೀನು ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಲಾಗಿದೆ.

ಸರ್ಕಾರಕ್ಕೆ ಶುಲ್ಕ ಪಾವತಿಸಿದರೆ ಮಂಜೂರು:
ಎಪಿಎಂಸಿ ಕೋರಿಕೆಯಂತೆ ಜಮೀನು ಮಂಜೂರು ಮಾಡಲು ತಹಶೀಲ್ದಾರ್‌ ಅವರು ಜಮೀನು ಮಂಜೂರು ಮಾಡಲು ಸರ್ಕಾರ ವಿಧಿಸುವ ಮೊತ್ತ ಪಾವತಿಸಲು, ಕೋರಿಕೆದಾರರು ಒದಗಿಸುವ ಸೌಲಭ್ಯಗಳ ಬಗ್ಗೆ ನೀಲನಕ್ಷೆ, ಯೋಜನಾ ಅಂದಾಜು ಪಟ್ಟಿ ನೀಡುವಂತೆ ಫೆ.27, 2018 ರಂದು ಪತ್ರ ನೀಡಿದ್ದಾರೆ. ಕಂದಾಯ ಅಧಿಕಾರಿಗಳು ಷರತ್ತುಗಳು ವಿಧಿಸಿದ್ದೇ ತಡ, ಜಮೀನು ಮಂಜೂರಾತಿ ವಿಚಾರ ಅಲ್ಲಿಗೆ ಕೈಬಿಟ್ಟು, ಶಾಸಕರು ಇತರೆ ಮುಖಂಡರು ಪ್ರಸ್ತಾಪಿಸಿದಾಗ ಮಾತ್ರ ಆಗ ಅರ್ಜಿ ಸಲ್ಲಿಸುತ್ತೇವೆ, ಈಗ ಅರ್ಜಿ ಸಲ್ಲಿಸುತ್ತೇವೆ ಎಂದು ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಒಟ್ಟಾರೆ ಬಾಗೇಪಲ್ಲಿ ಎಪಿಎಂಸಿ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ತಾಲೂಕಿನ ರೈತರಿಗೆ ಸ್ಥಳೀಯ ಮಾರುಕಟ್ಟೆ ಪ್ರಾರಂಭವಾಗುವುದು ಗಗನ ಕುಸುಮವಾಗಿದೆ. ಶಾಸಕರು ಮುಂದೆ ಬಂದು ತಾಲೂಕಿನಲ್ಲಿನ ಎಪಿಎಂಸಿ ಉಪ ಮಾರುಕಟ್ಟೆ ಪ್ರಾರಂಭಿಸಲು ಪ್ರಯತ್ನ ಪಡುತ್ತಾರೆಯೇ ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.

ಗುಡಿಬಂಡೆ ತಾಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ ಪ್ರಾರಂಭಿಸಲು ಜಾಗ ಗುರುತಿಸಲಾಗಿದೆ. ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ಶುಲ್ಕವನ್ನು ಪಾವತಿಸಲು ಸಭೆಯಲ್ಲಿ ಚರ್ಚಿಸಿ, ಅತಿ ಜರೂರಾಗಿ ಜಮೀನು ಎಪಿಎಂಸಿಗೆ ವರ್ಗಾಯಿಸಲು ಕ್ರಮಕೈಗೊಳ್ಳುತ್ತೇನೆ.
-ತಿಮ್ಮಾರೆಡ್ಡಿ, ಸರ್ಕಾರಿ ನಾಮನಿರ್ದೇಶಕ
ಸದಸ್ಯ, ಎಪಿಎಂಸಿ.

ಗುಡಿಬಂಡೆ ತಾಲೂಕಿನಲ್ಲಿ ಕೃಷಿಯೇ ಪ್ರಮುಖ ಆದಾಯ ಮೂಲವಾಗಿದೆ. ಇಲ್ಲಿ ಸ್ಥಳೀಯವಾಗಿ ಮಾರುಕಟ್ಟೆ ಇಲ್ಲದೆ, ಬೇರೆಡೆಗೆ ಸಾಗಾಣಿಕೆ ಮಾಡಬೇಕಾದ ಪರಿಸ್ಥಿತಿ ಇದೆ. ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ, ಕೂಡಲೇ ಮಾರುಕಟ್ಟೆ ಪ್ರಾರಂಭಿಸಬೇಕು.
-ಎಂ.ಎನ್‌.ರಾಜಣ್ಣ, ಪ್ರಧಾನ
ಕಾರ್ಯದರ್ಶಿ, ಜೆಡಿಎಸ್‌

-ನವೀನ್‌ ಕುಮಾರ್‌

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.