3ಡಿ ತಾರಾಲಯ; ಪ್ರದರ್ಶನವೆಲ್ಲ ಹೌಸ್‌ಫುಲ್‌!


Team Udayavani, Mar 26, 2018, 10:09 AM IST

26-March-1.jpg

ಪಿಲಿಕುಳ: ಇಲ್ಲಿನ ಡಾ| ಶಿವರಾಮ ಕಾರಂತ ಬಯೋಲಾಜಿಕಲ್‌ ಪಾರ್ಕ್‌ನಲ್ಲಿ ಮಾ. 1ರಿಂದ ಆರಂಭವಾಗಿರುವ ವಿಶ್ವದ 21ನೇ ಅತ್ಯಾಧುನಿಕ ಹೈಬ್ರಿಡ್‌ ತ್ರಿಡಿ ‘ಸ್ವಾಮಿ ವಿವೇಕಾನಂದ ತಾರಾಲಯ’ದ ಪ್ರದರ್ಶನಕ್ಕೆ 25 ದಿನದ ಅಂತರದಲ್ಲಿ ಸುಮಾರು 11,000 ಜನರು ಆಗಮಿಸಿ ನಭೋಮಂಡಲದ ವಿಸ್ಮಯ ವೀಕ್ಷಿಸಿದ್ದಾರೆ.

ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ದೂರದೂರಿನಿಂದ ಪಿಲಿಕುಳಕ್ಕೆ ಆಗಮಿಸಿ ತಾರಾಲಯದಲ್ಲಿ ನಭದ ವಿಸ್ಮಯ ನೋಡಲು ಹಾತೊರೆಯುವ ಹಿನ್ನೆಲೆಯಲ್ಲಿ ಟಿಕೆಟ್‌ ಬೇಗನೆ ಖಾಲಿಯಾಗುತ್ತಿದೆ. ಈಗ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ರಜೆ ದೊರೆಯಲಿದೆ. ಆಗ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇದೆ.

ಬುಕ್‌ ಮೈ ಶೋದಲ್ಲಿ ಬುಕ್‌ ಮಾಡಿ
www.bookmyshow.com ನಲ್ಲಿ ಕೂಡ ಮುಂಗಡ ಟಿಕೆಟ್‌ ಕಾಯ್ದಿರಿಸಲು ಅವಕಾಶವಿದೆ. ತಾರಾಲಯ ಕಾರ್ಯಾರಂಭಿಸಿದ ಅನಂತರದ ಕೆಲವು ದಿನ ಬುಕ್‌ ಮೈ ಶೋದಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಎದುರಾಗಿ ಟಿಕೆಟ್‌ ಬುಕ್‌ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಸಮಸ್ಯೆ ಸರಿಯಾಗಿದೆ.

ಟಿಕೆಟಿನ ದರ ವಯಸ್ಕರಿಗೆ 60 ರೂ. (13 ವರ್ಷಕ್ಕಿಂತ ಕೆಳಗಿನವರಿಗೆ 40 ರೂ.) ನಿಗದಿಪಡಿಸಲಾಗಿದೆ. ನಿಸರ್ಗ ಧಾಮವು ಎಲ್ಲ ವಿಭಾಗಗಳ ವೀಕ್ಷಣೆಗಳಿಗೆ ಪ್ರತೀ ಒಬ್ಬರಿಗೆ ‘ಕಾಂಬೊ ರಿಯಾಯಿತಿ’ ದರ 100 ರೂ. ಇದರಲ್ಲಿ ಪಿಲಿಕುಳ ಮೃಗಾಲಯ ಸಹಿತ ಇಲ್ಲಿರುವ ಎಲ್ಲ ವಿಶೇಷತೆಗಳನ್ನು ಸವಿಯಬಹುದು. ಈ ಮಧ್ಯೆ, ಪ್ರದರ್ಶನ ವೀಕ್ಷಣೆಗೆ ನಿಸರ್ಗ ಧಾಮದ ಮುಖ್ಯ ಪ್ರವೇಶ ದ್ವಾರದಲ್ಲಿ ತೆರೆದಿರುವ ‘ಬಾಕ್ಸ್‌ ಆಫೀಸ್‌’ನಲ್ಲಿ ಟಿಕೆಟ್‌ಗಳನ್ನು ನೀಡಲಾಗುತ್ತದೆ.

