ಶರಣರ ಸಮಾಜೋಧಾರ್ಮಿಕ ಕಾರ್ಯ ಅನನ್ಯ

21ನೇ ಶತಮಾನದಲ್ಲಿ ಪ್ರಗತಿ ಸಾಧಿಸಿದ್ದರೂ ಮಾನವೀಯ ಮೌಲ್ಯಗಳಿಗೆ ಬೆಲೆಯಿಲ್ಲ: ಪಂಡಿತಾರಾಧ್ಯ ಸ್ವಾಮೀಜಿ

Team Udayavani, Aug 11, 2021, 6:42 PM IST

11-20

ಹೊಸದುರ್ಗ: ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.

ಹೊಸದುರ್ಗ : 12ನೇ ಶತಮಾನದಲ್ಲಿ ನಡೆದ ಸಮಾಜೋಧಾರ್ಮಿಕ ಪರಿವರ್ತನೆಯ ಕಾರ್ಯ 21ನೇ ಶತಮಾನದಲ್ಲೂ ಸಾಧ್ಯವಾಗಿಲ್ಲ. ಇಂದು ಮನುಷ್ಯ ಆಧುನಿಕ ತಂತ್ರಜ್ಞಾನಗಳಲ್ಲಿ ಸಾಕಷ್ಟು ಪ್ರಗತಿ ಸಾ ಧಿಸಿದ್ದರೂ ಮನುಷ್ಯನಾಗಿ ಹೇಗೆ ಬಾಳಬೇಕೆಂಬುದನ್ನು ತಿಳಿದಿಲ್ಲ ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿಯ ತರಳಬಾಳು ಜಗದ್ಗುರು ಶಾಖಾ ಮಠ ಆಯೋಜಿಸಿರುವ “ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ ಹತ್ತನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಆಧುನಿಕ ಉಪಕರಣಗಳಿಂದಾಗಿ ಪ್ರತಿ ಮನೆಯ ಗೋಡೆಗೂ ಕಿವಿ, ಕಣ್ಣು, ಮೂಗು ಬಂದು ಬಿಟ್ಟಿದೆ. ಒಬ್ಬರು ಮತ್ತೂಬ್ಬರನ್ನು ಅನುಮಾನದಿಂದ ನೋಡುವ ವಾತಾವರಣ ನಿರ್ಮಾಣವಾಗಿದೆ. ಶರಣರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಿದ್ದರು. ಅವರು ಬುದ್ಧಿಯ ಬದಲು ಹೃದಯದಿಂದ ಮಾತನಾಡುತ್ತಿದ್ದರು.

ಆದರ್ಶಕ್ಕೆ ಬದ್ಧರಾಗಿದ್ದರು. ಜಾತಿ, ಲಿಂಗ, ಅಂತಸ್ತು, ಅಧಿಕಾರಗಳನ್ನು ಮೀರಿ ಒಂದಾಗುತ್ತಿದ್ದರು. ಆದರೆ ನಾಗರಿಕತೆ ಬೆಳೆದಂತೆ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಜಾತಿ, ಲಿಂಗ, ಅಂತಸ್ತು, ಅ ಧಿಕಾರವೇ ಮಾನವೀಯತೆಗೆ ಬೇಲಿಯಾಗಿವೆ. ಒಳ-ಹೊರಗೆ ಒಂದಾಗಿಲ್ಲ. ಆದರ್ಶಗಳು ಉಪದೇಶಕ್ಕೆ ಸೀಮಿತವಾಗಿವೆ. ಕೃತಕತೆ ಮೇರೆ ಮೀರಿ ಸ್ವಾರ್ಥಕ್ಕೆ ಅನುಗುಣವಾಗಿ ಬದಲಾಗುತ್ತಿರುವುದು ವಿಷಾದನೀಯ.

