ಬೈಲಾರೆ ಪ್ರದೇಶದ 750 ಮನೆಗಳಿಗೆ ಕೃತಕ ನೆರೆಯ ಭೀತಿ!

Team Udayavani, Apr 21, 2018, 10:56 AM IST

21-April-5.jpg

ಬೈಕಂಪಾಡಿ: ಬೈಲಾರೆ ಪ್ರದೇಶ, ಹೊಸಬೆಟ್ಟುವಿನಿಂದ ಚಿತ್ರಾಪುರವರೆಗಿನ ಬೈಲಾರೆ ತೋಡಿನಲ್ಲಿ ಮಳೆಯಿಂದ ಕೃತಕ ನೆರೆ ಸಂಭವಿಸದಂತೆ ಸುಸಜ್ಜಿತ ಕಾಲುವೆ ಕಾಮಗಾರಿ ನಡೆಯುತ್ತಿದ್ದರೆ, ಇತ್ತ ಬೈಕಂಪಾಡಿ ಪ್ರದೇಶದ ವ್ಯಾಪ್ತಿಯಲ್ಲಿ ರಾತೋರಾತ್ರಿ ಕಸ ಕಡ್ಡಿ, ಮಣ್ಣು ತುಂಬಿ ತೋಡು ಕಿರಿದಾಗುತ್ತಿದೆ. ಇದರಿಂದ ಈ ಬಾರಿ ಮಳೆಗಾಲದಲ್ಲಿ ಮತ್ತೆ ಕೃತಕ ನೆರೆ ಉದ್ಭವಿಸುವ ಭೀತಿ ತಲೆದೋರಿದೆ.

ಬೈಕಂಪಾಡಿಯಿಂದ ಚಿತ್ರಾಪುರ ದೇವಸ್ಥಾನಕ್ಕೆ ಹೋಗುವ ಮುಖ್ಯ ದ್ವಾರದಿಂದ ದುರ್ಗಾಪರಮೇಶ್ವರೀ ದೇವಸ್ಥಾನದವರೆಗೆ ರಸ್ತೆಯ ಎಡ ಭಾಗದಲ್ಲಿ ಹಾದು ಹೋಗುವ ಬೈಲಾರೆ ತೋಡಿಗೆ ಕಸ ಕಡ್ಡಿ ಮಿಶ್ರಿತ ಮಣ್ಣು ಸುರಿಯಲಾಗುತ್ತಿದೆ. ಇದರಿಂದ ತೋಡು ಕಿರಿದಾಗಿ ಕೃತಕ ನೆರೆ ಬರುವ ಸಾಧ್ಯತೆ ಇದೆ. 

ಕೃತಕ ನೆರೆ ಭೀತಿಯ ಪ್ರದೇಶ
ಸುರತ್ಕಲ್‌, ಇಡ್ಯಾ, ಹೊಸಬೆಟ್ಟು, ಕುಳಾಯಿ, ಹೊನ್ನಕಟ್ಟೆ, ಬೈಕಂಪಾಡಿ, ಚಿತ್ರಾಪುರದ ಪಶ್ವಿ‌ಮ ದಿಕ್ಕಿನಲ್ಲಿ ಇರುವಂತಹ ಬಡಾವಣೆಗಳಾದ ರಿಜೆಂಟ್‌ ಪಾರ್ಕ್‌, ನವನಗರ, ತಾವರೆ ಕೊಳ, ಲೋಟಸ್‌ ಪಾರ್ಕ್‌, ದುರ್ಗಾಂಬಾ ಲೇಔಟ್‌, ಬೆಂಗಳೂರು ಸ್ಟೀಲ್‌ ರೋಡ್‌ ಬಡಾವಣೆ, ದುರ್ಗಾ ನಗರ, ಆಚಾರ್ಯ ಬಡಾವಣೆ, ಕಕ್ಕೆ ಸಾಲು ಬಡಾವಣೆ, ಗೋಕುಲ ನಗರ, ಸುಭಾಶ್ಚಂದ್ರ ನಗರ, ಹೊನ್ನಕಟ್ಟೆ ಪಶ್ಚಿಮ ದಿಕ್ಕಿನ ಬಡಾವಣೆ, ಹೆಬ್ಟಾರ್‌ ಕಾಂಪೌಂಡ್‌ ಮತ್ತು ಕುಳಾಯಿ, ಬೈಕಂಪಾಡಿ ಪ್ರದೇಶದ ಬೈಲಾರ ಜಾಗದಲ್ಲಿ ಒಟ್ಟು ಸುಮಾರು 750 ಮನೆಗಳಿಗೆ ಕೃತಕ ನೆರೆಯಿಂದ ತೊಂದರೆ ಉಂಟಾಗುವ ಸಾಧ್ಯತೆಯಿದೆ. ಇಡ್ಯಾ, ಸುರತ್ಕಲ್‌ನಿಂದ ಬೈಕಂಪಾಡಿ ಸಮುದ್ರದವರೆಗೆ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಅಗತ್ಯ.ಇಲ್ಲದಿದ್ದಲ್ಲಿ ಈ ಸಮಸ್ಯೆಯಿಂದ ಬೈಲಾರ ಪ್ರದೇಶ ಈ ಸಲ ಮುಳುಗುವುದು ಖಚಿತ.

