ಮಹಿಳಾ ಮಂಡಳಿ: ವಾರ್ಷಿಕ ಮಹಾಸಭೆ,ಪುಸ್ತಕ ವಿತರಣೆ

Team Udayavani, May 16, 2019, 6:40 AM IST

ಕುರ್ನಾಡು: ಮುಡಿಪು ವಿಶ್ವಕರ್ಮ ಸಂಘ ಮತ್ತು ಸಿಂಧೂರ ಮಹಿಳಾ ಮಂಡಳಿ ಇದರ ವಾರ್ಷಿಕ ಮಹಾ ಸಭೆ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮವು ಸಂಘದ ಅಧ್ಯಕ್ಷ ಇರಾ ಯೋಗೀಶ್‌ ಆಚಾರ್ಯ ಮುಡಿಪು ಇವರ ಅಧ್ಯಕ್ಷತೆಯಲ್ಲಿ ಸಂಘದ ಕಟ್ಟಡದಲ್ಲಿ ಜರಗಿತು.

ಗೌರವಾರ್ಪಣೆ
ಮುಖ್ಯ ಅತಿಥಿಗಳಾಗಿ ವಿಶ್ವಕರ್ಮ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ, ಮಂಗಳೂರು ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ .ಕೇಶವ ಆಚಾರ್ಯ ಮಂಗಳೂರು, ಸಂಘದ ಗೌರವ ಸಲಹೆಗಾರರಾದ ಕೆ.ಕೆ ಆಚಾರ್ಯ, ಬೈಕಾಡಿ ಜನಾರ್ದನ ಆಚಾರ್ಯ, ಎಸ್‌ .ವಿ. ಆಚಾರ್ಯ, ಯೋಗೀಶ್‌ ಆಚಾರ್ಯ, ಕಾನೂನು ಸಲಹೆಗಾರರಾದ ಪ್ರಭಾಕರ ಆಚಾರ್ಯ, ಸ್ಥಳದಾನಿಗಳಾದ ನೇತ್ರಾವತಿ ಪದ್ಮನಾಭ ಆಚಾರ್ಯ ಮುಡಿಪು ಇವರಿಗೆ ಗೌರವಾರ್ಪಣೆ ಮಾಡಲಾಯಿತು.

ಬಳಿಕ ಪ್ರಾಥವಿುಕ ಶಾಲಾ ಹಂತದಿಂದ ಕಾಲೇಜು ವರೆಗಿನ ಸುಮಾರು 127 ವಿದ್ಯಾರ್ಥಿಗಳಿಗೆ ಸಾರ್ವಜನಿಕವಾಗಿ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.

ಸಂಘದ ಗೌರವಾಧ್ಯಕ್ಷರಾದ ವಿಠಲ ಆಚಾರ್ಯ ಮಿತ್ತಕೊಡಿ, ಕಟ್ಟಡ ಸಮಿತಿಯ ಕಾರ್ಯಾ ಧ್ಯಕ್ಷರಾದ ಹರೀಶ್‌ ಆಚಾರ್ಯ ಹರೇಕಳ, ಸಿಂಧೂರ ಮಹಿಳಾ ಮಂಡಳಿ ಅಧ್ಯಕ್ಷೆ ಮಾಧವಿ ವಿಠಲ ಆಚಾರ್ಯ ಉಪಸ್ಥಿತರಿದ್ದರು.

2018-19 ಸಾಲಿನ ವರದಿಯನ್ನು ಕಾರ್ಯದರ್ಶಿ ಪ್ರವೀಣ್‌ ಆಚಾರ್ಯ ವಾಚಿಸಿದರು.
ಕೋಶಾಧಿಕಾರಿಗಳಾದ ದಾಮೋದರ ಆಚಾರ್ಯ,ಪ್ರಮೀಳ ಹರೀಶ್‌ ಆಚಾರ್ಯ, ಜಗದೀಶ್‌ ಆಚಾರ್ಯ,ಲೆಕ್ಕಪತ್ರ ಮಂಡಿಸಿ ಸಮಾಜ ಬಾಂಧವರ ಅನುಮೋದನೆ ಪಡೆಯಲಾಯಿತು.

ಅಧ್ಯಕ್ಷರಾದ ಇರಾ ಯೋಗೀಶ್‌ ಆಚಾರ್ಯ ಸ್ವಾಗತಿಸಿ, ನವೀನ್‌ ಆಚಾರ್ಯ ಮುಡಿಪು ವಂದಿಸಿದರು. ಜಗದೀಶ್‌ ಆಚಾರ್ಯ ಮುಡಿಪು ಕಾರ್ಯಕ್ರಮ ನಿರ್ವಹಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕೋಲಾರ: ಲೋಕಸಭಾ ಕ್ಷೇತ್ರದ ನೂತನ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮುಕ್ತ ಮಾಡಿಸಿ ಬಿಜೆಪಿ...

  • ಬ್ಯಾಡಗಿ: ವೀರಯೋಧ ಶಿವಲಿಂಗೇಶ ಪಾಟೀಲ ನಿಧನದ ಸುದ್ದಿ ಗುಂಡೇನಹಳ್ಳಿ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದ್ದು, ಇದೀಗ ಸ್ಮಶಾನ ಮೌನ ಆವರಿಸಿದೆ. ಯೋಧ ಶಿವಲಿಂಗೇಶ...

  • ಹಾವೇರಿ: ಮಳೆ ಆರಂಭಕ್ಕೂ ಮುನ್ನವೇ ಡೆಂಘೀ ಜ್ವರ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಆರೋಗ್ಯ, ಶಿಕ್ಷಣ, ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ...

  • ಸಕಲೇಶಪುರ: ತಾಲೂಕಿನಲ್ಲಿ ಅನುಷ್ಠಾನಗೊಳಿಸ ಲಾಗುತ್ತಿರುವ ಎತ್ತಿನಹೊಳೆ ಸಮಗ್ರ ನೀರಾವರಿ ಯೋಜನೆಯಿಂದ ಮಲೆನಾಡಿನ ಪರಿಸರ ಹದಗೆಡಲು ಕಾರಣವಾಗಿದೆ ಎಂಬ ಮಾತುಗಳು...

  • ಹಾಸನ: ನಗರದ ಎಪಿಎಂಸಿ ಪ್ರಾಂಗಣದಲ್ಲಿ ಬಿತ್ತನೆ ಆಲೂಗಡ್ಡೆ ವ್ಯಾಪಾರ ಆರಂಭವಾಗಿ ಎರಡು ವಾರ ಗಳಾಗುತ್ತಾ ಬಂದರೂ ಆಲೂಗಡ್ಡೆ ಖರೀದಿಗೆ ರೈತರಿಂದ ನೀರಸ ಪ್ರತಿಕ್ರಿಯೆ...

  • ನರೇಗಲ್ಲ: ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಸಂಚಾರಿ ಸುರಕ್ಷಾ ಸಪ್ತಾಹ ಅಡಿಯಲ್ಲಿ ರವಿವಾರ ವಿಶೇಷ ಕಾರ್ಯಾಚರಣೆ ನಡೆಸಿ ಆಟೋಗಳ ದಾಖಲೆಗಳನ್ನು ನರಗುಂದ ಡಿವೈಎಸ್‌ಪಿ...