ಶರಣರಂತೆ ನಾವೂ ಪ್ರೀತಿ, ವಿಶ್ವಾಸ, ಮಾನವೀಯ ಜೀವನ ಸಾಗಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. ಬಂಡಾಯ ಪ್ರಜ್ಞೆಯುಳ್ಳ ಮಾದಾರ ಧೂಳಯ್ಯನವರದು ಚಪ್ಪಲಿ ಹೊಲೆಯುವ ಕಾಯಕ. ಅವರ ಕಾಯಕದ ಪರಿಭಾಷೆಯ ನೆಲೆಯಲ್ಲಿಯೇ ಅವರ ವಚನಗಳಿವೆ. ಚಪ್ಪಲಿ ಹೊಲೆಯುವ ಕಾಯದಲ್ಲಿ ತುಂಬ ಗೌರವವಿತ್ತು. ಈ ಕಾಯಕಕ್ಕೆ ಅಡ್ಡಿಪಡಿಸುವ ಪರಮೇಶ್ವರನನ್ನೇ “ಕಾಮ ಧೂಮ ಧೂಳೇಶ್ವರದಿಂದ ನೀನೇ ಬದುಕು’ ಎನ್ನುವ ಅವರ ಧೈರ್ಯ ಕಾಯಕಶೀಲರಿಗೆ ಮಾತ್ರ ಬರಲು ಸಾಧ್ಯ. ನಾವಿಂದು ದೇವರ ದರ್ಶನಕ್ಕೆ ಕಾಲ, ಕಾಸು, ಕಾಯಕವನ್ನು ವ್ಯಯ ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಉಪನ್ಯಾಸ ಮಾಲಿಕೆಯಲ್ಲಿ “ಮಾದಾರ ಧೂಳಯ್ಯ’ ವಿಷಯ ಕುರಿತಂತೆ ಗಂಗಾವತಿ ತಾಲೂಕು ಮಲ್ಲಾಪುರದ ವೈದ್ಯಾಧಿ ಕಾರಿ ಡಾ| ರಾಜಶೇಖರ ನಾರನಾಳ ಮಾತನಾಡಿ, ಶ್ರಮಿಕ ವರ್ಗದ ಕಾಯಕ ಜೀವಿಗಳೇ ಕಲ್ಯಾಣ ಕ್ರಾಂತಿಯ ಜೀವಾಳ. ವಿದ್ಯೆ ಕೆಲವರ ಗುತ್ತಿಗೆಯಾಗಿದ್ದ ಕಾಲಘಟ್ಟದಲ್ಲಿ ಅನುಭವ ಮಂಟಪದಲ್ಲಿ ಕಲಿತದ್ದು ಪವಾಡವೇ ಸರಿ. ಅನುಭವ ಮಂಟಪದ 770 ಅಮರಗಣಗಂಳಲ್ಲಿ ಶ್ರಮಿಕರೇ ಹೆಚ್ಚು. ಅವರು ಒಳ-ಹೊರಗಿನ ಹಂಗಿಲ್ಲದೆ ಸ್ಪಶ್ಯ-ಅಸ್ಪಶತೆಯ ಭೇದವಿಲ್ಲದೆ ಬಾಳಿ ಬದುಕಿದವರು ಎಂದರು.

ಮಾದಾರ ಧೂಳಯ್ಯನವರದು ಚರ್ಮ ಹದ ಮಾಡಿ ಚಪ್ಪಲಿ ಮಾಡುವ ಕಾಯಕ. ಈ ಕಾಯದಲ್ಲಿ ಶರಣತ್ವ ಪಡೆದ ನಿಜ ಶರಣ. ಈ ವೈಚಾರಿಕ, ವೈಜ್ಞಾನಿಕ ನಿಜಶರಣನ ಜೀವನದ, ಕೌಟುಂಬಿಕ ಹಿನ್ನೆಲೆಯ ದಾಖಲೆಗಳು ಸಿಗದಿರುವುದು ದುರದೃಷ್ಟಕರ ಸಂಗತಿ. ಷಡಕ್ಷರಿ ಪಂಡಿತನ “ಅಂಗೋದಕ ಮಹಿಮೆ’ ಎನ್ನುವ ಕೃತಿಯಲ್ಲಿ ಮಾದಾರ ಧೂಳಯ್ಯ ಸ್ನಾನ ಮಾಡಿದ ನೀರಿನಿಂದ ವಿವಿಧ ರೀತಿಯ ಚರ್ಮರೋಗಗಳಿಂದ ಬಳಲುತ್ತಿದ್ದ 300 ಜನ ಬ್ರಾಹ್ಮಣರು ಗುಣವಾದ ಪವಾಡದ ಮಾಹಿತಿ ಬರುತ್ತದೆ. ಇಂಥ ಪವಾಡಗಳಿಗೆ ಹೊರತಾದ ದಾಖಲೆಗಳ ಸಂಶೋಧನೆ ಅವಶ್ಯಕ ಎಂದು ತಿಳಿಸಿದರು.

ಯಳ್ಳಂಬೆಳಸೆಯ ದಿವ್ಯ ವೈ.ವಿ. ಸ್ವಾಗತಿಸಿದರು. ಶಿವಸಂಚಾರದ ಕೆ. ಜ್ಯೋತಿ, ಕೆ. ದಾûಾಯಣಿ, ಎಚ್‌. ಎಸ್‌. ನಾಗರಾಜ್‌ ವಚನಗೀತೆ ಪ್ರಸ್ತುತಪಡಿಸಿದರು. ಶರಣ್‌ ತಬಲಾ ಸಾಥ್‌ ನೀಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.