Udayavni Special

ಅಡಿಗರ ಕಾವ್ಯಗಳ ಮರು ಓದು ಅವಶ್ಯ: ವಿವೇಕ ರೈ

Team Udayavani, Oct 5, 2017, 3:58 PM IST

5-Mng—–12.jpg

ಬಂಟ್ವಾಳ: ಶತಮಾನದ ಸಾಹಿತಿ ಗೋಪಾಲಕೃಷ್ಣ ಅಡಿಗರ ಕಾವ್ಯಗಳ ಮರು ಓದು ಅಗತ್ಯ ಎಂದು ಹಂಪಿ ಕನ್ನಡ
ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಬಿ.ಎ.ವಿವೇಕ ರೈ ಹೇಳಿದರು.ಬಿ.ಸಿ. ರೋಡ್‌ನ‌ ಲಯನ್ಸ್‌ ಕ್ಲಬ್‌ ಸಭಾಂಗಣದಲ್ಲಿ ಜರಗಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಡಿಗರ ಬರಹ ಧ್ಯಾನಸ್ಥ ಮನಸ್ಸಿನಿಂದ ಮತ್ತು ಚಿಕಿತ್ಸಕ ಪ್ರಜ್ಞೆಯಿಂದ ಮೂಡಿದೆ. ಓದಿನಲ್ಲೂ ಹೊಸತನದ ಸಾಧ್ಯತೆಯನ್ನು ನೀಡಬಲ್ಲ ಸಾಮರ್ಥಯವಿದೆ. ಅವರ ಸಾಹಿತ್ಯವನ್ನು ಅಧ್ಯಯನಶೀಲರಾಗಿ ಓದುವುದೇ ಹೊಸ ತಲೆಮಾರು ನೀಡುವ ಗೌರವವಾಗುತ್ತದೆ ಎಂದು ಅವರು ಹೇಳಿದರು.

ಇದೇ ಸಂದರ್ಭ ಗೋಪಾಲಕೃಷ್ಣ ಅಡಿಗ ಅವರ ಸಂಬಂಧಿ, ಹಿರಿಯ ಪತ್ರಕರ್ತ ಜಯರಾಮ ಅಡಿಗ ಅವರನ್ನು ಗೌರವಿಸಲಾಯಿತು. ಅಡಿಗ ಜನ್ಮ ಶತಮಾನೋತ್ಸವ ಪ್ರಯುಕ್ತ ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ
ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು.

ವಿಚಾರಗೋಷ್ಠಿಗಳಲ್ಲಿ ಎಸ್‌.ಆರ್‌. ವಿಜಯಶಂಕರ್‌ ಅಡಿಗರ ಕಾವ್ಯದ ಕುರಿತು ಹಾಗೂ ಡಾ| ವರದರಾಜ ಚಂದ್ರಗಿರಿ
ಅವರು ‘ಅಡಿಗರು ಮತ್ತು ಪ್ರಕೃತ ನಮ್ಮ ಸಾಹಿತ್ಯ ಧರ್ಮ’ ಕುರಿತು ವಿಚಾರ ಮಂಡಿಸಿದರು.

ಬಳಿಕ ಯಕ್ಷಗಾನ ತಾಳಮದ್ದಳೆ ‘ವಾಲಿಮೋಕ್ಷ’ ನಡೆಯಿತು. ಕಲಾವಿದರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಸೀತಾರಾಮ ತೋಳ್ಪಡಿತ್ತಾಯ, ಜನಾರ್ದನ ತೋಳ್ಪಡಿತ್ತಾಯ, ಡಾ| ಎಂ.ಪ್ರಭಾಕರ ಜೋಷಿ, ಕೆ.ಮೋಹನ
ರಾವ್‌ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ಭಾಗವಹಿಸಿದರು. ಸಮಿತಿಯ ಉಪಾಧ್ಯಕ್ಷ ವಿಶ್ವನಾಥ ಬಂಟ್ವಾಳ ಕಲಾವಿದರನ್ನು
ಗೌರವಿಸಿದರು.

ಈ ಸಂದರ್ಭ ಸಮಿತಿಯ ಕೋಶಾಧಿಕಾರಿ ಬಿ.ತಮ್ಮಯ್ಯ, ಕಾರ್ಯದರ್ಶಿ ಡಾ| ಅಜಕ್ಕಳ ಗಿರೀಶ ಭಟ್ಟ ಮತ್ತಿತರರು
ಉಪಸ್ಥಿತರಿದ್ದರು.ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಸ್ವಾಗತಿಸಿ, ರೇಷ್ಮಾ ಜಿ. ಭಟ್‌ ವಂದಿಸಿದರು. ಡಾ| ಯೋಗೀಶ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

ಅಭಿರುಚಿ ಜೋಡುಮಾರ್ಗ, ನಮ್ಮ ಬಂಟ್ವಾಳ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಬಂಟ್ವಾಳ ತಾಲೂಕು ಕನ್ನಡ
ಸಾಹಿತ್ಯ ಪರಿಷತ್ತು ಸಂಘಟನೆಯವರು ಕಾರ್ಯಕ್ರಮಕ್ಕೆ ಸಹಕರಿಸಿದರು.