ತೋಡಿನ ಒತ್ತುವರಿ ತಡೆಯಿರಿ
ಕೆಲವೆಡೆ ತ್ಯಾಜ್ಯ ಮಣ್ಣು ತುಂಬಿಸಿ ಈ ತೋಡಿನ ಮತ್ತೂಂದು ಭಾಗವನ್ನು ಕಿರಿದು ಗೊಳಿಸಲಾಗುತ್ತಿದೆ. ಇದನ್ನು ತತ್‌ಕ್ಷಣ ತಡೆಯಬೇಕು. ಇಲ್ಲದಿದ್ದಲ್ಲಿ ಈ ಬಾರಿ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳು ಮತ್ತೆ ನೆರೆ ನೀರಿನ ಸಮಸ್ಯೆ ಎದುರಿಸುವಂತಾಗುತ್ತದೆ.
 - ವಿಶ್ವೇಶ್ವರ ಭಟ್‌ ಬದವಿದೆ, 
    ಬೈಲಾರೆ ಹಿತರಕ್ಷಣಾ ಸಮಿತಿ

ಮಳೆಗಾಲಕ್ಕೂ ಮುನ್ನ ಆರಂಭಿಸಲಾಗುವುದು
ಬೈಲಾರೆ ಪ್ರದೇಶದ ತೋಡನ್ನು ಶುಚಿತ್ವಗೊಳಿಸುವ ಕಾರ್ಯವನ್ನು ಮಳೆಗಾಲಕ್ಕೆ ಮುನ್ನ ಆರಂಭಿಸಲಾಗುವುದು.
ಪಾಲಿಕೆಯ ಜೇಸಿಬಿ ಬಳಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗುವುದು. ಮಳೆ ನೀರು
ಹರಿದು ಹೋಗುವ ತೋಡುಗಳಿಗೆ ಯಾವುದೇ ತ್ಯಾಜ್ಯ ತುಂಬಿಸದಂತೆ ಕ್ರಮ ಕೈಗೊಳ್ಳಲಾಗುವುದು. ಬೈಲಾರೆ ತೋಡನ್ನು ಆಯುಕ್ತರು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಈಗಾಗಲೇ ಆದೇಶಿಸಿದ್ದಾರೆ.
– ಖಾದರ್‌,
ಎಂಜಿನಿಯರ್‌, ಮನಪಾ

ಟಾಪ್ ನ್ಯೂಸ್

Gujarat: ಮಾನವನ ಬೆರಳು,ಇಲಿ ಆಯ್ತು.. ಈಗ ಚಿಪ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆ!

Gujarat: ಮಾನವನ ಬೆರಳು,ಇಲಿ ಆಯ್ತು.. ಈಗ ಚಿಪ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆ!

Mumbai: ಐಸ್ ಕ್ರೀಮ್ ನಲ್ಲಿ ಪತ್ತೆಯಾದ ಬೆರಳು ಯಾರದ್ದು? ಪೊಲೀಸರು ಹೇಳಿದ್ದೇನು?

Mumbai: ಐಸ್ ಕ್ರೀಮ್ ನಲ್ಲಿ ಪತ್ತೆಯಾದ ಬೆರಳು ಯಾರದ್ದು? ಪೊಲೀಸರು ಹೇಳಿದ್ದೇನು?

