ಬಂಟ್ವಾಳ:ಸಿನಿಮೀಯ ಚೇಸ್‌;ದರೋಡೆಕೋರರ ಮೇಲೆ ಫೈರಿಂಗ್‌,3 ಸೆರೆ!

Team Udayavani, Jun 1, 2018, 8:48 AM IST

10.jpg

ಬಂಟ್ವಾಳ: ಇಲ್ಲಿನ ಮಣಿಹಳ್ಳದಲ್ಲಿ  ಪೋಲೀಸರು ದುಷ್ಕರ್ಮಿಗಳನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ  ಫೈರಿಂಗ್ ನಡೆಸಿ ಮೂವರನ್ನು  ಬಂಧಿಸಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. 

ಬಂಧಿತರು ಸದ್ದಾಂ ಮಾರಿಪಳ್ಳ, ಮೌಸೀನ್ ಸುರತ್ಕಲ್, ಮಹಮ್ಮದ್ ಇರ್ಶಾದ್ ಬೊಳ್ಳಾಯಿ ಎಂದು ತಿಳಿದು ಬಂದಿದ್ದು ಮೂವರ ಮೇಲೆ ಹಲವು ಪ್ರಕರಣ ಗಳು ದಾಖಲಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ. 

ಪರಾರಿಯಾದ ದುಷ್ಕರ್ಮಿಗಳು ಅಮ್ಮೆಮಾರ್ ನಿವಾಸಿ ಮನ್ಸೂರ್ ಮತ್ತು ಅಮ್ಮಿ ಎಂದು  ತಿಳಿದು ಬಂದಿದ್ದು  ಇವರ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ.

 ಆರೋಪಿ ಸದ್ದಾಂ ಕೊಲೆ ಮತ್ತು ಕೊಲೆಯತ್ನ ಆರೋಪಿಯಾಗಿದ್ದು, ಮೌಸೀನ್ ಸುಮಾರು 14 ಪ್ರಕರಣಗಳಲ್ಲಿ ವಿವಿಧ ಠಾಣೆ ಗಳ ಆರೋಪಿಯಾಗಿದ್ದಾನೆ. 

ಘಟನೆಯ ವಿವರ: 

ಬಂಟ್ವಾಳ ದ ಮಣಿಹಳ್ಳದ ಚೆಕ್‌ಪೋಸ್ಟ್‌ನಲ್ಲಿ ಕೆಂಪು ಬಣ್ಣದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ಪೋಲೀಸ್ ಸಿಬಂದಿಗಳ ರಿ ಗಳ ಮೇಲೆ ಹತ್ತಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರ ರಕ್ಷಣೆಗೆ  ನಗರ ಠಾಣಾ ಎಸ್ ಐ ಚಂದ್ರಶೇಖರ್ ಮತ್ತು ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ ಅವರು ಫೈರಿಂಗ್‌ ಮಾಡಿದ್ದಾರೆ. 

 ಬೆಳ್ತಂಗಡಿಯಿಂದ ದರೋಡೆಕೋರರು  ಕೆಂಪು ಕಲರ್ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಪೋಲೀಸರು ಕಾರ್ಯಚರಣೆಗಿಳಿದಿದ್ದರು. 

ಬೆಳ್ತಂಗಡಿ ಚೆಕ್ ಪೋಸ್ಟ್ ನಲ್ಲಿ ಪೋಲೀಸರು ಕಾರು  ತಡೆದಾಗ ನಿಲ್ಲಿಸದೆ ಬ್ಯಾರಿಕೇಡ್ ಗೆ ಹೊಡೆದು ಪರಾರಿಯಾಗಿದ್ದು ಆ  ಬಳಿಕ ಪುಂಜಾಲಕಟ್ಟೆ ಚೆಕ್‌ಪೋಸ್ಟ್‌ನಲ್ಲೂ ನಿಲ್ಲಿಸದೆ ಪರಾರಿಯಾಗಿದ್ದಾರೆ. 

ಬೆಳ್ತಂಗಡಿ ಪೋಲೀಸರ ಖಚಿತ ಮಾಹಿತಿಯ ಮೇಲೆ ಪ್ರೋಬೆಷನರಿ ಐ.ಪಿ.ಎಸ್ ಅಕ್ಷಯ್ ಎಮ್ ಹಾಕೆ ಅವರ ನೇತೃತ್ವದಲ್ಲಿ ಬಂಟ್ವಾಳ ಪೋಲೀಸರು ಮಣಿಹಳ್ಳ ಜಂಕ್ಷನ್ ನಲ್ಲಿ ವಾಹನ ನಿಲ್ಲಿಸಲು ಸೂಚನೆ ನೀಡಿದಾಗ ವಾಹನ ನಿಲ್ಲಿಸದೆ ಪೋಲೀಸ್ ಸಿಬಂದಿಗಳ ಮೇಲೆ ಹಾಯಿಸಲು ಮುಂದಾಗಿದ್ದಾರೆ. ಈ ವೇಳೆ  ಕಾರಿನ ಮೇಲೆ ಫೈರಿಂಗ್ ನೆಡೆಸಲಾಗಿದೆ. 

