ಮತ್ತೂಂದು ಗಡುವು ಮೀರುತ್ತಿದೆ ಪಂಪ್‌ವೆಲ್‌ ಮೇಲ್ಸೇತುವೆ

 ಎಂಟು ವರ್ಷವಾದರೂ ಕುಂಠುತ್ತಿದೆ ಕಾಮಗಾರಿ

Team Udayavani, May 16, 2019, 6:12 AM IST

ಮಹಾನಗರ: ಈ ಬಾರಿಯಾದರೂ ಗಡುವು ಮೀರದೆ ಮೇ ಅಂತ್ಯದೊಳಗೆ ಪಂಪ್‌ವೆಲ್‌ ಮೇಲ್ಸೇ ತುವೆ ಪೂರ್ಣಗೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೆರವಾಗುತ್ತದೆ ಎಂದು ಅಂದುಕೊಂಡಿದ್ದ ನಗರದ ಮಂದಿಗೆ ನಿರಾಸೆ ಕಾದಿದೆ!

ಪಂಪ್‌ವೆಲ್‌ನಲ್ಲಿ ಸದ್ಯ ನಡೆಯು ತ್ತಿರುವ ಮೇಲ್ಸೇತುವೆ ಕಾಮಗಾರಿ ನೋಡಿದರೆ ಇನ್ನೆರಡು ತಿಂಗಳಾದರೂ ಪೂರ್ಣಗೊಳ್ಳುವುದು ಅನುಮಾನ. ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭಗೊಳ್ಳಲಿದ್ದು, ಆದ್ದರಿಂದ ಬಳಿಕವೇ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಂಡುಬರುತ್ತಿದೆ.

ಸಾಕಷ್ಟು ಟೀಕೆ, ಅಪಹಾಸ್ಯಕ್ಕೆ ಗುರಿಯಾ ಗಿರುವ ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಗಡುವಿನೊಳಗೆ ಪೂರ್ಣಗೊ ಳಿಸದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಕೇಸು ಹಾಕುವುದಾಗಿ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಈ ಹಿಂದೆ ನಡೆದ ಅಧಿಕಾರಿಗಳ ಸಭೆಯಲ್ಲಿ ಗುಡುಗಿದ್ದರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಏನೇ ಕಸರತ್ತು ನಡೆದರೂ, ಗಡುವಿನೊಳಗೆ ಕಾಮಗಾರಿ ಪೂರ್ಣವಾಗದು.

ಬೆರಳೆಣಿಕೆಯಷ್ಟು ಕಾರ್ಮಿಕರು
ಪಂಪ್‌ವೆಲ್‌ ಮೇಲ್ಸೇತುವೆಯು ಒಟ್ಟು 600 ಮೀಟರ್‌ ಉದ್ದ ಮತ್ತು 20 ಮೀಟರ್‌ ವಿಸ್ತೀರ್ಣ ಹೊಂದಿರಲಿದ್ದು, ಪಂಪ್‌ವೆಲ್‌ನಲ್ಲಿ ಸದ್ಯ ಕೇವಲ ಬೆರಳೆಣಿಕೆಯಷ್ಟು ಮಂದಿ ಕಾರ್ಮಿಕರು ಕಾಮಗಾರಿಯಲ್ಲಿ ನಿರತರಾಗಿದ್ದಾರೆ. ಪಂಪ್‌ವೆಲ್‌ ಮೇಲ್ಸೇತುವೆಯ ಗರ್ಡರ್‌ನ ಮೇಲ್ಭಾಗದ 75 ಮೀಟರ್‌ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಫ್ಲೆ  ç ಓವರ್‌ನ ಎಕ್ಕೂರು ಕಡೆಯಿಂದ ಪಂಪ್‌ವೆಲ್‌ವರೆಗಿನ ಆರ್‌ಇ ವಾಲ್‌ ಜೋಡಣೆ ಕಾರ್ಯ ಎರಡು ತಿಂಗಳ ಹಿಂದೇಯೇ ಆರಂಭವಾಗಿತ್ತು.

