ಬೆಳುವಾಯಿ: ಟ್ರಾನ್ಸ್‌ಫಾರ್ಮರ್‌, ಬೈಕ್‌ಗಳಿಗೆ ಕಾರು ಢಿಕ್ಕಿ

Team Udayavani, Jun 20, 2019, 10:05 AM IST

ಮೂಡುಬಿದಿರೆ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ನಿಲ್ಲಿಸಲಾಗಿದ್ದ ಎರಡು ಬೈಕುಗಳಿಗೆ ಮತ್ತು ಟ್ರಾನ್ಸ್‌ ಫಾರ್ಮರ್‌ಗೆ ಢಿಕ್ಕಿ ಹೊಡೆದ ಘಟನೆ ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ಬೆಳುವಾಯಿಯಲ್ಲಿ ಸಂಭವಿಸಿದೆ.

ಕಾರು ಮೊದಲು ಬೆಳುವಾಯಿ ಪೇಟೆಯಲ್ಲಿರುವ ಬ್ಲೋಸಂ ಶಾಲಾವರಣಕ್ಕೆ ಢಿಕ್ಕಿ ಹೊಡೆದಿದೆ. ಬಳಿಕ ಬೈಕುಗಳು ಮತ್ತು ಟ್ರಾನ್ಸ್‌ ಫಾರ್ಮರ್‌ಗೆ ಗುದ್ದಿದೆ. ಒಂದು ಬೈಕ್‌ ಮೆಸ್ಕಾಂ ಲೈನ್‌ಮ್ಯಾನ್‌ಗೆ ಸೇರಿದ್ದಾಗಿದೆ. ಕಾರಿಗೂ ತೀವ್ರ ಹಾನಿಯಾಗಿದ್ದು, ಅದರಲ್ಲಿ ಚಾಲಕ ಸಹಿತ ಮೂವರಿಗೆ ಗಾಯಗಳಾಗಿವೆ.
ಟ್ರಾನ್ಸ್‌ಫಾರ್ಮರ್‌ಗೆ ಸುಮಾರು 1 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಇಲಾಖೆಯಿಂದ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಲಾಗಿದೆ.

ಜನಸಂಚಾರ ವಿರಳವಿತ್ತು
ಅಪಘಾತ ಸಂಭವಿಸಿದ ಸ್ಥಳದಲ್ಲಿ ಯಾವತ್ತೂ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಹೆಚ್ಚಾಗಿರುತ್ತಿದ್ದರು. ಆದರೆ ಅದೃಷ್ಟವಶಾತ್‌ ಬುಧವಾರ ಅಪಘಾತದ ಹೊತ್ತು ಜನರ ಸಂಖ್ಯೆ ಕಡಿಮೆಯಾಗಿತ್ತು. ಇದರಿಂದಾಗಿ ಸಂಭಾವ್ಯ ಅಪಾಯ ತಪ್ಪಿದಂತಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