ಆ್ಯಕ್ಟಿವ್‌ 3ಡಿ ಮೂಲಕ ವೀಕ್ಷಕರಿಗೆ ಹೊಸ ಅನುಭವ
ತಾಂತ್ರಿಕವಾಗಿ ಅತ್ಯದ್ಬುತ ಕೇಂದ್ರವಾಗಿ ಪಿಲಿಕುಳ ತಾರಾಲಯವು ಮೂಡಿ ಬಂದಿದೆ. ದೇಶದ ಬೇರೆ ಬೇರೆ ಕಡೆಗಳಲ್ಲಿ ಇರುವ ತಾರಾಲಯಗಳು ಆಪ್ಟೋ- ಮೆಕ್ಯಾನಿಕಲ್‌ ಹಾಗೂ 4ಕೆ ಡಿಜಿಟಲ್‌ ಮಾದರಿಯ ಹೈಬ್ರಿಡ್‌ ತಂತ್ರ ಜ್ಞಾನವನ್ನು ಹೊಂದಿದೆ. ಪಿಲಿಕುಳದ ತಾರಾಲಯವು ಅಪ್ಟೋ-ಮೆಕ್ಯಾನಿಕಲ್‌ ಮತ್ತು 8ಕೆ ಡಿಜಿಟಲ್‌ ಪ್ರೊಚೆಕ್ಷನ್‌ ಸಿಸ್ಟಂ ಗಳನ್ನು ಅಳವಡಿಸಿ ಹೈಬ್ರಿಡ್‌ ವ್ಯವಸ್ಥೆಯನ್ನು ಹೊಂದಿದೆ. ಹೀಗಾಗಿ, ಆ್ಯಕ್ಟಿವ್‌ ತ್ರಿಡಿ ವ್ಯವಸ್ಥೆಯ ಮೂಲಕ ವೀಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ.

‘ಪಿಲಿಕುಳದ ತಾರಾಲಯದ ಎಲ್ಲ ಉಪಕರಣಗಳು, ಯಂತ್ರಗಳನ್ನು ಅಮೆರಿಕಾ, ಜಪಾನ್‌ನ ತಜ್ಞರು ಬಂದು ಜೋಡಿಸಿದ್ದಾರೆ. 18 ಮೀಟರ್‌ ವ್ಯಾಸದ ಡೋಮ್‌ ನೊಳಗೆ (ಗುಮ್ಮಟ) ಅತ್ಯಂತ ಪರಿಣಾಮಕಾರಿಯಾದ ನ್ಯಾನೋಸಿಮ್‌ ಫ್ಯಾಬ್ರಿಕೇಶನ್‌ ಅಳವಡಿಸಲಾಗಿದೆ. ಇಲ್ಲಿನ 8ಕೆ ಯುಎಚ್‌ಡಿಯಿಂದ ವೀಕ್ಷಕರಿಗೆ ನಭೋಮಂಡಲದ ನೈಜ ಅನುಭವ ಸಿಗಲಿದೆ. ಗ್ಯಾಲಕ್ಸಿ, ನಕ್ಷತ್ರಗಳು, ಗ್ರಹಗಳ ಸಹಿತ ಎಲ್ಲ ಆಕಾಶಕಾಯಗಳ ಚಿತ್ರಣಗಳನ್ನು ಅತ್ಯಂತ ಸ್ಪಷ್ಟವಾಗಿ ನೋಡಬಹುದಾಗಿದೆ. 4ಕೆ ಅಲ್ಟ್ರಾ ಎಚ್‌ಡಿ ಪರದೆ ಗಳು ಚಿತ್ರಗಳನ್ನು 1080ಪಿ ಫುಲ್‌ ಎಚ್‌ಡಿಗಿಂತ ನಾಲ್ಕು ಪಟ್ಟು ಉತ್ತಮವಾಗಿ ಮೂಡಿಸುತ್ತಿವೆ’ ಎನ್ನುತ್ತಾರೆ ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ. ರಾವ್‌. 