ಕಾರನ್ನು ಸುತ್ತುವರಿದ ಪೊಲೀಸರು ಐದು ಮಂದಿ ಪೈಕಿ ಮೂವರನ್ನು ಪೋಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರೆ ಇಬ್ಬರು ಪರಾರಿಯಾಗಿದ್ದಾರೆ.

‌ಕಾರಿನಲ್ಲಿ ತಲವಾರು ಸಹಿತ ಮಾರಾಕಾಸ್ತರಗಳು ದೊರೆತಿದ್ದು ಇವರು ದನ ದರೋಡೆ ಅಥವಾ ಇನ್ನಿತರ ಯಾವುದೋ ದರೋಡೆ ಗೆ ಮುಂದಾಗಿದ್ದರು ಎಂದು ಹೇಳಲಾಗುತ್ತಿದ್ದು ಪೋಲೀಸರ ತನಿಖೆ ಯ ಬಳಿಕ ಖಚಿತ ಮಾಹಿತಿ ತಿಳಿದು ಬರಬೇಕಿದೆ. 

 ಬಂಟ್ವಾಳ ತಾಲ್ಲೂಕಿನಲ್ಲಿ  ನಡೆದ ಪ್ರಥಮ ಫೈರಿಂಗ್ ಇದು ಎಂದು ಹೇಳಲಾಗುತ್ತಿದೆ. ಈವರೆಗೆ ಯಾರೂ ಕೂಡಾ ಫೈರಿಂಗ್ ಮಾಡಿ ಆರೋಪಿಗಳನ್ನು ಬಂಧಿಸಿದ ದಾಖಲೆಗಳು ಇಲ್ಲ. 

 ಬಂಟ್ವಾಳ ಕೋಮು ಗಲಭೆಯಿಂದ ತತ್ತರಿಸಿದ ಸಂದರ್ಭದಲ್ಲಿ ಎಸ್ ಪಿ ಸುಧೀರ್ ರೆಡ್ಡಿ ಅವರ ನೇತೃತ್ವದಲ್ಲಿ  ಬಂಟ್ವಾಳವನ್ನು ಹತೋಟಿಗೆ ತರಲು ನಗರ ಠಾಣಾ ಎಸ್ ಐ ಚಂದ್ರಶೇಖರ್ ಮತ್ತು ಗ್ರಾಮಾಂತರ ಎಸ್ ಐ ಪ್ರಸನ್ನ ಅವರು ವಿಶೇಷ ಮುತುವರ್ಜಿಯಿಂದ ಕೆಲಸ ಮಾಡಿದ್ದರು. ಅವರ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತವಾಗಿದೆ. 

ಟಾಪ್ ನ್ಯೂಸ್

Dharwad: ಐಐಟಿ ನೂತನ ನಿರ್ದೇಶಕರಾಗಿ ಪ್ರೊ.ಮಹಾದೇವ ನೇಮಕ

Dharwad: ಐಐಟಿ ನೂತನ ನಿರ್ದೇಶಕರಾಗಿ ಪ್ರೊ.ಮಹಾದೇವ ನೇಮಕ

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

8-kvasantha-bangera

K. Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ

15

Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನ ಗೋಡೆ ಕುಸಿದು 7 ಮಂದಿ ಸಾವು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

6-bantwala

Bantwala: ನೀರಿನ ಅಭಾವದಿಂದ ಕೃಷಿ ಹಾನಿ; ಮನನೊಂದು ಕೃಷಿಕ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-kvasantha-bangera

K. Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ

6-bantwala

Bantwala: ನೀರಿನ ಅಭಾವದಿಂದ ಕೃಷಿ ಹಾನಿ; ಮನನೊಂದು ಕೃಷಿಕ ಆತ್ಮಹತ್ಯೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

1-qweqwwqe

Mangaluru:ರೈಲ್ವೆ ಸ್ಟೇಷನ್ ನಲ್ಲಿ ರಿಕ್ಷಾ ಚಾಲಕರು ಮತ್ತು ಪ್ರಯಾಣಿಕರ ಹೊಡೆದಾಟ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Dharwad: ಐಐಟಿ ನೂತನ ನಿರ್ದೇಶಕರಾಗಿ ಪ್ರೊ.ಮಹಾದೇವ ನೇಮಕ

Dharwad: ಐಐಟಿ ನೂತನ ನಿರ್ದೇಶಕರಾಗಿ ಪ್ರೊ.ಮಹಾದೇವ ನೇಮಕ

ಸಮಾಜ – ಬ್ಯಾಂಕನ್ನು ಬಲಿಷ್ಠಗೊಳಿಸುವ ಶಕ್ತಿ ದೇವರು ಕರುಣಿಸಲಿ: ನಿತ್ಯಾನಂದ ಕೋಟ್ಯಾನ್‌

ಸಮಾಜ – ಬ್ಯಾಂಕನ್ನು ಬಲಿಷ್ಠಗೊಳಿಸುವ ಶಕ್ತಿ ದೇವರು ಕರುಣಿಸಲಿ: ನಿತ್ಯಾನಂದ ಕೋಟ್ಯಾನ್‌

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

8-kvasantha-bangera

K. Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.