ನಿನ್ನೆ ಮದುವೆ.. ಇಂದು ಮುಂಜಾನೆ ಮದುಮಗಳು ಹೃದಯಾಘಾತದಿಂದ ನಿಧನ!
ನಿನ್ನೆ ಸಂಭ್ರಮದಲ್ಲಿದ್ದ ಮನೆಯಲ್ಲಿಂದು ನೀರವ ಮೌನ !
Team Udayavani, Mar 1, 2021, 11:07 AM IST
Representative image used
ಮಂಗಳೂರು: ಆ ಮನೆಯಲ್ಲಿ ರವಿವಾರ ಸಂಭ್ರಮ ತುಂಬಿ ತುಳುಕಾಡಿತ್ತು. ಮನೆಯ ಮಗಳ ಮದುವೆಯ ಸಂಭ್ರಮದ ಘಳಿಗೆಯಲ್ಲಿ ಮನೆಯವರು ಕುಣಿಕಾಡಿದ್ದರು. ಆದರೆ ಇಂದು ಮುಂಜಾನೆ ಅದೇ ಮನೆಯಲ್ಲಿ ದುಖಃ ಮಡುಗಟ್ಟಿದೆ. ಕಾರಣ ನಿನ್ನೆಯಷ್ಟೇ ವಿವಾಹವಾಗಿದ್ದ ಮಗಳು ಇಂದು (ಸೋಮವಾರ) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ!
ಮಂಗಳೂರಿನ ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ (23) ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದವರು.
ಲೈಲಾ ಆಫಿಯಾ ಅವರ ವಿವಾಹವು ಕಣ್ಣೂರಿನ ಮದುಮಗ ಮುಬಾರಕ್ ರೊಂದಿಗೆ ರವಿವಾರ ನಡೆದಿತ್ತು. ಅಡ್ಯಾರ್ ಕಣ್ಣೂರು ಜುಮಾ ಮಸ್ಜಿದ್‌ನಲ್ಲಿ ನಿಖಾಹ್ ನಡೆದು, ಅಡ್ಯಾರ್ ಗಾರ್ಡನ್‌ನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು.
ಇದನ್ನೂ ಓದಿ:ಇಂದಿನಿಂದ ದ್ವಿತೀಯ ಹಂತದ ಲಸಿಕೆ: ಕೋವಿಡ್ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ
ಔತಣಕೂಟದ ಬಳಿಕ ಮದುಮಗ ಮುಬಾರಕ್ ಅತ್ತೆಯ ಮನೆಗೆ ಆಗಮಿಸಿದ್ದರು. ಮನೆಯಲ್ಲಿ ಸಂಭ್ರಮ ಕಳೆಕಟ್ಟಿತ್ತು. ಆದರೆ ಇಂದು ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಲೈಲಾ ಆಫಿಯಾ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಕೊನೆಯುಸಿರೆಳೆದಿದ್ದಾರೆ.
ನಿನ್ನೆ ಸಂಭ್ರಮದಲ್ಲಿದ್ದ ಮನೆಯಲ್ಲಿಂದು ನೀರವ ಮೌನ ತುಂಬಿದೆ.
ಇದನ್ನೂ ಓದಿ: ನಾನು ಕೇವಲ ನಟಿಯಲ್ಲ, ಉದ್ಯಮಿಯೂ ಆಗಿದ್ದೇನೆ: ಪೂಜಾ ಗಾಂಧಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಈ ವಾರ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಸುದೀಪ್ : ಕಿಚ್ಚ ಸ್ಪಷ್ಟನೆ
ಸಿಎಂ ಬಿಎಸ್ ವೈ ಆರೋಗ್ಯದಲ್ಲಿ ಮತ್ತೆ ಏರುಪೇರು! ಆಸ್ಪತ್ರೆಗೆ ದಾಖಲು
ಬೆಂಗಳೂರಿನಲ್ಲಿ ಶೀಘ್ರ ಕೋವಿಡ್ ಸೋಂಕು ನಿಯಂತ್ರಣಕ್ಕೆ: ಸಚಿವ ಸೋಮಣ್ಣ
ಆತಂಕದ ಸ್ಥಿತಿ! ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಮುನ್ಸೂಚನೆ ನೀಡಿದ ಸಚಿವ ಸುಧಾಕರ್
ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಜನರ ಸಹಕಾರ ಬೇಕು: ಸಚಿವ ಬಿ.ಸಿ. ಪಾಟೀಲ್
MUST WATCH
ಹೊಸ ಸೇರ್ಪಡೆ
ಈ ವಾರ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಸುದೀಪ್ : ಕಿಚ್ಚ ಸ್ಪಷ್ಟನೆ
ವಿದ್ಯಾರ್ಥಿಗಳ ಉಜ್ವಲ ಭವಿಷ್ಯದಲ್ಲಿ ಅಧ್ಯಾಪಕರ ಕೊಡುಗೆ ಅಪಾರ: ಎಸ್. ಪಿ. ಶೆಣೈ
ರಾಮಮಂದಿರ ನಿರ್ಮಾಣ ದೇಣಿಗೆ: 22 ಕೋಟಿ ಮೊತ್ತದ 15 ಸಾವಿರ ಚೆಕ್ ಗಳು ಬೌನ್ಸ್
“ಸಮಾಜದ ಜನರ ಅಭ್ಯುದಯ ಅಸೋಸಿಯೇಶನ್ನ ಧ್ಯೇಯ’
ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಟಿಟಿಡಿ ವಿವಾದದ ಬಗ್ಗೆ ಸಂಶೋಧನೆಯಾಗಲಿ: ಸಚಿವ ಲಿಂಬಾವಳಿ