ಸರಿಯಾದ ಕ್ರಮವಲ್ಲ
ಯಾವುದೇ ಸಾಹಿತ್ಯದ ಬಿಡಿ ಸಾಲನ್ನು ಗಮನಿಸಿ ಕವಿಯನ್ನು ಅಥವಾ ಆತನ ಕೃತಿಯನ್ನು ತೀರ್ಮಾನಿಸುವುದು ಸರಿಯಾದ ಕ್ರಮವಲ್ಲ. ಅಡಿಗರ ಒಟ್ಟು ಕಾವ್ಯ ಸಂಪುಟವನ್ನು ಮಹಾಕಾವ್ಯವೆಂದು ಪರಿಗಣಿಸಬಹುದು.
ಡಾ| ಕೆ. ಚಿನ್ನಪ್ಪ ಗೌಡ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ
ವಿಶ್ರಾಂತ ಕುಲಪತಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ಉಡುಪಿಯಲ್ಲಿ ಮತ್ತೆ ಹೊಸ ಕೋವಿಡ್-19 ಸೋಂಕು ಪತ್ತೆ

ಉಡುಪಿಯಲ್ಲಿ ಮತ್ತೆ 27 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆ

ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌ ಸೇವೆ

ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌ ಸೇವೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ವಿಧಾನಸಭೆ ಸಮಿತಿಗಳ ಅಧ್ಯಯನ ಪ್ರವಾಸಕ್ಕೆ ಬ್ರೇಕ್: ಹೆಚ್ ಕೆ ಪಾಟೀಲ್ ತೀವ್ರ ವಿರೋಧ

ವಿಧಾನಸಭೆ ಸಮಿತಿಗಳ ಅಧ್ಯಯನ ಪ್ರವಾಸಕ್ಕೆ ಬ್ರೇಕ್: ಹೆಚ್ ಕೆ ಪಾಟೀಲ್ ತೀವ್ರ ವಿರೋಧ

ಆಸೀಸ್ ಸರಣಿಯ ಮೊದಲ ಪಂದ್ಯವನ್ನು ಬ್ರಿಸ್ಬೇನ್ ನಲ್ಲಿ ಆಡಲಿದೆ ಟೀಂ ಇಂಡಿಯಾ

ಆಸೀಸ್ ಸರಣಿಯ ಮೊದಲ ಪಂದ್ಯವನ್ನು ಬ್ರಿಸ್ಬೇನ್ ನಲ್ಲಿ ಆಡಲಿದೆ ಟೀಂ ಇಂಡಿಯಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುಸಿದ ಕುಕ್ಕುಜ – ಅಳಂಬ ಸಂಪರ್ಕ ಸೇತುವೆ

ಕುಸಿದ ಕುಕ್ಕುಜ – ಅಳಂಬ ಸಂಪರ್ಕ ಸೇತುವೆ

ಪೌರ ಕಾರ್ಮಿಕರ ವಿಶ್ರಾಂತಿ ಕೊಠಡಿ ಅವ್ಯವಸ್ಥೆಯ ಆಗರ

ಪೌರ ಕಾರ್ಮಿಕರ ವಿಶ್ರಾಂತಿ ಕೊಠಡಿ ಅವ್ಯವಸ್ಥೆಯ ಆಗರ

“ಹಣಕಾಸು ಯೋಜನೆಯ ಕಾಮಗಾರಿ ಪಟ್ಟಿ ನೀಡಿ’

“ಹಣಕಾಸು ಯೋಜನೆಯ ಕಾಮಗಾರಿ ಪಟ್ಟಿ ನೀಡಿ’

ಅನುದಾನ ಸದ್ಬಳಕೆ: ಕ್ರಿಯಾಯೋಜನೆಗೆ ಗ್ರಾ.ಪಂ.ಗಳಿಗೆ ಸೂಚನೆ

ಅನುದಾನ ಸದ್ಬಳಕೆ: ಕ್ರಿಯಾಯೋಜನೆಗೆ ಗ್ರಾ.ಪಂ.ಗಳಿಗೆ ಸೂಚನೆ

27-May-07

ಪುತ್ತೂರು:ಮಾಸ್ಕ್ ಹಾಕದ ವಿಚಾರ- ಖಾಸಗಿ ಮಳಿಗೆಯ ಸಿಬ್ಬಂದಿಗಳು ಹಾಗೂ ಗ್ರಾಹಕರ ನಡುವೆ ಹೊಡೆದಾಟ

MUST WATCH

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

ಹೊಸ ಸೇರ್ಪಡೆ

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

ಪುಲ್ವಾಮಾ ಮಾದರಿ ಉಗ್ರರ ದಾಳಿ ಸಂಚು ವಿಫಲ; ಕಾರಿನಲ್ಲಿದ್ದ 45 ಕೆಜಿ ಸ್ಫೋಟಕ ನಿಷ್ಕ್ರಿಯ

28-May-11

ಕೋವಿಡ್ ಜಾಗೃತಿ ಕಿರುಚಿತ್ರ ಬಿಡುಗಡೆ

ಯಾದಗಿರಿಯಲ್ಲಿ ಮತ್ತೆ ಏಳು ಜನರಲ್ಲಿ ಕೋವಿಡ್ ಸೋಂಕು ದೃಡ

ಯಾದಗಿರಿಯಲ್ಲಿ ಮತ್ತೆ ಏಳು ಜನರಲ್ಲಿ ಕೋವಿಡ್ ಸೋಂಕು ದೃಡ

28-May-10

ಹೋಂ ಕ್ವಾರಂಟೈನ್‌ ಮೇಲೆ ನಿಗಾ ವಹಿಸಿ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.