ಪ್ರದರ್ಶನದ ವೇಳಾಪಟ್ಟಿ ಹೀಗಿದೆ
ಪಿಲಿಕುಳ ತಾರಾಲಯದಲ್ಲಿ ‘ವಿ ಆರ್‌ ದಿ ಸ್ಟಾರ್’ ಪ್ರದರ್ಶನವು ಕನ್ನಡ, ಆಂಗ್ಲ ಭಾಷೆಗಳಲ್ಲಿ ಬಿತ್ತರಗೊಳ್ಳುತ್ತಿದೆ. 173 ಜನರು ಒಮ್ಮೆಗೆ ಇಲ್ಲಿ ಕುಳಿತುಕೊಳ್ಳಲು ಅವಕಾಶವಿದೆ. ಪ್ರತಿ ಮಂಗಳವಾರದಿಂದ (ಸೋಮವಾರ ರಜೆ) ಶುಕ್ರವಾರ ತನಕ ಬೆಳಗ್ಗೆ 11ರಿಂದ ಸಂಜೆ 4.30ರ ವರೆಗೆ ದಿನದಲ್ಲಿ ಒಟ್ಟು 4 (11ಕ್ಕೆ ಕನ್ನಡ, 12.30ಕ್ಕೆ ಇಂಗ್ಲಿಷ್‌, 3 ಗಂಟೆಗೆ ಕನ್ನಡ ಹಾಗೂ 4.30ಕ್ಕೆ ಇಂಗ್ಲಿಷ್‌) ಪ್ರದರ್ಶನಗಳಿವೆ. ವಾರದ ಪ್ರತಿ ಶನಿವಾರ ಹಾಗೂ ರವಿವಾರ ಬೆಳಗ್ಗೆ 11ರಿಂದ ಸಂಜೆ 6.30ರ ವರೆಗೆ ಒಟ್ಟು 6 ಪ್ರದರ್ಶನಗಳಿವೆ. ಅದರಂತೆ ಬೆಳಗ್ಗೆ 11ಕ್ಕೆ ಕನ್ನಡ, 12ಕ್ಕೆ ಇಂಗ್ಲಿಷ್‌, ಅಪರಾಹ್ನ 2.30ಕ್ಕೆ ಕನ್ನಡ, ಸಂಜೆ 4ಕ್ಕೆ ಇಂಗ್ಲಿಷ್‌, 5.30 ಕನ್ನಡ ಹಾಗೂ 6.30ಕ್ಕೆ ಇಂಗ್ಲಿಷ್‌ ಪ್ರದರ್ಶನವಿದೆ. ಪ್ರತಿ ಪ್ರದರ್ಶನವು ಒಟ್ಟು 45 ನಿಮಿಷಗಳಿರುತ್ತವೆ ಎಂದು ತಾರಾಲಯದ ಕ್ಯುರೇಟರ್‌ ಜಗನ್ನಾಥ್‌ ಅವರು ಉದಯವಾಣಿ ‘ಸುದಿನ’ಕ್ಕೆ ತಿಳಿಸಿದ್ದಾರೆ.

3ಡಿ ಗ್ಲಾಸ್‌ಗೆ 3000 ರೂ.!
ದೇಶದ ಇತರ ಕಡೆಗಳ ತಾರಾಲಯದಲ್ಲಿ ವೀಕ್ಷಿಸಲು 3ಡಿ ಎಫೆಕ್ಟ್ ಫೋಲರೈಸ್‌ಡ್‌ ಕನ್ನಡಕವನ್ನು ಬಳಸಲಾಗುತ್ತದೆ. ಆದರೆ, ಪಿಲಿಕುಳದಲ್ಲಿ ಆ್ಯಕ್ಟಿವ್‌ 3ಡಿ ಗ್ಲಾಸ್‌ಗಳನ್ನೇ ಬಳಸಲಾಗುತ್ತಿದೆ. ಇದರಲ್ಲಿ ಎಲೆಕ್ಟ್ರಾನಿಕ್‌ ಸರ್ಕಿಟ್‌ ಇರುವುದರಿಂದ ಈ ಗ್ಲಾಸ್‌ಗಳು ಉತ್ತಮ ಅನುಭವಗಳನ್ನು ಕಲ್ಪಿಸುತ್ತದೆ. ಸಾಮಾನ್ಯವಾಗಿ 3ಡಿ ಕನ್ನಡಕಗಳಿಗೆ ಸುಮಾರು 200 ರೂ.ಗಳಷ್ಟಿದ್ದರೆ, ಪಿಲಿಕುಳದಲ್ಲಿ ಬಳಸುತ್ತಿರುವ 3ಡಿ ಗ್ಲಾಸ್‌ಗೆ ಸುಮಾರು 3,000 ರೂ. ಇದೆ. 

ದಿನೇಶ್‌ ಇರಾ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.