80‌ ಕೋಟಿ ರೂ. ಸಂಭಾವನೆ ಕೇಳಿ ಅಲ್ಲು ಜೊತೆ ಸಿನಿಮಾ ಮಾಡುವ ಅವಕಾಶ ಕಳೆದುಕೊಂಡ್ರಾ ಅಟ್ಲಿ?

80‌ ಕೋಟಿ ರೂ. ಸಂಭಾವನೆ ಕೇಳಿ ಅಲ್ಲು ಜೊತೆ ಸಿನಿಮಾ ಮಾಡುವ ಅವಕಾಶ ಕಳೆದುಕೊಂಡ್ರಾ ಅಟ್ಲಿ?

PM-MODI-yoga

Yoga Day 2024: ದಾಲ್‌ ಸರೋವರ ಬಳಿ ಪ್ರಧಾನಿ ಮೋದಿ ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Heatwave: ದೆಹಲಿಯಲ್ಲಿ ಬಿಸಿಲ ಝಳಕ್ಕೆ ಐವರು ಮೃತ್ಯು; 12 ಮಂದಿ ಚಿಂತಾಜನಕ

Heatwave: ದೆಹಲಿಯಲ್ಲಿ ಬಿಸಿಲ ಝಳಕ್ಕೆ ಐವರು ಮೃತ್ಯು; 12 ಮಂದಿ ಚಿಂತಾಜನಕ

Muddebihal ಕ್ರೂಸರ್‌ ಪಲ್ಟಿ: 15 ಮಂದಿಗೆ ಗಾಯ: ಮೂವರು ಗಂಭೀರ

Muddebihal ಕ್ರೂಸರ್‌ ಪಲ್ಟಿ: 15 ಮಂದಿಗೆ ಗಾಯ: ಮೂವರು ಗಂಭೀರ

Raichur: ಬಸ್ ನಲ್ಲಿ ಮರೆತು ಹೋಗಿದ್ದ 2.50 ಲಕ್ಷ ಮರಳಿಸಿದ KSRTC ಚಾಲಕ, ನಿರ್ವಾಹಕ

Raichur: ಬಸ್ ನಲ್ಲಿ ಮರೆತು ಹೋಗಿದ್ದ 2.50 ಲಕ್ಷ ಮರಳಿಸಿದ KSRTC ಚಾಲಕ, ನಿರ್ವಾಹಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಉದಾಸೀನವೇಕೆ?

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಉದಾಸೀನವೇಕೆ?

Gujarat: ಮಾನವನ ಬೆರಳು,ಇಲಿ ಆಯ್ತು.. ಈಗ ಚಿಪ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆ!

Gujarat: ಮಾನವನ ಬೆರಳು,ಇಲಿ ಆಯ್ತು.. ಈಗ ಚಿಪ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆ!

ಹೆಚ್ಚು ಹಣ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಿ; ಶಾಸಕ ಎಚ್‌.ಡಿ.ತಮ್ಮಯ್ಯ

ಹೆಚ್ಚು ಹಣ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಿ; ಶಾಸಕ ಎಚ್‌.ಡಿ.ತಮ್ಮಯ್ಯ

ಬಳ್ಳಾರಿಯಲ್ಲಿ ಮತ್ತೆ ಗಣಿಗಾರಿಕೆಗೆ ಅನುಮತಿ ಸರಿಯಲ್ಲ-ಹೋರಾಟಕ್ಕೆ ಸಜ್ಜು: ಹಿರೇಮಠ

ಬಳ್ಳಾರಿಯಲ್ಲಿ ಮತ್ತೆ ಗಣಿಗಾರಿಕೆಗೆ ಅನುಮತಿ ಸರಿಯಲ್ಲ-ಹೋರಾಟಕ್ಕೆ ಸಜ್ಜು: ಹಿರೇಮಠ

Mumbai: ಐಸ್ ಕ್ರೀಮ್ ನಲ್ಲಿ ಪತ್ತೆಯಾದ ಬೆರಳು ಯಾರದ್ದು? ಪೊಲೀಸರು ಹೇಳಿದ್ದೇನು?

Mumbai: ಐಸ್ ಕ್ರೀಮ್ ನಲ್ಲಿ ಪತ್ತೆಯಾದ ಬೆರಳು ಯಾರದ್ದು? ಪೊಲೀಸರು ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.