Udayavni Special

ಏತ ನೀರಾವರಿ ಯೋಜನೆ ಪೈಪ್‌ಲೈನ್‌ ಅಳವಡಿಕೆಗೆ ಸರ್ವೆ

ಆದಷ್ಟು ಶೀಘ್ರ ಭರಮಸಾಗರ ಕೆರೆಗಳಿಗೆ ನೀರು ಹರಿದು ಬರುವ ವಿಶ್ವಾಸ

Team Udayavani, Feb 20, 2020, 1:01 PM IST

20-February-11

ಭರಮಸಾಗರ: ಭರಮಸಾಗರ ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ಪೈಪ್‌ಲೈನ್‌ ಅಳವಡಿಸುವ ಸಂಬಂಧ ಇಲ್ಲಿನ ಬಿಳಿಚೋಡು ರಸ್ತೆ ಮಾರ್ಗದಲ್ಲಿ ಬರುವ ಕೆರೆಗಳಿಗೆ ನೀರು ತುಂಬಿಸಲು ಬುಧವಾರ ಸರ್ವೆ ಕಾರ್ಯ ನಡೆಯಿತು.

ಬೆಂಗಳೂರಿನ ರೇಡಿಯನ್‌ ಸರ್ವೆ ಕಂಪನಿ ಭರಮಸಾಗರ ಏತ ನೀರಾವರಿ ಯೋಜನೆಯಡಿ 42 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಕೆರೆಗಳಿಗೆ ಪೈಪ್‌ಲೈನ್‌ ಅಳವಡಿಸುವ ಮಾರ್ಗದ ಸರ್ವೆ ಕಾರ್ಯವನ್ನು ನಡೆಸುತ್ತಿದೆ. ಕೆರೆಗಳನ್ನು ಸಂಪರ್ಕಿಸುವ ರಸ್ತೆ ಮಾರ್ಗದ ಸನಿಹದಲ್ಲಿನ ಭೂ ಮಟ್ಟ ಹಾಗೂ ಈ ಮಾರ್ಗಗಳಲ್ಲಿ ಬರುವ ಮರಗಳು ಕಂಬಗಳ ಸಂಖ್ಯೆ, ಮಣ್ಣಿನ ಗುಣ ಸೇರಿದಂತೆ ಇತರೆ ಮಾಹಿತಿಗಳನ್ನು ಸರ್ವೆ ಕಾರ್ಯದಲ್ಲಿ ದಾಖಲಿಸಲಾಗುತ್ತಿದೆ.

ಈಗಾಗಲೇ ರೇಡಿಯನ್‌ ಕಂಪನಿಯ ಎಂಟು ಜನರ ತಂಡ ಭರಮಸಾಗರದ ನಾನಾ ಭಾಗಗಳಲ್ಲಿ ಸರ್ವೆ ಕಾರ್ಯವನ್ನು ನಡೆಸುತ್ತಿದೆ. ಇನ್ನೂ ಎರಡು ತಂಡಗಳು ಬರಲಿದೆ ಎಂದು ಸರ್ವೇಯರ್‌ ವೆಂಕಟೇಶ್‌ ತಿಳಿಸಿದರು.

ಒಟ್ಟಾರೆ 42 ಕೆರೆಗಳ ಪೈಪ್‌ಲೈನ್‌ ಅಳವಡಿಕೆ ಕಾರ್ಯದ ಸರ್ವೆ ಕಾರ್ಯವನ್ನು ಮುಗಿಸಲು 20 ದಿನಗಳ ಕಾಲಾವಯನ್ನು ನೀಡಲಾಗಿದೆ. ಜೂನ್‌ ಒಂದರ ಒಳಗೆ ನೀರು ಹರಿಸುವ ಸಂಬಂಧ ಪೈಪ್‌ಲೈನ್‌ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಬೇಕಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ಎಲ್ಲಾ ಹಂತದ ಕಾಮಗಾರಿಗಳು ಚುರುಕು ಪಡೆದಿವೆ. ಭರಮಸಾಗರದ ಚಹಾ, ಹೋಟೆಲ್‌, ಇತರೆ ಜನರು ಗುಂಪು ಸೇರುವ ಕಡೆಗಳಲ್ಲಿ ಕೆರೆಗಳಿಗೆ ನೀರು ಹರಿಯುವ ಕುರಿತು ಚರ್ಚೆಗಳು ನಡೆಯುತ್ತಿವೆ. ತೋಟಗಾರಿಕೆ ಬೆಳೆಗಾರರು ನೀರು ಬಂದರೆ ಸಾಕಪ್ಪ ಎಂದು ಹರಕೆ ಹೊತ್ತಿದ್ದಾರೆ. ಈ ದಿಸೆಯಲ್ಲಿ ಶಂಕರನಾರಾಯಣ ಕನ್ಸ್‌ಟ್ರಕ್ಷನ್‌ ಕಂಪನಿ ಕಾಮಗಾರಿಯನ್ನು ಚುರುಕುಗೊಳಿಸಿದೆ. ಮಲೇಷಿಯಾ, ಅಪಘಾನಿಸ್ತಾನಗಳಲ್ಲಿ ಡ್ಯಾಂಗಳನ್ನು ಕಟ್ಟಿದ ಈ ಕಂಪನಿ ನಮ್ಮ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಬೇಗನೇ ಮುಗಿಸುತ್ತದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ.

ಸಿರಿಗೆರೆ ಗ್ರಾಪಂನ ನೂತನ ಕಟ್ಟಡದ ಉದ್ಘಾಟನೆ ವೇಳೆ ತರಳಬಾಳು ಶ್ರೀಗಳು ಆಗಸ್ಟ್‌ ಒಳಗೆ ಕೆರೆಗಳಿಗೆ ನೀರು ಹರಿಯಲಿದೆ ಎಂದಿದ್ದರು. ಹಾಗಾಗಿ ಮಳೆಗಾಲಕ್ಕೆ ನೀರು ಬರುವುದು ನಿಶ್ಚಿತ ಎಂಬ ವಿಶ್ವಾಸ ಮೂಡಿದೆ.