ವಾಲ್‌ಗ‌ಳ ಜೋಡಣೆ
ಮೇಲ್ಸೇತುವೆ ಸಮಾನಾಂತರ ರಸ್ತೆಯ ಎರಡೂ ಕಡೆ ಆರ್‌ಇ ವಾಲ್‌ ಜೋಡಣೆ ಪ್ರಕ್ರಿಯೆ ಸಾಗುತ್ತಿದ್ದು, ಒಂದು ಕ್ರೈನ್‌ ಮೂಲಕ ವಾಲ್‌ಗ‌ಳನ್ನು ಜೋಡಣೆ ಮಾಡಲಾಗುತ್ತಿದೆ. ಎಕ್ಕೂರು ಕಡೆಯಿಂದ ಫ್ಲೆ çಓವರ್‌ಗೆ ಸಮಾನಾಂತರವಾಗಿ ಮಣ್ಣು ಹಾಕುವ ಕೆಲಸ ನಡೆಯಬೇಕಿದ್ದು, ಕಾಮಗಾರಿ ಇನ್ನೂ ಬಾಕಿ ಇದೆ. ಪಂಪ್‌ವೆಲ್‌ನಿಂದ ಕಂಕನಾಡಿಗೆ ತೆರಳುವ ರಸ್ತೆ ಬಳಿ ಸಣ್ಣ ಕಾಲುವೆಯೊಂದಿದ್ದು, ಇದರ ಕಾಮಗಾರಿ ಪ್ರಗತಿಯಲ್ಲಿದೆ.

ನವಯುಗ ಸಂಸ್ಥೆಗೆ ಆ್ಯಕ್ಸಿಸ್‌ ಬ್ಯಾಂಕ್‌ ನಿಂದ ಕಂತುಗಳ ಮೂಲಕ ಹಣ ಬಿಡುಗಡೆಯಾಗಲಿದೆ. ಒಟ್ಟಾರೆಯಾಗಿ 55 ಕೋಟಿ ರೂ. ಸಾಲ ನೀಡುವುದಾಗಿ ಬ್ಯಾಂಕ್‌ ಹೇಳಿದ್ದರೂ ಒಂದೇ ಕಂತಿನಲ್ಲಿ ಹಣ ಬಿಡುಗಡೆಗೊಂಡಿಲ್ಲ. ಕಂತು ಪ್ರಕಾರ ಹಣ ಬಿಡುಗಡೆಯಾದರೆ, ಕಾಮ ಗಾರಿಯ ವೇಗ ಕಡಿಮೆಯಾಗುತ್ತಿದೆ.

ಕಾಮಗಾರಿ ಪ್ರಾರಂಭವಾಗಿ ಎಂಟು ವರ್ಷ
ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿಗೆ 2010ರಲ್ಲಿ ಚಾಲನೆ ನೀಡಲಾಗಿತ್ತು. ಮೊದಲ ಆರು ವರ್ಷದಲ್ಲಿ ಕುಂಠುತ್ತಾ ಸಾಗಿದ ಕಾಮಗಾರಿಗೆ ಮೂರು ವರ್ಷಗಳ ಹಿಂದೆ ವೇಗ ದೊರೆಯಿತು. 2018ರ ಮಳೆಗಾಲದಲ್ಲಿ ಕಾಮಗಾರಿ ಮತ್ತೆ ಆಮೆಗತಿಗೆ ತಿರುಗಿತು. ಕಾಮಗಾರಿ ಪೂರ್ಣಗೊಳ್ಳಲು ಸಂಸದರು ಈಗಾಗಲೇ ಅನೇಕ ಗಡುವು ನೀಡಿದ್ದರೂ ಇನ್ನೂ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿಲ್ಲ.


ಈ ವಿಭಾಗದಿಂದ ಇನ್ನಷ್ಟು

  • ಮಹಾನಗರ: ಮಹಾನಗರ ಪಾಲಿಕೆಯು ಉದ್ದಿಮೆ ಪರವಾನಿಗೆ ನವೀಕರಣ ಕುರಿತಂತೆ ಹೊಸ ನಿಯಮ ರೂಪಿಸಿದ್ದು, ಇದರಿಂದಾಗಿ ಈಗ ನಗರದ ಬಹುತೇಕ ಉದ್ದಿಮೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ...

  • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

  • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...

  • ಮಂಗಳೂರು: ದೇಶದ 17ನೇ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಇದು ಎ. 11ರಂದು ಆರಂಭವಾದ 7 ಹಂತಗಳ ದೀರ್ಘ‌ ಚುನಾವಣಾ ಪ್ರಕ್ರಿಯೆ; ಪೂರ್ಣಗೊಂಡದ್ದು...

  • ಮೂಡುಬಿದಿರೆ: ಯಕ್ಷ ಗಾನ ಜನರಲ್ಲಿ ಜೀವನ ಮೌಲ್ಯಗಳ ಅರಿವಿನೊಂದಿಗೆ ಸಂಸ್ಕಾರ ಮೂಡಿಸುತ್ತ ಬಂದಿದೆ. ಅದರಲ್ಲೂ ಮಕ್ಕಳಿಗೆ ಯಕ್ಷ ಗಾನದ ಬಗ್ಗೆ ಆಸಕ್ತಿ ಮೂಡಿಸಿದಲ್ಲಿ...

ಹೊಸ ಸೇರ್ಪಡೆ