20 ದಿನಗಳಲ್ಲಿ ಸರ್ವೆ ಕಾರ್ಯವನ್ನು ನಡೆಸಲು ಸೂಚಿಸಿದ್ದಾರೆ. ಮತ್ತಷ್ಟು ಸರ್ವೇಯರ್‌ಗಳು ಬರಲಿದ್ದು ಪೈಪ್‌ ಲೈನ್‌ ಅಳವಡಿಕೆ ಸಂಬಂಧಿತ ಸರ್ವೆ ಕಾರ್ಯ ಚುರುಕುಗೊಳ್ಳಲಿದೆ. ಸರ್ವೆಯಲ್ಲಿ ಗ್ರೌಂಡ್‌ ಲೆವೆಲ್‌ ಚೆಕ್‌ ಮಾಡಲಾಗುತ್ತದೆ. ಬಹುತೇಕ ರಸ್ತೆಗಳ ಪಕ್ಕದಲ್ಲೇ ಪೈಪ್‌ಲೈನ್‌ ಹಾದು ಹೋಗಲಿದೆ.
ಆಯುಬ್‌, ಮುಖ್ಯ ಸರ್ವೇಯರ್‌,
ರೇಡಿಯನ್‌ ಕಂಪನಿ, ಬೆಂಗಳೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

world-wide-covid19

ಕೋವಿಡ್-19 ಮರಣಮೃದಂಗ: ವಿಶ್ವದಾದ್ಯಂತ 64,720 ಬಲಿ, 12ಲಕ್ಷ ದಾಟಿದ ಸೋಂಕಿತರ ಸಂಖ್ಯೆ

donald-trump-jpeg

ಪರಿಸ್ಥಿತಿ ಬಿಗಡಾಯಿಸುತ್ತಿದೆ, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ: ಟ್ರಂಪ್

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

Water-Drowning

ಜಾರಿ ಬಿದ್ದ ಮೊಬೈಲ್ ತೆಗೆಯಲು ಹೋಗಿ ನಾಲ್ಕು ಕಂದಮ್ಮಗಳು ನೀರುಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಎಸ್‌ಆರ್‌ಟಿಸಿ: ವೇತನ ಕಡಿತ ಇಲ್ಲ

ಕೆಎಸ್‌ಆರ್‌ಟಿಸಿ: ವೇತನ ಕಡಿತ ಇಲ್ಲ

ತಬ್ಲೀಘಿ ಜಮಾತ್‌ನಲ್ಲಿ ಜಿಲ್ಲೆಯ ಮೂವರು

ತಬ್ಲೀಘಿ ಜಮಾತ್‌ನಲ್ಲಿ ಜಿಲ್ಲೆಯ ಮೂವರು

ಚಿತ್ರದುರ್ಗ: ಕೋವಿಡ್-19 ಮಹಾಮಾರಿ ತಡೆಯಲು ಹಳ್ಳಿಗೆ‌ ಬೇಲಿ ಹಾಕಿದ ಆಯಿತೋಳು ಗ್ರಾಮಸ್ಥರು

22-March-14

ನಿರೀಕ್ಷೆ ಮೀರಿ ಮಳೆಯಾದ್ರೂ ನೀರಿಗೆ ಬರ!

ಜನತಾ ಕರ್ಪ್ಯೂಗೆ ಜನರ ಬೆಂಬಲ: ಬಸ್, ರೈಲು ಸಂಚಾರವಿಲ್ಲ, ಕೋಟೆನಾಡು ಸ್ಥಬ್ದ

ಜನತಾ ಕರ್ಪ್ಯೂಗೆ ಜನರ ಬೆಂಬಲ: ಬಸ್, ರೈಲು ಸಂಚಾರವಿಲ್ಲ, ಕೋಟೆನಾಡು ಸ್ಥಬ್ದ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಕೋವಿಡ್ 19 ಲಾಕ್‌ಡೌನ್‌  ಬಳಿಕ ಟೋಲ್‌ ಹೆಚ್ಚಳ ಬಿಸಿ

ಕೋವಿಡ್ 19 ಲಾಕ್‌ಡೌನ್‌  ಬಳಿಕ ಟೋಲ್‌ ಹೆಚ್ಚಳ ಬಿಸಿ

ಎ. 14ರೊಳಗೆ ಪರಿಸ್ಥಿತಿ ಸುಧಾರಿಸಿದರೆ ಲಾಕ್‌ಡೌನ್‌ ಸಡಿಲ

ಎ. 14ರೊಳಗೆ ಪರಿಸ್ಥಿತಿ ಸುಧಾರಿಸಿದರೆ ಲಾಕ್‌ಡೌನ್‌ ಸಡಿಲ

ಸಾರಿಗೆ ನಿಯಂತ್ರಣ ಕೊಠಡಿ: ಸವದಿ

ಸಾರಿಗೆ ನಿಯಂತ್ರಣ ಕೊಠಡಿ: ಸವದಿ

ಗಡಿ ಬಂದ್‌ ಸಡಿಲಿಕೆ ಇಲ್ಲ : ಬಿಎಸ್‌ವೈ

ಗಡಿ ಬಂದ್‌ ಸಡಿಲಿಕೆ ಇಲ್ಲ : ಬಿಎಸ್‌ವೈ

ನಮಾಜ್‌: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರ್ಜಿ

ನಮಾಜ್‌: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರ್ಜಿ